belagavi news :
ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ನಡೆದ ಭಯೋತ್ಪಾದಕ ದಾಳಿ ತನಿಖೆಯಲ್ಲಿ NIA ಮತ್ತು jammu and kashmir police ಮಹತ್ವದ ಸುಳಿವು ಲಭಿಸಿರುವುದಾಗಿ ವರದಿಯಾಗಿದೆ. ದಾಳಿ ನಡೆಸಿದ ಉಗ್ರರು ಬೆಳೆಸಿದ್ದ ಎರಡು ಪ್ರಮುಖ ಮೊಬೈಲ್ ಫೋನುಗಳ ಮೂಲವನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದು, ಅವುಗಳಲ್ಲಿ ಒಂದಕ್ಕೆ ಪಾಕಿಸ್ತಾನದ ಕರಾಚಿ ಮೂಲದ ಬ್ಯಾಂಕಿನಿಂದ ಹಣಕಾಸು ನೆರವು ತೆರೆದಿರುವ ಅಂಶ ಬೆಳಕಿಗೆ ಬಂದಿದೆ ಎಂದು ವರದಿ ತಿಳಿಸಿವೆ.
ವರದಿಗಳ ಪ್ರಕಾರ, ಉಗ್ರರು ಬಳಸಿದ್ದ ಮೊಬೈಲ್ ಸಾಧನಗಳನ್ನು ಪಾಕಿಸ್ತಾನದ ಕೆಲವು ಕಂಪನಿಗಳು ಆಮದು ಮಾಡಿಕೊಂಡು, ಬಳಿಕ ಅವುಗಳನ್ನು ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ ಉಗ್ರರಿಗೆ ಗುಪ್ತವಾಗಿ ತಲುಪಿಸಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ತನಿಕೆಯಲ್ಲಿ ಪತ್ತೆಯಾಗಿರುವ ಈ ಹಣಕಾಸು ಮತ್ತು ಲಾಜಿಸ್ಟಿಕ್ ಸಂಪರ್ಕಗಳು ಗಡಿಪಾರು ಭಯೋತ್ಪಾದನೆಗೆ ಸಂಬಂಧಿಸಿದ ಅಂತರಾಷ್ಟ್ರೀಯ ಜಾಲದ ಕುರಿತು ಹೊಸ ಪ್ರಶ್ನೆಗಳನ್ನು ಎಬ್ಬಿಸಿವೆ.
ಡಿಜಿಟಲ್ ಪೊರೆನ್ಸಿಕ್ ವಿಶ್ಲೇಷಣೆ ಹಾಗೂ ತಾಂತ್ರಿಕ ಸಾಕ್ಷಾಧಾರಗಳ ಆಧಾರದ ಮೇಲೆ ಭದ್ರತಾ ಸಂಸ್ಥೆಗಳು ದಾಳಿಕೋರರ ಚಟುವಟಿಕೆಗಳ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿದ್ದು, ದಾಳಿಯ ಹಿಂದಿರುವ ಬೆಂಬಲ ಜಾಲವನ್ನು ಭೇದಿಸುವಲ್ಲಿ ಪ್ರಮುಖ ಯಶಸ್ಸು ಸಾಧಿಸುವುದಾಗಿ ತಿಳಿದು ಬಂದಿದೆ.
ಈ ಬೆಳವಣಿಗೆಗಳು ಭಯೋತ್ಪಾದಕ ಚಟುವಟಿಕೆಗಳಿಗೆ ವಿದೇಶಿ ಹಣಕಾಸು ನೆರವು ಮತ್ತು ತಾಂತ್ರಿಕ ಬೆಂಬಲ ದೊರೆತಿರುವ ಸಾಧ್ಯತೆಗಳ ಕುರಿತು ಮತ್ತಷ್ಟು ತನಿಖೆಗೆ ದಾರಿ ಮಾಡಿಕೊಟ್ಟಿವೆ. ತನಿಖೆ ಮುಂದುವರೆದಿದ್ದು, ಸಂಬಂಧಿತ ಜಾಗದ ಬಗ್ಗೆ ಇನ್ನಷ್ಟು ಮಾಹಿತಿ ಹೊರಬರುವ ನಿರೀಕ್ಷೆ ಇದೆ.
