belagavi news :
ರಾಮಾಯಣ ಟ್ರೇಲರ್ ಬಿಡುಗಡೆ ದಿನಾಂಕ ಘೋಷಣೆ: ಜುಲೈ 30ರಂದು ಮುಂಜಾನೆ 4:15ಕ್ಕೆ ಅನಾವರಣ
ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಮತ್ತು ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ 'ರಾಮಾಯಣ' ಚಿತ್ರದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಪೌರಾಣಿಕ ಸಿನಿಮಾ ಟ್ರೈಲರ್ ಜುಲೈ 30 ರಂದು ಬಿಡುಗಡೆಯಾಗಲಿದೆ.
ಈ ಹಿಂದೆ ಜುಲೈ 24ರಂದು 'ರಾಮಾಯಣ' ಚಿತ್ರದ ಟ್ರೈಲರ್ ಅನಾವರಣಗೊಳ್ಳಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿತ್ತು. ಆದರೆ, ಸೋನಿ ಪಿಕ್ಚರ್ ಎಂಟರ್ಟೈನ್ಮೆಂಟ್ ಇಂಟರ್ನ್ಯಾಷನಲ್ ಡಿಸ್ಟ್ರಿಬ್ಯೂಟರ್ ಆಗಿ ಚಿತ್ರ ತಂಡದೊಂದಿಗೆ ಕೈಜೋಡಿಸಿದ ಹಿನ್ನೆಲೆಯಲ್ಲಿ, ಟ್ರೈಲರ್ ಅನ್ನು ಮತ್ತಷ್ಟು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಈ ಕಾರಣದಿಂದಾಗಿ ಟ್ರೇಲರ್ ಬಿಡುಗಡೆ ದಿನಾಂಕವನ್ನು ಮುಂದುಡಲಾಗಿತ್ತು.
ಇದೀಗ ಹೊಸ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗಿದ್ದು, ಜುಲೈ 30 ರಂದು ಮುಂಜಾನೆ 4:15ಕ್ಕೆ ರಾಮಾಯಣ ಟ್ರೇಲರ್ ಬಿಡುಗಡೆಯಾಗಲಿದೆ. ವಿಭಿನ್ನ ಕಥಾಹಂದರ, ಭವ್ಯ ನಿರ್ಮಾಣ ಮತ್ತು ಪೌರಾಣಿಕ ಹಿನ್ನೆಲೆಯಿಂದಾಗಿ ಈಗಾಗಲೇ ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿರುವ ಈ ಚಿತ್ರದ ಟ್ರೈಲರ್ ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಭಾರತೀಯ ಪುರಾಣದ ಮಹತ್ವದ ಕಥೆಯನ್ನು ಆದರಿಸಿದ ಬೃಹತ್ ಸಿನಿಮವಾಗಿದ್ದು, ಅದರ ಟ್ರೈಲರ್ ಬಿಡುಗಡೆ ಚಿತ್ರರಂಗದಲ್ಲಿ ಮತ್ತೊಂದು ದೊಡ್ಡ ಕ್ಷಣವಾಗುವ ನಿರೀಕ್ಷೆ ಇದೆ.
ರಾಮಾಯಣ ಟ್ರೈಲರ್ ಬಿಡುಗಡೆಗೆ ಭರ್ಜರಿ ಸಿದ್ಧತೆ : ಜುಲೈ 30ರ ಬ್ರಹ್ಮ ಮುಹೂರ್ತದಲ್ಲಿ ವಿಶ್ವದಾದ್ಯಂತ ಅನಾವರಣ
ಬಹು ನಿರೀಕ್ಷಿತ ರಾಮಾಯಣ ಚಿತ್ರದ ಟ್ರೈಲರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಜುಲೈ 30,2018 ರಂದು ಬೆಳಗ್ಗೆ 4:15ಕ್ಕೆ ವಿಶ್ವಾದ್ಯಂತ ಟ್ರೈಲರ್ ಅನಾವರಣಗೊಳ್ಳಲಿದೆ. ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ತಮ್ಮ ಅಧಿಕೃತ instagram ಖಾತೆಯಲ್ಲಿ ಈ ವಿಶೇಷ ಘೋಷಣೆಯನ್ನು ಹಂಚಿಕೊಂಡಿದ್ದಾರೆ.
