BELAGAVI NEWS :
ಗೌತಮ್ ಬುದ್ಧ ನಗರ (ಉತ್ತರ ಪ್ರದೇಶ) ಜೈವಾರ್ ನಲ್ಲಿ ನಿರ್ಮಿಸಲಾದ Noida International Airport ನಲ್ಲಿ ವಾಣಿಜ್ಯ ವಿಮಾನ ಕಾರ್ಯಾಚರಣೆಗಳು ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿವೆ. ಇದರೊಂದಿಗೆ ಭಾರತದ ವಾಯುಯಾನ ಮೂಲಸೌಕರ್ಯ ವಿಸ್ತರಣೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧನೆಯಾಗಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ Ram Mohan Naidu ಅವರು ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಗಳನ್ನು ಉದ್ಘಾಟಿಸಿದರು. ಆರಂಭಿಕ ಹಾರಾಟವಾಗಿ ಇಂಡಿಗೋ ವಿಮಾನದ 6E-2278 ಲಕ್ನೋದ Chaudhary Charan Singh International Airport ಗೆ ಯಶಸ್ವಿಯಾಗಿ ಬಂದಿಳಿದ ಬಳಿಕ ಜೈವಾರ್ ಗೆ ಮರಳಿ, ನಂತರ ಬೆಂಗಳೂರು ಕಡೆಗೆ ಹಾರಾಟ ಮುಂದುವರೆಸಿತು.
ಈ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಜೆವಾರ್ ಪ್ರದೇಶದ ಸುಮಾರು 170 ರೈತರು, ಅವರಲ್ಲಿ ಸುಮಾರು 20 ಮಹಿಳೆಯರು ಸೇರಿ, ಸ್ವಯಂ ಪ್ರೇರಣೆಯಿಂದ ಭೂಮಿದಾನ ಮಾಡಿರುವುದು ವಿಶೇಷವಾಗಿದೆ. ಈ ರೈತರಲ್ಲಿ ನಿಯೋಗದ ಜೆವಾರ್ ಶಾಸಕ Dhirendra Singh ನೇತೃತ್ವದಲ್ಲಿ ಲಕ್ನೋ ಗೆ ತೆರಳಿ ಉತ್ತರ ಪ್ರದೇಶ ಮುಖ್ಯಮಂತ್ರಿ Yogi Adityanath ಅವರನ್ನು ಭೇಟಿಯಾಗಲಿದ್ದಾರೆ.
ರಾಜ್ಯದ ಸಂಪರ್ಕ ಮತ್ತು ಆರ್ಥಿಕ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಈ ಯೋಜನೆಗೆ ರೈತರು ಸರ್ಕಾರದ ಅಭಿವೃದ್ಧಿ ಉಪಕ್ರಮಗಳಿಗೆ ಧನ್ಯವಾದ ಸಲ್ಲಿಸುವುದು ಗಮನ ಸೆಳೆದಿದೆ .
ಉತ್ತರ ಪ್ರದೇಶದ ಜೆವಾರ್ ನಲ್ಲಿ ನಿರ್ಮಿತ Noida International Airport ಇದೀಗ ಎನ್ ಸಿಆರ್ ಪ್ರದೇಶಕ್ಕೆ ಪ್ರಮುಖ ಅಂತಾರಾಷ್ಟ್ರೀಯ ಪ್ರವೇಶ ಮಾರ್ಗವಾಗಿ ರೂಪುಗೊಂಡಿದ್ದು, ದೇಶದ ವಿಮಾನಯಾನ ಮೂಲಸೌಕರ್ಯ ಬಳಪಡಿಸುವ ಮಹತ್ವದ ಹೆಜ್ಜೆಯಾಗಿದೆ. ಇದರೊಂದಿಗೆ ದೆಹಲಿ- ಎನ್ ಸಿಆರ್ ಪ್ರದೇಶದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾರಂಭಗೊಂಡಂತಾಗಿದೆ.
ಭಾರತದ ಅತಿದೊಡ್ಡ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಯೋಜನೆಗಲ್ಲಿ ಒಂದಾದ ಈ ವಿಮಾನ ನಿಲ್ದಾಣದ ಮೊದಲ ಹಂತವನ್ನು ಸಾರ್ವಜನಿಕ - ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಸುಮಾರು ₹11,200 ಕೋಟಿ ಹೂಡಿಕೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆಧುನಿಕ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನಗಳೊಂದಿಗೆ ನಿರ್ಮಾಣಗೊಂಡಿರುವ ಇದು ಭವಿಷ್ಯದ ವಾಯುಯಾನ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ.
ಈ ವಿಮಾನ ನಿಲ್ದಾಣವು 3,900 ಮೀಟರ್ ಉದ್ದದ ರನ್ ವೇ ಹೊಂದಿದ್ದು, ದೊಡ್ಡ ವಿಮಾನಗಳ ಸುಗಮ ಕಾರ್ಯಾಚರಣೆಗೆ ಅನುಕೂಲ ಕಲ್ಪಿಸುತ್ತದೆ. ಜೊತೆಗೆ ಇನ್ ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS), ಸುಧಾರಿತ ಏರ್ ಫೀಲ್ಡ್ ಲೈಟಿಂಗ್ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಸಜ್ಜುಗೊಂಡಿದ್ದು, ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲೂ 24/7 ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತದೆ.
Also Read:
ಜರ್ಮನಿಯ ಭರ್ಜರಿ ಆರಂಭ: ಮೊದಲ ಪಂದ್ಯದಲ್ಲೇ ಏಳು ಗೋಲುಗಳ ಸಿಡಿಸಿ, ಹೊಸ ವಿಶ್ವ ದಾಖಲೆ