Belagavi News:
ಬುಧವಾರ ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಅರ್ಜೆಂಟಿನ ವಿರುದ್ಧ 3-0 ಅಂತರದಲ್ಲಿ ಸೋಲಿನ ಬಳಿಕ ಅಲ್ಜೀರಿಯಾ ಫುಟ್ಬಾಲ್ ತಂಡ ತೀರ್ಪುಗಳ ವಿರುದ್ಧ ತೀವ್ರ ಅಕ್ಷಯಪಾ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಅಲ್ಜೀರಿಯಾ ಫುಟ್ಬಾಲ್ ಫೆಡರೇಶನ್ ಫಿಫಾ ರೆಫರಿ ಆಯೋಗಕ್ಕೆ ಅಧಿಕೃತ ದೂರು ಸಲ್ಲಿಸಿದೆ.
ಅಲ್ಜೀರಿಯಾ ಫುಟ್ಬಾಲ್ ಫೆಡರೇಶನ್ ಪ್ರಕಾರ, ಪಂದ್ಯದಲ್ಲಿ ಪೊಲೀಷ್ ರೆಫರಿ ಸೈಮನ್ ಮಾರ್ಸಿನಿಯಾಕ್ ನೇತೃತ್ವದ ಸಮಿತಿ ಹಲವು ನಿರ್ಣಯಗಳಲ್ಲಿ ಪಕ್ಷಪಾತ ತೋರಿದೆ ಎಂದು ಆರೋಪಿಸಲಾಗಿದೆ. ವಿಶೇಷವಾಗಿ ಅರ್ಜೆಂಟಿನಾ ನಾಯಕ ಲಿಯೋನೆಲ್ ಮೆಸ್ಸಿಯನ್ನು ಮೊದಲಾರ್ಧದಲ್ಲಿಯೇ ರೆಡ್ ಕಾರ್ಡ್ ನೀಡಿ ಹೊರಗೆ ಕಳುಹಿಸಬೇಕಿತ್ತು ಎಂದು ಅಲ್ಜಿರಿಯಾ ತಂಡ ಗಂಭೀರ ಆರೋಪ ಮಾಡಿದೆ.
ರೆಫೆರಿಯ ಕೆಲವು ತೀರ್ಪುಗಳು ಪಂದ್ಯ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿವೆ ಎಂದು ಅಲ್ಜೀರಿಯಾ ಹೇಳಿದ್ದು, ಈ ಕುರಿತು ಸಂಪುಟ ತನಿಕೆ ನಡೆಸುವಂತೆ ಫಿಫಾ ಆಯೋಗವನ್ನು ಒತ್ತಾಯಿಸಿದೆ. ಈ ಕುರಿತು ಈಗಾಗಲೇ ಅಧಿಕೃತ ಪತ್ರವನ್ನು ರೆಫರಿ ಆಯೋಗಕ್ಕೆ ಕಳುಹಿಸಲಾಗಿದೆ.
