<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ರಾಜ್ಯದಲ್ಲಿ ಎಲೆಕ್ಟ್ರಿಕ್ ಆಟೋಗಳಿಗೆ ಹೊಸ ರೂಲ್ಸ್ : ಪರ್ಮಿಟ್ ಇಲ್ಲದೆ ಸಂಚಾರಕ್ಕೆ ಅವಕಾಶವಿಲ್ಲ

ರಾಜ್ಯದಲ್ಲಿ ಎಲೆಕ್ಟ್ರಿಕ್ ಆಟೋಗಳಿಗೆ ಹೊಸ ರೂಲ್ಸ್ : ಪರ್ಮಿಟ್ ಇಲ್ಲದೆ ಸಂಚಾರಕ್ಕೆ ಅವಕಾಶವಿಲ್ಲ
Summary: A permit is now mandatory for electric autos. The government has taken this step to curb illegal movement, and the permit will be provided free of cost. Know the complete information about the new rules here.

Belagavi News:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇನ್ಮುಂದೆ ಎಲೆಕ್ಟ್ರಿಕ್ ಆಟೋರಿಕ್ಷಾ ಗಳಿಗೂ ಪರ್ಮಿಟ್ ಕಡ್ಡಾಯವಾಗಿದೆ. ಎಲೆಕ್ಟ್ರಿಕ್ ಆಟೋಗಳು ಅಪಘಾತಕ್ಕೀಡಾದ ಸಂದರ್ಭದಲ್ಲಿ ಪರ್ಮಿಟ್ ಇಲ್ಲದಿದ್ದರೆ ಪ್ರಯಾಣಿಕರಿಗೆ ವಿಮೆ (Insurance) ಕ್ಲೈಮ್ ಪಡೆಯಲು ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಇದುವರೆಗೆ ಸಿಎನ್ಜಿ, ಎಲ್ ಪಿಜಿ, ಮತ್ತು ಪೆಟ್ರೋಲ್ ಆಟೋರಿಕ್ಷಾ ಗಳಿಗೆ ಮಾತ್ರ ಪರ್ಮಿಟ್ ಕಡ್ಡಾಯವಾಗಿತ್ತು. ಆದರೆ, ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾ ಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವುದರಿಂದ ಕಾನೂನು ಹಾಗೂ ವಿಮೆಂಬಂದಿತ ಸಮಸ್ಯೆಗಳನ್ನು ತಪ್ಪಿಸಲು ಇವುಗಳಿಗೆ ಪರ್ಮಿಟ್ ಕಡ್ಡಾಯಗೊಳಿಸಲಾಗಿದೆ.

ಹೊಸ ನಿಯಮದಂತೆ, ಎಲೆಕ್ಟ್ರಿಕ್ ಆಟೋ ಮಾಲೀಕರು ಪರ್ಮಿಟ್ ಪಡೆಯುವುದು ಕಡ್ಡಾಯವಾಗಿದ್ದು, ಈ ಪರ್ಮಿಟ್ ಅನ್ನು ಉಚಿತವಾಗಿ ವಿತರಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಇದರಿಂದ ಚಾಲಕರಿಗೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆ ಇರುವುದಿಲ್ಲ.

ಸಾರಿಗೆ ಇಲಾಖೆಯ ಪ್ರಕಾರ, ಈ ಕ್ರಮದಿಂದ ಅಕ್ರಮವಾಗಿ ಸಂಚರಿಸುವ ಎಲೆಕ್ಟ್ರಿಕ್ ಆಟೋಗಳಿಗೆ ಕಡಿವಾಣ ಬೀಳಲಿದ್ದು, ಅಪಘಾತ ಸಂಭವಿಸಿದರೆ ಪ್ರಯಾಣಿಕರಿಗೆ ವಿನಯ್ ಸೌಲಭ್ಯ ಪಡೆಯಲು ಸಹ ಅನುಕೂಲವಾಗಲಿದೆ. ಜೊತೆಗೆ ನಗರದಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾ ಗಳ ನಿಯಂತ್ರಣ ಮತ್ತು ದಾಖಲೆ ನಿರ್ವಹಣೆ ಮತ್ತಷ್ಟು ಸುಲಭವಾಗಲಿದೆ

