<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಹಿಂಡಲಗಾ ಜೈಲಿನಿಂದ ಶಿವಾನಂದ್ ನೀಲಣ್ಣವರ ಬಿಡುಗಡೆ: ಶಿವಂ ಅಸೋಸಿಯೇಟ್ಸ್ ಮಾಲೀಕರಿಗೆ ಜಾಮೀನು

ಹಿಂಡಲಗಾ ಜೈಲಿನಿಂದ ಶಿವಾನಂದ್ ನೀಲಣ್ಣವರ ಬಿಡುಗಡೆ: ಶಿವಂ ಅಸೋಸಿಯೇಟ್ಸ್ ಮಾಲೀಕರಿಗೆ ಜಾಮೀನು
Summary: Shivam Associates owner Shivanand Neelanna has been granted bail by the court and has been released from Hindalaga jail. Read complete information about the background of the case, court order, bail conditions and latest developments here.

Belagavi News:

ಬೆಳಗಾವಿ: ಆರ್ಬಿಐ ನಿಯಮಗಳನ್ನು ಉಲ್ಲಂಘಿಸಿ ಸುಮಾರು 40,700 ಗ್ರಾಹಕರಿಂದ ₹ 2,400 ಕೋಟಿ ಹೂಡಿಕೆ ಸಂಗ್ರಹಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಶಿವಾನಂದ್ ನೀಲಣ್ಣವರ ಅವರಿಗೆ ಮಧ್ಯಂತರ ಜಾಮೀನು ದೊರೆತಿದ್ದು, ಸೋಮವಾರ ಅವರು ಜೈಲಿನಿಂದ ಬಿಡುಗಡೆಯಾದರು.

City Civil and Sessions Court Bengaluru ಮಧ್ಯಂತರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿರುವ Belagavi Central Prisonದಿಂದ ಇಂದು ರಾತ್ರಿ ಶಿವಾನಂದ್ ನೀಲಣ್ಣವರ ಬಿಡುಗಡೆಗೊಂಡರು.

ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕರಾಗಿ ಶಿವಾನಂದ್ ನೀಲಣ್ಣವರ ಅವರನ್ನು ಮೇ 15ರಂದು Malmaruti Police Station ಪೊಲೀಸರು ಬಂಧಿಸಿದ್ದರು. ಬಳಿಕ ಪ್ರಕರಣವನ್ನು Criminal Investigation Department ವರ್ಗಾಯಿಸಲಾಗಿತ್ತು.

Sponsored

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಜೂನ್ 12ರಂದು ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಅಗತ್ಯ ಕಾನೂನು ಪ್ರತಿಕ್ರಿಯೆಗಳು ಪೂರ್ಣಗೊಂಡ ನಂತರ ಇಂದು ಅವರು ಬೆಳಗಾವಿ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದರು.

ಶಿವಂ ಅಸೋಸಿಯೇಟ್ಸ್ ವಿರುದ್ಧ ಸಾವಿರಾರು ಹೂಡಿಕೆದಾರರಿಂದ ಹಣ ಸಂಗ್ರಹಿಸಿ ಆರ್ ಬಿಐ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಸಿಐಡಿ ತನಿಖೆ ಮುಂದುವರೆದಿದೆ.

ಓಂ ನಮಃ ಶಿವಾಯ: ಹಿಂಡಲಗಾ ಜೈಲಿನಿಂದ ಬಿಡುಗಡೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ ಶಿವಾನಂದ್ ನೀಲಣ್ಣವರ ಅವರು, "ಓಂ ನಮಃ ಶಿವಾಯ" ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ಬಯಸುವ ವ್ಯಕ್ತಿ ನಾನು. ಬೇರೆ ಏನು ಹೇಳುವುದಿಲ್ಲ. ನೋ ಕಮೆಂಟ್ಸ್ , ಮತ್ತೆ ಸಿಗುತ್ತೇನೆ" ಎಂದು ಹೇಳಿ ಕಾರಿನಲ್ಲಿ ತೆರೆದಿದರು.

