<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

Sleeper Bus Fire Accident: ಟೈರ್ ಸ್ಪೋಟದ ಬಳಿಕ ಖಾಸಗಿ ಬಸ್ ಹೊತ್ತಿ ಉರಿದ ಘಟನೆ, ಪ್ರಯಾಣಿಕರು ಪಾರು

Sleeper Bus Fire Accident: ಟೈರ್ ಸ್ಪೋಟದ ಬಳಿಕ ಖಾಸಗಿ ಬಸ್ ಹೊತ್ತಿ ಉರಿದ ಘಟನೆ, ಪ್ರಯಾಣಿಕರು ಪಾರು
Summary: A private sleeper bus caught fire after a tyre burst. It was completely burnt to ashes in a split second, and the passengers inside barely escaped unhurt. The incident has created an atmosphere of anxiety in the area. There is complete information about road safety, bus fire accidents, and the moments when passengers were killed. A terrible incident took place in Hassan district, a fire accident occurred in a private sleeper bus going from Mangalore to Bangalore.

Belagavi news:

ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಈ ಬಸ್ ದ ಟೈರ್ ಸ್ಪೋಟಗೊಂಡ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ಶಾಂತಿಗ್ರಾಮ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ತಡೆ ರಾತ್ರಿ ನಡೆದಿದೆ.

ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಬಸ್ ನಲ್ಲಿದ್ದ ಒಟ್ಟು 36 ಪ್ರಯಾಣಿಕರು ಪ್ರಾಣಾ ಪ್ರಾಯದಿಂದ ಪಾರಾಗಿದ್ದಾರೆ. ಆದರೆ, ಪ್ರಯಾಣಿಕರ ಲಗೇಜ್ ಹಾಗೂ ಮೊಬೈಲ್ ಸೇರಿದಂತೆ ಹಲವು ವಸ್ತುಗಳು ಬೆಂಕಿ ಗಾಹುತಿಯಾಗಿವೆ. ಶಾಂತಿಗ್ರಾಮ ಟೋಲ್ ಗೇಟ್ ಬಳಿ ಈ ಘಟನೆ ಸಂಭವಿಸಿದ್ದು, ಕೂದಲೆಳೆ ಅಂತರದಲ್ಲಿ ದೊಡ್ಡ ದುರಂತ ತಪ್ಪಿದೆ.

ಪ್ರಯಾಣಿಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭೀಕರ ದುರಂತ:

ಟೈರ್ ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಸಮಯಕ್ಕೆ ಸರಿಯಾಗಿ ಗಮನಿಸಿದ ಪ್ರಯಾಣಿಕನೊಬ್ಬನು ಚುರುಕುತನದಿಂದ ಭಾರಿ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ. ಆರಂಭದಲ್ಲಿ ಟೈರ್ ಭಾಗದಿಂದ ಸಣ್ಣ ಶಬ್ದ ಕೇಳಿ ಬಂದಿದ್ದು, ಬಸ್ ನಲ್ಲಿದ್ದ ಪ್ರಯಾಣಿಕನ್ನೊಬ್ಬ ಕಿಟಕಿಯ ಪರದೆಯನ್ನು ಧರಿಸಿ ನೋಡಿದಾಗ ಚಕ್ರಕ್ಕೆ ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡು ಬಂದಿದೆ.

ತಕ್ಷಣವೇ ಅವರು ಚಾಲಕ ಹಾಗೂ ಇತರ ಪ್ರಯಾಣಿಕರಿಗೆ ವಿಷಯ ತಿಳಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಾಲಕ ತಕ್ಷಣ ಬಸ್ ಅನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾರೆ. ಈ ವೇಳೆ ನಿದ್ದೆಯಲ್ಲಿದ್ದ ಪ್ರಯಾಣಿಕರು ಎಚ್ಚರಗೊಂಡು ತಕ್ಷಣವೇ ಬಸ್ ನಿಂದ ಇಳಿದು ತಮ್ಮ ಜೀವ ಉಳಿಸಿಕೊಂಡಿದ್ದಾರೆ.

ಆದರೆ, ಈ ಅವಘಡದಲ್ಲಿ ಪ್ರಯಾಣಿಕರ ಲಗೇಜ್ ಹಾಗೂ ಕೆಲ ಬೆಲೆಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಚಾಲಕ ಮತ್ತು ಪ್ರಯಾಣಿಕನ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿದಂತಾಗಿದೆ.

ಅಗ್ನಿಶಾಮಕ ದಳದ ತ್ವರಿತ ಕಾರ್ಯಾಚರಣೆ: ಬೆಂಕಿ ನಂದಿಸಿದರು ಸಂಪೂರ್ಣ ಸುಟ್ಟು ಹೋಯಿತು ಸ್ಲೀಪರ್ ಬಸ್

ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಆದರೆ ಅವರು ಅಪಘಾತ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆಗೆ ಖಾಸಗಿ ಸ್ಲೀಪರ್ ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿತ್ತು.

ಸ್ಥಳೀಯರ ಸಹಕಾರದೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು, ಬಸ್ ಈಗಾಗಲೇ ಭಾರಿ ಹಾನಿಗೊಳಗಾಗಿತ್ತು. ಈ ನಡುವೆ, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಮತ್ತೊಂದು ಬಸ್ ಮೂಲಕ ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು.

ಈ ಘಟನೆ ಶಾಂತಿ ಗ್ರಾಂ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ದೇವರಗುಡ್ಡ ಗ್ರಾಮದ ಬಳಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಾರಿಗೆ ಬಸ್ ಹೊತ್ತಿ ಉರಿದಿತ್ತು. ಬಸ್ ಬೆಂಗಳೂರಿನಿಂದ ಗದಗಕ್ಕೆ ಹೊರಟಿತ್ತು. ಬಸ್ ನಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಸಿಬ್ಬಂದಿ ಹರಸಹಾಸಪಟ್ಟಿದ್ದರು. ಚಾಲಕ ಪಕ್ಕೀರಪ್ಪ ಅವರು ಸಮಯ ಪ್ರಜ್ಞೆಯಿಂದ 17 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು.

Also Read:

ಬೆಳಗಾವಿಯಲ್ಲಿ ಆರ್ ಬಿಐ ನಿಯಮ ಮೀರಿ ಠೇವಣಿ ಸಂಗ್ರಹಣೆ: ಉದ್ಯಮಿ ಶಿವಾನಂದ್ ನೀಲಣ್ಣವರ ಅರೆಸ್ಟ್

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online