Belagavi News:
ಭಾರತೀಯ ಚಿತ್ರರಂಗದ ಜನಪ್ರಿಯ ಜೋಡಿ ಎಂದು ಗುರುತಿಸಲ್ಪಡುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಬೆಂಬಲ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ದೇವರಕೊಂಡ ಫೌಂಡೇಶನ್ ಮೂಲಕ 180 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಶಿಕ್ಷಣವನ್ನು ಉತ್ತೇಜಿಸುವುದು ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳ ಮೇಲಿನ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಈ ಉಪಕ್ರಮವನ್ನು ಭಾನುವಾರ ತೆಲಂಗಾಣದ ಅಚಂಪೆಟ್ ಮಂಡಲದ ತುಮ್ಮನ್ ಪೇಟ್ ಗ್ರಾಮದಲ್ಲಿ ಆರಂಭಿಸಲಾಯಿತು. ಈ ಸಾಮಾಜಿಕ ಕಾರ್ಯಕ್ಕೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಇದರ ನಡುವೆಯೇ ನಟಿ ರಶ್ಮಿಕಾ ಮಂದಣ್ಣ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಅಭಿಮಾನಿಗಳೊಂದಿಗೆ ಸಂವಾದ ನಡೆಸಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ತಮ್ಮ ನೆಚ್ಚಿನ ತಾರೆಯರೊಂದಿಗೆ ನೇರವಾಗಿ ಮಾತನಾಡುವ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಅಭಿಮಾನಿಗಳು ಉತ್ಸಾಹದಿಂದ ಪ್ರಶ್ನೆಗಳನ್ನು ಕೇಳಿದ್ದು, ರಶ್ಮಿಕಾ ಸಹ ಹಲವು ಆಸಕ್ತಿದಾಯಕ ಮತ್ತು ಮನಮುಟ್ಟುವ ಉತ್ತರಗಳನ್ನು ನೀಡಿ ಗಮನ ಸೆಳೆದಿದ್ದಾರೆ.
ಸಾಮಾಜಿಕ ಸೇವೆ ಮತ್ತು ಅಭಿಮಾನಿಗಳೊಂದಿಗೆ ಆತ್ಮೀಯ ಸಂಪರ್ಕ ಈ ಎರಡು ವಿಚಾರಗಳಿಂದ ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದನ್ ಮತ್ತೊಮ್ಮೆ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ.
Cocktail 2 ಚಿತ್ರದ ಅಡ್ವಾನ್ಸ್ ಬುಕಿಂಗ್ ಆರಂಭವಾದ ಹಿನ್ನೆಲೆಯಲ್ಲಿ ನಟಿ ರಶ್ಮಿಕಾ ಮಂದನ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ (Q&A) ಸಂವಾದ ನಡೆಸಿದರು. ಈ ವೇಳೆ ಅಭಿಮಾನಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಅವರು ಮುಕ್ತವಾಗಿ ಉತ್ತರಿಸಿ, ಗಮನ ಸೆಳೆದರು.
"ನಿಮ್ಮ ಪ್ರಸ್ತುತ ಜೀವನವನ್ನು ಒಂದು ಪದದಲ್ಲಿ ವಿವರಿಸಿ"ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಶ್ಮಿಕಾ, " Dream Come True (ಕನಸು ನನಸಾಗಿದೆ)"ಎಂದು ಉತ್ತರಿಸಿದರು. ಈ ಉತ್ತರ ಸಾಮಾಜಿಕ ಜಾಣತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
"ನಿಮ್ಮ ಸೌಂದರ್ಯದ ರಹಸ್ಯವೇನು?"ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನಿಮ್ಮೊಳಗಿನ ಮಗುವನ್ನು ಕಾಪಾಡುವ ಜನರೊಂದಿಗೆ ಇರಿ. ಖುಷಿಯಾಗಿರಿ. ಅವರೊಳಗಿನ ಮಗುವನ್ನು ಕಾಪಾಡಿ. ಆಗ ಎಲ್ಲರೂ ಸಂತೋಷವಾಗಿರುತ್ತಾರೆ. ಕೇವಲ ಖುಷಿಯೇ ನನ್ನ ರಹಸ್ಯ" ಎಂದು ಮನಮುಟ್ಟುವ ಸಂದೇಶ ನೀಡಿದರು.
