Belagavi News:
ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿಯನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸಲು ಶಾಲಾ ವಾರ್ಡನ್ ಆರು ಕಿಲೋ ಮೀಟರ್ ಗಳಷ್ಟು ದೂರ ಬೆನ್ನ ಮೇಲೆ ಹೊತ್ತು ಸಾಗಿದ ಮಾನವೀಯತೆ ಘಟನೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ರಸ್ತೆ ಮತ್ತು ವಾಹನ ಸೌಲಭ್ಯಗಳ ಕೊರತೆಯ ನಡುವೆಯೂ ಬಾಲಕಿಯ ಆರೋಗ್ಯಕ್ಕೆ ಆದ್ಯತೆ ನೀಡಿದ ವಾರ್ಡನ್ ಅವರ ಸೇವಾ ಭಾವ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
ಮಾರ್ಗ ಮಧ್ಯೆ ಎದುರಾದ ಕಷ್ಟಗಳನ್ನು ಲೆಕ್ಕಿಸದೆ ವಾರ್ಡನ್ ಬಾಲಕಿಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಿದ್ದು, ಸಮಯ ಚಿಕಿತ್ಸೆ ದೊರಕಲು ನೆರವಾದರು. ಅವರ ಈ ಕಾರ್ಯದಿಂದ ಕರ್ತವ್ಯ ನಿಷ್ಠೆ ಮತ್ತು ಮಾನವೀಯತೆಯ ಅಪರೂಪದ ಉದಾಹರಣೆ ಮೂಡಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕವಾಗಿ ಹರಿದಾಡುತ್ತಿದ್ದು, ಛಲವಾದ ಸೇವಾ ಮನೋಭಾವಕ್ಕೆ ನಟ್ಟಿಗರು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಮಾನವೀಯತೆ ಮತ್ತು ಸಮಯೋಚಿತ ನಿರ್ಧಾರ ಎಷ್ಟು ಮಹತ್ವದ್ದೆಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.
6 ಕಿ.ಮೀ ಬೆನ್ನ ಮೇಲೆ ಹೊತ್ತು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ದ ಆಶ್ರಮ ಶಾಲಾ ವರ್ಡನ್ - ಆಂಧ್ರದಲ್ಲಿ ಮನವಿಯತೆಯ ಅಪರೂಪದ ಉದಾಹರಣೆ :
ದೇಶವು ಆಧುನಿಕ ಅಭಿವೃದ್ಧಿ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಹೊಸ ಎತ್ತರಗಳನ್ನು ತಲುಪುತ್ತಿದ್ದರೂ, ದರದ ಬುಡಕಟ್ಟು ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇನ್ನೂ ಗಂಭೀರ ಸಮಸ್ಯೆಯಾಗಿಯೇ ಉಳಿದಿದೆ. ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ನಡೆದ ಘಟನೆ ಇದಕ್ಕೆ ಜೀವಂತ ಉದಾಹರಣೆಯಾಗಿದೆ.
ಆರೋಗ್ಯ ಸೇವೆ ಮತ್ತು ರಸ್ತೆ ಸಂಪರ್ಕದ ಕೊರತೆಯ ನಡುವೆಯೇ, ಆಶ್ರಮ ಶಾಲೆಯ ವಾರ್ಡನ್ ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯನ್ನು ತನ್ನ ಬೆನ್ನಿನ ಮೇಲೆ ಹೊತ್ತು ಸುಮಾರು ಆರು ಕಿಲೋ ಮೀಟರ್ ಗಳಷ್ಟು ದೂರ ನಡೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕಿದ ಪರಿಣಾಮ ವಿದ್ಯಾರ್ಥಿನಿಯ ಜೀವ ಉಳಿದಿರುವುದಾಗಿ ತಿಳಿದುಬಂದಿದೆ.
