<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಭಾರತ-ಇಂಡೋನೇಷ್ಯಾ ಸ್ನೇಹದ ಬಗ್ಗೆ ಪ್ರಧಾನಿ ಮೋದಿ ಭಾವುಕ ಮಾತು; ಹಂಚಿಕೊಂಡ ವಿಶೇಷ ಪೋಸ್ಟ್

ಭಾರತ-ಇಂಡೋನೇಷ್ಯಾ ಸ್ನೇಹದ ಬಗ್ಗೆ ಪ್ರಧಾನಿ ಮೋದಿ ಭಾವುಕ ಮಾತು; ಹಂಚಿಕೊಂಡ ವಿಶೇಷ ಪೋಸ್ಟ್
Summary: Prime Minister Narendra Modi has praised the long-standing friendship, cultural ties and strategic partnership between India and Indonesia. He said that the relationship between the two countries is 'very strong and vibrant' and expressed his commitment to further strengthen mutual cooperation and friendship through an emotional social media post.

Belagavi News:

ಜಕಾರ್ತಾ, ಇಂಡೋನೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ-ಇಂಡೋನೇಷ್ಯಾ ನಡುವಿನ ಐತಿಹಾಸಿಕ ಸ್ನೇಹ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಸ್ಮರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಉಭಯ ರಾಷ್ಟ್ರಗಳ ಸಂಬಂಧವು ಕೇವಲ ರಾಜತಾಂತ್ರಿಕ ಸಹಕಾರಕ್ಕೆ ಸೀಮಿತವಾಗಿಲ್ಲ; ಅದು ಶತಮಾನಗಳ ಇತಿಹಾಸ, ಸಂಸ್ಕೃತಿ ಮತ್ತು ಪರಸ್ಪರ ವಿಶ್ವಾಸದ ಮೇಲೆ ನಿರ್ಮಾಣಗೊಂಡಿರುವ ಗಟ್ಟಿಯಾದ ಭಾಂದವ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ಪೋಸ್ಟ್ ನಲ್ಲಿ ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸ್ನೇಹವು ಅತ್ಯಂತ ಗಟ್ಟಿ, ರೋಮಾಂಚಕ ಹಾಗೂ ಸದಾ ಜೀವಂತವಾಗಿದೆ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. ವ್ಯಾಪಾರ, ಸಂಸ್ಕೃತಿ, ಸಮುದ್ರ ಸಹಕಾರ ಮತ್ತು ಜನರಿಂದ ಜನರಿಗೆ ಇರುವ ಸಂಪರ್ಕದ ಮೂಲಕ ಈ ಭಾಂದವ್ಯ ನಿರಂತರವಾಗಿ ಮತ್ತಷ್ಟು ಬಲಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿಯೂ ಉಭಯ ರಾಷ್ಟ್ರಗಳ ಸಹಕಾರವನ್ನು ಇನ್ನಷ್ಟು ವಿಸ್ತರಿಸುವ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ.

ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗಿ ನಡೆದ ಯಶಸ್ವಿ ದ್ವಿಪಕ್ಷೀಯ ಮಾತುಕತೆಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಈ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ಉಭಯ ನಾಯಕರು ವ್ಯಾಪಾರ, ಹೂಡಿಕೆ, ರಕ್ಷಣೆ, ಶಿಕ್ಷಣ, ಸಮುದ್ರ ಸಹಕಾರ ಸೇರಿದಂತೆ ಹಲವು ಮಹತ್ವದ ಕ್ಷೇತ್ರಗಳಲ್ಲಿ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಸಿದರು.

ಈ ಭೇಟಿಯ ಪ್ರಮುಖ ಬೆಳವಣಿಗೆಗಾಗಿ ಭಾರತದ ಪ್ರತಿಷ್ಠಿತ " ಐಐಎಂ ಬೆಂಗಳೂರು" ಸಂಸ್ಥೆಯ ಹೊಸ ಕ್ಯಾಂಪಸ್ ಅನ್ನು ಇಂಡೋನೇಷ್ಯಾದಲ್ಲಿ ಆರಂಭಿಸಲು ಉಭಯ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿವೆ. ಶಿಕ್ಷಣ ಕ್ಷೇತ್ರದಲ್ಲಿ ಇಂದು ಮಹತ್ವದ ಹೆಜ್ಜೆಯೆಂದು ಪರಿಗಣಿಸಲಾಗಿದೆ.

ಇದರ ಜೊತೆಗೆ, ರಕ್ಷಣಾ ಸಹಕಾರಕ್ಕೂ ಹೊಸ ಉತ್ತೇಜನ ದೊರೆತಿದ್ದು, ಭಾರತದಲ್ಲಿ ಅಭಿವೃದ್ಧಿ ಪಡಿಸಲಾದ ಶಕ್ತಿಶಾಲಿ "ಅಸ್ತ್ರ" ವಾಯು- ವಾಯು ಕ್ಷಿಪಣಿ ವ್ಯವಸ್ಥೆಯನ್ನು ಖರೀದಿಸಲು ಇಂಡೋನೇಷ್ಯಾ ಆಸಕ್ತಿ ವ್ಯಕ್ತಪಡಿಸಿದೆ. ಈ ಬೆಳವಣಿಗೆ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ರಕ್ಷಣೆ, ವ್ಯಾಪಾರ, ಡಿಜಿಟಲ್ ತಂತ್ರಜ್ಞಾನ, ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕೈಗೊಳ್ಳಲಾದ ಮಹತ್ವದ ಒಪ್ಪಂದಗಳು ಭಾರತ- ಇಂಡೋನೇಷ್ಯಾ ಸಂಬಂಧಕ್ಕೆ ಹೊಸ ಚೈತನ್ಯ ತುಂಬಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಹಭಾಗಿತ್ವವು ಉಭಯ ರಾಷ್ಟ್ರಗಳ ನಡುವಿನ ಕಾರ್ಯ ತಂತ್ರದ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವುದರ ಜೊತೆಗೆ, ಪರಸ್ಪರ ಅಭಿವೃದ್ಧಿ ಮತ್ತು ಸಹಕಾರಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದಿದ್ದಾರೆ.

ಭಾರತ ಮತ್ತು ಇಂಡೋನೇಷ್ಯಾ ದೀರ್ಘಕಾಲದ ಸ್ನೇಹಿತ ರಾಷ್ಟ್ರಗಳಾಗಿದ್ದು, ಪರಸ್ಪರ ವಿಶ್ವಾಸ ಮತ್ತು ಸಹಕಾರದ ಆಧಾರದ ಮೇಲೆ ನಿರ್ಮಾಣಗೊಂಡಿರುವ ಈ ಭಾಂದವ್ಯ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಉಭಯ ದೇಶಗಳ ನಡುವಿನ ಸಹಯೋಗವು ಪ್ರಾದೇಶಿಕ ಸ್ಥಿರತೆ, ಆರ್ಥಿಕ ಬೆಳವಣಿಗೆ ಮತ್ತು ಜನರಿಂದ ಜನರಿಗೆ ಇರುವ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online