<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಕರೆಂಟ್ ಬಿಲ್ ಶಾಕ್ ಇಲ್ಲ ! ಜುಲೈ ತಿಂಗಳಿಗೆ ಗ್ರಾಹಕರಿಗೆ ಗುಡ್ ನ್ಯೂಸ್

ಕರೆಂಟ್ ಬಿಲ್ ಶಾಕ್ ಇಲ್ಲ ! ಜುಲೈ ತಿಂಗಳಿಗೆ ಗ್ರಾಹಕರಿಗೆ ಗುಡ್ ನ್ಯೂಸ್
Summary: Good news has come to consumers regarding the current bill for the month of July. Some categories are likely to get bill exemption or subsidy, and the information about who is eligible is attracting attention.

Belagavi News:

ರಾಜ್ಯದಲ್ಲಿ ಜುಲೈ 1 ರಿಂದ ಗೃಹ ಜ್ಯೋತಿ ಗ್ಯಾರಂಟಿ ಯೋಜನೆ ಪರಿಶೀಲನೆ ಆರಂಭವಾಗಿದ್ದವು, ಮನೆ ಮನೆಗೆ ಮೀಟರ್ ರೀಡರ್ ಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜುಲೈ ತಿಂಗಳಲ್ಲಿ m ರೀಡಿಂಗ್ ನಡೆಯುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡುತ್ತಿದೆ.

ಹೀಗಾಗಿ ಜುಲೈ ತಿಂಗಳ ಕರೆಂಟ್ ಬಿಲ್ ಬರುತ್ತದೆ ಎಂಬ ಪ್ರಶ್ನೆಗೆ ಸ್ಪಷ್ಟನೇ ನೀಡಿರುವ ಬೆಸ್ಕಾಂ, ಮೀಟರ್ ರೀಡಿಂಗ್ ಇಲ್ಲದಿದ್ದರೂ ಬಿಲ್ ಪ್ರಕ್ರಿಯೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ. ಬಿಲ್ಲನ್ನು ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್ ಬಾಕಿಯ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.

ಗೃಹ ಜ್ಯೋತಿ ಯೋಜನೆ ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಯಾಗಿದ್ದು, ಪ್ರತಿ ಮನೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ. ಅನರ್ಹರಿಗೆ ಲಾಭ ಸಿಗಬಾರದೆಂಬ ಉದ್ದೇಶದಿಂದ ಸರ್ಕಾರ "ಆಪರೇಷನ್ ಗೃಹಜ್ಯೋತಿ " ಮೂಲಕ ಪರಿಶೀಲನೆ ಆರಂಭಿಸಿದೆ.

ಈ ಪ್ರಕ್ರಿಯೆಯಿಂದಾಗಿ ರಾಜ್ಯಾದ್ಯಂತ ತಾತ್ಕಾಲಿಕವಾಗಿ ಮೀಟರ್ ರೀಡಿಂಗ್ ವ್ಯವಸ್ಥೆಯಲ್ಲಿ ಬದಲಾವಣೆಯಾಗಿದ್ದು, ಗ್ರಾಹಕರಲ್ಲಿ ಗೊಂದಲ ಉಂಟಾಗಿದೆ. ಆದರೆ ಬೆಸ್ಕಾಂ ಸ್ಪಷ್ಟನೆ ನೀಡಿರುವುದರಿಂದ ಜುಲೈ ಬಿಲ್ ಪ್ರಕ್ರಿಯೆ ಸರಳಗೊಳಿಸಲಾಗುವುದು ಎಂದು ತಿಳಿದುಬಂದಿದೆ.

ಜುಲೈ ಕರೆಂಟ್ ಬಿಲ್ ಬಗ್ಗೆ ಬೆಸ್ಕಾಂ ಸ್ಪಷ್ಟನೆ - ಮೀಟರ್ ರೀಡಿಂಗ್ ಇಲ್ಲ, ಸರಾಸರಿ ಬಿಲ್ ನೀಡಲಾಗುವುದು :

ಜುಲೈ ತಿಂಗಳ ವಿದ್ಯುತ್ ಬಿಲ್ಲು ಕುರಿತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಮಹತ್ವದ ಸ್ಪಷ್ಟನೆ ನೀಡಿದೆ. ಗೃಹಜ್ಯೋತಿ ಯೋಜನೆ ಫಲಾನುಭವಿಗಳ ಮನೆ ಮನೆಗೆ ಪರಿಶೀಲನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ನಿಯಮಿತ ಮೀಟರ್ ರೀಡಿಂಗ್ ಇರುವುದಿಲ್ಲ ಎಂದು ಬೆಸ್ಕಾಂ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಸ್ಕಾಂ ಮಾಹಿತಿ ಪ್ರಕಾರ, ಗೃಹಜ್ಯೋತಿ ಯೋಜನೆಯ ಅರ್ಹ ಫಲಾನುಭವಿಗಳನ್ನು ಗುರುತಿಸುವ ಉದ್ದೇಶದಿಂದ ರಾಜ್ಯಾದ್ಯಂತ ಮೀಟರ್ ರೀಡರ್ ಗಳನ್ನು ಪರಿಶೀಲನ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇದರಿಂದ ಈ ತಿಂಗಳು ಸಾಮಾನ್ಯ ಮೀಟರ್ ರೀಡಿಂಗ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮೀಟರ್ ರೀಡಿಂಗ್ ಇಲ್ಲದ ಕಾರಣ ಗ್ರಾಹಕರಿಗೆ ಜುಲೈ ತಿಂಗಳಲ್ಲಿ ಸರಾಸರಿ ವಿದ್ಯುತ್ ಬಿಲ್ ನೀಡಲಾಗುತ್ತದೆ. ಅಂದರೆ, ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಜುಲೈ ತಿಂಗಳ ಸಿದ್ಧಪಡಿಸಿ ವಿತರಿಸಲಾಗುತ್ತದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಈ ಬೆಳವಣಿಗೆಯಿಂದ ಗ್ರಾಹಕರು ಜುಲೈ ತಿಂಗಳಲ್ಲಿ ಕರೆಂಟ್ ಬಿಲ್ ಬರುವುದಿಲ್ಲ ಎಂಬ ಗೊಂದಲದಲ್ಲಿದ್ದರು. ಆದರೆ ಬೆಸ್ಕಾಂ ಪ್ರಕಟಣೆ ಬಳಿಕ ಬಿಲ್ ರದ್ದಾಗುವುದಿಲ್ಲ, ಬದಲಿಗೆ ಸರಾಸರಿ ಬಳಕೆಯ ಆಧಾರದ ಮೇಲೆ ಬಿಲ್ಲ ನೀಡಲಾಗುತ್ತದೆ ಎಂಬುವುದು ಸ್ಪಷ್ಟವಾಗಿದೆ.

ಜುಲೈ ಕರೆಂಟ್ ಬಿಲ್ ಹೊಸ ನಿಯಮ - ಯಾರಿಗೆ ಅನ್ವಯ, ಯಾರಿಗೆ ಅನ್ವಯಿಸುವುದಿಲ್ಲ? ಬೆಸ್ಕಾಂ ಸ್ಪಷ್ಟನೆ :

ಜುಲೈ ತಿಂಗಳ ವಿದ್ಯುತ್ ಬಿಲ್ ಕುರಿತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಮತ್ತೊಂದು ಮಹತ್ವದ ಸ್ಪಷ್ಟನೆ ನೀಡಿದೆ. ಗೃಹಜ್ಯೋತಿ ಯೋಜನೆ ಪರಿಶೀಲನೆಯ ಹಿನ್ನೆಲೆಯಲ್ಲಿ ಸರಾಸರಿ ಬಿಲ್ ವ್ಯವಸ್ಥೆ ಜಾರಿಯಲ್ಲಿದ್ದರೂ, ಈ ನಿಯಮ ಎಲ್ಲ ಗ್ರಾಹಕರಿಗೂ ಅನ್ವಯವಾಗುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ಬೆಸ್ಕಾಂ ಮಾಹಿತಿ ಪ್ರಕಾರ, ಹೈ ಟೆನ್ಶನ್ ಗ್ರಾಹಕರು, 40 ಎಚ್ ಪಿ ಹಾಗೂ ಅದಕ್ಕಿಂತ ಹೆಚ್ಚಿನ ಲೋಡ್ ಹೊಂದಿರುವ ಲೋ ಟೆನ್ಶನ್ ಗ್ರಾಹಕರು, ಸೋಲಾರ್ ರೂಫ್ ಟಾಪ್ ಬೆಳಕಿದಾರರು ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿರುವ ಗ್ರಾಹಕರು ಈ ವ್ಯವಸ್ಥೆಯಿಂದ ಹೊರತಾಗಿದ್ದಾರೆ.

ಈ ವರ್ಗದ ಗ್ರಾಹಕರಿಗೆ ಎಂದಿನಂತೆ ನಿಯಮಿತ ಮೀಟರ್ ರೀಡಿಂಗ್ ನಡೆಸಿ, ನೈಜ ವಿದ್ಯುತ್ ಬಳಕೆಯ ಆಧಾರದ ಮೇಲೆ ಬಿಲ್ ನೀಡಲಾಗುತ್ತದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಇನ್ನೊಂದೆಡೆ, ಗೃಹಜ್ಯೋತಿ ಯೋಜನೆ ಫಲಾನುಭವಿಗಳ ಮನೆ ಮನೆಗೆ ಪರಿಶೀಲನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉಳಿದ ಅರ್ಹ ಗ್ರಾಹಕರಿಗೆ ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಜುಲೈ ತಿಂಗಳ ಬಿಲ್ ಸಿದ್ಧಪಡಿಸಿ ವಿತರಿಸಲಾಗುತ್ತದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online