belagavi news :
ನಾರ್ವೆ ಚೆಸ್ 2026 ಟೂರ್ನಿಯ 9ನೇ ಸುತ್ತಿನಲ್ಲಿ ಭಾರತದ ಗ್ರಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರನ್ನು ಮಣಿಸಿ ಸತತ ಮೂರನೇ ಗೆಲುವು ದಾಖಲಿಸಿದ್ದಾರೆ. ಈ ಹ್ಯಾಟ್ರಿಕ್ ವಿಜಯದೊಂದಿಗೆ ಪ್ರಜ್ಞಾನಂದ ಪ್ರಶಸ್ತಿ ಸ್ಪರ್ಧೆಯಲ್ಲಿ ಮತ್ತಷ್ಟು ಬಲಿಷ್ಠ ಅಭ್ಯರ್ಥಿಯಾಗಿ ಹೊರಹಮ್ಮಿದ್ದಾರೆ.
ಟೂರ್ನಿ ಯುದ್ಧಕ್ಕೂ ಸ್ಥಿರ ಮತ್ತು ಅಸಾಧಾರಣ ಪ್ರದರ್ಶನ ನೀಡಿರುವ ಪ್ರಜ್ಞಾನಂದ, ಹಲವು ಬಲಿಷ್ಠ ಎದುರಾಳಿಗಳನ್ನು ಮಣಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕೇರಿದ್ದಾರೆ.
ಈ ಹಿಂದೆ ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್ ಸೆನ್ ವಿರುದ್ಧವು ಗೆಲುವು ಸಾಧಿಸಿದ್ದ ಪ್ರಜ್ಞಾನಂದ ಇದೀಗ ಮುಕೇಶ್ ವಿರುದ್ಧದ ಮಹತ್ವದ ಜಯದ ಮೂಲಕ ಪ್ರಶಸ್ತಿ ನಿರೀಕ್ಷೆಯನ್ನು ಜೀವಂತವಾಗಿರಿಸಿದ್ದಾರೆ. ಅಂತಿಮ ಸುತ್ತಿನಲ್ಲಿ ವೆಸ್ಲಿ ಸೊ ಸೋತರೆ ಮತ್ತು ಪ್ರಜ್ಞಾನಂದ ತಮ್ಮ ಪಂದ್ಯವನ್ನು ಗೆದ್ದರೆ, ಭಾರತೀಯ ತಾರೆಗೆ ನಾರ್ವೆ ಚೆಸ್ ಪ್ರಶಸ್ತಿ ಗೆಲ್ಲುವ ಅವಕಾಶ ಸಿಗಲಿದೆ.
ಇಂದು ನಡೆಯಲಿರುವ ಅಂತಿಮ ಸುತ್ತಿನಲ್ಲಿ ಪ್ರಜ್ಞಾನಂದ ಅವರು ವಿನ್ಸೆಂಟ್ ಕೈಮರ್ ಅವರನ್ನು ಎದುರಿಸಲಿದ್ದಾರೆ. ಮತ್ತೊಂದೆಡೆ, ಅಗ್ರಸ್ಥಾನದಲ್ಲಿರುವ ವೆಸ್ಲಿ ಸೋ, ಅಲಿರೇಜಾ ಪಿರಿಜ್ಜಾ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಪ್ರಶಸ್ತಿ ಯಾರ ಪಾಲಾಗಲಿದೆ ಎಂಬುವುದು ಅಂತಿಮ ಸುತ್ತಿನಲ್ಲಿ ನಿರ್ಧಾರವಾಗಲಿದೆ.
ಏತನ್ಮಧ್ಯೆ ಇತ್ತೀಚಿಗೆ ನಡೆದ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ನಲ್ಲಿ ಪ್ರಜ್ಞಾನಂದ
ದಯನೀಯವಾಗಿ ವಿಫಲರಾಗಿದ್ದರು,ಆದರೆ ನಾರ್ವೆ ಚೆಸ್ ನಲ್ಲಿ ಬಲಿಷ್ಠ ಪುನರಾಗಮನ ಮಾಡಿದ್ದು ಅವರು ಪ್ರಶಸ್ತಿ ಗೆದ್ದು ಹಿಂದಿನ ಸೋಲುಗಳನ್ನು ಮರೆಯುವ ಗುರಿಯನ್ನು ಹೊಂದಿದ್ದಾರೆ.ಏತನ್ಮಧ್ಯೆಇದಕ್ಕೂ ಮುನ್ನ ಮಂಗಳವಾರ ಅವರು ವಿಶ್ವದ ನಂಬರ್ ಒನ್ ಮತ್ತು ಹಾಲಿ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿ ಸತತ ಎರಡನೇ ಬಾರಿಗೆ ಮಣಿಸಿದ್ದರು..
