belagavi news:
ಅಮೇರಿಕಾ ಅಧ್ಯಕ್ಷ ಡ್ರೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಶಾಂತಿ ಒಪ್ಪಂದಕ್ಕೆ ಇಂದು ಸಹಿ ಹಾಕಲಾಗುವುದು ಎಂದು ತಿಳಿಸಿದ್ದಾರೆ. ಸಹಿ ಹಾಕಿದ ತಕ್ಷಣವೇ ಪ್ರಮುಖ ಸಾಗರ ಮಾರ್ಗದ ಹಾರ್ಮುಜ್ ಜಲ ಸಂಧಿ ಎಲ್ಲರಿಗೂ ಮುಕ್ತವಾಗಲಿದೆ ಎಂದು ಅವರು ಹೇಳಿದ್ದಾರೆ.
ನಾಳೆ ಈ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿರುವ ಟ್ರಂಪ್, ಇದರಿಂದ ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದಿಂದ ಮುಂದುವರೆದಿರುವ ಉದ್ವಿಗ್ನತೆಗೆ ಅಂತ್ಯ ಕಾಣುವ ನೀರಿಕ್ಷೆ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇರಾನ್ ಮೇಲೆ ನಡೆದ ದಾಳಿಗಳು, ಅದರ ತೈಲ ಉದ್ಯಮದ ಮೇಲೆ ಒತ್ತಡ ಮತ್ತು ಏರಿದ ರಾಜಕೀಯ ಉದ್ವಿಗ್ನತೆಯ ನಡುವೆ ಈ ಘೋಷಣೆ ಹೊರ ಬಿದ್ದಿದ್ದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.
ಇದೇ ಸಂದರ್ಭದಲ್ಲಿ, ಈ ಒಪ್ಪಂದ 2018ರಲ್ಲಿ ಆಗಿನ ಅಧ್ಯಕ ಬರಾಕ್ ಒಬಾಮಾ ನೇತೃತ್ವದಲ್ಲಿ ನಡೆದ ಜಂಟಿ ಸಮಗ್ರ ಕ್ರಿಯಾ ಯೋಜನೆಗೆ ವಿರುದ್ಧವಾಗಿರುತ್ತದೆ ಎಂದು ಟ್ರಂಪ್ ಹೇಳಿರುವುದು ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಈ ಬೆಳವಣಿಗೆಗೆ ಮಧ್ಯ ಪ್ರಾಚ್ಯದ ರಾಜಕೀಯ ಮತ್ತು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.
ಇರಾನ್ ಯಾವುದೇ ಪರಮಾಣು ಶಸ್ತ್ರಾಸ ಹೊಂದುವಂತಿಲ್ಲ. ಅದಕ್ಕೆ ಈ ಒಪ್ಪಂದ ತಡೆಗೋಡೆಯಾಗಲಿದೆ. ಇನ್ಮುಂದೆ ಅವರು ಪರಮಾಣು ಶಸ್ತ್ರಾಸ್ತ್ರವನ್ನು ಬಯಸುವುದಿಲ್ಲ. ಅವುಗಳ ಖರೀದಿ, ಅಭಿವೃದ್ಧಿ ಅಥವಾ ಯಾವುದೇ ರೀತಿಯ ಸಂಗ್ರಹದ ಮೂಲಕವೂ ಅದನ್ನವರು ಹೊಂದುವುದಿಲ್ಲ ಎಂಬುದು ಅವರ ಹೇಳಿಕೆ. ಅಮೇರಿಕಾ ಅಧ್ಯಕ್ಷ ಅವರು ಇರಾನ್ ನ ಪರಮಾಣು ಕಾರ್ಯಕ್ರಮವನ್ನು ತಟಸ್ಥಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಉಳಿದಿರುವ ಪರಮಾಣುವ ವಸ್ತುಗಳನ್ನು ಮುಂದಿನ ಹಂತದಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ನಡುವೆ, ಪಾಕಿಸ್ತಾನದ ಪ್ರಧಾನಿ shehbaz shariff ಅವರು ಅಮೆರಿಕ ಇರಾನ್ ಶಾಂತಿ ಒಪ್ಪಂದವು ಮುಂದಿನ 24 ಗಂಟೆಗಳಲ್ಲಿ ಅಂತಿಮ ಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಅವರು ಎಕ್ಸ್ ನಲ್ಲಿ ನೀಡಿದ ಹೇಳಿಕೆಯಲ್ಲಿ, "ನಾವು ಶಾಂತಿ ಒಪ್ಪಂದಕ್ಕೆ ಬಹಳ ಹತ್ತಿರವಾಗಿದೆ. ಮುಂದಿನ ವಾರ ತಾಂತ್ರಿಕ ಮಟ್ಟದ ಮಾತುಕತೆಗಳು ನಡೆಯಲಿವೆ" ಎಂದು ತಿಳಿಸಿದ್ದಾರೆ.
