Belagavi News :
ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಕಚ್ಚಾವಸ್ತುಗಳ ಅಭಾವದಿಂದ ಅಕ್ಕಿ ಬೆಲೆ ಮತ್ತೆ ಏರಿಕೆಯಾಗಿದೆ. ಇದರಿಂದ ಗ್ರಾಹಕರಿಗೆ ಮತ್ತೊಮ್ಮೆ ಆರ್ಥಿಕ ಭಾರ ಹೆಚ್ಚಾಗಿದ್ದು, ದಿನನಿತ್ಯದ ಜೀವನ ವೆಚ್ಚದಲ್ಲಿ ಪರಿಣಾಮ ಕಾಣಿಸುತ್ತಿದೆ.
ಕಳೆದ ತಿಂಗಳಷ್ಟೇ ಪ್ರತಿ ಕೆಜಿಗೆ ಅಕ್ಕಿ ಬೆಲೆಯಲ್ಲಿ 3 ರಿಂದ 5 ರೂಪಾಯಿಯಷ್ಟೆ ಹೆಚ್ಚಳವಾಗಿತ್ತು. ಇದೀಗ ಇಂದಿನಿಂದ ಮತ್ತೊಮ್ಮೆ ದರ ಏರಿಕೆಯಾಗಿದ್ದು, ಸಾಮಾನ್ಯ ತಳಿಯ ಅಕ್ಕಿಗೆ ಕೆಜಿಗೆ ಐದು ರೂಪಾಯಿ ಹಾಗೂ ಗುಣಮಟ್ಟದ ಅಕ್ಕಿಗೆ 10 ರೂಪಾಯಿಯಷ್ಟು ಹೆಚ್ಚಳವಾಗಿದೆ.
ಅಕ್ಕಿ ಕೊರತೆ, ಉತ್ಪಾದನೆಯಲ್ಲಿ ಇಳಿಕೆ ಹಾಗೂ ರಫ್ತು ಹೆಚ್ಚಳವೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿ ಪರಿಗಣಿಸಲಾಗುತ್ತಿದೆ. ಜುಲೈ 2ನೇ ವಾರದಲ್ಲಿ ಇನ್ನೊಂದು ಹಂತದ ದರ ಏರಿಕೆ ಸಂಭವಿಸಬಹುದು ಎಂಬ ಆತಂಕವು ವ್ಯಕ್ತವಾಗಿದೆ.
ಈ ನಿರಂತರ ಬೆಲೆ ಏರಿಕೆಯಿಂದ ಗ್ರಾಹಕರು ತೀವ್ರ ಸಮಾಧಾನ ವ್ಯಕ್ತಪಡಿಸುತ್ತಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಹೆಚ್ಚುತ್ತಿದೆ. ದಿನನಿತ್ಯ ಬಳಕೆಯ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಸಾಮಾನ್ಯ ಕುಟುಂಬಗಳ ಬಜೆಟ್ ಗೆ ಹೊಡೆತ ಬಿದ್ದಿದೆ.
ಅಕ್ಕಿ ದರ ಮತ್ತಷ್ಟು ಏರಿಕೆ - ಹೊಸದರ ಇಂದಿನಿಂದ ಜಾರಿ, ಗ್ರಾಹಕರಿಗೆ 15 - 20 ರೂ ಹೊರೆ :
ರಾಜ್ಯದಲ್ಲಿ ಅಕ್ಕಿ ಬೆಲೆ ಮತ್ತೆ ಏರಿಕೆಯಾಗಿದೆ. ಹೊಸ ಅಕ್ಕಿಯ ದರ ಇಂದಿನಿಂದಲೇ ಜಾರಿಗೆ ಬಂದಿದ್ದು, ಹೋಲ್ಸೇಲ್ ಮತ್ತು ಚಿಲ್ಲರೆ ಮಾರುಕಟ್ಟೆ ಎರಡರಲ್ಲೂ ಗ್ರಾಹಕರಿಗೆ ಬೆಲೆ ಏರಿಕೆ ಹೊರೆ ಹೆಚ್ಚಾಗಿದೆ.
ವ್ಯಾಪಾರಿಗಳ ಮಾಹಿತಿಯಂತೆ, ಸಾಮಾನ್ಯ ಅಕ್ಕಿ ಚೀಲದ ಮೇಲೆ ಸುಮಾರು 1030 ರೂಪಾಯಿ ಹಾಗೂ ಗುಣಮಟ್ಟದ ಅಕ್ಕಿ ಚೀಲದ ಮೇಲೆ 260 ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಹೋಲ್ ಸೇಲ್ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 5 ರಿಂದ 10 ರೂಪಾಯಿ ಏರಿಕೆ ದಾಖಲಾಗಿದೆ.
ಚಿಲ್ಲರೆ ಮಾರುಕಟ್ಟೆಗೆ ತಲುಪುವಷ್ಟರಲ್ಲಿ ಈ ಬೆಲೆ ಏರಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಗ್ರಾಹಕರಿಗೆ ಪ್ರತಿ ಕೆಜಿಗೆ 15 ರಿಂದ 20 ರೂಪಾಯಿಯವರೆಗೆ ಹೊರಬೀಳಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಜುಲೈ 2ನೇ ವಾರದಲ್ಲಿ ಅಕ್ಕಿ ದರ ಮತ್ತೊಮ್ಮೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯೂ ಹೊರಬಿದ್ದಿದೆ. ರಾಜ್ಯದಲ್ಲಿ ಸರಿಯಾದ ಮುಂಗಾರು ಮಳೆ ಆಗದಿರುವುದು, ಜಲಾಶಯಗಳಲ್ಲಿ ನೀರಿನ ಕೊರತೆ ಹಾಗೂ ಭತ್ತದ ಉತ್ಪಾದನೆಯಲ್ಲಿ ಇಳಿಕೆ ಈ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.
ಜೊತೆಗೆ ಅಂತರಾಷ್ಟ್ರೀಯ ಮಟ್ಟದ ರಫ್ತು ಹೆಚ್ಚಳವು ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿ ಕೊರತೆಯನ್ನು ಹೆಚ್ಚಿಸಿದ್ದು, ಬೆಲೆ ಏರಿಕೆಗೆ ಮತ್ತೊಂದು ಕಾರಣವಾಗಿದೆ. ಈ ನಿರಂತರ ಬೆಲೆ ಏರಿಕೆಯಿಂದ ಗ್ರಾಹಕರು ತೀವ್ರ ಆರ್ಥಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ.
ಅಕ್ಕಿ ಬೆಲೆ ಏರಿಕೆಗೆ ಗ್ರಾಹಕರ ಆಕ್ರೋಶ - ಬೆಂಗಳೂರಿನಲ್ಲಿ ತೀವ್ರ ಕೊರತೆ, 300 ರೂ ಹೆಚ್ಚುವರಿ ಹೊರೆ :
ರಾಜ್ಯದಲ್ಲಿ ಅಕ್ಕಿ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಬೆಂಗಳೂರಿನಲ್ಲಿ ಅಕ್ಕಿಯ ತೀವ್ರ ಕೊರತೆ ಉಂಟಾಗಿದ್ದು, ದಿನನಿತ್ಯದ ಬಳಕೆಯ ಆಹಾರ ಪದಾರ್ಥಕ್ಕೆ ಹೆಚ್ಚುವರಿ ಹಣ ಪಾವತಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾಹಿತಿಯ ಪ್ರಕಾರ, ಭಾರತದಿಂದ ಶ್ರೀಲಂಕಾಕ್ಕೆ ಭಾರಿ ಪ್ರಮಾಣದ ಅಕ್ಕಿ ರಫ್ತು ನಡೆಯುತ್ತಿದ್ದು, ಅಲ್ಲಿಂದ ಅದು ವಿವಿಧ ದೇಶಗಳಿಗೆ ಮರು ರಫ್ತಾಗುತ್ತಿದೆ. ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ಅಕ್ಕಿ ಸರಬರಾಜು ಕಡಿಮೆಯಾಗಿದ್ದು, ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಈ ಕೊರತೆಯ ಪರಿಣಾಮವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ಕಿ ತೀವ್ರ ಅಭಾವ ಕಂಡುಬಂದಿದ್ದು, ಗ್ರಾಹಕರು ಒಂದು ಅಕ್ಕಿ ಮೂಟೆಗೆ ಈಗಾಗಲೇ 250 ರಿಂದ 300 ವರೆಗೆ ಹೆಚ್ಚುವರಿ ಹಣ ಪಾವತಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಕೇವಲ ಎರಡು ತಿಂಗಳ ಅವಧಿಯಲ್ಲಿ ಅಕ್ಕಿ ಇದರ ಎರಡು ಬಾರಿ ಏರಿಕೆಯಾಗಿದೆ. ನಿರಂತರ ಬೆಲೆ ಏರಿಕೆಯಿಂದ ಸಾಮಾನ್ಯ ಕುಟುಂಬಗಳ ತಿಂಗಳ ಬಜೆಟ್ ಗೆ ಬಾರಿ ಹೊಡೆತ ಬಿದ್ದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇರುವುದರಿಂದ ಜನಸಾಮಾನ್ಯರಲ್ಲಿ ಆತಂಕ ಹೆಚ್ಚಾಗಿದೆ.
ಗ್ರಾಹಕರು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು, ಅಕ್ಕಿ ಸರಬರಾಜು ವ್ಯವಸ್ಥೆ ಸುಧಾರಿಸಬೇಕು ಎಂದು ಆಗ್ರಹಿಸಿದ್ದಾರೆ.