<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Business

ಸ್ಲೋವಾಕಿಯಾದ ಶ್ರೇಷ್ಠ ಪ್ರಶಸ್ತಿ 'ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್' ಗೌರವಕ್ಕೆ ಭಾಜನರಾದ ಪ್ರಧಾನಿ ಮೋದಿ

ಸ್ಲೋವಾಕಿಯಾದ ಶ್ರೇಷ್ಠ ಪ್ರಶಸ್ತಿ 'ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್' ಗೌರವಕ್ಕೆ ಭಾಜನರಾದ ಪ್ರಧಾನಿ ಮೋದಿ
Summary: Indian Prime Minister Narendra Modi has been conferred with the highest civilian honour of the Slovak Republic, the 'Order of the White Double Cross'. The honour is given for strengthening bilateral relations between India and Slovakia and for his leadership at the global level.

BELAGAVI NEWS :

ಪ್ರಧಾನಿ ಮೋದಿಗೆ ಸ್ಲೋವಾಕಿಯಾ ಸರ್ಕಾರವು ದೇಶದ ಅತ್ಯುನ್ನತ ರಾಷ್ಟ್ರೀಯ ನಾಗರಿಕ ಪ್ರಶಸ್ತಿಯಾದ 'ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್' ಗೌರವವನ್ನು ಪ್ರಧಾನಿಗೆ ಪ್ರಧಾನ ಮಾಡಿದ್ದಾರೆ. ಭಾರತ ಮತ್ತು ಸ್ಲೋವಾಕಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳು ಬಲಪಡಿಸುವಲ್ಲಿ ಮೋದಿ ಅವರ ಮಹತ್ವದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ಬ್ರಾಟಿಸ್ಲಾವಾದಲ್ಲಿ ನಡೆದ ಸಮಾರಂಭದಲ್ಲಿ ಗೌರವ ಸ್ವೀಕರಿಸಿದ ಪ್ರಧಾನಿ ಮೋದಿ, ಇದು ತಮ್ಮ ವೈಯಕ್ತಿಕ ಸಾಧನೆ ಅಲ್ಲ, 140 ಕೋಟಿ ಭಾರತೀಯರಿಗೆ ಸಂದ ಗೌರವ ಎಂದು ಹೇಳಿದ್ದಾರೆ. ಜೊತೆಗೆ ಈ ಪ್ರಶಸ್ತಿಯನ್ನು ಭಾರತ ಮತ್ತು ಸ್ಲೋವಾಕಿಯಾ ನಡುವಿನ ಸ್ನೇಹ, ಸರ್ಕಾರ ಹಾಗೂ ಪರಸ್ಪರ ವಿಶ್ವಾಸಕ್ಕೆ ಸಮರ್ಪಿಸುವುದಾಗಿ ತಿಳಿಸಿದ್ದಾರೆ.

ನಾರ್ವೆ ಮತ್ತು ಸ್ವೀಡನ್ ದೇಶಗಳ ಬೇಟಿಯ ಬಳಿಕ ಸ್ಲೋವಾಕಿಯಾ ಗೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ದೊರೆತ ಈಗ ಗೌರವ, ಜಾಗತಿಕ ಮಟ್ಟದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವ ಹಾಗೂ ನಾಯಕತ್ವಕ್ಕೆ ದೊರೆತ ಮತ್ತೊಂದು ಮಾನ್ಯತೆಯಾಗಿ ಪರಿಗಣಿಸಲಾಗಿದೆ.

Sponsored

ಈ ಐತಿಹಾಸಿಕ ಭೇಟಿಯ ವೇಳೆ ಭಾರತ ಮತ್ತು ಸ್ಲೋವಾಕಿಯಾ ನಡುವಿನ ವ್ಯಾಪಾರ, ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಹನ್ನೊಂದು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದರೊಂದಿಗೆ ಉಭಯ ರಾಷ್ಟ್ರಗಳ ನಡುವಿನ ಸಹಕಾರ ಮತ್ತು ಸ್ನೇಹ ಸಂಬಂಧಗಳು ಮತ್ತಷ್ಟು ಗಟ್ಟಿಯಾಗುವ ನಿರೀಕ್ಷೆ ಇದೆ.