ನಾರ್ವೆ ಚೆಸ್ 2026ರ 9ನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರನ್ನು ಮಣಿಸಿದ ಬಳಿಕ ಭಾರತದ ಗ್ರಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ನಾರ್ವೆ ಚೆಸ್ ನ ಅಧಿಕೃತ ಪ್ರಸಾರದೊಂದಿಗೆ ಮಾತನಾಡಿದ ಅವರು,ಈ ಗೆಲುವು ತಮ್ಮ ಪಾಲಿಗೆ ವಿಶೇಷವಾಗಿದ್ದು,ಇದುವರೆಗೂ ಗುಕೇಶ್ ವಿರುದ್ಧ ಹೆಚ್ಚು ಬಾರಿ ಸೋಲು ಕಂಡಿದ್ದೇನೆ ಎಂದು ಹೇಳಿದರು.
"ಈ ಆಟದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ.ಸಾಮಾನ್ಯವಾಗಿ ನಾನು ಅವನ ವಿರುದ್ಧ ಸೋಲುತ್ತೇನೆ.ಅವನು ಕೆಲವೊಮ್ಮೆ ವಿಚಿತ್ರವಾದ ನಡೆಗಳನ್ನು ಆಯ್ಕೆ ಮಾಡುತ್ತಾನೆ.ಅಂತಹ ಸಂದರ್ಭಗಳಲ್ಲಿ ನಾನು ಅತಿಯಾಗಿ ಯೋಚಿಸಿ ತಪ್ಪು ಮಾಡಿದ್ದೆ.ಆದರೆ ಈ ಬಾರಿ ಸಮಯವನ್ನು ಚೆನ್ನಾಗಿ ನಿರ್ವಹಿಸಿದೆ ಮತ್ತು ಲೆಕ್ಕಾಚಾರವು ಸರಿಯಾಗಿತ್ತು.ಒಟ್ಟಾರೆ ಇದು ನನ್ನ ಉತ್ತಮ ಆಟಗಳಲ್ಲಿ ಒಂದಾಗಿದೆ ಎಂದು ಭಾವಿಸುತ್ತೇನೆ", ಎಂದು ಪ್ರಜ್ಞಾನಂದ ಹೇಳಿದರು.
ಪ್ರಜ್ಞಾನಂದ ಅವರ ಈ ಗೆಲುವು ಕೇವಲ ಅಂಕ ಪಟ್ಟಿಯಲ್ಲಿ ಏರಿಕೆ ಮಾತ್ರವಲ್ಲ,ಪ್ರಶಸ್ತಿ ಗೆಲ್ಲುವ ಭರವಸೆಯನ್ನು ಹೆಚ್ಚಿಸಿದೆ.ಸತತ ಮೂರು ಗೆಲುವುಗಳೊಂದಿಗೆ ಅವರು 15 ಅಂಕಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದು,ಅಗ್ರಸ್ಥಾನದಲ್ಲಿರುವ ವೆಸ್ಲಿ ಸೋ ಅವರಿಗಿಂತ ಕೇವಲ ಅರ್ಧ ಅಂಕ ಹಿಂದಿದ್ದಾರೆ.ಅಂತಿಮ ಸುತ್ತಿನಲ್ಲಿ ಉತ್ತಮ ಫಲಿತಾಂಶ ಸಾಧಿಸಿದರೆ ಪ್ರಶಸ್ತಿ ಗೆಲುವು ಅವಕಾಶ ಅವರ ಮುಂದಿದೆ.
ಇನ್ನೊಂದೆಡೆ,ನಾರ್ವೆ ಚೆಸ್ ಮಹಿಳಾ ವಿಭಾಗದಲ್ಲಿ ಭಾರತೀಯ ಆಟಗಾರ್ತಿಯರ ಪ್ರಶಸ್ತಿ ಕನಸು ಅಂತ್ಯಗೊಂಡಿದೆ.ಭಾರತದ ಯುವ ಪ್ರತಿಭೆ ದಿವ್ಯ ದೇಶಮುಖ್ ಐದನೇ ಸ್ಥಾನದಲ್ಲಿದ್ದರೆ,ಅನುಭವಿ ಗ್ರಾಂಡ್ ಮಾಸ್ಟರ್ ಕೊನೆರು ಹಂಪಿ ಆರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.
ಮಳೆ ಮಹಿಳಾ ವಿಭಾಗದಲ್ಲಿ ನ ಕಝಾಕಿಸ್ತಾನದ ಬಿಬಿಸಾರ ಅಸ್ಸಾಬಯೇವಾ 16.5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು ಪ್ರಶಸ್ತಿಯನ್ನು ಈಗಾಗಲೇ ತನ್ನದಾಗಿಸಿಕೊಂಡಿದ್ದಾರೆ. ಝು ಜಿನರ್ 13 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೂ,ಅಂಕಗಳ ಅಂತರ ಹೆಚ್ಚಿರುವ ಕಾರಣ ಅಂತಿಮ ಸುತ್ತಿನ ಫಲಿತಾಂಶ ಯಾವುದೇ ಬದಲಾವಣೆ ತರಲಾರದು.ಹೀಗಾಗಿ ಬಿಬಿ ಸಾರ ಅಸ್ಸಾಬಯೇವಾ ನಾರ್ವೆ ಚೆಸ್ ಮಹಿಳಾ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
Also Read: