Belagavi News:
ಸನಾತನ ಸಂಸ್ಕೃತಿಯಲ್ಲಿ ಯಾವುದೇ ಹೊಸ ಕಾರ್ಯ,ವಿದ್ಯಾಭ್ಯಾಸ ಅಥವಾ ಶುಭಾರಂಭ ಮಾಡುವ ಮುನ್ನ ವಿಘ್ನ ನಿವಾರಕನಾದ ಗಣೇಶನನ್ನು ಪ್ರಾರ್ಥಿಸುವುದು ಅನಾದಿಕಾಲದಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ. ಇದೇ ಹಿನ್ನೆಲೆಯಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಗಣೇಶ ಶ್ಲೋಕಗಳನ್ನು ಕಲಿಸುವುದು ಅವರ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯಂತ ಸಹಾಯಕವಾಗುತ್ತದೆ ಎಂದು ಧಾರ್ಮಿಕ ನಂಬಿಕೆಗಳು ತಿಳಿಸುತ್ತವೆ.
ಶಾಲೆಗೆ ಹೋಗುವ ಮಕ್ಕಳಿಗೆ ಹಾಗೂ ಓದುವ ಸಮಯದಲ್ಲಿ ಗಣೇಶ ಶ್ಲೋಕಗಳನ್ನು ಪಠಿಸುವ ಅಭ್ಯಾಸವು ಅವರ ಏಕಾಗ್ರತೆ, ಸ್ಮರಣ ಶಕ್ತಿ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಶೈಕ್ಷಣಿಕ ಯಶಸ್ಸಿಗೂ ದಾರಿಯಾಗುತ್ತದೆ ಎಂಬ ನಂಬಿಕೆ ಸಮಾಜದಲ್ಲಿ ವ್ಯಾಪಕವಾಗಿದೆ.
ವಿಶೇಷವಾಗಿ " ಶುಕ್ಲಾಂಬರಧರಂ ವಿಷ್ಣುಂ " ಮತ್ತು "ವಕ್ರತುಂಡ ಮಹಾಕಾಯ" ಸೇರಿದಂತೆ ಗಣೇಶನ ಪ್ರಮುಖ ಶ್ಲೋಕಗಳು ಮಕ್ಕಳಿಗೆ ಧೈರ್ಯ, ಮನ ಶಾಂತಿ ಹಾಗೂ ಗಮನಶಕ್ತಿಯನ್ನು ನೀಡುವ ಶಕ್ತಿಶಾಲಿ ಮಂತ್ರಗಳಾಗಿ ಪರಿಗಣಿಸಲಾಗುತ್ತದೆ.
ಪೋಷಕರು ಮಕ್ಕಳಿಗೆ ಮುಂಜಾನೆ ಹಾಗೂ ಓದಿಗೆ ಕುಳಿತುಕೊಳ್ಳುವ ಮೊದಲು ಈ ಶ್ಲೋಕಗಳನ್ನು ಹೇಳಿಕೊಡುವುದು ಉತ್ತಮ ಅಭ್ಯಾಸ ಎಂದು ತಿಳಿಸಲಾಗಿದ್ದು, ಇದು ಅವರ ದಿನಚರಿಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಧಾರ್ಮಿಕ ಹಾಗೂ ಸಾಂಪ್ರದಾಯಿಕ ನಂಬಿಕೆಗಳು ಹೇಳುತ್ತವೆ.
ಈ ರೀತಿಯಾಗಿ ಗಣೇಶನ ಆರಾಧನೆ ಮತ್ತು ಶ್ಲೋಕಗಳ ಪಠಣವು ಮಕ್ಕಳ ಸಮಗ್ರ ಬೆಳವಣಿಗೆಗೆ ನೆರವಾಗುವ ಪ್ರಮುಖ ಸಾಂಸ್ಕೃತಿಕ ಪರಂಪರೆಯಾಗಿ ಮುಂದುವರೆಯುತ್ತಿವೆ.
