<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Health

Cough Syrup ಮೇಲೆ ಹೊಸ ನಿಯಮ: ಇನ್ಮುಂದೆ ಪ್ರಿಸ್ಕ್ರಿಪ್ಷನ್ ಕಡ್ಡಾಯ, ಕೇಂದ್ರ ಸರ್ಕಾರ ಆದೇಶ

Cough Syrup ಮೇಲೆ ಹೊಸ ನಿಯಮ: ಇನ್ಮುಂದೆ ಪ್ರಿಸ್ಕ್ರಿಪ್ಷನ್ ಕಡ್ಡಾಯ, ಕೇಂದ್ರ ಸರ್ಕಾರ ಆದೇಶ
Summary: From now on, it will not be possible to get cough syrup without a doctor's prescription. The central government has implemented a new rule, imposing strict controls on the sale of medicines. Read the purpose and details of this rule here.

Belagavi news:

ನವದೆಹಲಿ, ಜೂನ್ 16: ಇನ್ಮುಂದೆ ಮೆಡಿಕಲ್ ಶಾಪ್ ಗಳಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್ (Cough Syrup) ನೀಡುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆಯನ್ನು ಬಳಪಡಿಸಲು ಹಾಗೂ ಕೆಮ್ಮಿನ ಸಿರಪ್ ಗಳ ಅತಿಯಾದ ದುರುಪಯೋಗವನ್ನು ತಡೆಗಟ್ಟುವ ಉದ್ದೇಶದಿಂದ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜೂನ್ 9ರಂದು ಹೊರಡಿಸಿರುವ ಅಧಿಸೂಚನೆ ಪ್ರಕಾರ, ಇನ್ಮುಂದೆ ವೈದ್ಯರ ಅಧಿಕೃತ ಪ್ರಿಸ್ಕ್ರಿಪ್ಷನ್ ಇಲ್ಲದೆ ಯಾವುದೇ ಕೆಮ್ಮು, ಶೀತ ಹಾಗೂ ಜ್ವರಕ್ಕೆ ಸಂಬಂಧಿಸಿದ ಸಿರಪ್ ಗಳನ್ನು ಖರೀದಿಸಲು ಸಾಧ್ಯವಿಲ್ಲ. ಈ ನಿಯಮ ಔಷಧಿಗಳ ಅನಿಯಂತ್ರಿತ ಬಳಕೆಯನ್ನು ಕಡಿಮೆ ಮಾಡುವುದಕ್ಕೆ ಸಹಾಯಕವಾಗಲಿದೆ ಎಂದು ತಿಳಿಸಲಾಗಿದೆ.

ಸರ್ಕಾರದ ಈ ನಿರ್ಧಾರದಿಂದ ಔಷದ ಮಾರಾಟ ವ್ಯವಸ್ಥೆಯಲ್ಲಿ ಹೆಚ್ಚಿನ ನಿಯಂತ್ರಣ ಬರುತ್ತದೆ ಎಂದು ನಿರೀಕ್ಷಿಸಲಾಗಿದ್ದು, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

Sponsored

ಕೇಂದ್ರ ಸರ್ಕಾರ ಕೆಮ್ಮು, ನೆಗಡಿ ಹಾಗೂ ಜ್ವರದ ಸಿರಪ್ ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ಜೂನ್ 9ರಿಂದ ಇನ್ನು ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಯಾವುದೇ ಔಷಧ ಅಂಗಡಿಯಲ್ಲಿ ಸಿರಪ್ ನೀಡುವುದಕ್ಕೆ ಅವಕಾಶ ಇರುವುದಿಲ್ಲ.

ಸಿರಪ್ ಗಳ ಅತಿಯಾದ ಮತ್ತು ಅನಿಯಂತ್ರಿತ ಬಳಕೆಯನ್ನು ತಡೆಗಟ್ಟುವುದು ಹಾಗೂ ಸಾರ್ವಜನಿಕ ಆರೋಗ್ಯವನ್ನು ಬಳಪಡಿಸುವುದು ಈ ಹೊಸ ನಿಯಮದ ಪ್ರಮುಖ ಉದ್ದೇಶವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಮೂಲಕ ಔಷಧ ದುರುಪಯೋಗವನ್ನು ಕಡಿಮೆ ಮಾಡುವತ್ತ ಮಹತ್ವದ ಹೆಜ್ಜೆ ಇಡಲಾಗಿದೆ.

