belagavi news :
ಪಶ್ಚಿಮ ಬಂಗಾಳ ಮತದಾರರ ಪಟ್ಟಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ : ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣಿ ಹಿನ್ನೆಲೆಯಲ್ಲಿ ಹಲವು ಮತದಾರರು ತಮ್ಮ ಹೆಸರು ಪಟ್ಟಿಯಿಂದ ಹೊರಬಿದ್ದ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ್ದಾರೆ. ಬಂಗಾಳ ಭವನದಲ್ಲಿ ಅವರು ಕಾಯುತ್ತಾ ಸಿಎಂ ಮಮತಾ ಬ್ಯಾನರ್ಜಿ ಪೊಲೀಸರು ನೀಡುತ್ತಿರುವ ಕ್ರಮಕ್ಕೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು. ಅವರು ಹೇಳಿದ್ದು,"ಇದು ಕೇಂದ್ರದ ಒತ್ತಡ ಹೇರುವ ತಂತ್ರ" ಎಂದು ಆರೋಪಿಸಿದ್ದು ಮತದಾರರ ಮೇಲೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.
ಈ ಬೆಳವಣಿಗೆ ಪಶ್ಚಿಮ ಬಂಗಾಳ ಚುನಾವಣಾ ಪ್ರಕ್ರಿಯೆಯಲ್ಲಿ ಕೇಂದ್ರ, ರಾಜ್ಯ ಸಂಘರ್ಷ ಹಾಗೂ ಮತದಾರರ ಹಕ್ಕುಗಳು ಮತ್ತು ಭದ್ರತೆ ಕುರಿತು ಚರ್ಚೆ ಸೃಷ್ಟಿಸಿದೆ. SIR ಪ್ರಕ್ರಿಯೆಯಿಂದ ತಮ್ಮ ಹೆಸರು ಪಟ್ಟಿಯಿಂದ ತೆಗೆದುಕೊಂಡಿರುವವರಿಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ದೆಹಲಿಗೆ ಬಂದು ಇದ್ದಾರೆ. ಆದರೆ, ದೆಹಲಿ ಪೊಲೀಸರು ಭದ್ರತೆ ನೀಡುವ ಹೆಸರಿನಲ್ಲಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಸಂಬಂಧ, ಮತದಾರರ ನ್ಯಾಯ ಹೋರಾಟಕ್ಕೆ ದೆಹಲಿಗೆ ಬಂದ ಜನರ ಮೇಲೆ ಕೇಂದ್ರ ಸರ್ಕಾರ ಪೊಲೀಸರ ಮೂಲಕ ಒತ್ತಡ ಹಾಕಿದ್ದಾರೆ ಎಂದು ಮಮತಾ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಅಲ್ಲಿಂದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
"ಮತದಾರರ ಪಟ್ಟಿಯಿಂದ ಹೊರ ಬಿದ್ದ ಜನರು ಚುನಾವಣಾ ಆಯೋಗದ ಮುಂದೆ ಮನವಿ ಮಾಡಲು ಬಂದಿದ್ದಾರೆ. ಆದರೆ ಕೇಂದ್ರ ಸರ್ಕಾರ ಅವರ ಮೇಲೆ ಒತ್ತಡ ಹೇರಲು ಪೊಲೀಸರು ಕಳಿಸಲಾಗಿದೆ" ಎಂದು ಹೇಳಿದರು .ಸಿಎಂ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, "ಗುಂಡಾಗಿರಿ ಪ್ರದರ್ಶಿಸಬೇಡಿ. ಬಂಗಾಳದ ಜನರ ಮೇಲೆ ನಿಮ್ಮ ದಬ್ಬಾಳಿಕೆಯನ್ನು ಸಹಿಸುವುದಿಲ್ಲ". ಇದರ ವಿರುದ್ಧ ನಾನು ಮತ್ತು ನನ್ನ ಪಕ್ಷ ಹೋರಾಟ ನಡೆಸಲಿದೆ.
ದೆಹಲಿ ಪೊಲೀಸ್ ಅಧಿಕಾರಿಗಳು ಬಂಗಾಳದ ಪ್ರತಿಷ್ಠೆಯನ್ನು ಹಾಳು ಮಾಡಲು ಈ ರೀತಿಯ ಕಿರುಕುಳ ನೀಡುತ್ತಿದ್ದಾರೆ” ಎಂದು ಹೇಳಿದರು."ಕೇಂದ್ರ ಗೃಹ ಸಚಿವರು ಬಂಗಾಳಕ್ಕೆ ಬಂದಾಗ ಅವರಿಗೆ ಕೆಂಪುಹಾಸಿನ ಸ್ವಾಗತ ಸಿಗುತ್ತದೆ. ಆದರೆ ಬಂಗಾಳದ ಜನರು ದೆಹಲಿಗೆ ಬಂದರೆ ಬೆದರಿಸಲಾಗುತ್ತಿದೆ. ಅವರು ಇಲ್ಲಿ ಪ್ರತಿಭಟಿಸಲು ಬಂದಿಲ್ಲ,SIRನಿಂದ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಚುನಾವಣಾ ಆಯೋಗಕ್ಕೆ ತಿಳಿಸಲು ಬಂದಿದ್ದಾರೆ ಎಂದು ಹೇಳಿದ್ದಾರೆ. ಸಿಎಂ ಹೇಳಿಕೆಗಳು ಬಂಗಾಳ ಮತದಾರರ ಹಕ್ಕುಗಳು, ಕೇಂದ್ರ ರಾಜ್ಯ ಸಂಘರ್ಷ ಮತ್ತು SIR ಪ್ರಕ್ರಿಯೆ ತೀವ್ರತೆ ಮೇಲೆ ಬೆಳಕು ಚೆಲ್ಲಿದೆ.