ಈ ಘಟನೆ ವಾರ್ಡನ್ ಅವರ ಮಾನವೀಯತೆ ಮತ್ತು ಕರ್ತವ್ಯ ನಿಷ್ಠೆಯನ್ನು ಎತ್ತಿ ತೋರಿಸುವುದರ ಜೊತೆಗೆ, ಬುಡಕಟ್ಟು ಪ್ರದೇಶಗಳಲ್ಲಿನ ರಸ್ತೆ, ಸಾರಿಗೆ ಮತ್ತು ಆರೋಗ್ಯ ಸೌಲಭ್ಯಗಳ ದುಸ್ಥಿತಿಯನ್ನು ಬಹಿರಂಗಪಡಿಸಿದೆ. ತುರ್ತು ಪರಿಸ್ಥಿತಿಯಲ್ಲೂ ವಾಹನ ಸೌಲಭ್ಯ ದೊರೆಯದಿರುವುದು ಅಲ್ಲಿನ ಜನರು ಎದುರಿಸುತ್ತಿರುವ ಸಂಕಷ್ಟವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ವಾರ್ಡನ್ ಅವರ ಸೇವಾ ಭಾವಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ, ಬುಡಕಟ್ಟು ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸಬೇಕೆಂಬ ಆಗ್ರಹವು ಕೇಳಿ ಬರುತ್ತಿದೆ.
ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿನಿ - ಶಾಲಾ ಆಡಳಿತಕ್ಕೆ ಮಾಹಿತಿ ನೀಡಿದ ಕುಟುಂಬ :
ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಗುಮ್ಮಲಕ್ಷ್ಮಿಪುರಂ ಮಂಡಲದ ವಡಪುಟ್ಟಿ ಗ್ರಾಮದಲ್ಲಿ ಈ ಹೃದಯ ಸ್ಪರ್ಶಿ ಘಟನೆ ನಡೆದಿದೆ. ಗ್ರಾಮದ ನಿವಾಸಿಯಾಗಿರುವ ಭುವನೇಶ್ವರಿ, ಭದ್ರಗಿರಿ ಆದಿವಾಸಿ ಕಲ್ಯಾಣ ಬಾಲಿಕಾ ಆಶ್ರಮ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ತಂದೆಯನ್ನು ಕಳೆದುಕೊಂಡಿರುವ ಆಕೆ, ಪ್ರಸ್ತುತ ತನ್ನ ಚಿಕ್ಕಪ್ಪನ ಆರೈಕೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾಳೆ.
ಇತ್ತೀಚೆಗೆ ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದ ಭುವನೇಶ್ವರಿಗೆ ತೀವ್ರ ಜ್ವರ ಕಾಣಿಸಿಕೊಂಡಿತು. ಕುಟುಂಬದವರು ಆಕೆಯನ್ನು ತಕ್ಷಣ ಕುರುಪಮ್ ಸರ್ಕಾರಿ ಶಾಲೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದಿದ್ದರಿಂದ ವೈದ್ಯರು ಮನೆಗೆ ಕಳುಹಿಸಿದರು.
ಆದರೆ ಕೆಲವೇ ದಿನಗಳಲ್ಲಿ ಭುವನೇಶ್ವರಿಯ ಆರೋಗ್ಯ ಮತ್ತು ಹದಗೆಟ್ಟಿದ್ದು, ತೀವ್ರ ಜ್ವರ ಮತ್ತು ಅಸ್ವಸ್ಥತೆಯಿಂದ ಬಳಲತೊಡಗಿದಳು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕುಟುಂಬದವರು ಕೂಡಲೇ ಆಶ್ರಮ ಶಾಲೆಯ ಆಡಳಿತ ಮಂಡಳಿಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದ ಶಾಲಾ ಆಡಳಿತ ತಕ್ಷಣ ಸ್ಪಂದಿಸಿತು. ಆಕೆಗೆ ತುರ್ತು ಚಿಕಿತ್ಸೆ ದೊರಕುವಂತೆ ಕ್ರಮ ಕೈಗೊಳ್ಳಲು ಮುಂದಾದ ಘಟನೆ ಬಳಿಕ ಮನವಿಯತೆಯ ಅಪರೂಪದ ಉದಾಹರಣೆಯಾಗಿ ಹೊರಹೊಮ್ಮಿತು.