ಎಲೆಕ್ಟ್ರಿಕ್ ಆಟೋ ಮಾಲೀಕರು ಶೀಘ್ರದಲ್ಲೇ ಪರ್ಮಿಟ್ ಪಡೆದು ಹೊಸ ನಿಯಮವನ್ನು ಪಾಲಿಸುವಂತೆ ಸಾರಿಗೆ ಇಲಾಖೆ ಸೂಚಿಸಿದೆ.

ಎಲೆಕ್ಟ್ರಿಕ್ ಆಟೋ ಖರೀದಿಗೂ ಹೊಸ ರೂಲ್ಸ್ - ಡಿಎಲ್ ಮತ್ತು ಪರ್ಮಿಟ್ ಕಡ್ಡಾಯ, ಉಚಿತವಾಗಿ ಸಿಗಲಿದೆ ಪರವಾನಗಿ :

ರಾಜ್ಯದಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾ ಗಳ ನಿಯಂತ್ರಣ ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸಾರಿಗೆ ಇಲಾಖೆ ಮಹತ್ವದ ಹೊಸ ನಿಯಮ ಜಾರಿಗೆ ತಂದಿದೆ. ಇನ್ಮುಂದೆ ಎಲೆಕ್ಟ್ರಿಕ್ ಆಟೋ ಖರೀದಿಸಲು ಬಯಸುವವರು ಚಾಲನಾ ಪರವಾನಗಿ ಮತ್ತು ಆಟೋ ಪೆರ್ಮಿತ್ ಹೊಂದಿರುವುದು ಕಡ್ಡಾಯವಾಗಿದೆ. ಈ ಎರಡರಲ್ಲಿ ಯಾವುದಾದರೂ ದಾಖಲೆ ಇಲ್ಲದಿದ್ದರೆ ಹೊಸ ಎಲೆಕ್ಟ್ರಿಕ್ ಆಟೋ ಖರೀದಿಸಲು ಅವಕಾಶ ಇರುವುದಿಲ್ಲ.

ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ನಿಯಮ :

ಸಾರಿಗೆ ಇಲಾಖೆಯ ಪ್ರಕಾರ, ಈ ನಿಯಮದ ಪ್ರಮುಖ ಉದ್ದೇಶ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುದಾಗಿದೆ. ಪರ್ಮಿಟ್ ಇಲ್ಲದ ಆಟೋದಲ್ಲಿ ಪ್ರಯಾಣಿಸುವ ವೇಳೆ ಅಪಘಾತ ಸಂಭವಿಸಿದರೆ, ಪ್ರಸ್ತುತ ನಿಯಮಗಳ ಪ್ರಕಾರ ಪ್ರಯಾಣಿಕರು ಅಥವಾ ಚಾಲಕರು ವಿಮಾ ಅರ್ಹರಾಗುವುದಿಲ್ಲ. ಪರ್ಮಿಟ್ ಇಲ್ಲದ ವಾಹನಗಳಿಗೆ ಇನ್ಸೂರೆನ್ಸ್ ಅನ್ವಯಿಸುವುದಿಲ್ಲ ಎಂಬ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಎಲೆಕ್ಟ್ರಿಕ್ ಆಟೋಗಳಿಗೆ ಉಚಿತ ಪರ್ಮಿಟ್ :

ಸಾಮಾನ್ಯವಾಗಿ ಸಿಎನ್ಜಿ, ಎಲ್ಪಿಜಿ ಹಾಗೂ ಪೆಟ್ರೋಲ್ ಆಟೋರಿಕ್ಷಾ ಗಳಿಗೆ ಪರ್ಮಿಟ್ ಪಡೆಯಲು ಸಾರಿಗೆ ಇಲಾಖೆಗೆ ₹ 500 ಶುಲ್ಕ ಪಾವತಿಸಬೇಕು. ಆದರೆ, ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಎಲೆಕ್ಟ್ರಿಕ್ ಆಟೋಗಳಿಗೆ ಪರ್ಮಿಟ್ ಅನ್ನು ಸಂಪೂರ್ಣ ಉಚಿತವಾಗಿ ನೀಡಲು ಇಲಾಖೆ ನಿರ್ಧರಿಸಿದೆ.