ಸ್ಲೋವಾಕಿಯಾ ಅತ್ಯುನ್ನತ ನಾಗರಿಕ ಗೌರವವನ್ನು ಸ್ವೀಕರಿಸಿದ ಪ್ರಧಾನಿ ಮೋದಿ, ಭಾರತ ಸ್ಲೋವಾಕಿಯಾ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಬದ್ಧತೆಯನ್ನು ಪುನರುತ್ಚಾರಿಸಿದ್ದು, ಮುಂದಿನ ದಿನಗಳಲ್ಲಿ ಎರಡು ದೇಶಗಳು ಹಲವು ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ಲೋವಾಕಿಯಾ ಅಧ್ಯಕ್ಷ ಪೀಟರ್ ಪೆಲ್ಲಿಗ್ರಿನ್ ಅವರು ಪ್ರಧಾನಿಯವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳು ಪ್ರಧಾನಿ ಮೋದಿಯವರಿಗೆ ನೀಡಿದ 33ನೇ ಅತ್ಯುತ್ತಮ ಗೌರವ ಇದಾಗಿದೆ.

ಏನಿದು 'ಆರ್ಡರ್ ಆಫ್ ದಿ ವೈಟ್ ಬಬಲ್ ಕ್ರಾಸ್'? ಪ್ರಧಾನಿಗೆ ಏಕೆ ಸಿಕ್ಕಿದೆ ಈ ಗೌರವ ?

Sponsored

'ಆರ್ಡರ್ ಆಫ್ ದಿ ವೈಟ್ ಡಬ್ಬಲ್ ಕ್ರಾಸ್' ಎಂಬುದು ಸ್ಲೋವಾಕಿಯಾ ಗಣರಾಜ್ಯದ ಅತ್ಯುನ್ನತ ರಾಷ್ಟ್ರೀಯ ನಾಗರಿಕ ಗೌರವವಾಗಿದೆ. ದೇಶದ ಹಿತಾಸಕ್ತಿಗಳನ್ನು ಜಾಗತಿಕ ಮಟ್ಟದಲ್ಲಿ ಉತ್ತೇಜಿಸುವಲ್ಲಿ, ಅಂತರಾಷ್ಟ್ರೀಯ ಸ್ನೇಹ ಮತ್ತು ಸರ್ಕಾರವನ್ನು ವೃದ್ಧಿಸುವಲ್ಲಿ ವಿಶಿಷ್ಟ ಕೊಡುಗೆ ನೀಡಿದ ಗಣ್ಯ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಪ್ರತಿಷ್ಠಿತ ಗೌರವವನ್ನು ಭಾರತ ಮತ್ತು ಸ್ಲೋವಾಕಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿದ ಕಾರಣಕ್ಕಾಗಿ ಪ್ರಧಾನ ಮಾಡಲಾಗಿದೆ. ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ, ಆರ್ಥಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರವನ್ನು ವಿಸ್ತರಿಸುವಲ್ಲಿ ಮೋದಿ ಅವರ ಪಾತ್ರವನ್ನು ಸ್ಲೋವಾಕಿಯಾ ಸರ್ಕಾರ ವಿಶೇಷವಾಗಿ ಗುರುತಿಸಿದೆ.

