belaagvi news :
ನವದೆಹಲಿ ಜೂನ್,19: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು 56ನೇ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು ಅವರಿಗೆ ಶುಭಾಶಯ ಕೋರಿದ್ದಾರೆ.
ಪ್ರಧಾನಿ ಮೋದಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಸಂದೇಶ ಹಂಚಿಕೊಂಡು,"ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಹುಟ್ಟು ಹಬ್ಬದ ಶುಭಾಶಯಗಳು. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಸಿಗಲಿ" ಎಂದು ಹಾರೈಸಿದ್ದಾರೆ.
ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯ ಪುತ್ರರಾಗಿರುವ ರಾಹುಲ್ ಗಾಂಧಿ 2004ರಲ್ಲಿ ಸಂಸತ್ ಪ್ರವೇಶಿಸಿದರು. ನಂತರದ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖವಾಗಿ ಬೆಳೆಯುತ್ತಾ ಬಂದ ಅವರು ಇತ್ತೀಚಿಗೆ ಅಧಿಕೃತವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಅವರ ರಾಜಕೀಯ ಪಯಣದಲ್ಲಿ ಮಹತ್ವದ ತಿರುವು ನೀಡಿದ 'ಭಾರತ ಜೋಡೋ ಯಾತ್ರೆ' ದೇಶಾದ್ಯಂತ ಗಮನ ಸೆಳೆದಿದ್ದು, ಅವರ ಸಾರ್ವಜನಿಕ ಸಂಪರ್ಕ ಮತ್ತು ರಾಜಕೀಯ ಸಕ್ರಿಯತೆಯನ್ನು ಹೊಸ ಹಂತಕ್ಕೆ ಕೊಂಡೊಯ್ದಿದೆ.
ಜನ್ಮದಿನದ ಅಂಗವಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಯುವಕರಿಗೆ ಉದ್ಯೋಗ ಮೇಳ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದೇಶಾದ್ಯಂತ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳು ಮಹಾಪೂರ ಹರಿದು ಬರುತ್ತಿದೆ.
ರಾಹುಲ್ ಗಾಂಧಿ ಜೂನ್ 19, 1970ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿಯವರ ಪುತ್ರನಾಗಿ ಜನಿಸಿದರು. ಇವರು ಅಮೆರಿಕಾದ ಪ್ಲೋರಿಡಾದ ರೋಲಿನ್ಸ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ನಂತರ ಯುಕೆಯ ವಿಶ್ವಪ್ರಸಿದ್ಧ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಿಂದ ಎಂ.ಫಿಲ್. (M.Phil) ಪದವಿ ಪಡೆದಿದ್ದಾರೆ.
ರಾಹುಲ್ ಗಾಂಧಿ ರಾಜಕೀಯಕ್ಕೆ ಬರುವ ಮುನ್ನ ಲಂಡನ್ ನ ಮಾನಿಟರ್ ಗ್ರೂಪ್ನಲ್ಲಿ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಅವರು ಮುಂಬೈನಲ್ಲಿ 'ಬ್ಯಾಕಾಪ್ಸ್ ಸರ್ವಿಸಸ್' ಎಂಬ ತಂತ್ರಜ್ಞಾನ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದರು.
2004ರಲ್ಲಿ ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ರಾಹುಲ್ ಗಾಂಧಿ,ನಂತರ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖವಾಗಿ ಬೆಳೆಯುತ್ತಾ ಬಂದರು. ಡಿಸೆಂಬರ್ 16, 2017 ರಂದು ಅವರು ಅಧಿಕೃತವಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು.
ಅವರ ರಾಜಕೀಯ ಪಯಣದಲ್ಲಿ ದೇಶಾದ್ಯಂತ ಗಮನ ಸೆಳೆದ ಪ್ರಮುಖ ಕ್ಷಣವೆಂದರೆ "ಭಾರತ ಜೋಡೋ ಯಾತ್ರೆ" ಹಾಗೂ "ಭಾರತ ಜೋಡೋ ನ್ಯಾಯ ಯಾತ್ರೆ". ಈ ಯಾತ್ರೆಗಳು ಅವರ ಸಾರ್ವಜನಿಕ ಸಂಪರ್ಕವನ್ನು ವಿಸ್ತರಿಸಿ,ರಾಜಕೀಯ ಜೀವನಕ್ಕೆ ಮಹತ್ವದ ತಿರುಗು ನೀಡಿದವು.
ಇಂದು ಅವರ 56ನೇ ಜನ್ಮದಿನವನ್ನು ಆಚರಿಸುತ್ತಿದ್ದು, ರಾಜಕೀಯ ವಲಯದಲ್ಲಿ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಹಾರೈಸಿದ್ದಾರೆ.
ಜೂನ್ 9, 2024 ರಂದು ಅವರು ಅಧಿಕೃತವಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ನೇಮಕಗೊಂಡರು.ಇದು ಅವರ ರಾಜಕೀಯ ಜೀವನದ ಮೊದಲ ಸಾಂವಿಧಾನಿಕ ಹುದ್ದೆಯಾಗಿದೆ. ಪ್ರಸ್ತುತ ಅವರು ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.
ಜನ್ಮದಿನದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.ವಿಶೇಷವಾಗಿ ಕೇರಳದ ನಾಯಕರು "ದ್ವೇಷದ ರಾಜಕೀಯದ ಮಧ್ಯೆ ಅವರು ಪ್ರೀತಿ ಮತ್ತು ಸಹೋದರತ್ವದ ಸಂದೇಶ ಸಾರುತಿದ್ದಾರೆ" ಎಂದು ಹೇಳಿ ಶುಭಾಶಯ ಕೋರಿದ್ದಾರೆ
ಈ ನಡುವೆ ಅವರ ಹುಟ್ಟು ಹಬ್ಬದ ಅಂಗವಾಗಿ ದೆಹಲಿಯ ಟಾಲ್ಕಟೋರಾ ಸ್ಟೇಡಿಯಂ ನಲ್ಲಿ ವಿಶೇಷ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಯುವಕರಿಗೆ ಸ್ಥಳದಲ್ಲೇ ನೇಮಕ ಪತ್ರಗಳನ್ನು ವಿತರಿಸಲಾಗುತ್ತಿದೆ. ಯುವ ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಸಂಪರ್ಕ ವಿಸ್ತರಣೆ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ದೇಶಾದ್ಯಂತ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದು,ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳು ಮಹಾಪೂರ ಹರಿದು ಬರುತ್ತಿದೆ.
Also Read:
ಮೇಕೆದಾಟು ವಿವಾದ ಮತ್ತೆ ತೀವ್ರ - ತಮಿಳುನಾಡು ವಿರೋಧಕ್ಕೆ ವಿಜಯ್ ಹೊಸ ಹೆಜ್ಜೆ, ಡಿಕೆಶಿ ಸ್ಪಷ್ಟ ನಿಲುವು