ಎಸ್ಐಆರ್ ವಿಚಾರವಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರೊಂದಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಾಳೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈ ಸಭೆಗೆ ಮುನ್ನವೇ ರಾಜಧಾನಿ ದೆಹಲಿಯ ಬಂಗಾಳ ಭವನದ ಮುಂದೆ ಭಾರಿ ಹೈಡ್ರಮ ನಡೆದಿದೆ. ಈ ಘಟನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಚುನಾವಣೆ ಸಂಬಂಧಿತ ಸ್ವಾಯತ್ತತೆ, ರಾಜ್ಯ-ಕೇಂದ್ರ ಸಂಘರ್ಷ ಮತ್ತು ಚುನಾವಣಾ ಆಯೋಗದ ಪಾತ್ರ ಕುರಿತು ಹೊಸ ಪ್ರಶ್ನೆಗಳು ಎಬ್ಬಿಸಿದೆ.
ನಾಳೆ ನಡೆಯಲಿರುವ ಮಮತಾ ಬ್ಯಾನರ್ಜಿ- ಚುನಾವಣಾ ಆಯುಕ್ತರ ಸಭೆಯ ಮೇಲೆ ದೇಶಾದ್ಯಂತ ಕುತೂಹಲ ಹೆಚ್ಚಿಸಿದೆ. ಬಂಗಾಳ ಭವನದೊಳಗೆ ಪೊಲೀಸರು ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಸಿಕ್ಕ ತಕ್ಷಣ, ಸಿಎಂ ಅಂತ ಬ್ಯಾನರ್ಜಿ ಅವರು ತಕ್ಷಣವೇ ದಕ್ಷಿಣ ಅವೆನ್ಯೂದಲ್ಲಿರುವ ತಮ್ಮ ಸಂಸದ ನಿವಾಸದಿಂದ ಹೊರಟು, ತೃಣ ಮೂಲ ಕಾಂಗ್ರೆಸ್ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಬಂಗಾಳ ಭವನಕ್ಕೆ ಆಗಮಿಸಿದರು.
ನಿನ್ನೆ ನಡೆದ ಬಂಗಾಳದ ಭವನದ ಡ್ರಾಮಾದ ಬಳಿಕ ಇಂದು ಮಧ್ಯಾಹ್ನ 3:00ಗೆ ದೆಹಲಿಯ ಬಂಗಾಳದ ಭವನದಲ್ಲಿ ಮಹತ್ವದ ಪತ್ರಿಕಾಗೋಷ್ಠಿ ನಡೆಯಲಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮತದಾರರ ಪಟ್ಟಿಯಿಂದ ಹೊರ ಬಿದ್ದ ಜನರು ನೇರವಾಗಿ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಳ್ಳಲಿದ್ದಾರೆ.
ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರತಿಕ್ರಿಯೆ ಅಸಲಿ ಸತ್ಯ ದೇಶದ ಮುಂದೆ ಹೊರಬೀಳಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು. ಎಸ್ಐಆರ್ ವಿಚಾರ ಈಗಾಗಲೇ ರಾಜ್ಯ ಮತ್ತು ಕೇಂದ್ರ ರಾಜ್ಯ ಕಾರ್ಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದ್ದು, ಇಂದಿನ ಪತ್ರಿಕಾಗೋಷ್ಠಿಯ ಚುನಾವಣೆ ಆಯೋಗದ ಕ್ರಮ ಮತದಾರರ ಹಕ್ಕು ಮತ್ತು ಪ್ರಜಾಪ್ರಭುತ್ವದ ಮೂಲಭೂತ ಪ್ರಶ್ನೆಗಳ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಾಳೆಯ ಕಾರ್ಯಕ್ರಮದ ಮೇಲೆ ಮಾಧ್ಯಮಗಳು ಮತ್ತು ರಾಜಕೀಯ ವಲಯದ ಗಮನ ಕೇಂದ್ರೀಕೃತವಾಗಿದೆ.
ಇನ್ನಷ್ಟು ಓದಿರಿ:
ಮಂಗಳವಾರದ ರಾಶಿಫಲ: ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆದಿದೆ- ಪ್ರೀತಿಗೆ ದೊರೆಯಲಿದೆ ಮಹಾ ಪ್ರತಿಫಳ