ಇದರ ಜೊತೆಗೆ, ಜಾಗತಿಕ ವೇದಿಕೆಯಲ್ಲಿ ಸಭಾಗಿತ್ವವನ್ನು ಉತ್ತೇಜಿಸುವುದು, ವಿವಿಧ ರಾಷ್ಟ್ರಗಳೊಂದಿಗೆ ಪರಸ್ಪರ ಸಹಕಾರವನ್ನು ವೃದ್ಧಿಸುವುದು ಹಾಗೂ ಅಂತರಾಷ್ಟ್ರೀಯ ರಾಜ ತಾಂತ್ರಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ಮೋದಿ ನೀಡಿದ ಕೊಡುಗೆಗಳು ಈ ಪ್ರಶಸ್ತಿ ಮಾನ್ಯತೆ ನೀಡಿದೆ.

ಗೌರವ ಸ್ವೀಕರಿಸಿದ ಪ್ರಧಾನಿ ಮೋದಿ, ಇದು ತಮ್ಮ ವೈಯಕ್ತಿಕ ಸಾಧನೆ ಅಲ್ಲ, 140 ಕೋಟಿ ಭಾರತೀಯರಿಗೆ ಸಲ್ಲುವ ಗೌರವ ಎಂದು ಹೇಳಿದ್ದಾರೆ. ಜೊತೆಗೆ, ಈ ಪ್ರಶಸ್ತಿಯನ್ನು ಭಾರತ ಮತ್ತು ಸ್ಲೋವಾಕಿಯಾ ನಡುವಿನ ಸ್ನೇಹ, ವಿಶ್ವಾಸ ಮತ್ತು ದೀರ್ಘಕಾಲಿನ ಸಭಾಗಿತ್ವಕ್ಕೆ ಸಮರ್ಪಿಸುವುದಾಗಿ ತಿಳಿಸಿದ್ದ ಸ್ಲೋವಾಕಿಯಾದ ಈ ಅತ್ಯುನ್ನತ ಗೌರವವು ಜಾಗತಿಕ ಮಟ್ಟದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವ ಹಾಗೂ ಭಾರತದೊಂದಿಗೆ ಸಂಬಂಧ ವೃದ್ಧಿಸಲು ವಿವಿಧ ದೇಶಗಳು ತೋರಿಸುತ್ತಿರುವ ಆಸಕ್ತಿಗೆ ಮತ್ತೊಂದು ಉದಾಹರಣೆಯಾಗಿದೆ.

Sponsored

ಇದು 140 ಕೋಟಿ ಭಾರತೀಯರಿಗೆ ಸಂದ ಗೌರವ: ಪ್ರಧಾನಿ ಮೋದಿ ಪ್ರಶಸ್ತಿ ಸ್ವೀಕರಿಸಿದ ನಂತರ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡ ಪ್ರಧಾನಿ ಮೋದಿ, ಸ್ಲೋವಾಕಿಯಾದ ಸರಕಾರ ಮತ್ತು ಜನರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿರುವುದು ನನಗೆ ಸಂದ ಗೌರವ. ಇದು ಭಾರತದ 1.4 ಶತಕೋಟಿ ಜನರಿಗೆ ಸಂದ ಗೌರವವಾಗಿದೆ. ಈ ಪ್ರಶಸ್ತಿಯನ್ನು ಭಾರತ ಮತ್ತುಸ್ಲೋವಾಕಿಯಾ ನಡುವಿನ ಸ್ನೇಹಕ್ಕೆ ಅರ್ಪಿಸುತ್ತೇನೆ ಎಂದು ಅವರು ಬರೆದಿದ್ದಾರೆ.

ಇತಿಹಾಸ ಸೃಷ್ಟಿಸಿದ ಮೋದಿ ಭೇಟಿ: 11 ಪ್ರಮುಖ ಒಪ್ಪಂದಗಳಿಗೆ ಸಹಿ.

ಸ್ಲೋವಾಕಿಯಾ ದೇಶಕ್ಕೆ ಅಧಿಕೃತವಾಗಿ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಈ ಭೇಟಿ ಭಾರತ ಸ್ಲೋವಾಕಿಯಾ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದು, ಉಭಯ ರಾಷ್ಟ್ರಗಳ ನಡುವಿನ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಮಹತ್ವದ ಹೆಜ್ಜೆಯಾಗಿದೆ.