ಮುಂಜಾನೆಯಲ್ಲಿ ಗಣೇಶ ಶ್ಲೋಕ ಪಠಣ : ಮಕ್ಕಳ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಗೆ ಸಹಕಾರಿ ಎಂದು ನಂಬಿಕೆ:
ವಾಸ್ತು ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುಂಜಾನೆಯ ಸಮಯದಲ್ಲಿ ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮ ಹಾಗೂ ಸ್ವೀಕಾರಶೀಲವಾಗಿರುತ್ತದೆ ಎಂದು ಪರಿಗಣಿಸಲಾಗಿದೆ. ಈ ಪವಿತ್ರ ಮುಹೂರ್ತದಲ್ಲಿ ದೈವಿಕ ಶ್ಲೋಕಗಳನ್ನು ಉಚ್ಚರಿಸುವುದರಿಂದ ಮೆದುಳಿನ ನರಗಳು ಉತ್ತೇಜವಾಗುತ್ತವೆ ಎಂಬ ನಂಬಿಕೆ ಇದ್ದು, ಇದರಿಂದ ಜ್ಞಾಪಕ ಶಕ್ತಿ ಹಾಗೂ ಏಕಾಗ್ರತೆ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಈ ಹಿನ್ನಲೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿಗೆ ಸುಲಭವಾಗಿ ಕಲಿಸಬಹುದಾದ ನಾಲ್ಕು ಪ್ರಮುಖ ಗಣೇಶ ಶ್ಲೋಕಗಳು ಮತ್ತು ಅವುಗಳ ಭಾವಾರ್ಥವನ್ನು ನೀಡಲಾಗುತ್ತದೆ. ಪ್ರತಿದಿನ ಓದು ಆರಂಭಿಸುವ ಮುನ್ನ ಈ ಶ್ಲೋಕಗಳನ್ನು ಪಠಿಸುವ ಅಭ್ಯಾಸವು ಮಕ್ಕಳ ಮನಸ್ಸಿನಲ್ಲಿ ಶಾಂತಿ ಹಾಗೂ ಗಮನ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಧಾರ್ಮಿಕ ನಂಬಿಕೆಗಳು ತಿಳಿಸುತ್ತವೆ.
ವಿಶೇಷವಾಗಿ ವಿದ್ಯಾರಂಭದ ಮುನ್ನ ಪಠಿಸಲಾದ "ಶುಕ್ಲಾಂಬರಧರಂ" ಶ್ಲೋಕವು ಅತ್ಯಂತ ಪ್ರಮುಖವಾಗಿದೆ. ಯಾವುದೇ ಹೊಸ ಪಾಠ, ಹೋಂ ವರ್ಕ್ ಅಥವಾ ದಿನನಿತ್ಯದ ಅಧ್ಯಯನವನ್ನು ಆರಂಭಿಸುವ ಮೊದಲು ಈ ಶ್ಲೋಕವನ್ನು ಹೇಳುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ.
ಈ ಶ್ಲೋಕವು ಮನಸ್ಸಿನ ಚಂಚಲತೆಯನ್ನು ಕಡಿಮೆ ಮಾಡಿ ,ಬುದ್ಧಿ ಶಕ್ತಿಯನ್ನು ಚುರುಕುಗೊಳಿಸಲು ಸಹಾಯಕವಾಗುತ್ತದೆ ಎಂದು ನಂಬಿಕೆ ಇದೆ. ಇದರಿಂದ ಮಕ್ಕಳ ಅಧ್ಯಯನದ ಮೇಲೆ ಉತ್ತಮ ಗಮನ ಹಾಗೂ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.
ಈ ರೀತಿಯಾಗಿ ಗಣೇಶ ಶ್ಲೋಕಗಳ ಪಠಣವು ಮಕ್ಕಳ ಶೈಕ್ಷಣಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯಕವಾಗುವ ಸಾಂಪ್ರದಾಯಿಕ ಅಭ್ಯಾಸವಾಗಿ ಮುಂದುವರೆಯುತ್ತಿದೆ.
ಮಕ್ಕಳಿಗಾಗಿ ಮೂರು ಪ್ರಮುಖ ಗಣೇಶ ಶ್ಲೋಕಗಳು : ಏಕಾಗ್ರತೆ,ಆತ್ಮವಿಶ್ವಾಸ ಮತ್ತು ಯಶಸ್ಸಿಗೆ ಸಹಾಯಕ:
ಮಕ್ಕಳಲ್ಲಿ ಏಕಾಗ್ರತೆ, ಮರಣ ಶಕ್ತಿ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸಲು ಗಣೇಶ ಶ್ಲೋಕಗಳ ಪಠಣವನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಮುಂಜಾನೆ ಅಥವಾ ಓದನ್ನು ಆರಂಭಿಸುವ ಮುನ್ನ ಈ ಶ್ಲೋಕಗಳನ್ನು ಪಠಿಸುವುದರಿಂದ ಮಕ್ಕಳ ಮನಸ್ಸು ಶಾಂತವಾಗುತ್ತದೆ ಹಾಗೂ ಅಧ್ಯಯನದ ಮೇಲೆ ಉತ್ತಮ ಗಮನ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
1. ಶುಕ್ಲಾಂಬರಧರಂ ಶ್ಲೋಕ - ವಿಘ್ನ ನಿವಾರಣೆಗೆ:
ಯಾವುದೇ ಹೊಸ ಕೆಲಸ ಅಥವಾ ವಿದ್ಯಾರಂಭದ ಮುನ್ನ ಈ ಶ್ಲೋಕವನ್ನು ಪಡಿಸುವುದು ಸಾಮಾನ್ಯ ಸಂಪ್ರದಾಯವಾಗಿದೆ.
ಶ್ಲೋಕ:
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಬುಜಂ|
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪ ಶಾಂತಯೇ||
ಈ ಲೋಕವು ಎಲ್ಲಾ ವಿಘ್ನಗಳನ್ನು ದೂರ ಮಾಡಿ ಮನಸ್ಸಿಗೆ ಶಾಂತಿ ನೀಡುತ್ತದೆ ಎಂದು ಧಾರ್ಮಿಕ ನಂಬಿಕೆಗಳು ಹೇಳುತ್ತವೆ.
2. ವಕ್ರತುಂಡ ಮಹಾಕಾಯ ಶ್ಲೋಕ - ಯಶಸ್ಸು ಮತ್ತು ಆತ್ಮವಿಶ್ವಾಸಕ್ಕೆ:
ಮಕ್ಕಳು ಶಾಲೆಗೆ ಹೊರಡುವಾಗ, ಪರೀಕ್ಷೆ ಬರೆಯಲು ಅಥವಾ ಕ್ರೀಡೆ ಹಾಗೂ ಸ್ಪರ್ಧಿಗಳಲ್ಲಿ ಭಾಗವಹಿಸುವ ಮುನ್ನ ಈ ಶ್ಲೋಕವನ್ನು ಪಠಿಸುವುದು ಉತ್ತಮ ಎಂದು ಪರಿಗಣಿಸಲಾಗಿದೆ.
ಶ್ಲೋಕ:
ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ|
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ||
ಈ ಶ್ಲೋಕವು ಸಕಾರಾತ್ಮಕ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ.
ಮಕ್ಕಳ ಭಯ ಮತ್ತು ಹಿಂಜರಿಕೆ ನಿವಾರಣೆಗೆ ಗಣೇಶ ಶ್ಲೋಕ: ಗಜಾನನಂ ಶ್ಲೋಕದ ಮಹತ್ವ
ಮಕ್ಕಳಲ್ಲಿ ಪರೀಕ್ಷೆ ಭಯ, ವೇದಿಕೆಯ ಮೇಲೆ ಮಾತನಾಡುವ ಹಿಂಜರಿಕೆ ಹಾಗೂ ಆತ್ಮವಿಶ್ವಾಸದ ಕೊರತೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಇಂತಹ ನಕಾರಾತ್ಮಕ ಭಾವನೆಗಳನ್ನು ದೂರ ಮಾಡಿ ಧೈರ್ಯ ಮತ್ತು ಸಕಾರಾತ್ಮಕ ಮನೋಭಾವವನ್ನು ಬೆಳೆಸಲು ಗಣೇಶ ಶ್ಲೋಕಗಳ ಪಠಣ ಸಹಾಯಕವಾಗುತ್ತದೆ ಎಂದು ಧಾರ್ಮಿಕ ನಂಬಿಕೆಗಳು ಹೇಳುತ್ತವೆ.
ಗಜಾನನ ಶ್ಲೋಕ - ಭಯ ನಿವಾರಣೆಗೆ ಸಹಾಯಕ :
ಈ ಶ್ಲೋಕವು ಮಕ್ಕಳ ಮನಸ್ಸಿಗೆ ಧೈರ್ಯ ತುಂಬಿ ಭಯವನ್ನು ಕಡಿಮೆ ಮಾಡಲು ಉಪಯುಕ್ತವಾಗಿದೆ ಎಂದು ಪರಿಗಣಿಸಲಾಗಿದೆ.