ಹೊಸ ನಿಯಮದ ಪ್ರಕಾರ, ಸಣ್ಣ ಹಳ್ಳಿಗಳಲ್ಲಿನ ಹಳೆಯ ವಿನಾಯಿತಿಯನ್ನು ಕೂಡ ರದ್ದುಪಡಿಸಲಾಗಿದೆ. ಇನ್ನು ಮುಂದೆ ಪರವಾನಗಿ ಪಡೆದ ಔಷಧಾಲಯಗಳಲ್ಲಿ ಮಾತ್ರ ಕೆಮ್ಮು, ನೆಗಡಿ ಹಾಗೂ ಜ್ವರದ ಸಿರಪ್ ಗಳನ್ನು ಮಾರಾಟ ಮಾಡಬಹುದಾಗಿದೆ.

ಕೇಂದ್ರ ಸರ್ಕಾರವು 1945ರ ಹಳೆಯ ಔಷಧಿ ನಿಯಮಗಳ ವೇಳಾಪಟ್ಟಿ ಕೆ (Schedule K) ಯಿಂದ " ಸಿರಪ್ " ಪದವನ್ನು ಅಧಿಕೃತವಾಗಿ ತೆಗೆದುಹಾಕಿದೆ. ಈ ಹಿಂದೆ 1,000 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ಹಳ್ಳಿಗಳಲ್ಲಿ ಕೆಮ್ಮಿನ ಸಿರಪ್ ಗಳನ್ನು ಮಾರಾಟ ಮಾಡಲು ಕೆಲವು ಪರವಾನಗಿ ನಿಯಮಗಳಿಂದ ವಿನಾಯಿತಿ ನೀಡಲಾಗಿತ್ತು.

Sponsored

ಆದರೆ ಇನ್ನುಮುಂದೆ ಆ ವಿನಾಯಿತಿಯನ್ನು ರದ್ದು ಪಡಿಸಲಾಗಿದ್ದು, ಸಣ್ಣ ಹಳ್ಳಿಗಳಲ್ಲೂ ಪರವಾನಗಿ ಇಲ್ಲದೆ ಸಿರಪ್ ಮಾರಾಟ ಮಾಡುವಂತಿಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ.

ಹೊಸ ಬದಲಾವಣೆಯ ಪ್ರಕಾರ, ಎಲ್ಲಾ ರೀತಿಯ ಕೆಮ್ಮಿನ ಸಿರಪ್ ಗಳನ್ನು ಇನ್ನು ಮುಂದೆ 1940ರ ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆಯಡಿ ಪರವಾನಗಿ ಪಡೆದ ಔಷಧಾಲಯಗಳ ಮೂಲಕ ಮಾತ್ರ ಮಾರಾಟ ಮಾಡಬೇಕು. ಜೊತೆಗೆ, ಗ್ರಾಹಕರು ವೈದ್ಯರ ಚೀಟಿಯನ್ನು (ಪ್ರಿಸ್ಕ್ರಿಪ್ಷನ್) ತೋರಿಸುವುದು ಈಗ ಕಡ್ಡಾಯವಾಗಿದೆ.

ಕೆಮ್ಮಿನ ಸಿರಪ್ಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದನ್ನು ನಿಯಂತ್ರಿಸಲು ಹಾಗೂ ದೇಶಾದ್ಯಂತ ಜವಾಬ್ದಾರಿಯುತ ಔಷಧ ಮಾರಾಟವನ್ನು ಖಚಿತಪಡಿಸಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಹೊಸ ನಿಯಮದ ಮೂಲಕ ಔಷಧಗಳ ಅನಗತ್ಯ ಮತ್ತು ಅತಿಯಾದ ಬಳಿಕೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. ಸಾರ್ವಜನಿಕ ಆರೋಗ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Sponsored

ನಿಯಮಗಳನ್ನು ಉಲ್ಲಂಘಿಸುವ ತಯಾರಕರು ಹಾಗೂ ವಿತರಕರ ವಿರುದ್ಧ ಕಟಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

Also Read:

ಯತೀಂದ್ರ ಸಿದ್ದರಾಮಯ್ಯನ ವಿವಾದಾತ್ಮಕ ಹೇಳಿಕೆ : RSS ಕೇವಲ ಹಿಂದುತ್ವವಾದಿಗಳ ಸಂಘಟನೆ ?

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online