ಭೇಟಿಯ ಬೇರೆ ಪ್ರಧಾನಿ ಮೋದಿ ಮತ್ತು ಸ್ಲೋವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ನಡುವೆ ನಡೆದ ದ್ವಿಪಕ್ಷಿಯ ಮಾತುಕತೆಗಳು ಫಲಪ್ರದ ವಾಗಿದ್ದು, ಎರಡು ದೇಶಗಳು ತಮ್ಮ ಸಂಬಂಧವನ್ನು 'ಸಮಗ್ರ ಪಾಲುದಾರಿಕೆ' ಮಟ್ಟಕ್ಕೆ ಏರಿಸಲು ಒಪ್ಪಿಗೆ ಸೂಚಿಸಿವೆ. ಈ ನಿರ್ಧಾರವು ರಾಜಕೀಯ, ಆರ್ಥಿಕ, ತಾಂತ್ರಿಕ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಹೊಸ ವೇಗ ನೀಡಲಿದೆ.

Sponsored

ವಲಸೆ, ಡಿಜಿಟಲ್ ತಂತ್ರಜ್ಞಾನ, ನಾವೀನ್ಯತೆ, ರಕ್ಷಣಾ ಸಹಕಾರ, ಶಿಕ್ಷಣ ಹಾಗೂ ಕೈಗಾರಿಕಾ ಅಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಪರಸ್ಪರ ಸಹಭಾಗಿತ್ವವನ್ನು ಬಲಪಡಿಸಲು ಭಾರತ ಮತ್ತು ಸ್ಲೋವಾಕಿಯಾ 11 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿವೆ. ಈ ಒಪ್ಪಂದಗಳು ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿರೀಕ್ಷೆ ಇದೆ.

ಇದರ ಜೊತೆಗೆ, ಭಾರತ ಮತ್ತು ಐರೋಪ್ಯ ಒಕ್ಕೂಟ ನಡುವಿನ ಬಹುಕಾಲದ ನಿರೀಕ್ಷೆಯಲ್ಲಿರುವ "ಮುಕ್ತ ವ್ಯಾಪಾರ ಒಪ್ಪಂದ" ವನ್ನು ಶೀಘ್ರ ಜಾರಿ ತರಬೇಕೆಂಬ ಅಗತ್ಯವನ್ನು ಉಭಯ ನಾಯಕರು ಒತ್ತಿ ಹೇಳಿದ್ದಾರೆ. ಈ ಒಪ್ಪಂದ ಜಾರಿಯಾದರೆ ಭಾರತ ಮತ್ತು ಯುರೋಪಿನ ರಾಷ್ಟ್ರಗಳ ನಡುವಿನ ವ್ಯಾಪಾರ, ಹೂಡಿಕೆ ಹಾಗೂ ಆರ್ಥಿಕ ಸಹಕಾರಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ.

ತಜ್ಞರ ಅಭಿಪ್ರಾಯದಂತೆ, ಪ್ರಧಾನಿ ಮೋದಿ ಅವರ ಈ ಐತಿಹಾಸಿಕ ಭೇಟಿ ಭಾರತ ಸ್ಲೋವಾಕಿಯಾ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಜೊತೆಗೆ, ಭಾರತ ಮತ್ತು ಯುರೋಪ್ ನಡುವಿನ ಆರ್ಥಿಕ, ತಾಂತ್ರಿಕ ಹಾಗೂ ರಕ್ಷಣಾ ಸರ್ಕಾರವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ತಿರುವಾಗಲಿದೆ.

Also Read:

Sponsored

ರಷ್ಯಾದಲ್ಲಿ ಭೀಕರ ವಿಮಾನ ದುರಂತ : ಕೊನೆಯ ಕ್ಷಣದಲ್ಲಿ ಜಿಗಿದು ಬದುಕುಳಿದ ನಾಲ್ವರು

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online