ಇದೇ ವೇಳೆ, "ನೀವು ಜೀವನದಲ್ಲಿ ಮಾಡಿದ ಅತ್ಯಂತ ಸಂತೋಷದ ಕೆಲಸ ಯಾವುದು?" ಎಂಬ ಪ್ರಶ್ನೆಗೆ ರಶ್ಮಿಕಾ, "ನನ್ನ ಬೆಸ್ಟ್ ಫ್ರೆಂಡ್ ನನ್ನೇ ಮದುವೆಯಾಗಿದ್ದು" ಎಂದು ಉತ್ತರಿಸಿ ಭಾರಿ ಚರ್ಚೆಗೆ ಕಾರಣರಾದರು. ಅವರ ಈ ಹೇಳಿಕೆ ಅಭಿಮಾನಿಗಳಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದ್ದು, ಸಾಮಾಜಿಕ ಜಾಣತಾಣಗಳಲ್ಲಿ ವೈರಲ್ ಆಗಿದೆ.
ಅಭಿಮಾನಿಗಳನ್ನು ಒಂದು ಪದದಲ್ಲಿ ವರ್ಣಿಸಲು ಕೇಳಿದಾಗ "ಅವರು ಅತ್ಯುತ್ತಮರು" ಎಂದು ಹೇಳಿದ ರಶ್ಮಿಕಾ, "ನಾನು ಅವರಿಗೆ ತುಂಬಾ ಕೃತಜ್ಞಳು. ಅವರೊಂದಿಗೆ ಬಹಳ ಸಂತೋಷವಾಗಿದೆ ಈ ಭಾಂದವ್ಯ ಜೀವನಪೂರ್ತಿ ಮುಂದುವರೆಯಲಿ ಎಂದು ಆಶಿಸುತ್ತೇನೆ. ಅವರನ್ನು ಹೆಮ್ಮೆಪಡಿಸುವ ಕೆಲಸವನ್ನು ಮುಂದುವರಿಸುತ್ತೇನೆ" ಎಂದು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು.
ನಿಮ್ಮ ಕಷ್ಟ ಪಟ್ಟ ದಿನಗಳ ಬಗ್ಗೆ ಸ್ವಲ್ಪ ಹೇಳಿ ಎಂದು ಅಭಿಮಾನಿಗಳು ಕೇಳಿದ್ದು ನೀವು ಎಲ್ಲಾ ಖುಷಿ ಯಶಸ್ಸನ್ನು ಹೊಂದಿರುವಾಗಲೂ ಸ್ಟ್ರಾಗಲಿಂಗ್ ಇರಬಹುದು. ಆಗ ನಾನು ಯೋಚಿಸುವುದಿಷ್ಟೇ- ಇಂದು ಒಮ್ಮೆ ಮಾತ್ರ ಕೀಪ್ ಮೂವಿಂಗ್ ' ಎಂಬುದು ಎಂದು ಹೇಳಿದ್ದಾರೆ.
ಮುಂದೆ ಯಾವ ಚಿತ್ರ ಬಿಡುಗಡೆಯಾಗಲಿದೆ ಎಂಬುಕ್ಕೆ ಉತ್ತರಿಸಿದ ತಾರೆ, ರಣಬಾಲಿ. ನಂತರ ಮೈಸಾ. ಅದರ ನಂತರದ ಬಿಡುಗಡೆ ಬಗ್ಗೆ ಸದ್ಯಕ್ಕೆ ಗುಟ್ಟು ಬಿಟ್ಟು ಕೊಡುವಂತಿಲ್ಲ, ಕೆಲವು ಇನ್ನೂ ಅನೌನ್ಸ್ ಆಗಿಲ್ಲ ಎಂದು ತಿಳಿಸಿದರು.
