<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Business

ಪೆಟ್ರೋಲ್ , ಡೀಸೆಲ್ ಮತ್ತೆ ದುಬಾರಿ? ತಜ್ಞರಿಂದ ₹8-10 ಏರಿಕೆ ಎಚ್ಚರಿಕೆ

ಪೆಟ್ರೋಲ್ , ಡೀಸೆಲ್ ಮತ್ತೆ ದುಬಾರಿ? ತಜ್ಞರಿಂದ ₹8-10 ಏರಿಕೆ ಎಚ್ಚರಿಕೆ
Summary: Experts have warned that petrol and diesel prices are likely to rise by ₹8 to ₹10 soon amid instability in the international market. The fuel price hike is likely to impact the cost of living of the common man.

Belagavi News:

ಬೆಂಗಳೂರು, ಮೇ 17: ದೇಶದಲ್ಲಿ ಇಂಧನ ಬೆಲೆ ಏರಿಕೆ ಜನಸಾಮಾನ್ಯರ ಬದುಕಿನ ವೆಚ್ಚವನ್ನು ಮತ್ತಷ್ಟು ಹೆಚ್ಚಿಸುವ ಆತಂಕ ಮೂಡಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ದರಗಳು ಲೀಟರ್ ಗೆ ₹3 ಏರಿಕೆಯಾಗಿರುವ ನಡುವೆಯೇ, ಸಿಎನ್ ಜಿ ದರವು ಕಳೆದ ಎರಡು ದಿನಗಳಲ್ಲಿ ಒಟ್ಟು ₹3 ಹೆಚ್ಚಳ ಕಂಡಿದೆ. ಇದರಿಂದ ವಾಹನ ಸವಾರರು ಹಾಗೂ ಸಾರಿಗೆ ಕ್ಷೇತ್ರದ ಮೇಲು ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ.

ಆದರೆ, ತಜ್ಞರ ಅಭಿಪ್ರಾಯದಂತೆ ಇತ್ತೀಚಿನ ದರ ಏರಿಕೆ ಕೇವಲ ಆರಂಭ ಮಾತ್ರ. ಜಾಗತಿಕ ತೈಲ ಮಾರುಕಟ್ಟೆಯ ಅಸ್ಥಿರತೆ ಹಾಗೂ ಕಚ್ಚಾ ತೈಲ ಬೆಲೆ ಏರಿಕೆ ಹಿನ್ನೆಲೆ ಗಮನಿಸಿದರೆ, ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಲೀಟರ್ ಗೆ ₹8 ರಿಂದ ₹10 ರವರಗೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಇಂಧನ ದರ ಏರಿಕೆ ಕೇವಲ ವಾಹನ ಸವಾರರಿಗೆ ಮಾತ್ರ ಸೀಮಿತವಾಗದೆ, ಸಮಗ್ರ ಆರ್ಥಿಕ ವ್ಯವಸ್ಥೆ ಮೇಲು ಪರಿಣಾಮ ಬೀರುವ ಸಾದ್ಯತೆ ಇದೆ. ವಿಶೇಷವಾಗಿ ಡೀಸೆಲ್ ಬೆಲೆ ಹೆಚ್ಚಳದಿಂದ ಸರಕು ಸಾಗಣೆ ವೆಚ್ಚ ಏರಿಕೆಯಾಗಲಿದ್ದು ಇದರ ಪರಿಣಾಮವಾಗಿ ದಿನನಿತ್ಯ ಬಳಕೆಗೆ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಳ ಕಾಣಿಸಿಕೊಳ್ಳುವ ಆತಂಕ ವ್ಯಕ್ತವಾಗಿದೆ.

Sponsored

ದೇಶದಲ್ಲಿ ಇಂಧನ ಬೆಲೆ ಏರಿಕೆ ಜನಸಾಮಾನ್ಯರ ಆತಂಕಕ್ಕೆ ಕಾರಣವಾಗುತ್ತಿರುವ ನಡುವೆಯೇ, ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಜಾಗತಿಕ ತೈಲ ಮಾರುಕಟ್ಟೆಯ ಅಸ್ಥಿರತೆ ಮತ್ತು ಕಚ್ಚಾ ತೈಲದ ಬೆಲೆ ಏರಿಕೆ ಭಾರತದಲ್ಲೂ ನೇರ ಪರಿಣಾಮ ಬೀರುತ್ತಿದೆ.

ಪೆಟ್ರೋಲಿಯಂ ಇಲಾಖೆಯ ಪ್ರಕಾರ, ಭಾರತದಲ್ಲಿ ಪ್ರತಿದಿನ ಕನಿಷ್ಠ 55 ಲಕ್ಷ ಬ್ಯಾರೆಲ್ ಕಚ್ಚಾ ತೈಲಕ್ಕೆ ಬೇಡಿಕೆಯಿದೆ. ಸದ್ಯ ದೇಶದಲ್ಲಿ ಸುಮಾರು 65 ದಿನಗಳಲ್ಲಿ ಸಾಕಾಗುವಷ್ಟು ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹವಿದ್ದರೂ, ಜಾಗತಿಕ ಪರಿಸ್ಥಿತಿ ಹದಗೆಟ್ಟರೆ ಇಂಧನ ದರಗಳಲ್ಲಿ ಮತ್ತಷ್ಟು ಏರಿಕೆ ಸಂಭವಿಸಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ.

ಇತ್ತೀಚಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಲೀಟರ್ ಗೆ ₹3 ಏರಿಕೆಯಾಗಿದ್ದು ಸಿ ಏನ್ ಜಿ ದರವು ಎರಡು ದಿನಗಳಲ್ಲಿ ₹3 ಹೆಚ್ಚಳ ಕಂಡಿದೆ. ತಜ್ಞರ ಅಂದಾಜಿನಂತೆ ಮುಂದಿನ ದಿನಗಳಲ್ಲಿ ಇಂಧನ ದರಗಳು ಲೀಟರ್ ಗೆ ₹8 ರಿಂದ ₹10 ರವರೆಗೆ ಏರಿಕೆಯಾಗುವ ಸಾಧ್ಯತೆಯಿದೆ.

ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ ವೆಚ್ಚ ಹೆಚ್ಚಾಗಲಿದ್ದು, ಇದರ ಪರಿಣಾಮವಾಗಿ ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯು ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಜನಸಾಮಾನ್ಯರ ಜೀವನ ವೆಚ್ಚ ಮತ್ತು ಹೆಚ್ಚುವ ಆತಂಕ ವ್ಯಕ್ತವಾಗಿದೆ.

Sponsored

Also Read:

ವರುಣನ ರೌದ್ರನರ್ತನಕ್ಕೆ ದಾವಣಗೆರೆ ತತ್ತರ : ರೈತರ ಅಡಿಕೆ ಬೆಳೆ ಹಾನಿ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online