Belagavi News:
ಜಗತ್ತಿನ ಪ್ರಸಿದ್ಧ ಕಟ್ಟಡಗಳನ್ನು ಏರುವ ಸಾಹಸಗಳಿಂದ ಖ್ಯಾತಿ ಪಡೆದಿರುವ ರಷ್ಯಾದ ಸಾಹಸಿ ಜೋಡಿ ಏಂಜೆಲಾ ನಿಕೋಲೌ ಮತ್ತು ಇವಾನ್ ಬೀರ್ಕಸ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಬಾರಿ ನ್ಯೂಯಾರ್ಕ್ ನ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಆ್ಯಂಟೆನಾ ಏರಿ, ಮದುವೆ ಪ್ರಪೋಸ್ ಮಾಡಿದ ಬೈಕ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ನಡೆದ ಈ ಘಟನೆ ವೇಳೆ ಸಾಹಸಿ ಜೋಡಿ ಕಟ್ಟಡದ ಆ್ಯಂಟೆನಾ ಮೇಲೇರಿ "ಪ್ರೀತಿಯ ಶಕ್ತಿ " ಮತ್ತು "ಶಾಂತಿ" ಸಂದೇಶ ಹೊಂದಿದ್ದ ಬ್ಯಾನರ್ ಪ್ರದರ್ಶಿಸಿದರು. ಅಲ್ಲದೆ, ಇದೇ ಸ್ಥಳದಲ್ಲಿ ಮದುವೆ ಪ್ರಸ್ತಾಪ ಮಾಡಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಘಟನೆಯ ಬಳಿಕ ಭದ್ರತಾ ನಿಯಮ ಉಲ್ಲಂಘಿಸಿದ ಆರೋಪದ ಅಡಿಯಲ್ಲಿ ನ್ಯೂಯಾರ್ಕ್ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಈ ಜೋಡಿ ಈಗಾಗಲೇ ವಿಶ್ವದಾದ್ಯಂತ ತಮ್ಮ ಅಪಾಯಕಾರಿ ರೂಫ್ ಟಾಪಿಂಗ್ ಸಾಹಸಗಳಿಂದ ಪ್ರಸಿದ್ಧರಾಗಿದ್ದಾರೆ. 2024 ರಲ್ಲಿ ನೆಟ್ ಪ್ಲಿಕ್ಸ್ ಇವರ ಜೀವನ ಮತ್ತು ಸಾಹಸಗಳ ಆಧಾರಿತ "Sky walkers : A Love Story " ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿತ್ತು. ಈ ಡಾಕ್ಯುಮೆಂಟರಿಯಲ್ಲಿ ಅವರ ಸಾಹಸಮಯ ಜೀವನ ಹಾಗೂ ಪ್ರೇಮ ಕಥೆಯನ್ನು ಚಿತ್ರಿಸಲಾಗಿದೆ.
ಇತ್ತೀಚಿನ ಈ ಸಾಹಸವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸಾಹಸ ಮತ್ತು ಭದ್ರತೆ ನಡುವೆನ ಸಮತೋಲನ ಕುರಿತು ಮತ್ತೆ ಪ್ರಶ್ನೆಗಳು ಉದ್ಭವಿಸಿವೆ.
