Belagavi News:
ವಾಷಿಂಗ್ಟನ್ (ಅಮೆರಿಕ): ಸೌದಿ ಅರೇಬಿಯಾದ ನಾಗರಿಕ ಪ್ರಮುಖ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯುರೇನಿಯಂ ಪುಷ್ಟಿಕರಣ (Enrichment) ಸಾಮರ್ಥ್ಯ ಒದಗಿಸುವ ಮಹತ್ವದ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದನೆ ನೀಡಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಈ ಕುರಿತು ಅಧಿಕೃತ ಘೋಷಣೆ ಇನ್ನೂ ಹೊರಬಂದಿಲ್ಲವಾದರೂ, ಒಪ್ಪಂದದ ಬಗ್ಗೆ ಮಾಹಿತಿ ಹೊಂದಿರುವ ಮೂಲಗಳನ್ನು ಉಲ್ಲೇಖಿಸಿ ವರದಿಗಳು ಪ್ರಕಟವಾಗಿವೆ.
ವರದಿಗಳ ಪ್ರಕಾರ, ಅಮೆರಿಕ ಮತ್ತು ಸೌದಿ ಅರೇಬಿಯಾ ನಡುವೆ ನಡೆಯಲಿರುವ ಈ ಒಪ್ಪಂದವು ಜಾರಿಯಾದರೆ ಸುಮಾರು 30 ವರ್ಷಗಳ ಅವಧಿಗೆ ಅನ್ವಯಿಸಲಿದೆ. ಸೌದಿಯ ಪರಮಾಣು ಕಾರ್ಯಕ್ರಮದ ಅಭಿವೃದ್ಧಿಯಲ್ಲಿ ಅಮೆರಿಕದ ಕಂಪನಿಗಳು ಭಾಗಿಯಾಗಲಿದ್ದು, ಜಂಟಿ ಅಧ್ಯಯನದ ಬಳಿಕ ಸೌದಿ ಅರೇಬಿಯಾದಲ್ಲಿ ಯುರೇನಿಯಂ ಪುಷ್ಟೀಕರಣ ಘಟಕ ಸ್ಥಾಪಿಸುವ ಸಾಧ್ಯತೆಯಿದೆ.
ಅಮೆರಿಕವು ಸೌದಿ ಅರೇಬಿಯಾದೊಂದಿಗೆ ನಾಗರಿಕ ಪರಮಾಣು ಸಹಕಾರ ಹೆಚ್ಚಿಸುವ ಪ್ರಯತ್ನಗಳನ್ನು ಹಲವು ವರ್ಷಗಳಿಂದ ನಡೆಸುತ್ತಿದೆ. ಟ್ರಂಪ್ ಆಡಳಿತದ ಅವಧಿಯಲ್ಲಿಯೂ ಮತ್ತು ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ಅವಧಿಯಲ್ಲಿಯೂ ಪರಮಾಣು ತಂತ್ರಜ್ಞಾನ ಸಹಕಾರದ ಕುರಿತು ಚರ್ಚೆಗಳು ನಡೆದಿದ್ದವು.
ಸೌದಿ ಪರಮಾಣು ಶಸ್ತ್ರಾಸ್ತ್ರದ ಆತಂಕ?
ಸೌದಿ ಅರೇಬಿಯಾಗೆ ಯುರೇನಿಯಂ ಪುಷ್ಟಿಕರಣ ತಂತ್ರಜ್ಞಾನ ನೀಡುವುದರಿಂದ ಭವಿಷ್ಯದಲ್ಲಿ ಅದು ಪರಮಾಣು ಶಸ್ತ್ರಾಸ್ತ್ರ, ಅಭಿವೃದ್ಧಿಯತ್ತ ಸಾಗಬಹುದೇ ಎಂಬ ಆತಂಕವನ್ನು ಕೆಲವು ತಜ್ಞರು ವ್ಯಕ್ತಪಡಿಸಿದ್ದಾರೆ. ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಿದರೆ ತಾವು ಅದೇ ದಾರಿಯಲ್ಲಿ ಸಾಗಬಹುದು ಎಂದು ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಈ ಹಿಂದೆ ಹೇಳಿದ್ದನ್ನು ವಿಶ್ಲೇಷಕರು ಉಲ್ಲೇಖಿಸಿದ್ದಾರೆ.
ಯುರೇನಿಯಂ ಪುಷ್ಟಿಕರಣ ಪ್ರಕ್ರಿಯೆಯು ಮಾತ್ರದಿಂದಲೇ ಅಣು ಬಾಂಬ್ ತಯಾರಿಸಲು ಸಾಧ್ಯವಿಲ್ಲ. ಆದರೆ, ಹೆಚ್ಚಿನ ಮಟ್ಟದ ಪುಷ್ಟೀಕರಣ ಸಾಮರ್ಥ್ಯವು ಭವಿಷ್ಯದ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮಕ್ಕೆ ಅಗತ್ಯವಾದ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಪಾಕಿಸ್ತಾನದ ಬೆಂಬಲದ ಚರ್ಚೆ:
ಇತ್ತೀಚಿನ ಭದ್ರತಾ ಬೆಳವಣಿಗೆಗಳ ನಡುವೆ ಸೌದಿ ಅರೇಬಿಯಾ ಮತ್ತು ಪಾಕಿಸ್ತಾನ್ ನಡುವೆ ರಕ್ಷಣಾ ಸಹಕಾರದ ಚರ್ಚೆಗಳು ನಡೆದಿವೆ. ಅಗತ್ಯವಿದ್ದರೆ ಪಾಕಿಸ್ತಾನದ ಪರಮಾಣು ಸಾಮರ್ಥ್ಯವನ್ನು ಸೌದಿಯ ಭದ್ರತೆಗೆ ಬಳಸುವ ಕುರಿತು ಹೇಳಿಕೆಗಳು ಬಂದಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಯುಎಇ ಮಾದರಿ ಬಗ್ಗೆ ಚರ್ಚೆ;
ಪರಮಾಣು ಶಕ್ತಿಯ ಶಾಂತಿಯುತ ಬಳಕೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮಾದರಿಯನ್ನು ಹಲವು ತಜ್ಞರು ಉಲ್ಲೇಖಿಸುತ್ತಾರೆ. ದಕ್ಷಿಣ ಕೊರಿಯಾದ ಸಹಕಾರಯೊಂದಿಗೆ ಯುಎಇ ನಿರ್ಮಿಸಿದ ಬರಾಕಾ ಪರಮಾಣು ವಿದ್ಯುತ್ ಯೋಜನೆಯಲ್ಲಿ, ಯುರೇನಿಯಂ ಪುಷ್ಟಿಕರಣ ಹಕ್ಕನ್ನು ಪಡೆಯದೆ ನಾಗರಿಕ ಪರಮಾಣು ಶಕ್ತಿ ಕಾರ್ಯಕ್ರಮವನ್ನು ಮುಂದುವರಿಸಲಾಯಿತು. ಇದನ್ನು ಪರಮಾಣು ಸುರಕ್ಷತೆಯ ದೃಷ್ಟಿಯಿಂದ ಉತ್ತಮ ಮಾದರಿ ಎಂದು ಪರಿಗಣಿಸಲಾಗಿದೆ.ನೀಟ್ ಅಕ್ರಮ ಪ್ರಕರಣ ಇದೀಗ ಸಂಸತ್ ಅಧಿವೇಶನದಲ್ಲೂ ಪ್ರಮುಖ ರಾಜಕೀಯ ವಿಚಾರವಾಗಿ ಪರಿಣಮಿಸಿದ್ದು, ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದ ಮುಂದುವರಿದಿದೆ.