ಶ್ಲೋಕ:
ಗಜಾನನಂ ಭೂತಗಣಾದಿಸೇವಿತಂ ಕಪಿತ್ಥಜಂಬೂಫಲಸಾರಭಕ್ಷಿತಮ್|
ಉಮಾಸುತಂ ಶ್ಲೋಕ ವಿನಾಶಕಾರಣಂ ನಮಾಮಿ ವಿಘ್ನೇಶ್ವರ ಪಾದಪಂಕಜಂ||
ಈ ಶ್ಲೋಕವು ಮನಸ್ಸಿನ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ.
ಪೋಷಕರು ಗಮನಿಸಬೇಕಾದ ಪ್ರಮುಖ ನಿಯಮಗಳು ಈ ಕೆಳಗಿನಂತಿವೆ:
ಮಕ್ಕಳಿಗೆ ಶ್ಲೋಕಗಳನ್ನು ಕಲಿಸುವುದು ಕೇವಲ ಬಾಯಿಪಾಠ ಮಾಡುವುದಷ್ಟೇ ಅಲ್ಲ,ಸರಿಯಾದ ಅಭ್ಯಾಸ ರೂಪಿಸುವುದು ಕೂಡ ಮುಖ್ಯವಾಗಿದೆ. ದಿನವೂ ಬೆಳಿಗ್ಗೆ ಸ್ನಾನದ ನಂತರ ಅಥವಾ ಸಂಜೆ ದೀಪ ಹಚ್ಚಿದ ಸಮಯದಲ್ಲಿ ಲೋಕ ಪಠನವನ್ನು ರೂಢಿ ಮಾಡಿಸುವುದು ಉತ್ತಮ ಎಂದು ಹೇಳಲಾಗುತ್ತದೆ.
ಶ್ಲೋಕ ಪಠಣ ಮಾಡುವಾಗ ಮಕ್ಕಳು ಕೈಮುಗಿದು, ಕಣ್ಣು ಮುಚ್ಚಿ , ಬೆನ್ನು ನೇರವಾಗಿ ಕುಳಿತುಕೊಳ್ಳುವಂತೆ ತಿಳಿಸಬೇಕು. ಇದರಿಂದ ದೈಹಿಕ ಹಾಗೂ ಮಾನಸಿಕ ಏಕಾಗ್ರತೆ ಹೆಚ್ಚುತ್ತದೆ ಎಂದು ನಂಬಿಕೆ ಇದೆ. ಆರಂಭದಲ್ಲಿ ಪೋಷಕರು ಸ್ವತಃ ಲೋಕಗಳನ್ನು ಸ್ಪಷ್ಟವಾಗಿ ಉಚ್ಚರಿಸಿ ಮಕ್ಕಳಿಗೆ ಕಲಿಸಿಕೊಟ್ಟರೆ,ಮಕ್ಕಳ ಉಚ್ಚಾರಣೆ ಶುದ್ಧವಾಗುವ ಜೊತೆಗೆ ಭಾಷಾ ಕೌಶಲ್ಯ ಮತ್ತು ವಾಕ್ಚಾತುರ್ಯವು ಉತ್ತಮಗೊಳ್ಳುತ್ತದೆ.
ಈ ರೀತಿಯಾಗಿ ಗಣೇಶ ಶ್ಲೋಕಗಳ ನಿಯಮಿತ ಪಠಣವು ಮಕ್ಕಳ ಭಯ ನಿವಾರಣೆ, ಆತ್ಮವಿಶ್ವಾಸ ವೃದ್ಧಿ ಹಾಗೂ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಗೆ ಸಹಾಯಕವಾಗುವ ಸಾಂಪ್ರದಾಯಿಕ ಅಭ್ಯಾಸವಾಗಿ ಮುಂದುವರೆಯುತ್ತಿದೆ.
Also Read:
ದಾವಣಗೆರೆ ಗ್ಯಾಂಗ್ ರೇಪ್ ಕೇಸ್: 9 ಆರೋಪಿಗಳಿಗೆ ಜೈಲು, ಬಾಲಾಪರಾಧಿಗೆ ರಿಮ್ಯಾಂಡ್ ಹೋಮ್ ಶಿಫ್ಟ್