6 ಕಿ.ಮೀ ಬೆನ್ನ ಮೇಲೆ ಹೊತ್ತು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಸಾಗಿಸಿದ ವಾರ್ಡನ್ ಹೇಮಾ - ಮಾನವೀಯತೆಗೆ ಎಲ್ಲೆಡೆ ಮೆಚ್ಚುಗೆ :
ವಿದ್ಯಾರ್ಥಿನಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ತಿಳಿದ ಕೂಡಲೇ ಬುಡಕಟ್ಟು ಕಲ್ಯಾಣ ಇಲಾಖೆಯ ಅಧಿಕಾರಿಯ ರಜನಿ, ಆಶ್ರಮ ಶಾಲೆಯ ವಾರ್ಡನ್ ಹೇಮಾ ಅವರಿಗೆ ತಕ್ಷಣ ವಡಪುಟ್ಟಿ ಗ್ರಾಮಕ್ಕೆ ತೆರಳಿ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸುವಂತೆ ಸೂಚನೆ ನೀಡಿದರು. ಸೂಚನೆ ದೊರೆತ ತಕ್ಷಣವೇ ಗಾರ್ಡನ್ ಹೇಮಾ ಗ್ರಾಮಕ್ಕೆ ತೆರಳಿ ವಿದ್ಯಾರ್ಥಿನಿಯ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದರು.
ವಿದ್ಯಾರ್ಥಿಯ ಪರಿಸ್ಥಿತಿ ಗಂಭೀರವಾಗಿರುವುದನ್ನು ಕಂಡ ವಾರ್ಡನ್, ಯಾವುದೇ ವಿಳಂಬ ಮಾಡದೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದಳು. ಆದರೆ ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕವೇ ಇರಲಿಲ್ಲ. ದುರ್ಗಮ ಧನ್ಯವಾದಗಳು ಬೆಟ್ಟಗುಡ್ಡಗಳು ಮತ್ತು ಒರಟಾದ ದಾರಿಗಳ ಕಾರಣ ವಾಹನ ಮಾತ್ರವಲ್ಲ, ಸೈಕಲ್ ನಲ್ಲಿಯೂ ಪ್ರಯಾಣಿಸುವುದು ಅಸಾಧ್ಯವಾಗಿತ್ತು.
ಇಂತಹ ಕಠಿಣ ಪರಿಸ್ಥಿತಿಯಲ್ಲೂ ಧೈರ್ಯ ಕಳೆದುಕೊಳ್ಳದ ವಾರ್ಡನ್ ಹೇಮಾ, ವಿದ್ಯಾರ್ಥಿನಿಯನ್ನು ಸೀರೆಯಿಂದ ಸುರಕ್ಷಿತವಾಗಿ ತನ್ನ ಬೆನ್ನಿಗೆ ಕಟ್ಟಿಕೊಂಡು ಸುಮಾರು 6 km ಗಳಷ್ಟು ದೂರ ನಡೆದು ಆಸ್ಪತ್ರೆಗೆ ಕರೆದೊಯ್ದರು. ಸಮಯಕ್ಕೆ ಚಿಕಿತ್ಸೆ ದೊರಕುವಂತೆ ಮಾಡಿದ ಅವರ ಈ ಮನವಿಯ ಕಾರ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ವಾರ್ಡನ್ ಹೇಮಾ ಅವರ ಸೇವಾ ಮನೋಭಾವ ಮತ್ತು ಕರ್ತವ್ಯ ನಿಷ್ಠೆ ಸಾಮಾಜಿಕ ಜಾಲತಾಣಗಳಲ್ಲೂ ಮೆಚ್ಚುಗೆಗೆ ಪಾತ್ರವಾಗಿದ್ದು, ಬುಡಕಟ್ಟು ಪ್ರದೇಶಗಳಲ್ಲಿ ರಸ್ತೆ, ಸಾರಿಗೆ ಮತ್ತು ಆರೋಗ್ಯ ಸೌಲಭ್ಯಗಳನ್ನು ತುರ್ತಾಗಿ ಅಭಿವೃದ್ಧಿಪಡಿಸಲು ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.