<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ರಾಸ್ ಲಫಾನ್ ದುರಂತ : ಪ್ರಧಾನಿ ಮೋದಿಗೆ ಕರೆ ಮಾಡಿ ವಿಷದ ವ್ಯಕ್ತಪಡಿಸಿದ ಕತಾರ್ ಅಮೀರ್

ರಾಸ್ ಲಫಾನ್ ದುರಂತ : ಪ್ರಧಾನಿ ಮೋದಿಗೆ ಕರೆ ಮಾಡಿ ವಿಷದ ವ್ಯಕ್ತಪಡಿಸಿದ ಕತಾರ್ ಅಮೀರ್
Summary: The massive explosion at the LNG plant in Qatar's Ras Laffan industrial city has shaken the country. It has been reported that 12 of the 13 people who died in the tragedy are Indians, and the families are in shock. After the incident, the Indian government has taken urgent measures and is providing assistance to the affected families.

BELAGAVI NEWS :

ಕತಾರ್ ಸ್ಪೋಟ ದುರಂತ : ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿ ಸಂತಾಪ ಸೂಚಿಸಿದ ಕತಾರ್ ಅಮೀರ್

ಕತಾರ್ ನ ರಾಸ್ ಲಫಾನ್ ಇಂಡಸ್ಟ್ರಿಯಲ್ ಸಿಟಿಯ ಎಲ್‌ಎನ್‌ಜಿ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 12 ಭಾರತೀಯ ಸೇರಿದಂತೆ ಕನಿಷ್ಠ 13 ಮಂದಿ ಸಾವನ್ನಪ್ಪಿದ ಘಟನೆಗೆ ಕತಾರನ ಅಮೀರ್ ಶೇಕ್ ತಮೀಮ್ ಬಿನ್ ಹಮದ್ ಅಲ್ ಥಾನಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಈ ದುರ್ಘಟನೆ ಹಿನ್ನೆಲೆಯಲ್ಲಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆಮಾಡಿ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಭಾರತೀಯ ಪ್ರಜೆಗಳು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುಃಖಕರ ಸಂಗತಿ ಎಂದು ಹೇಳಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಮ್ಮ ಸಂತಾಪವನ್ನು ವ್ಯಕ್ತಪಡಿಸಿರುವುದಾಗಿ.

Sponsored

ಇದೇ ವೇಳೆ, ಭಾರತೀಯರ ಜೀವ ಹಾನಿಗೆ ಸಂಬಂಧಿಸಿದ ವಯಕ್ತಿಕವಾಗಿ ಕರೆ ಮಾಡಿ ಸಂಪರ್ಕ ಸೂಚಿಸಿದ ಕತಾರ್ ಅಮೀರ್ ಅವರಿಗೆ ಪ್ರಧಾನಿ ಮೋದಿ ಧನ್ಯವಾದಗಳು ಅರ್ಪಿಸಿದ್ದಾರೆ. ಕತಾರ್ ಸರ್ಕಾರವು ಘಟನೆಯ ಬಳಿಕ ಕೈಗೊಂಡಿರುವ ನೆರವು ಹಾಗೂ ತನಿಖಾ ಕ್ರಮಗಳನ್ನು ಅವರು ಮೆಚ್ಚಿದ್ದಾರೆ.

ಸ್ಪೋಟಕದ ಕಾರಣಗಳ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಘಟನೆಯಲ್ಲಿ ಗಾಯಗೊಂಡಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕತಾರ್ ನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ ಭಾರತೀಯ ಸಮುದಾಯದ ಮೇಲೆ ಈ ದುರಂತದ ಪರಿಣಾಮ ಗಂಭೀರವಾಗಿದ್ದು, ಮೃತರ ಕುಟುಂಬಗಳಿಗೆ ಅಗತ್ಯ ಸಹಾಯ ಒದಗಿಸಲು ಭಾರತೀಯ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿದುಬಂದಿದೆ.

ಈ ದುರಂತದ ಹಿನ್ನೆಲೆಯಲ್ಲಿ ಭಾರತ ಮತ್ತು ಕತಾರ್ ನಡುವಿನ ಸ್ನೇಹಪೂರ್ವ ಸಂಬಂಧಗಳು ಮತ್ತೊಮ್ಮೆ ಪ್ರತಿಬಿಂಬಿತವಾಗಿದ್ದು, ಸಂಕಷ್ಟದ ಸಮಯದಲ್ಲಿ ಕತಾರ್ ಅಮೀರ್ ವ್ಯಕ್ತಪಡಿಸಿದ ಸಹಾನುಭೂತಿಗೆ ಭಾರತ ಕೃತಜ್ಞತೆ ಸಲ್ಲಿಸಿದೆ.