ಆರ್ ಬಿಐ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಶಿವಾನಂದ್ ನೀಲಣ್ಣವರ ಅವರಿಗೆ City Civil and Sessions Court Bengaluru ಷರತ್ತುಬದ್ದ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

Sponsored

ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆ: ಜಾಮೀನಿನ ಷರತ್ತುಗಳ ಪ್ರಕಾರ, ಅವರು ಜೂನ್ 27ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ. ಜೊತೆಗೆ ₹3 ಲಕ್ಷ ಬಾಂಡ್ ಹಾಗೂ ಶ್ಯೂರಿಟಿ ಸಲ್ಲಿಕೆ, ಒಬ್ಬ ಜಾಮೀನುದಾರರನ್ನು ಒದಗಿಸುವುದು, ತನಿಖಾಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವುದು ಹಾಗೂ ದೇಶ ತೊರೆಯದಿರುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ.

ಈ ಷರತ್ತುಗಳಡಿ ಬಿಡುಗಡೆಯಾದ ಅವರು ಇಂದು ರಾತ್ರಿ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಹೊರ ಬಂದಿದ್ದಾರೆ.

ಶಿವಂ ಅಸೋಸಿಯೇಟ್ಸ್ ಮೂಲಕ ನಡೆದ ಹಣ ಹೂಡಿಕೆ ಹಾಗೂ ಠೇವಣಿ ಸಂಗ್ರಹ ಪ್ರಕರಣವು ಕೇವಲ ಒಂದು ಜಿಲ್ಲೆಯ ಮಟ್ಟಕ್ಕೆ ಸೀಮಿತವಾಗಿಲ್ಲ, ಇದು ಅಂತರ್ ಜಿಲ್ಲೆ ಹಾಗೂ ಅಂತಾರಾಜ್ಯ ವ್ಯಾಪ್ತಿಯ ಗಂಭೀರ ಪ್ರಕರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಮೇ ೧೬ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಸಂಸ್ಥೆಯ ಮಾಲೀಕ ಶಿವಾನಂದ್ ನೀಲಣ್ಣವರ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿದೆ ಎಂದು ಹೇಳಿದರು.

Sponsored

ತನಿಖೆ ಮೇಲೆ ಅವರ ಮನೆ ಮತ್ತು ಕಚೇರಿಯಲ್ಲಿ ಅನೇಕ ಬಾಂಡ್ ಗಳು ಹಾಗೂ ಚೆಕ್ ಗಳು ಪತ್ತೆಯಾಗಿದ್ದು, ಅವುಗಳ ಒಟ್ಟು ಮೌಲ್ಯ ₹50 ಕೋಟಿ ಮೀರಿದೆ ಎಂದು ಅವರು ತಿಳಿಸಿದರು. ₹ 35 ಸಾವಿರಕ್ಕೂ ಹೆಚ್ಚು ಜನರಿಂದ ಹಣ ಸಂಗ್ರಹಿಸುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

ಈ ಪ್ರಕರಣದಲ್ಲಿ Karnataka Protection of Interest of Depositors in Financial Establishment Act ನ ಸೆಕ್ಷನ್ 9 ಹಾಗೂ Banning of Unregulated Deposit Schemes Act 2019 ನ ಸೆಕ್ಷನ್ 21(1)(2) ಅಡಿಯಲಿ ಪ್ರಕರಣ ದಾಖಲಿಸಲಾಗಿದೆ.

ಅಧಿಕಾರಿಗಳ ಪ್ರಕಾರ, ಶಿವಾನಂದ್ ನೀಲಣ್ಣವರ ಅವರು ಯಾವುದೇ Securities and Exchange Board of India, Reserve Bank of India ಅಥವಾ ಸಹಕಾರ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸದೆ ಅನಧಿಕೃತವಾಗಿ ಠೇವಣಿಗಳನ್ನು ಸಂಗ್ರಹಿಸಿದ್ದಾರೆ ಎಂಬ ಆರೋಪ ಇದೆ.

ಈ ಪ್ರಕರಣದಲ್ಲಿ ಸಾವಿರಾರು ಹೂಡಿಕೆದಾರರು ಹಣ ಕಳೆದುಕೊಂಡಿರುವ ಶಂಕೆ ಇದ್ದು, ತನಿಖೆ ಮುಂದುವರೆದಿದೆ.

Sponsored

Also Read:

ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಬೆಳವಣಿಗೆ : ಕೃಷ್ಣ ಬೈರೇಗೌಡ ಮತ್ತೆ ಕಾರ್ಯಭಾರ ಸ್ಪೀಕಾರ್

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online