ಅಕ್ರಮ ಸಂಚಾರಕ್ಕೆ ಕಡಿವಾಣ :

ಹೊಸ ನಿಯಮದಿಂದ ದಾಖಲೆಗಳಿಲ್ಲದೆ ಸಂಚರಿಸುವ ಎಲೆಕ್ಟ್ರಿಕ್ ರಿಕ್ಷಾ ಗಳ ಮೇಲೆ ನಿಯಂತ್ರಣ ಸಾಧಿಸುವುದರ ಜೊತೆಗೆ, ಪ್ರಯಾಣಿಕರಿಗೆ ಕಾನೂನು ಬದ್ಧ ರಕ್ಷಣೆ ಮತ್ತು ವಿಮಾ ಸೌಲಭ್ಯ ಖಚಿತಪಡಿಸಲು ಸಹ ನೆರವಾಗಲಿದೆ. ಎಲೆಕ್ಟ್ರಿಕ್ ಆಟೋ ಮಾಲೀಕರು ಶೀಘ್ರದಲ್ಲೇ ಪರ್ಮಿಟ್ ಪಡೆದು ಹೊಸ ನಿಯಮಗಳನ್ನು ಪಾಲಿಸುವಂತೆ ಸಾರಿಗೆ ಇಲಾಖೆ ಸೂಚಿಸಿದೆ.

ಎಲೆಕ್ಟ್ರಿಕ್ ಆಟೋಗಳಿಗೆ ಪರ್ಮಿಟ್ ಕಡ್ಡಾಯ - ಶೋರೂಮ್ ಗಳ ತಪ್ಪು ಮಾಹಿತಿ, ಅಗ್ರಿಗೇಟರ್ ಕಂಪನಿಗಳ ಅಕ್ರಮಕ್ಕೆ ಬ್ರೇಕ್ :

ಎಲೆಕ್ಟ್ರಿಕ್ ಆಟೋರಿಕ್ಷಾ ಗಳಿಗೆ ಪರ್ಮಿಟ್ ಕಡ್ಡಾಯಗೊಳಿಸಿರುವ ಸಾರಿಗೆ ಇಲಾಖೆಯ ಹೊಸ ನಿರ್ಧಾರದಿಂದ ಶೋರೂಮ್ ಗಳ ತಪ್ಪು ಮಾಹಿತಿ ಮತ್ತು ಕೆಲವು ಅಗ್ರಿಅಗ್ರಿಗೇಟರ್ ಕಂಪನಿಗಳ ಅಕ್ರಮ ಚಟುವಟಿಕೆಗಳಿಗೆ ಕಡಿವಾಳ ಬೀಳುವ ನಿರೀಕ್ಷೆ ವ್ಯಕ್ತವಾಗಿದೆ.

ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಿಕ್ ಆಟೋ ಶೋರೂಮ್ ಗಳ ಕೆಲವು ಮಾಲೀಕರು ವ್ಯಾಪಾರ ಹೆಚ್ಚಿಸುವ ಉದ್ದೇಶದಿಂದ, "ಸಿಎನ್ಜಿ, ಎಲ್ಪಿಜಿ ಹಾಗೂ ಪೆಟ್ರೋಲ್ ಆಟೋಗಳಿಗೆ ಮಾತ್ರ ಪರ್ಮಿಟ್ ಅಗತ್ಯ, ಎಲೆಕ್ಟ್ರಿಕ್ ಆಟೋಗಳಿಗೆ ಪರ್ಮಿಟ್ ಬೇಕಾಗಿಲ್ಲ" ಎಂಬ ತಪ್ಪು ಮಾಹಿತಿಯನ್ನು ಚಾಲಕರಿಗೆ ನೀಡುತ್ತಿದ್ದರು. ಇದರ ಪ್ರಮಾಣದ ಸಾವಿರಾರು ಎಲೆಕ್ಟ್ರಿಕ್ ಆಟೋರಿಕ್ಷಾ ಗಳು ಪರ್ಮಿಟ್ ಪಡೆಯದೆ ರಸ್ತೆಗೆ ಇಳಿದಿದ್ದವು.

ಪ್ರಸ್ತುತ ಬೆಂಗಳೂರಿನಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಸಿಎನ್ ಜಿ, ಎಲ್ಪಿಜಿ, ಆಟೋರಿಕ್ಷಾ ಗಳು ಪರ್ಮಿಟ್ ಹೊಂದಿದ್ದು, ಎಲೆಕ್ಟ್ರಿಕ್ ಆಟೋಗಳ ಬಹುಪಾಲು ಮಾತ್ರ ಪರ್ಮಿಟ್ ಇಲ್ಲದೆ ಸಂಚರಿಸುತ್ತಿದ್ದವು. ಈ ಪರಿಸ್ಥಿತಿಯನ್ನು ಗಮನಿಸಿ ಸಾರಿಗೆ ಇಲಾಖೆ ಇದೀಗ ಇವಿ ಆಟೋ ಗಳಿಗೂ ಪರ್ಮಿಟ್ ಕಡ್ಡಾಯಗೊಳಿಸಿದೆ.

ಅಗ್ರಿಗೇಟರ್ ಕಂಪನಿಗಳ ಮೇಲು ನಿಯಂತ್ರಣ :

ಪರ್ಮಿಟ್ ಕಡ್ಡಾಯವಿಲ್ಲದ ಪರಿಸ್ಥಿತಿಯನ್ನು ಬಳಸಿಕೊಂಡು ಕೆಲವು ಆ್ಯಪ್ ಆಧಾರಿತ ಅಗ್ರಿಗೇಟರ್ ಕಂಪನಿಗಳು ಸಾವಿರಾರು ಎಲೆಕ್ಟ್ರಿಕ್ ಆಟೋರಿಕ್ಷಾ ಗಳನ್ನು ಖರೀದಿಸಿ ಕಾರ್ಯಾಚರಣೆ ನಡೆಸುತ್ತಿದ್ದವು. ಅಲ್ಲದೆ, ಹೊರ ರಾಜ್ಯದ ಚಾಲಕರನ್ನು ಕರೆತಂದು ಬೆಂಗಳೂರಿನಲ್ಲಿ ಆಟೋ ಓಡಿಸಲು ಅವಕಾಶ ನೀಡುತ್ತಿದ್ದವು ಎಂಬ ಆರೋಪಗಳು ಕೇಳಿಬಂದಿದ್ದವು.

ಸ್ಥಳೀಯ ಕನ್ನಡಿಗ ಆಟೋ ಚಾಲಕರು ಇದರಿಂದ ತಮ್ಮ ಉದ್ಯೋಗ ಮತ್ತು ಆದಾಯಕ್ಕೆ ಧಕ್ಕೆ ಉಂಟಾಗಿದೆ ಎಂದು ಹಲವು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಪರ್ಮಿಟ್ ಕಡ್ಡಾಯಗೊಳಿಸಿರುವುದರಿಂದ ಎಲೆಕ್ಟ್ರಿಕ್ ಆಟೋಗಳ ನೋಂದಣಿ, ಚಾಲಕರ ದಾಖಲೆ ಹಾಗೂ ಕಾನೂನು ಬದ್ಧ ಕಾರ್ಯಾಚರಣೆಯ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಸಾಧ್ಯವಾಗಲಿದೆ. ಇದರಿಂದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬೀಳುವ ಜೊತೆಗೆ ಸ್ಥಳೀಯ ಆಟೋ ಚಾಲಕರ ಹಿತಾಸಕ್ತಿಗೂ ರಕ್ಷಣೆ ಸಿಗುವ ನಿರೀಕ್ಷೆ ಇದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online