" ಶುಭ ಬ್ರಹ್ಮ ಮುಹೂರ್ತದಲ್ಲಿ, ಜುಲೈ 30, 2026, ಗುರುವಾರ, ಭಾರತೀಯ ಕಾಲಮಾನ ಬೆಳಗ್ಗೆ 4:15ಕ್ಕೆ, ವಿಶ್ವಾದ್ಯಂತ ತಮ್ಮ ಟ್ರೇಲರ್ ನೊಂದಿಗೆ ರಾಮಾಯಣ ಉದಯವನ್ನು ಸ್ವಾಗತಿಸುತ್ತೇವೆ"ಎಂದು ನಮಿತ್ ಮಲ್ಹೋತ್ರಾ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಈ ಹಿಂದೆ ರಾಮಾಯಣ ಟ್ರೈಲರ್ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಈ ಕುರಿತು ಮಾಹಿತಿ ನೀಡಿದ ನಮಿತ್ ಮಲ್ಹೋತ್ರಾ, ಸೋನಿ ಪಿಚ್ಚರ್ ಎಂಟರ್ಟೈನ್ಮೆಂಟ್ ಇಂಟರ್ನ್ಯಾಷನಲ್ ಜೊತೆಗಿನ ಸಹಭಾಗಿತ್ವದ ಹಿನ್ನೆಲೆಯಲ್ಲಿ ಟ್ರೈಲರ್ ಅನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸೋನಿ ಪಿಚ್ಚರ್ಸ್ ನ ಸಹಯೋಗದೊಂದಿಗೆ 'ರಾಮಾಯಣ' ವನ್ನು ವಿಶ್ವದಾದ್ಯಂತ ಪ್ರೇಕ್ಷಕರಿಗೆ ತಲುಪಿಸುವುದು ತಮ್ಮ ಕನಸಾಗಿತ್ತು ಎಂದು ಹೇಳಿರುವ ನಿರ್ಮಾಪಕರು, ಈ ಸಭಾಗಿತ್ವವನ್ನು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.
' ರಾಮಾಯಣ ' ಕೇವಲ ಒಂದು ಸಿನಿಮಾ ಮಾತ್ರವಲ್ಲ, ಭಾರತದ ಸಂಸ್ಕೃತಿ, ಪರಂಪರೆ ಮತ್ತು ಕಥೆಗಳ ಶ್ರೀಮಂತಿಕೆಯನ್ನು ಜಾಗತಿಕ ವೇದಿಕೆಯಲ್ಲಿ ಪರಿಚಯಿಸುವ ಪ್ರಯತ್ನವಾಗಿದೆ ಎಂದು ನಮಿತ್ ಮಲ್ಹೋತ್ರಾ ಹೇಳಿದ್ದಾರೆ. ಪ್ರಮುಖ ಹಾಲಿವುಡ್ ಚಿತ್ರಗಳ ಮಟ್ಟದಲ್ಲಿ ಈ ಸಿನಿಮಾವನ್ನು ವಿಶ್ವದ ಪ್ರೇಕ್ಷಕರ ಮುಂದೆ ತರುವ ಉದ್ದೇಶ ಚಿತ್ರ ತಂಡ ಹೊಂದಿದೆ.
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಟ್ರೈಲರ್ ಬಿಡುಗಡೆಗೂ ಮುನ್ನ ಭವ್ಯ ಪೌರಾಣಿಕ ಸಿನಿಮಾದ ಕುರಿತು ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿದೆ.
ರಾಮಾಯಣ ಚಿತ್ರದ ಟ್ರೈಲರ್ ಪ್ರೀಮಿಯರ್ : 'ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಭಾಗಿ ; ಭವ್ಯ ಯೋಜನೆಗೆ ಮತ್ತಷ್ಟು ಮೆರಗು
ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೇಲರ್ ಬಿಡುಗಡೆಗು ಮುನ್ನ ಭವ್ಯ ಪ್ರಿಮಿಯರ್ ಕಾರ್ಯಕ್ರಮ ದೆಹಲಿಯಲ್ಲಿ ನಡೆಯಿತು. ಜುಲೈ 19 ರ ಸಂಜೆ ನಡೆದ ವಿಶೇಷ ಸಮಾರಂಭದಲ್ಲಿ ಚಿತ್ರದ ಪ್ರಮುಖ ತಾರಾಗಣದ ಜೊತೆಗೆ ನಿರ್ದೇಶಕರು ತಮ್ಮ ನಿರ್ಮಾಪಕರು ಭಾಗವಹಿಸಿದ್ದರು.
