belaagavi news :
ಬಹುನಿರೀಕ್ಷಿತ 'ರಾಮಾಯಣ:ಪ್ರಥಮ ಸಂಕಲ್ಪ ಚಿತ್ರದ ರೆಡ್ ಕಾರ್ಪೆಟ್ ಇವೆಂಟ್ ಇಂದು ನವದೆಹಲಿಯಲ್ಲಿ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾರತದ ಖ್ಯಾತ ಸಿತಾರ್ ವಾದಕ ಹಾಗೂ ಸಂಗೀತಗಾರ ರಿಷಬ್ ರಿಖಿರಾಮ್ ಶರ್ಮಾ ಅವರು ಚಿತ್ರತಂಡದೊಂದಿಗೆ ಕಾಣಿಸಿಕೊಂಡಿದ್ದಾರೆ. ಅವರ ಉಪಸ್ಥಿತಿಯು ಕಾರ್ಯಕ್ರಮದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ರಿಷಬ್ ರಿಖಿರಾಮ್ ಶರ್ಮಾ ಅವರು ಖ್ಯಾತ ಸಿತಾರ್ ವಾದಕ, ಸಂಗೀತ ನಿರ್ಮಾಪಕ ಹಾಗೂ ಮಾನಸಿಕ ಆರೋಗ್ಯ ಜಾಗೃತಿಗೆ ಬೆಂಬಲ ನೀಡುತ್ತಿರುವ ಕಲಾವಿದರಾಗಿದ್ದಾರೆ. ದಿಗ್ಗಜ ಸಿತಾರ್ ವಾದಕ ಪಂಡಿತ ರವಿಶಂಕರ್ ಅವರ ಕಿರಿಯ ಮತ್ತು ಕೊನೆಯ ಶಿಷ್ಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
'ರಾಮಾಯಣ:ಪ್ರಥಮ ಸಂಕಲ್ಪ 'ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ರಿಷಬ್ ಅವರ ಉಪಸ್ಥಿತಿ ವಿಶೇಷ ಗಮನ ಸೆಳೆದಿದ್ದು, ಈ ವೇಳೆ ಅವರ ಸಂಗೀತ ನಿರ್ದೇಶನ ಇರಬಹುದೇ ಎಂಬ ನಿರೀಕ್ಷೆಯ ಅಭಿಮಾನಿಗಳಲ್ಲಿ ಮೂಡಿದೆ. ಭಾರತೀಯ ಪುರಾಣ ಕಥೆಯನ್ನು ಆಧರಿಸಿರುವ ಈ ಚಿತ್ರದ ಕುರಿತು ಈಗಾಗಲೇ ಸಿನಿಪ್ರಿಯರಲ್ಲಿ ಭಾರಿ ಆಸಕ್ತಿ ವ್ಯಕ್ತವಾಗಿದೆ.
ಬಹು ನಿರೀಕ್ಷಿತ 'ರಾಮಾಯಣ: ಪ್ರಥಮ ಸಂಕಲ್ಪ' ಚಿತ್ರದ ಕುರಿತು ಸಿನಿಪ್ರಿಯರ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಚಿತ್ರದ ರೆಡ್ ಕಾರ್ಪೆಟ್ ಇವೆಂಟ್ ಗೂ ಮುನ್ನ ಬಾಲಿವುಡ್ ಸೂಪರ್ ಸ್ಟಾರ್ ರಣ್‌ಬೀರ್ ಕಪೂರ್ ಮುಂಬೈನ ಕಲಿನಾ ಖಾಸಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಬಳಿಕ ನಟಿ ಸಾಯಿ ಪಲ್ಲವಿ ಅವರ ಏರ್ಪೋರ್ಟ್ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ.
ಇದೀಗ ಖ್ಯಾತ ಸಂಗೀತಗಾರ ರಿಷಬ್ ರಿಖಿರಾಮ್ ಚರ್ಬಾ ಅವರು ಸ್ವತಃ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, 'ರಾಮಾಯಣ:ಪ್ರಥಮ ಸಂಕಲ್ಪ'ಕಾರ್ಯಕ್ರಮದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಚಿತ್ರತಂಡದೊಂದಿಗೆ ಅವರ ಭೇಟಿ ಹಾಗೂ ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿ ವಿಶೇಷ ಗಮನ ಸೆಳೆದಿದೆ.
ನವದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಡಪಮ್ ನಲ್ಲಿ ಇಂದು ಸಂಜೆ 6 ಗಂಟೆಗೆ 'ರಾಮಾಯಣ:ಪ್ರಥಮ ಸಂಕಲ್ಪ' ದ ವಿಶೇಷ ಕಾರ್ಯಕ್ರಮ ನಡೆಯಲಿದೆ. ಈ ರೆಡ್ ಕಾರ್ಪೆಟ್ ಈವೆಂಟ್ ನಲ್ಲಿ ನಿರ್ಮಾಪಕ ನಮಿತ್ ಮಲ್ಹೋತ್ರಾ, ನಿರ್ದೇಶಕ ನಿತೇಶ್ ತಿವಾರಿ, ನಟರಾಜ್ ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ, ರವಿ ದುಬೆ, ಅರುಣ್ ಗೋವಿಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ.