ಕತಾರ್ ದುರಂತ:ಮೃತರ ಕುಟುಂಬಗಳ ದುಃಖದಲ್ಲಿ ಭಾರತ-ಕತಾರ್, ಶಾಂತಿ ಪ್ರಯತ್ನಗಳಿಗೂ ಮೋದಿ ಮೆಚ್ಚುಗೆ

Sponsored

ಕತಾರ್ ನ ರಾಜ್ ಲಫಾನ್ ಕೈಗಾರಿಕಾ ನಗರದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಭಾರತೀಯರು ಸೇರಿದಂತೆ ಹಲವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಕತಾರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಮಾತುಕತೆ ನಡೆಸಿ ದುರಂತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರು ದುರಂತದಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳ ನೋವಿನಲ್ಲಿ ತಾವು ಭಾಗಿಯಾಗಿರುವುದಾಗಿ ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪ ಸೂಚಿಸಿದವರು, ಈ ಸಂಕಷ್ಟದ ನೀಡಲು ಸಮಯದಲ್ಲಿ ಕತಾರ್ ಮತ್ತು ಜನತೆ ಅವರೊಂದಿಗೆ ನಿಂತಿದೆ ಎಂದು ಭರವಸೆ ನೀಡಿದ್ದಾರೆ. ಜೊತೆಗೆ,ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದ್ದಾರೆ.

ಪ್ರಧಾನಿ ಮೋದಿ ಕೂಡ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ, ಈ ದುರಂತವು ಭಾರತಕ್ಕೆ ದೊಡ್ಡ ಅಗತ್ಯ ತಂದಿದೆ ಎಂದು ಹೇಳಿದ್ದಾರೆ. ಈ ಸಂಕಷ್ಟದ ಘಳಿಗೆಯಲ್ಲಿ ಭಾರತ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲು ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ. ಭಾರತೀಯ ನಾಗರಿಕರ ಸುರಕ್ಷತೆ ಮತ್ತು ಯೋಗಕ್ಷಮಕ್ಕೆ ಭಾರತ ಮತ್ತು ಕತಾರ್ ಎರಡು ರಾಷ್ಟ್ರಗಳು ಅತ್ಯಂತ ಆದ್ಯತೆಯ ನೀಡುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಮಾತುಕತೆಯ ವೇಳೆ ಇಬ್ಬರು ನಾಯಕರು ಭಾರತ-ಕತಾರ್ ನಡುವಿನ ಆಪ್ತ ಸಂಬಂಧಗಳನ್ನು ಪುನರುಚ್ಚರಿಸಿದ್ದು, ಪರಸ್ಪರ ಸಹಕಾರ ಮತ್ತು ಒಗ್ಗಟ್ಟಿನ ಮೂಲಕ ನಾಗರಿಕರ ಹಿತಾಸಕ್ತಿಗಳನ್ನು ಕಾಪಾಡುವ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ವಿದೇಶದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ಎರಡು ದೇಶಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

Sponsored

ಇದೇ ವೇಳೆ, ಪ್ರಧಾನ ಮಂತ್ರಿ ಕಛೇರಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಪ್ರಧಾನಿ ಮೋದಿ ಮತ್ತು ಕತಾರ್ ಅಮೀರ್ ಪಶ್ಚಿಮ ಏಷ್ಯಾದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು. ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸ್ಥಿರತೆ ಕಾಪಾಡುವ ನೀಟ್ಟಿನಲ್ಲಿ ಕತಾರ್ ವಹಿಸುತ್ತಿರುವ ಸರ್ಕಾರಾತ್ಮಕ ಪಾತ್ರವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.

ವಿಶೇಷವಾಗಿ, ವಿವಿಧ ರಾಜತಾಂತ್ರಿಕ ಮತ್ತು ಮಾನವೀಯ ಪ್ರಯತ್ನಗಳ ಮೂಲಕ ಪ್ರಾದೇಶಿಕ ಉದ್ವಿಗ್ನತೆ ಕಡಿಮೆ ಮಾಡಲು ಕತಾರ್ ನೀಡಿರುವ ಕೊಡುಗೆ ಮಹತ್ವದ್ದಾಗಿದೆ ಎಂದು ಪ್ರಧಾನಿ ಅಭಿಪ್ರಾಯ ಪಟ್ಟರು. ಈ ಶಾಂತಿ ಪ್ರಯತ್ನಗಳು ಮುಂದಿನ ದಿನಗಳಲ್ಲಿ ಪಶ್ಚಿಮ ಏಷ್ಯಾದಲ್ಲಿ ಶಾಶ್ವತ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಗೆ ದಾರಿ ಮಾಡಿಕೊಡಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ದುರಂತದ ನೋವಿನ ನಡುವೆಯೂ ಮಾನವೀಯತೆ, ಸಹಾನುಭೂತಿ ಮತ್ತು ದ್ವಿಪಕ್ಷೀಯ ಸ್ನೇಹದ ಸಂದೇಶವನ್ನು ಈ ಮಾತುಕತೆ ಮತ್ತೊಮ್ಮೆ ಸಾರಿದು, ಭಾರತ ಮತ್ತು ಕತಾರ್ ನಡುವಿನ ಬಲವಾದ ಸಂಬಂಧಗಳಿಗೆ ಇದು ಸಾಕ್ಷಿಯಾಗಿದೆ.

Also Read:

Sponsored

ಕುಮಾರಸ್ವಾಮಿ ಪತ್ನಿ ಹೆಸರಿನಲ್ಲಿ ಜಾಗ ಆರೋಪ: ಎಂ.ಬಿ. ಪಾಟೀಲ್ ವಿರುದ್ಧ ನಿಖಿಲ್ ಗರಂ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online