ಈ ಭವ್ಯ ಕಾರ್ಯಕ್ರಮದಲ್ಲಿ ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ರವಿ ದುಬೆ, ಸೇರಿದಂತೆ ಚಿತ್ರದ ಪ್ರಮುಖ ಕಲಾವಿದರು ಉಪಸ್ಥಿತರಿದ್ದರು. ಟ್ರೈಲರ್ ಪ್ರದರ್ಶನವು ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅಭಿಮಾನಿಗಳ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದು, ರಾಮಾಯಣ ದ ಕನಸನ್ನು ನನಸಾಗಿಸಲು ಸಹಕರಿಸಿದ ಎಲ್ಲಾ ಅಭಿಮಾನಿಗಳು ಮತ್ತು ಭಕ್ತರಿಗೆ ಧನ್ಯವಾದಗಳು. ದೇಶದ ಯುವಕರೇ ಭವಿಷ್ಯದ ಶಕ್ತಿ ಎಂದು ಹೇಳಿರುವ ಅವರು, ಮುಂದಿನ ಪೀಳಿಗೆಯ ಮೌಲ್ಯಗಳನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದ್ದಾರೆ.
ಘೋಷಣೆಯಾದ ದಿನದಿಂದಲೇ ರಾಮಾಯಣ ಭಾರತೀಯ ಚಿತ್ರರಂಗದ ಅತ್ಯಂತ ಚರ್ಚಿತ ಸಿನಿಮಾಗಳಲ್ಲಿ ಒಂದಾಗಿದೆ. ಬಗೆ ತಂತ್ರಜ್ಞಾನ, ಅಂತರಾಷ್ಟ್ರೀಯ ಮಟ್ಟದ ನಿರ್ಮಾಣ ಮತ್ತು ಪೌರಾಣಿಕ ಕಥಾಂದರದಿಂದಾಗಿ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ.
ಎರಡು ಭಾಗಗಳ ಸಾಹಸ ಘಾತೆಯಾಗಿ ರೂಪುಗೊಳ್ಳುತ್ತಿರುವ 'ರಾಮಾಯಣ' ಭಾರತೀಯ ಮಹಾಕಾವ್ಯದಿಂದ ಪ್ರೇರಣೆ ಪಡೆದಿದೆ. ಅಯೋಧ್ಯೆ ರಾಜಕುಮಾರ ರಾಮನ ಜೀವನ ಯಾನ, ವನವಾಸ, ಸೀತೆಯ ಅಪಹರಣ ಮತ್ತು ರಾವಣನ ವಿರುದ್ಧದ ಯುದ್ಧದವರೆಗಿನ ಮಹತ್ವದ ಘಟನೆಗಳನ್ನು ಸಿನಿಮಾ ಒಳಗೊಂಡಿದೆ.
ರಾಮಾಯಣ ಸಿನಿಮಾ ಅಪ್ಡೇಟ್: ಸಾರ್ ತಾರಾಗಣದೊಂದಿಗೆ ಭವ್ಯ ಬಿಡುಗಡೆಗೆ ಸಿದ್ಧತೆ
ಬಹುನಿರೀಕ್ಷಿತ ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸುತ್ತಿದ್ದಾರೆ. ಹ್ಯಾನ್ಸ್ ಜಿಮ್ಮರ್ ಹಾಗೂ ಎಆರ್ ರೆಹಮಾನ್ ಸಂಗೀತ ನೀಡಿರುವ ಈ ಎರಡು ಭಾಗಗಳ ಸಿನಿಮಾ, ಮೊದಲ ಭಾಗವಾಗಿ 2026ರ ದೀಪಾವಳಿಗೆ ಮತ್ತು ಎರಡನೆಯ ಭಾಗವಾಗಿ 2027ರ ದೀಪಾವಳಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.