ಬ್ಯಾಂಕಿಂಗ್ ಪತ್ತೆಯಾದದ್ದು ಹೇಗೆ? 2025 ರ ಜುಲೈ 28ರಂದು ಜಮ್ಮು ಮತ್ತು ಕಾಶ್ಮೀರದ ಡಚಿಗಮ್ ಅರಣ್ಯ ವ್ಯಾಪ್ತಿಯ ಮುಲ್ನಾರ್ ಮಹಾದೇವ ನಲ್ಲಿ ನಡೆದ ಎನ್ಕೌಂಟರ್ ನಲ್ಲಿ ಮೂವರು ಉಗ್ರರಾದ ಫೈಜಲ್ ಜಟ್, ಹಬೀಬ್ ತಾಹಿರ್ ಮತ್ತು ಹಂಜನ್ ಅಘಾನಿಯನ್ನು ಸೇನೆ ಹೊಡೆದುರುಳಿಸಿತು. ಇದರಿಂದ ವಶಪಡಿಸಿಕೊಳ್ಳಲಾದ ಎರಡು ರೆಡ್ಮಿ ಫೋನ್ಗಳ ತಪಾಸನೆಯಿಂದ ಈ ಕೆಳಗಿನ ಸತ್ಯಗಳು ಬಂದಿವೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ತನಿಕೆಯಲ್ಲಿ ಹೊಸ ಹಾಗೂ ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿದ್ದು, ಉಗ್ರರು ಬಳಸಿದ್ದ ಮೊಬೈಲ್ ಫೋನುಗಳ ಹಿಂದೆ ಪಾಕಿಸ್ತಾನದ ಹಣಕಾಸು ಮತ್ತು ಲಾಜಿಸ್ಟಿಕ್ ಜಾಲದ ಸಂಪರ್ಕವಿರುವ ಶಂಕೆ ಬಲಪಡಿಸಿದೆ.
ಕರಾಚಿಯ ಫೈಸಲ್ ಬ್ಯಾಂಕ್ ಸಂಪರ್ಕ:
ತನಿಖೆಯ ವೇಳೆ ಲಭಿಸಿದ ಮಾಹಿತಿಯ ಪ್ರಕಾರ, ಉಗ್ರರ ಬಳಿ ಇದ್ದ' ರೆಡ್ಮಿ 9T' ಮೊಬೈಲ್ ಫೋನ್ ಅನ್ನು 2021 ರ ಜನವರಿಯಲ್ಲಿ ಪಾಕಿಸ್ತಾನದ ‘ಟೆಕ್ ಸಿರಾಟ್ ಪ್ರೈವೇಟ್ ಲಿಮಿಟೆಡ್’ ಕಂಪನಿ ಆಮದು ಮಾಡಿಕೊಂಡಿತ್ತು. ಈ ಆಮದು ಪ್ರಕ್ರಿಯೆಗೆ ಕರಾಚಿಯಲ್ಲಿರುವ ‘ಫೈಸಲ್ ಬ್ಯಾಂಕ್ ಲಿಮಿಟೆಡ್’ ಹಣಕಾಸು ನೆರವು ಒದಗಿಸಿತು ಎನ್ನಲಾಗಿದೆ
ಡಿಜಿಟಲ್ ದಾಖಲೆಗಳ ಪರಿಶೀಲನೆಯಲ್ಲಿ, ಈ ಫೋನ್ ಆಮದು ಆದ ನಂತರ ಹಲವು ವರ್ಷಗಳ ಕಾಲ ಬಳಕೆಗೆ ಬಂದಿರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಅದರಿಂದ ನಿರ್ದಿಷ್ಟ ಉದ್ದೇಶಕ್ಕಾಗಿ ಫೋನುಗಳನ್ನು ಸಂಗ್ರಹಿಸಿ, ಬಳಿಕ ಉಗ್ರರಿಗೆ ತಲುಪಿಸಲಾಗಿರಬಹುದು ಎಂಬ ಅನುಮಾನ ತನಿಕಾ ಸಂಸ್ಥೆಯಲ್ಲಿ ಮೂಡಿದೆ.