ಜುಲೈ 24ರಂದು ಚಿತ್ರದ ಟ್ರೈಲರ್ ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಬಹುನಿರೀಕ್ಷಿತ ಸಿನಿಮಾದ ಮೊದಲ ದೃಶ್ಯಗಳು ಹಾಗೂ ಅಪ್ಡೇಟ್ಗಳನ್ನು ನೋಡಲು ಅಭಿಮಾನಿಗಳುಕಾತುರದಿಂದ ಕಾಯುತ್ತಿದ್ದಾರೆ.
ಚಿತ್ರದ ತಯಾರಕರು ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಟ್ರೈಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು,'ರಾಮಾಯಣ:ಪ್ರಥಮ ಸಂಕಲ್ಪ 'ಭಾರತೀಯ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣ ದ ಭವ್ಯ ಪ್ರಸ್ತುತೀಕರಣ ಎಂದು ಬಣ್ಣಿಸಿದ್ದಾರೆ.
ರಾಮಾಯಣ:ಪ್ರಥಮ ಸಂಕಲ್ಪ 'ಟ್ರೇಲರ್ ಗೆ ಕೌಂಟ್ ಡೌನ್; ಜಾಗತಿಕ ಮಟ್ಟದಲ್ಲಿ ಭರ್ಜರಿ ಪ್ರಚಾರಕ್ಕೆ ಸಿದ್ಧತೆ
ಬಹುನಿರೀಕ್ಷಿತ 'ರಾಮಾಯಣ : ಪ್ರಥಮ ಸಂಕಲ್ಪ' ಚಿತ್ರದ ಟ್ರೈಲರ್ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರದ ತಯಾರಕರು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದು, ಭಾರತೀಯ ಮಹಾಕಾವ್ಯವನ್ನು ಜಾಗತಿಕ ಮಟ್ಟದಲ್ಲಿ ಹೊಸ ರೂಪದಲ್ಲಿ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
"ಭಾರತದಿಂದ ಜಗತ್ತಿಗೆ ಸಾವಿರಾರು ವರ್ಷಗಳಿಂದ ರಾಮಾಯಣವು ಧರ್ಮ, ಮರ್ಯಾದೆ, ಧೈರ್ಯ ಮತ್ತು ಕರುಣೆಯಂತಹ ಕಾಲತಿತ ಮೌಲ್ಯಗಳ ಮೂಲಕ ಪೀಳಿಗೆಗಳಿಗೆ ಸ್ಪೂರ್ತಿ ನೀಡಿದೆ. ಈಗ ಇದು ಹೊಸ ಪ್ರಯಾಣವನ್ನು ಆರಂಭಿಸುತ್ತಿದೆ. ಭಾರತದ ಶ್ರೇಷ್ಠ ನಾಗರಿಕತೆಯ ಮಹಾಕಾವ್ಯದಲ್ಲಿ ಒಂದನ್ನು ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಕಾಣದ ಪ್ರಮಾಣದಲ್ಲಿ ಜಗತ್ತಿಗೆ ಪ್ರಸ್ತುತಪಡಿಸಲಾಗುತ್ತಿದೆ. ರಾಮಾಯಣ ಟ್ರೈಲರ್ ಜುಲೈ 24ರಂದು ವಿಶ್ವಾದ್ಯಂತ ಪ್ರಥಮ ಪ್ರದರ್ಶನಗೊಳ್ಳಲಿದೆ" ಎಂದು ಚಿತ್ರತಂಡ ತಿಳಿಸಿದೆ.
ಟ್ರೇಲರ್ ಬಿಡುಗಡೆಗೂ ಮುನ್ನವೇ 'ರಾಮಾಯಣ:ಪ್ರಥಮ ಸಂಕಲ್ಪ' ಚಿತ್ರಕ್ಕೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ವಿಶೇಷ ಪ್ರಚಾರ ದೊರೆಯಲಿದೆ. ಅಮೆರಿಕದ ಸ್ಯಾನ್ ಡಿಯಾಗೋ ಕಾಮಿಕ್ - ಕಾನ್ ಕಾರ್ಯಕ್ರಮದಲ್ಲಿಯೂ ಚಿತ್ರದ ವಿಶೇಷ ಪ್ರದರ್ಶನ ಮತ್ತು ಪ್ಯಾನಲ್ ಚರ್ಚೆ ನಡೆಯಲಿದೆ.
ಅಧಿಕೃತ ವೇಳಾಪಟ್ಟಿಯ ಪ್ರಕಾರ, ಚಿತ್ರದ ಬ್ಯಾನಲ್ ಜುಲೈ 23,2026ರಂದು ಮಧ್ಯಾಹ್ನ 3:15ಕ್ಕೆ(ಭಾರತೀಯ ಕಾಲಮಾನ ಜುಲೈ 24ರಂದು ಬೆಳಗ್ಗೆ 3: 15ಕ್ಕೆ) ಬಾಲ್ ರೂಮ್ 20 ರಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಿರ್ಮಾಪಕ ನಮಿತ್ ಮಲ್ಹೋತ್ರಾ, ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಟರಾಜ್ ರಣ್‌ಬೀರ್ ಕಪೂರ್ ಮತ್ತು ಯಶ್ ಭಾಗವಹಿಸುವ ನಿರೀಕ್ಷೆ ಇದೆ.
ಭಾರತೀಯ ಪುರಾಣ ಕಥೆಯನ್ನು ಜಾಗತಿಕ ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶದೊಂದಿಗೆ ಮೂಡಿ ಬರುತ್ತಿರುವ ಈ ಚಿತ್ರ, ಬಿಡುಗಡೆಗು ಮುನ್ನವೇ ಸಿನಿ ಪ್ರಿಯರಲ್ಲಿ ಬಾರಿ ಕುತೂಹಲ ಮೂಡಿಸಿದೆ.
ರಾಮಾಯಣ:ಪ್ರಥಮ ಸಂಕಲ್ಪ' ಚಿತ್ರದ ಮೇಲೆ ಭಾರಿ ನಿರೀಕ್ಷೆ; ರಣ್‌ಬೀರ್ ಕಪೂರ್,ಎಸ್ ಅಭಿನಯದ ಮಹಾಕಾವ್ಯಕ್ಕೆ ಸಿದ್ಧತೆ
ನಿತೇಶ್ ತಿವಾರಿ ನಿರ್ದೇಶನದ ಹಾಗೂ ನಮಿತ್ ಮಲ್ಹೋತ್ರಾ ನಿರ್ಮಾಣದ ' ರಾಮಾಯಣ:ಪ್ರಥಮ ಸಂಕಲ್ಪ' ಸಿನಿಮಾ ಘೋಷಣೆಯಾದ ದಿನದಿಂದಲೇ ಭಾರತೀಯ ಚಿತ್ರರಂಗದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ಎರಡು ಭಾಗಗಳ ಬೃಹತ್ ಸಾಹಸಗಾತಿಯಾಗಿ ಮೂಡಿ ಬರುತ್ತಿರುವ ಈ ಚಿತ್ರವು ಭಾರತೀಯ ಮಹಾಕಾವ್ಯ ರಾಮಾಯಣದಿಂದ ಪ್ರೇರಣೆ ಪಡೆದಿದೆ.
ಚಿತ್ರವು ವಿಷ್ಣುವಿನ ಅವತಾರವೆಂದು ನಂಬಲಾಗುವ ಶ್ರೀ ರಾಮ ಜೀವನ ಯಾತ್ರೆಯನ್ನು ಆಧರಿಸಿದೆ. ಅಯೋಧ್ಯೆಯ ರಾಜಕುಮಾರನಾಗಿ ರಾಮನ ಜೀವನ, ನಂತರದ ವನವಾಸ ಹಾಗೂ ರಾವಣನ ವಿರುದ್ಧದ ಮಹಾ ಯುದ್ಧದ ವರೆಗಿನ ಪ್ರಮುಖ ಘಟನೆಗಳನ್ನು ಭವ್ಯವಾಗಿ ತೆರೆಗೆ ತರಲು ಪ್ರಯತ್ನ ಮಾಡಲಾಗಿದೆ.
ಈ ಬಹು ನಿರೀಕ್ಷಿತ ಸಿನಿಮಾದಿಂದ ರಣ್‌ಬೀರ್ ಕಪೂರ್ ರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ, ಯಶ್ ರಾವಣನ ಪಾತ್ರದಲ್ಲಿ, ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಸಂಗೀತಕ್ಕೆ ಜಾಗತಿಕ ಖ್ಯಾತಿಯ ಸಂಗೀತ ಸಂಯೋಜಕ ಹ್ಯಾನ್ಸ್ ಜಿಮ್ಮರ್ಮತ್ತು ಭಾರತದ ಕ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಕೈಜೋಡಿಸಿದ್ದಾರೆ.ಈ ಸಂಗೀತ ಸಂಯೋಜನೆ ಚಿತ್ರದ ಭವ್ಯತೆಯನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆ ಇದೆ.
'ರಾಮಾಯಣ:ಪ್ರಥಮ ಸಂಕಲ್ಪ'ಚಿತ್ರದ ಮೊದಲ ಭಾಗವು ಇದೇ ಸಾಲಿನ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಚಿತ್ರಮಂದಿರಗಳಿಗೆ ಬರಲಿದೆ.ಚಿತ್ರದ ಎರಡನೇ ಭಾಗವು 2027ರ ದೀಪಾವಳಿ ಸಮಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.