ಈ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದಿಂದ ಮುಂದುವರೆದಿರುವ ಉದ್ವಿಗ್ನತೆಗೆ ಅಂತ್ಯ ಕಾಣಿಸುವ ನಿರೀಕ್ಷೆಯನ್ನು ಹೆಚ್ಚಿಸಿವೆ. ಜೊತೆಗೆ ಜಾಗತಿಕ ರಾಜಕೀಯ ಹಾಗೂ ತೈಲ ಮಾರುಕಟ್ಟೆಯ ಮೇಲು ಈ ಒಪ್ಪಂದ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಹಾಗೂ ಇರಾನ್ ಎರಡಕ್ಕೂ ಧನ್ಯವಾದಗಳು ಸಲ್ಲಿಸಿ, ಐತಿಹಾಸಿಕ ಶಾಂತಿ ಒಪ್ಪಂದವು ಶಾಶ್ವತ ಶಾಂತಿಗೆ ಬಲವಾದ ಅಡಿಪಾಯ ರೂಪಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಹಾರ್ಮುಜ್ ಜಲ ಸಂಧಿಯಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದ ಹಲವು ಡ್ರೋನ್ ಗಳನ್ನು ಅಮೆರಿಕಾ ಪಡೆಗಳು ಹೊಡೆದುರಿಸಿದ್ದಕ್ಕಾಗಿ ತಿಳಿಸಲಾಗಿದ್ದು, ಇದರಿಂದ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿತ್ತು.
ಈ ನಡುವೆಯೂ, ಎಲ್ಲಾ ವಿಷಯಗಳ ಕುರಿತು ಸಂಪೂರ್ಣ ಒಪ್ಪಂದಕ್ಕೆ ಬರುವವರೆಗೆ ಅಮೆರಿಕ - ಇರಾನ್ ನಡುವೆ ಶಾಂತಿ ಒಪ್ಪಂದವನ್ನು ಮುಂದುವರಿಸಲಾಗುತ್ತದೆ ಎಂಬ ಸೂಚನೆಯನ್ನು ಟ್ರಂಪ್ ನೀಡಿದ್ದಾರೆ. ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ದೀರ್ಘಕಾಲದ ಸಂಘರ್ಷಕ್ಕೆ ಅಂತ್ಯ ಕಾಣಿಸುವ ನಿರೀಕ್ಷೆಯನ್ನು ಹೆಚ್ಚಿಸಿದೆ.
Also Read:
BBMP ಘನತ್ಯಾಜ್ಯ ಟೆಂಡರ್ ಗೆ ಬ್ರೇಕ್ ಬೀಳುತ್ತಾ? ಉನ್ನತ ಮಟ್ಟದ ಪರಿಶೀಲನೆಗೆ ವಿಪಕ್ಷ ನಾಯಕ ಆರ್ ಅಶೋಕ್ ಒತ್ತಾಯ