ಎಂಪೈರ್ ಸ್ಟೇಟ್ ಬಿಲ್ಡಿಂಗ್ ಆ್ಯಂಟಿನಾ ಮೇಲೆ ಮದುವೆ ಪ್ರಪೋಸ್ - ರಷ್ಯಾ ಸಾಹಸಿ ಜೋಡಿಯ ವೈರಲ್ ವಿಡಿಯೋ, ಬಳಿಕ ಬಂಧನ :
ನ್ಯೂಯಾರ್ಕ್ ನ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಆ್ಯಾಂಟೆನಾ ಈರಿ ಮದುವೆ ಪ್ರಪೋಸ್ ಮಾಡಿದ ರಷ್ಯಾದ ಸಾಹಸಿ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪಾಯಕಾರಿ ಸಾಹಸದ ಬಳಿಕ ಭದ್ರತಾ ನಿಯಮ ಉಲ್ಲಂಘಿಸಿ ಆರೋಪಿಯ ಅಡಿಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಏಂಜೆಲಾ ನಿಕೋಲಾ ಮತ್ತು ಇವಾನ್ ಬೀರ್ಕಸ್ ಕಪ್ಪು ಬಟ್ಟೆ ಹಾಗೂ ಮಾರ್ಕ್ ಧರಿಸಿ ಕಟ್ಟಡದ ಆ್ಯಂಟೆನಾ ಏರಿದ್ದರು. ಸುರಕ್ಷತಾ ಟೆಥರ್ ಬಳಸದೇ ಕಿರಿದಾದ ಅಂಚಿನಲ್ಲಿ ಬ್ಯಾಲೆನ್ಸ್ ಮಾಡಿಕೊಂಡು ನಿಂತಿದ್ದ ಇಬ್ಬರೂ ಪರಸ್ಪರ ಚುಂಬಿಸುತ್ತಿರುವ ದೃಶ್ಯಗಳು ಹೆಲಿಕ್ಯಾಪ್ಟರ್ ನಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಸಾಹಸದ ವೇಳೆ ಅವರು "ಪ್ರೀತಿಯಲ್ಲಿರುವ ಶಕ್ತಿ ಅಧಿಕಾರದ ಪ್ರೀತಿಯನ್ನು ಸೋಲಿಸಿದಾಗ ಜಗತ್ತಿಗೆ ಪ್ರೀತಿಯ ಅರಿವಾಗುತ್ತದೆ "ಎಂಬ ಸಂದೇಶವಿದ್ದ ಬ್ಯಾನರ್ ಅನ್ನು 1,454 ಅಡಿ (443 ಮೀಟರ್ ) ಎತ್ತರದಲ್ಲಿರುವ ಆ್ಯಂಟೆನಾದ ಮೇಲೆ ಪ್ರದರ್ಶಿಸಿದರು.
ಸ್ವಲ್ಪ ಸಮಯದ ಬಳಿಕ ಇಬ್ಬರೂ ಬ್ಯಾನರ್ ಹಿಡಿದು ಕೆಳಗಿಳಿಯಲು ಆರಂಭಿಸಿದರು. ಲೋಹದ ರಚನೆಯ ಮೇಲೆ ಸೆಲ್ಫಿ ಸ್ಟಿಕ್ ಇಟ್ಟು, ಒಂದು ಮೊಣಕಾಲಿನ ಮೇಲೆ ಕುಳಿತು ಮದುವೆ ಪ್ರಪೋಸ್ ಮಾಡಿದ ದೃಶ್ಯವೂ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಬಳಿಕ ಪರಸ್ಪರ ಅಪ್ಪಿಕೊಂಡು, ಉಂಗುರವನ್ನು ಪ್ರದರ್ಶಿಸುತ್ತಾ ಸೆಲ್ಫಿ ತೆಗೆದುಕೊಂಡರು.
ಈ ನಡುವೆ ನ್ಯೂಯಾರ್ಕ್ ಪೊಲೀಸ್ ಸೇವಾ ಘಟಕದ ಅಧಿಕಾರಿಗಳು ಏಣಿಯ ಮೂಲಕ ಮೇಲೇರಿ ಜೋಡಿಯನ್ನು ತಡೆದರು. ಪೊಲೀಸ್ ಬಾಡಿ ಕ್ಯಾಮೆರಾ ವಿಡಿಯೋದಲ್ಲಿ ಅಧಿಕಾರಿ ಒಬ್ಬರು, "ಸರಿ, ನೀವು ಇಲ್ಲಿ ಮೇಲೆ ಇರಲು ಸಾಧ್ಯವಿಲ್ಲ" ಎಂದು ಹೇಳುತ್ತಿರುವುದು ಕೇಳುಸುತ್ತದೆ. ಅದೇ ವೇಳೆ,"ನಾವು ನಿಶ್ಚಿತಾರ್ಥ ಮಾಡಿಕೊಂಡಿದ್ದೆವು" ಎಂಬ ಧ್ವನಿಯು ವಿಡಿಯೋದಲ್ಲಿ ದಾಖಲಾಗಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅಪಾಯಕಾರಿ ಸಾಹಸಗಳು ಮತ್ತು ಸಾರ್ವಜನಿಕ ಸುರಕ್ಷತೆ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ.