180 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿಸ್ತರಿಸಿದ ಈ ಕಾರ್ಯಕ್ರಮವು ವಿಜಯ್ ದೇವರಕೊಂಡ ಅವರಿಗೆ ವಿಶೇಷ ಭಾವನಾತ್ಮಕ ಮಹತ್ವ ಹೊಂದಿತ್ತು. ಏಕೆಂದರೆ ಅವರ ತಂದೆಯ ಮೂಲ ಊರು ತುಮ್ಮನ್ ಪೇಟೆಯಾಗಿದ್ದು, ಇದೇನ್ಲದಲ್ಲಿ ಶಿಕ್ಷಣಕ್ಕಾಗಿ ನೆರವು ನೀಡುವ ಅವಕಾಶ ಸಿಕ್ಕಿರುವುದು ಅವರಿಗೆ ಸಂತಸದ ತಂದಿದೆ.
ಕಾರ್ಯಕ್ರಮದಲ್ಲಿ ರಶ್ಮಿಕ ಮಂದಣ್ಣ ಅವರೊಂದಿಗೆ ಭಾಗವಹಿಸಿದ ವಿಜಯ್ ದೇವರಕೊಂಡ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳನ್ನು ಭೇಟಿಯಾಗಿ ಅವರ ಸಾಧನೆಗಳನ್ನು ಅಭಿನಂದಿಸಿದರು. ಕಠಿಣ ಪರಿಶ್ರಮದ ಮೂಲಕ ಯಶಸ್ಸಿನತ್ತ ಸಾಗುತ್ತಿರುವ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ ಅವರು, ರಾಜ್ಯಾದ್ಯಂತ ಶಿಕ್ಷಣ ಸಹಾಯವನ್ನು ಇನ್ನಷ್ಟು ವಿತರಿಸುವ ತಮ್ಮ ದೀರ್ಘಕಾಲೀನ ಕನಸಿನ ಬಗ್ಗೆ ಇದೆ ವೇದಿಕೆಯಲ್ಲಿ ಹಂಚಿಕೊಂಡಿರು.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ವಿಜಯ ದೇವರಕೊಂಡ ಮತ್ತು ರಶ್ಮಿಕ ಮಂದನ್ ಇದೇ ವರ್ಷ ಬಿಡುಗಡೆಯಾಗಲಿರುವ Ranabali ಚಿತ್ರದಲಿ ಮತ್ತೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರ ಯಶಸ್ವಿ ಚಿತ್ರಗಳಾದ Geeta Govindam ಮತ್ತು Dear Comrade ಬಳಿಕ ಬರುತ್ತಿರುವ ಮೂರನೇ ಸಹಯೋಗದ ಚಿತ್ರ ಇದಾಗಿದೆ.
ರಾಹುಲ್ ಸಂಕೃತ್ಯಾನ್ ನಿರ್ದೇಶನದ ಈ ಬಹು ನಿರೀಕ್ಷಿತ ಸಿನಿಮಾ ಸೆಪ್ಟೆಂಬರ್ 11 ರಂದು ತೆರೆಗೆ ಬರಲಿದ್ದು, ಅಭಿಮಾನಿಗಳಲ್ಲಿ ಈಗಾಗಲೇ ಬಾರಿ ನಿರೀಕ್ಷೆ ಮೂಡಿಸಿದೆ. ವಿಜಯ್ - ರಶ್ಮಿಕಾ ಜೋಡಿಯನ್ನು ಮತ್ತೊಮ್ಮೆ ದೊಡ್ಡ ಪರದೆಯಲ್ಲಿ ನೋಡಲು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.
Also Read: