<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ರಷ್ಯಾ- ಉಕ್ರೇನ್ ಯುದ್ಧ: ಶಾಂತಿ ಒಪ್ಪಂದಕ್ಕೆ ಅಮೆರಿಕ ಸಿದ್ಧ, ಆದರೆ ತಕ್ಷಣದ ಪರಿಹಾರವಿಲ್ಲ ಎಂದ ರುಬಿಯೊ

ರಷ್ಯಾ- ಉಕ್ರೇನ್ ಯುದ್ಧ: ಶಾಂತಿ ಒಪ್ಪಂದಕ್ಕೆ ಅಮೆರಿಕ ಸಿದ್ಧ, ಆದರೆ ತಕ್ಷಣದ ಪರಿಹಾರವಿಲ್ಲ ಎಂದ ರುಬಿಯೊ
Summary: Secretary of State Marco Rubio said the US is ready to end the senseless war in Ukraine. But he said a peace deal is not possible immediately, adding to the growing intrigue surrounding the Russia-Ukraine war.

Belagavi News:

ಮನಿಲಾ (ಫಿಲಿಪ್ಪಿನ್ಸ್): ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸಲು ಅಮೆರಿಕದ ಟ್ರಂಪ್ ಆಡಳಿತ ಸಹಕಾರ ನೀಡಲು ಸಿದ್ಧವಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ತಿಳಿಸಿದ್ದಾರೆ. ಆದರೆ ಯುದ್ಧಕ್ಕೆ ಅಂತ್ಯ ಹಾಡುವ ಒಪ್ಪಂದವನ್ನು ತಲುಪಲು ಯಾವುದೇ ಸುಲಭ ಅಥವಾ ತ್ವರಿತ ಮಾರ್ಗವಿಲ್ಲ ಎಂದು ಅವರು ಹೇಳಿದ್ದಾರೆ.

ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರೊಂದಿಗೆ ಮಾತುಕತೆ ನಡೆಸಿದ ರೂಬಿಯೋ, ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿದ್ದ ಶಾಂತಿ ಮಾತುಕತೆಗಳು ಸದ್ಯ ಸ್ಥಗಿತಗೊಂಡಿವೆ ಎಂದು ತಿಳಿಸಿದ್ದಾರೆ. ಆದರೆ ಒಪ್ಪಂದ ಸಾಧ್ಯವಾಗುವಂತಹ ಪರಿಸ್ಥಿತಿಗಳು ಬದಲಾಗಿದರೆ, ಮಾತು ಕಥೆಗಳನ್ನು ಪುನರಂಭಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಎರಡು ರಾಷ್ಟ್ರಗಳು ಒಪ್ಪಿಕೊಳ್ಳಬಹುದಾದ ಪರಿಹಾರ ಕಂಡುಕೊಳ್ಳುವುದು ದೊಡ್ಡ ಸವಾಲಾಗಿದೆ ಎಂದು ಹೇಳಿದ ರೂಬಿಯೊ, ರಾಜತಾಂತ್ರಿಕ ಪ್ರಯತ್ನಗಳು ಹಾಗೂ ಹೊಸ ಆಲೋಚನೆಗಳ ಮೂಲಕ ಮಾಧ್ಯಮ ವರ್ಗವನ್ನು ಹುಡುಕುವ ಪ್ರಯತ್ನ ಮುಂದುವರಿಯಲಿದೆ ಎಂದರು.

ಮನಿಲಾದಲ್ಲಿ ನಡೆದ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಟನೆ (ASEAN ) ವಿದೇಶಾಂಗ ಸಚಿವರ ಸಭೆಯ ವೇಳೆ ರುಬಿಯೊ ಅವರು ರಷ್ಯಾ ಹಾಗೂ ಚೀನಾ ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು. ಅಮೆರಿಕ ಏಷ್ಯಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತನ್ನ ತೊಡಗಿಸಿಕೊಳ್ಳುವಿಕೆಯನ್ನು ಮುಂದುವರಿಸಲಿದೆ ಎಂದು ಅವರು ಹೇಳಿದರು.

ಇದೇ ವೇಳೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಮಾತನಾಡಿ, ವಾಷಿಂಗ್ಟನ್ ನಿಂದ ದೊರೆಯುತ್ತಿರುವ ಮಿಲಿಟರಿ ಬೆಂಬಲದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ತಿಳಿಸಿದ್ದಾರೆ. ನ್ಯಾಟೋ ಮಿತ್ರ ರಾಷ್ಟ್ರಗಳು ಶಸ್ತ್ರಾಸ್ತ್ರಗಳನ್ನು ಪೂರೈಸುವ ಕಾರ್ಯ ಮುಂದುವರಿಸಿದ್ದು, ಮಾತುಕತೆ ಪುನಾರಾರಂಭಿಸುವ ಮಾರ್ಗ ಕಂಡುಕೊಳ್ಳುವುದು ತಮ್ಮ ಆಧ್ಯತೆಯಾಗಿದೆ ಎಂದರು.

ಇದರ ನಡುವೆ, ರಷ್ಯಾ-ಉಕ್ರೇನ್ ಯುದ್ಧದ ಶಾಂತಿ ಪ್ರಯತ್ನಗಳ ಮೇಲೆ ಮಧ್ಯಪ್ರಾಚ್ಯದ ಇರಾನ್ ಸಂಘರ್ಷದ ಪರಿಣಾಮವೂ ಬೀರಿದೆ. ಕದನ ವಿರಾಮ ಪ್ರಯತ್ನಗಳು ವಿಫಲವಾದ ಬಳಿಕ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

ಇದಲ್ಲದೆ, ದಕ್ಷಿಣ ಚೀನಾ ಸಮುದ್ರದಲ್ಲಿ ಫಿಲಿಪ್ಪಿನ್ಸ್ ಸೇರಿದಂತೆ ಸಣ್ಣ ರಾಷ್ಟ್ರಗಳ ವಿರುದ್ಧ ಚೀನಾ ಕೈಗೊಳ್ಳುತ್ತಿರುವ ಆಕ್ರಮಣಕಾರಿ ಕ್ರಮಗಳ ಬಗ್ಗೆ ಟ್ರಂಪ್ ಆಡಳಿತ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಾದೇಶಿಕ ಭದ್ರತೆ ಹಾಗೂ ಸಹಭಾಗಿತ್ವದ ವಿಚಾರದಲ್ಲಿ ಅಮೆರಿಕ ತನ್ನ ಪಾತ್ರವನ್ನು ಮುಂದುವರಿಸಲಿದೆ ಎಂದು ರೂಬಿಯೊ ಹೇಳಿದ್ದಾರೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online