ಈ ಘಟನೆ ಫುಟ್ಬಾಲ್ ವಿಶ್ವದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಅಭಿಮಾನಿಗಳ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದೆಡೆ ಅರ್ಜೆಂಟಿನಾ ತಂಡದಿಂದ ಈ ಆರೋಪಗಳ ಬಗ್ಗೆ ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಕ್ರೀಡಾ ತಜ್ಞರ ಪ್ರಕಾರ, ವಿಶ್ವ ಕಪ್ ಮಟ್ಟದ ಪಂದ್ಯಗಳಲ್ಲಿ ಇಂತಹ ಆರೋಪಗಳು ಗಂಭೀರವಾಗಿ ಪರಿಗಣಿಸಲಾಗುತ್ತವೆ ಮತ್ತು ಫಿಫಾ ತನಿಖೆ ಆರಂಭಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ, ಈ ವಿವಾದವು ಫಿಫಾ ವಿಶ್ವಕಪ್ ಟೂರ್ನಿಯ ಮೇಲೆ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಕಾನ್ಸಾಸ್ ಸಿಟಿ ಪಂದ್ಯದಲ್ಲಿ ಮೆಸ್ಸಿಯ ಹ್ಯಾಟ್ರಿಕ್ - ರೆಫರಿಂಗ್ ತೀರ್ಪುಗಳ ವಿರುದ್ಧ ಅಲ್ಜೀರಿಯಾದಿಂದ ಗಂಭೀರ ಆರೋಪ, VAR ನಿರ್ಲಕ್ಷ್ಯಕ್ಕೆ ಆಕ್ರೋಶ:
ಕಾನ್ಸಾಸ್ ಸಿಟಿಯಲ್ಲಿ ನಡೆದ ಅಂತರಾಷ್ಟ್ರೀಯ ಫುಟ್ಬಾಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿಯ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಹಾಲಿ ಚಾಂಪಿಯನ್ ಅರ್ಜೆಂಟಿನ ತಂಡವು ಭರ್ಜರಿ ಜಯ ದಾಖಲಿಸಿದೆ. ಆದರೆ ಪಂದ್ಯದ ನಂತರ ಕ್ರೀಡಾಂಗಣದ ಪ್ರದರ್ಶನಕ್ಕಿಂತ ಹೆಚ್ಚು ಚರ್ಚೆಯಾಗುತ್ತಿರುವ ರೆಫರಿ ತೀರ್ಪುಗಳು ಮತ್ತು VAR ನಿರ್ಧಾರಗಳ ಬಗ್ಗೆ ಅಲ್ಜೀರಿಯ ಫುಟ್ಬಾಲ್ ಫೆಡರೇಶನ್ ಮಾಡಿರುವ ಗಂಭೀರ ಆರೋಪಗಳು.
ಪಂದ್ಯದ ಮೊದಲಾರ್ಧದ ಮಧ್ಯದಲ್ಲಿ ಅರ್ಜೆಂಟಿನ ನಾಯಕ ಲಿಯೋನೆಲ್ ಮೆಸ್ಸಿ ಮತ್ತು ಅಲ್ಜೀರಿಯ ನಾಯಕ ಐಸಾ ಮಂಡಿ ನಡುವಿನ ಪೌಲ್ ಘಟನೆಯು ವಿವಾದಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಮಂಡಿಯ ಕಾಲಿಗೆ ಮೆಸ್ಸಿಯ ಬೂಟು ಬಡಿದಿದ್ದು, ಅಲ್ಜೀರಿಯಾ ಆಟಗಾರರು ತಕ್ಷಣವೇ ಕೆಂಪು ಕಾರ್ಡ್ ನೀಡಬೇಕೆಂದು ಮನವಿ ಮಾಡಿದರು. ಆದರೆ ಅರೆಪರಿ ಹಾಗೂ VAR ತಂಡವು ಈ ಘಟನೆ ಪರಿಶೀಲನೆಗೆ ಮುಂದಾಗಿರುವುದು ಅಲ್ಜೀರಿಯಾ ಶಿಬಿರದ ಆಕ್ರೋಶಕ್ಕೆ ಕಾರಣವಾಗಿದೆ.
ಇದಲ್ಲದೆ, ದ್ವಿತಿಯಾರ್ಧದಲ್ಲಿ ಮತ್ತೊಂದು ವಿವಾದಾತ್ಮಕ ಘಟನೆ ನಡೆದಿದೆ ಎಂದು ಅಲ್ಜೀರಿಯಾ ಆರೋಪಿಸಿದೆ. ಅರ್ಜೆಂಟಿನ ಮಿಡ್ ಫೀಲ್ಡರ್ ಅಲೆಕ್ಸಿಸ್ ಮೆಕ್ ಅಲಿಸ್ಟರ್ ಅವರು ಅಲ್ಜೀರಿಯಾ ಆಟಗಾರ ಇಬ್ರಾಹಿಂ ಮಾಸಾ ಅವರನ್ನು ಮೊಣ ಕೈಯಿಂದ ಹೊಡೆದಿದ್ದರೂ, ಈ ಘಟನೆಯ ಮೇಲೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಫೆಡರೇಶನ್ ಆರೋಪಿಸಿದೆ.
ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಅಲ್ಜೀರಿಯ ಫುಟ್ಬಾಲ್ ಫೆಡರೇಶನ್ ಅಧಿಕೃತವಾಗಿ ರೆಫರಿ ಆಯೋಗಕ್ಕೆ ದೂರು ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪಂದ್ಯದಲ್ಲಿ ನಡೆದ ಘಟನೆಗಳ ಕುರಿತು ಸಂಪೂರ್ಣ ಪರಿಶೀಲನೆ ನಡೆಸಬೇಕು ಹಾಗೂ VAR ನಿರ್ಲಕ್ಷವನ್ನು ತನಿಖೆಗೊಳಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ವಿವಾದವನ್ನು ಫುಟ್ಬಾಲ್ ಅಭಿಮಾನಿಗಳ ನಡುವೆ ತೀವ್ರ ಚರ್ಚೆ ಆರಂಭವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪಂದ್ಯದ ರೆಫರಿಂಗ್ ನಿರ್ಧಾರಗಳ ಬಗ್ಗೆ ವಿನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇನ್ನೊಂದೆಡೆ ಅರ್ಜೆಂಟಿನ ತಂಡದಿಂದ ಈ ಆರೋಪಗಳಿಗೆ ಅಧಿಕೃತ ಪ್ರತಿಕ್ರಿಯೆ ಇನ್ನೂ ಬಂದಿಲ್ಲ.
ಒಟ್ಟಿನಲ್ಲಿ, ಮೆಸ್ಸಿಯ ಹ್ಯಾಟ್ರಿಕ್ ಗೆಲುವಿನ ಸಂಭ್ರಮಕ್ಕಿಂತ ಹೆಚ್ಚು ರೆಫಾರಿ ವಿವಾದವು ಅಂತರಾಷ್ಟ್ರೀಯ ಫುಟ್ಬಾಲ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಮೆಸ್ಸಿಯ ಹ್ಯಾಟ್ರಿಕ್ ದಾಖಲೆ ಸರಿಗಟ್ಟಿದ ಪಂದ್ಯ ವಿವಾದ - ಫಿಫಾ ಪ್ರತಿಕ್ರಿಯೆ ನಿರೀಕ್ಷೆಯಲ್ಲಿ ಅಲ್ಜೀರಿಯಾ:
ಕಾನ್ಸಾಸ್ ಸಿಟಿಯಲ್ಲಿ ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿಯ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಅರ್ಜೆಂಟಿನ ಭರ್ಜರಿ ಜಯ ಸಾಧಿಸಿದೆ. ಈ ಪ್ರದರ್ಶನದೊಂದಿಗೆ ಮೆಚ್ಚಿ ವಿಶ್ವಕಪ್ ಇತಿಹಾಸದಲ್ಲಿ ಮಿರೋಸ್ಲಾವ್ ಕ್ಲೋಸ್ ಅವರ 16 ಗೋಲುಗಳ ದಾಖಲೆಯನ್ನು ಸರಿಗಟ್ಟಿರುವುದು ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.
ಆದರೆ ಪಂದ್ಯಕ್ಕಿಂತ ಹೆಚ್ಚು ಚರ್ಚೆಗೆ ಕಾರಣವಾಗಿರುವುದು ರೆಫಾರಿ ತೀರ್ಪುಗಳು ಮತ್ತು VAR ನಿರ್ಲಕ್ಷದ ಕುರಿತು ಅಲ್ಜೀರಿಯ ಫುಟ್ಬಾಲ್ ಫೆಡರೇಶನ್ ಮಾಡಿರುವ ಆರೋಪಗಳು. ಈ ಘಟನೆ ಈಗ ಸಾಮಾಜಿಕ ಮಾಧ್ಯಮ ಹಾಗೂ ಫುಟ್ಬಾಲ್ ಜಗತ್ತಿನಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ.
ದಕ್ಷಿಣ ಆಫ್ರಿಕಾದ ಕೋಚ್ ಹ್ಯೂಗೋ ಬ್ರೂಸ್ ಕೂಡ ಈ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ್ದು, ತಮ್ಮ ಆಟಗಾರನ ಮೂರು ಪಂದ್ಯಗಳ ನಿಷೇಧದ ಸಂದರ್ಭವನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. ಮೆಸ್ಸಿಯಂತದ ವಿಶ್ವದರ್ಜೆಯ ಆಟಗಾರರು ಮೈದಾನದಲ್ಲಿ ಇರಬೇಕೆಂಬುದು ರೆಫರಿಗಳ ನಿಲುವಾಗಿದ್ದರು, ಎರಡು ಪ್ರಮುಖ ಘಟನೆಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಅಚ್ಚರಿ ಮೂಡಿಸಿದ ಎಂದು ಅವರು ಹೇಳಿದ್ದಾರೆ.
ಮೊದಲಾರ್ಧದಲ್ಲಿ ಮಸ್ಸಿ ಮತ್ತು ಅಲ್ಜೀರಿಯಾ ನಾಯಕ ಐಸಾ ಮಂಡಿ ನಡುವಿನ ಫೌಲ್ ಘಟನೆ ಹಾಗೂ ದ್ವಿತೀಯಾರ್ಧದಲ್ಲಿ ಅಲೆಕ್ಸಿಸ್ ಮೆಕ್ ಅಲಿಸ್ಟರ್ ಮತ್ತು ಇಬ್ರಾಹಿಂ ಮಾಸಾ ನಡುವಿನ ಗುದ್ದಾಟದ ಕುರಿತು ರೆಫರಿಗಳು ಕ್ರಮ ಕೈಗೊಳ್ಳಇರುವುದನ್ನು ಅಲ್ಜೀರಿಯಾ ತಂಡ ಗಂಭೀರವಾಗಿ ಪ್ರಶ್ನಿಸಿದೆ. ಈ ಹಿನ್ನೆಲೆಯಲ್ಲಿ ಫಿಫಾ ದಿಂದ ಸ್ಪಷ್ಟನೆ ನಿರೀಕ್ಷಿಸಲಾಗುತ್ತಿದೆ.
ಇನ್ನೊಂದೆಡೆ, ಅಲ್ಜಿರಿಯಾ ತಂಡ ನಕೌಟ್ ಹಂತದ ಹೋರಾಟವನ್ನು ಜೀವಂತವಾಗಿರಿಸಿಕೊಳ್ಳಲು ಮುಂದಿನ ಪಂದ್ಯಗಳತ್ತ ಗಮನಹರಿಸಿದೆ. ಗ್ರೂಪ್ ಜೆನಲ್ಲಿ ಒತ್ತಡದಲ್ಲಿರುವ ಅಲ್ಜೀರಿಯ ತನ್ನ ಮುಂದಿನ ಪಂದ್ಯಗಳಲ್ಲಿ ಜೋರ್ಡಾನ್ ಮತ್ತು ಆಸ್ಟ್ರಿಯಾ ವಿರುದ್ಧ ಸೆಣಿಸಲಿದೆ. ಮೆಸ್ಸಿಯ ಫಾರ್ಮ್ ಮತ್ತು ತಂಡದ ಆತ್ಮವಿಶ್ವಾಸವು ಅರ್ಜೆಂಟಿನ ಅಭಿಮಾನಿಗಳಿಗೆ ದೊಡ್ಡ ಭರವಸೆಯಾಗಿದೆ.
ಒಟ್ಟಿನಲ್ಲಿ, ಮೆಸ್ಸಿಯ ದಾಖಲೆಮಯ ಪ್ರದರ್ಶನದ ಜೊತೆಗೆ ರೆಫಾರಿ ವಿವಾದವು ವಿಶ್ವಕಪ್ ಟೂರ್ನಿಯಲ್ಲಿ ಹೊಸ ಚರ್ಚೆ ಹಾಗೂ ಕುತೂಹಲವನ್ನು ಹುಟ್ಟು ಹಾಕಿದೆ.
Also Read:
ಡೀಸೆಲ್ ಬೆಲೆ ಏರಿಕೆ ಶಾಕ್ : ಬಸ್ ದರ ಏರಿಕೆ ಅನಿವಾರ್ಯವೇ? ಡಿಕೆಶಿ ಹೇಳಿದ್ದೇನು?