ದಾಳಿಯವರಿಗೆ ಸ್ವಿಚ್ ಆನ್ ಆಗಿರಲಿಲ್ಲ:
ತನಿಕಾ ಮೂಲಗಳ ಪ್ರಕಾರ, 2021 ರಲ್ಲಿ ಆಮದು ಮಾಡಲಾದ 'ರೆಡ್ಮಿ 9T' ಮೊಬೈಲನ್ನು ಏಪ್ರಿಲ್ 22 2025 ರಂದು ನಡೆದ ಒಮ್ಮೆಯೂ ಸ್ವಿಚ್ ಆನ್ ಮಾಡಲಾಗಿರಲಿಲ್ಲ. ಈ ಬೆಳವಣಿಗೆ ಫೋನ್ ಅನ್ನು ಸಾಮಾನ್ಯವಾಗಿ ಬಳಕೆಗೆ ಅಲ್ಲದೆ, ದಾಳಿ ಅಂತಹ ನಿರ್ದಿಷ್ಟ ಕಾರ್ಯಾಚರಣೆಗಾಗಿ ರಹಸ್ಯವಾಗಿ ಸಂಗ್ರಹಿಸಲಾಗಿತ್ತು ಎಂಬ ಅನುಮಾನಕ್ಕೆ ಬಲ ನೀಡಿದೆ.
ಎರಡನೇ ಫೋನ್ ಕೂಡ ತನಿಖೆಯ ಕೇಂದ್ರ ಬಿಂದು:
ಉಗ್ರರ ಬಳಿ ಇದ್ದ ಮತ್ತೊಂದು ರೆಡ್ಮಿ ನೋಟ್ 12 ಮೊಬೈಲ್ ಫೋನನ್ನು ಲಾಹೋರ್ ಮೂಲದ air Link communication limited ನಮಸ್ತೆ ಆಮದು ಮಾಡಿಕೊಂಡಿತ್ತು ಎಂದು ವರದಿಯಾಗಿದೆ. ಈ ಸಾಧನ ಕೂಡ ದಾಳಿಗೆ ಮುನ್ನ ಎಂದಿಗೂ ಬಳಕೆಯಾಗಿರಲಿಲ್ಲ ಎಂದು ತನಿಕೆಯಲ್ಲಿ ಪತ್ತೆಯಾಗಿದೆ.
ಎನ್ ಐ ಎ ಮಹತ್ವದ ಸುಳಿವು:
ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಹಾಗೂ ಜಮ್ಮು ಮತ್ತು ಕಾಶ್ಮೀರ್ ಪೊಲೀಸ್ ನಡೆಸುತ್ತಿರುವ ತನಿಕೆಯಲ್ಲಿ ಈ ಡಿಜಿಟಲ್ ಸಾಕ್ಷರಗಳು ಮಹತ್ವದ ಸುಳಿವಾಗಿ ಪರಿಣಮಿಸಿವೆ. ಉಗ್ರನ ಚಟುವಟಿಕೆಗಳಿಗೆ ಪಾಕಿಸ್ತಾನ್ ಮೂಲದ ಕಂಪನಿಗಳು, ಹಣಕಾಸು ಸಂಸ್ಥೆಗಳು ಮತ್ತು ಲಾಜಿಸ್ಟಿಕ್ ಜಾಲಗಳು ಹೇಗೆ ಬೆಂಬಲ ನೀಡಿವೆ ಎಂಬುದನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ.
ಪಹಲ್ಗಾಮ್ ದಾಳಿಯ ಹಿಂದಿರುವ ಅಂತರರಾಷ್ಟ್ರೀಯ ಸಂಪರ್ಕಗಳು, ಗಡಿಪಾರು ಭಯೋತ್ಪಾದನೆಗೆ ಹಣಕಾಸು ಹಾಗೂ ತಾಂತ್ರಿಕ ನೆರುವು ಒದಗಿಸುವ ಜಾಲದ ಕುರಿತು ಹೊಸ ಪ್ರಶ್ನೆಗಳನ್ನು ಎಬ್ಬಿಸಿದ್ದು, ಭದ್ರತಾ ಸಂಸ್ಥೆಗಳು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿವೆ.
ಪಹಲ್ಗಾಮ್ ದಾಳಿಯಲ್ಲಿ ಫೈಸಲ್ ಬ್ಯಾಂಕ್ ಹೆಸರು ಮತ್ತೆ ಮುನ್ನೆಲೆಗೆ: ಹಳೆಯ ಭಯೋತ್ಪಾದನಾ ಹಣಕಾಸು ತನಿಖೆಗಳಿಗೂ ಸಂಪರ್ಕ?
9/11 ನಂತರದ ತನಿಖೆಗೆ ಪೈಸೆಲ್ ಬ್ಯಾಂಕ್ ಉಲ್ಲೇಖ:
2001ರ ಸೆಪ್ಟೆಂಬರ್ 11 ಅಟ್ಯಾಕ್ಸ್ ನಂತರ ನಡೆದ ಅಂತರಾಷ್ಟ್ರೀಯ ತನಿಖೆಗಳ ಮೇಲೆ, ಅಮೆರಿಕಾದ ಪ್ರಮುಖ ಮಾಧ್ಯಮ ವರದಿಗಳಲ್ಲಿ ಫೈಸಲ್ ಬ್ಯಾಂಕ್ ಹೆಸರು ಉಲ್ಲೇಖಗೊಂಡಿತ್ತು. ವರದಿಗಳ ಪ್ರಕಾರ, ಭಾರತದ ವಿರುದ್ಧ ಚಟುವಟಿಕೆ ನಡೆಸುತ್ತಿದ್ದ Lashkar -e -taiba ಹಾಗೂ ಅಲ್-ಖೈದಾ ಜೊತೆ ಸಂಪರ್ಕ ಹೊಂದಿದೆ ಎಂದು ಆರೋಪಿಸಲ್ಪಟ್ಟ ಕುವೈತ್ ಮೂಲದ lajanat al dawa ಸಂಸ್ಥೆಯು ಈ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿತು ಎನ್ನಲಾಗಿದೆ.
FIA ತನಿಕೆಯಲ್ಲಿ ನಿಷೇಧಿತ ಸಂಘಟನೆಗಳ ಖಾತೆಗಳ ಪತ್ತೆ:
2002ರಲ್ಲಿ ಪಾಕಿಸ್ತಾನದ Federal investigation agency ನಡೆಸಿದ ತನಿಕೆಯಲ್ಲಿಯೂ ಹಲವು ನಿಷೇಧಿತ ಸಂಘಟನೆಗಳ ಬ್ಯಾಂಕಿಂಗ್ ಚಟುವಟಿಕೆಗಳು ಬೆಳಕಿಗೆ ಬಂದಿದ್ದವು. ತನಿಕಾ ವರದಿಗಳ ಪ್ರಕಾರ, jaish-e-Mohammed ಸೇರಿದಂತೆ ಕೆಲವು ಉಗ್ರ ಸಂಘಟನೆಗಳು, ವಿವಿಧ ಬ್ಯಾಂಕುಗಳಲ್ಲಿ ಖಾತೆಗಳನ್ನು ಹೊಂದಿದ್ದ ಪ್ರಕರಣಗಳು ಪಟ್ಟಿಯಾಗಿದ್ದವು. ಈ ಪೈಕಿ ಪೈಸೆಲ್ ಬ್ಯಾಂಕ್ ಹೆಸರು ಸಹ ವರದಿಯಲ್ಲಿ ಉಲ್ಲೇಖವಾಗಿತ್ತು ಎಂದು ತಿಳಿದುಬಂದಿದೆ.
Also Read:
ಹಿಜಾಬ್ ವಿವಾದಕ್ಕೆ ತೀವ್ರ ಪ್ರತಿಕ್ರಿಯೆ: ಕೇಸರಿ ಶಾಲು ಬೇಕೋ,ರಾಷ್ಟ್ರಧ್ವಜ ಬೇಕೋ ನಂತರ ಚರ್ಚೆ ಎಂದ ಡಿಕೆಶಿ