ವೈರಲ್ ಪ್ರಪೋಸ್ ವಿಡಿಯೋ ಬಳಿಕ ಪೊಲೀಸ್ ಕ್ರಮ - ರಷ್ಯಾದ ಸಾಹಸಿ ಜೋಡಿ ಬಂಧನ :
ನ್ಯೂಯಾರ್ಕ್ ನ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಆ್ಯಂಟೆನಾ ಅವರ ಅಮೋಘ ಅಭಿನಯದ ಏರಿ ಮದುವೆ ಪ್ರಪೋಸ್ ಮಾಡಿದ ರಷ್ಯಾದ ಸಾಹಸಿ ಜೋಡಿಯ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಪೊಲೀಸರು ಇಬ್ಬರನ್ನು ತಡೆದು ವಶಕ್ಕೆ ಪಡೆದಿರುವುದು ಕಾಣಿಸುತ್ತಿದೆ.
ವಿಡಿಯೋದಲ್ಲಿ, ಕೆಲವೇ ಕ್ಷಣಗಳಲ್ಲಿ ಪೊಲೀಸ್ ತುರ್ತು ಸೇವಾ ಘಟಕದ ಅಧಿಕಾರಿಗಳು ಆ್ಯಂಟೆನಾ ಲ್ಯಾಂಡಿಂಗ್ ಪ್ರದೇಶ ತಲುಪಿ, ಜೋಡಿಹೊಂದಿಗೆ ಶಾಂತವಾಗಿ ಮಾತನಾಡುತ್ತಿರುವ ದೃಶ್ಯಗಳು ದಾಖಲಾಗಿವೆ. ಬಳಿಕ ಇಬ್ಬರೂ ಅಧಿಕಾರಿಗಳೊಂದಿಗೆ ಯಾವುದೇ ಪ್ರತಿರೋಧವಿಲ್ಲದೆ ಕೆಳಗಿಳಿದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಸಾಹಸಿ ಏಂಜೆಲಾ ನಿಕೋಲಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಸಾಹಸದ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದು , ಮ್ಯಾನ್ ಹ್ಯಾಟನ್ ನ ಪಕ್ಷಿ ನೋಟದ ಹಿನ್ನೆಲೆಯೊಂದಿಗೆ ನಿಶ್ಚಿತಾರ್ಥದ ಉಂಗುರ ತೊಡಿಸುವ ಫೋಟೋ ಕೂಡ ಪೋಸ್ಟ್ ಮಾಡಿದ್ದಾರೆ.
ಈ ಘಟನೆ ಸಂಭಂದ ಏಂಜೆಲಾ ನಿಕೋಲಾ ಮತ್ತು ಇವಾನ್ ಕುಜ್ನೆಟ್ಸೊವ್ ಅವರನ್ನು ಕಳ್ಳತನ, ಅ ಜಾಗರೂಕ ಅಪಾಯ ಸೇರಿದಂತೆ ಹಲವು ಆರೋಪಗಳ ಅಡಿಯಲ್ಲಿ ನ್ಯೂಯಾರ್ಕ್ ಪೊಲೀಸ್ ರು ಬಂಧಿಸಿದ್ದಾರೆ.
ಈ ಜೋಡಿ ವಿಶ್ವದ ವಿವಿಧ ಎತ್ತರದ ಕಟ್ಟಡಗಳ ಮೇಲೆ ಅನಧಿಕೃತ ರೂಫ್ ಟಾಪಿಂಗ್ ಸಹಿಗಳಿಗೆ ಹೆಸರುವಾಸಿಯಾಗಿದೆ. ಆದರೆ, 102 ಅಂತಸ್ತಿನ ಎಂಪೈರ್ ಸ್ಟೇಟ್ ಬಿಲ್ಡಿಂಗ್ ನ ಸಾರ್ವಜನಿಕ ಪ್ರವೇಶ ಮಿತಿಯನ್ನು ಮೀರಿ ಆ್ಯಾಂಟೆನಾವರೆಗೆ ಅವರು ಹೇಗೆ ತಲುಪಿದರು ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಕಟ್ಟಡ ನಿರ್ವಹಣೆಯು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಈ ಘಟನೆ ಅನಧಿಕೃತ ಪ್ರವೇಶವಾಗಿದ್ದು, ಅದೃಷ್ಟವಶಾತ್ ಕಟ್ಟಡದಲ್ಲಿದ್ದ ಸಾರ್ವಜನಿಕರಿಗೆ ಯಾವುದೇ ಹಾನಿ ಅಥವಾ ಅಪಾಯ ಸಂಭವಿಸಿಲ್ಲ ಎಂದು ತಿಳಿಸಿದೆ.