<?= $pageTitle ?>
Logo
ಮುಖಪುಟ ಓದುವುದು ಕೇಳು
Trending

KRS ಡ್ಯಾಮ್ ಹತ್ತಿರ ಮಣ್ಣು ಪರೀಕ್ಷೆ ವಿವಾದ : ಖಾಸಗಿ ಕಂಪನಿ ವಿರುದ್ಧ ರೈತರ ಪ್ರತಿಭಟನೆ

KRS ಡ್ಯಾಮ್ ಹತ್ತಿರ ಮಣ್ಣು ಪರೀಕ್ಷೆ ವಿವಾದ : ಖಾಸಗಿ ಕಂಪನಿ ವಿರುದ್ಧ ರೈತರ ಪ್ರತಿಭಟನೆ
Summary: Farmers have strongly opposed the allegation that a private company conducted soil testing at KRS dam without permission. Here is the complete information on dam safety and this controversy.

Belagavi News:

ಐತಿಹಾಸಿಕ ಕೃಷ್ಣರಾಜಸಾಗರ ಅಣೆಕಟ್ಟು ದೇಶದಲ್ಲಿ ಅನುಮತಿ ಪಡೆಯದೆ ಖಾಸಗಿ ಕಂಪನಿಯೊಂದು ಮಣ್ಣು ಪರೀಕ್ಷೆ ನಡೆಸಿದೆ ಎಂಬ ಆರೋಪ ಕೇಳಿ ಬಂದಿದ್ದು, ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಅಣೆಕಟ್ಟಿನ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆದ ಮಣ್ಣು ಪರೀಕ್ಷೆ ಚಟುವಟಿಕೆ ಕುರಿತು ಮಾಹಿತಿ ತಿಳಿದ ರೈತರು ಸ್ಥಳಕ್ಕೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಮುಖ ಜಲಾಶಯ ವಾಗಿರುವ ಕೆಆರ್‌ಎಸ್‌ ಡ್ಯಾಮ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಅಥವಾ ತಾಂತ್ರಿಕ ಪರೀಕ್ಷೆ ನಡೆಸುವ ಮೊದಲು ಸಂಬಂಧಿತ ಇಲಾಖೆಗಳ ಅನುಮತಿ ಅಗತ್ಯ ಎಂದು ರೈತರು ಹೇಳಿದ್ದಾರೆ.

ಕೆ ಆರ್ ಎಸ್ ಅಣೆಕಟ್ಟು ಮಂಡ್ಯ ಮಾತ್ರವಲ್ಲದೆ ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರಮುಖ ನೀರಿನ ಮೂಲವಾಗಿದೆ. ಹೀಗಾಗಿ ಅಣೆಕಟ್ಟಿನ ಸುರಕ್ಷತೆ, ಪರಿಸರ ಮತ್ತು ಭದ್ರತೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ.

ಅನುಮತಿ ಇಲ್ಲದೆ ಮಣ್ಣು ಪರೀಕ್ಷೆ ನಡೆಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಹಾಗೂ ಸಂಬಂಧ ಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ ಸ್ಪಷ್ಟನೆ ನೀಡಬೇಕೆಂಬ ಒತ್ತಾಯವು ಕೇಳಿ ಬರುತ್ತಿದೆ.

ಕೆಆರ್‌ಎಸ್‌ ಡ್ಯಾಮ್ ಪ್ರದೇಶದಲ್ಲಿನ ಈ ಬೆಳವಣಿಗೆ ಇದೀಗ ಸ್ಥಳೀಯರಲ್ಲಿ ಹಾಗೂ ರೈತ ಸಮುದಾಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕೆಆರ್‌ಎಸ್‌ ಜಲಾಶಯದ ಆವರಣದಲ್ಲಿ ಅನುಮತಿ ಇಲ್ಲದೆ ಮಣ್ಣು ಪರೀಕ್ಷೆ ? ರೈತರಲ್ಲಿ ಆತಂಕ :

ಮಂಡ್ಯ ಜಿಲ್ಲೆಯ ಪ್ರಮುಖ ಜಲಾಶಯವಾಗಿರುವ ಕೃಷ್ಣರಾಜಸಾಗರ ಡ್ಯಾಮ್ ಆವರಣದಲ್ಲಿ ಖಾಸಗಿ ಕಂಪನಿಯೊಂದು ಅನುಮತಿ ಪಡೆಯದೆ ಮಣ್ಣು ಪರೀಕ್ಷೆ ನಡೆಸುತ್ತಿದೆ ಎಂಬ ಆರೋಪ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಕಾವೇರಿ ನೀರಾವರಿ ನಿಗಮದ ಅನುಮತಿ ಇಲ್ಲದೆ ಜಲಾಶಯದ ವ್ಯಾಪ್ತಿಯಲ್ಲಿ ಯಂತ್ರಗಳನ್ನು ಬಳಸಿ ಮಣ್ಣು ಪರೀಕ್ಷೆ ನಡೆಸಲಾಗುತ್ತಿದೆ ಎನ್ನಲಾಗಿದ್ದು, ಈ ಬೆಳವಣಿಗೆ ಸ್ಥಳೀಯರು ಹಾಗೂ ಆ ರೈತರ ಆತಂಕಕ್ಕೆ ಕಾರಣವಾಗಿದೆ.

ಕೆ ಆರ್ ಎಸ್ ಆಣೆಕಟ್ಟು ರಾಜ್ಯದ ಪ್ರಮುಖ ನೀರಿನ ಮೂಲವಾಗಿದ್ದು, ಅದರ ಸುರಕ್ಷತೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳನ್ನು ನಿಯಮಾನುಸಾರ ನಡೆಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಅನುಮತಿ ಇಲ್ಲದೆ ಇಂತಹ ತಾಂತ್ರಿಕ ಪರೀಕ್ಷೆ ನಡೆಸಿರುವುದು ಸರಿಯಲ್ಲ ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸ್ಪಷ್ಟ ಮಾಹಿತಿ ಮಾಹಿತಿ ನೀಡಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ. ಜಲಾಶಯದ ಸುರಕ್ಷತೆ, ಪರಿಸರ ಮತ್ತು ನೀರಿನ ನಿರ್ವಹಣೆಯ ದೃಷ್ಟಿಯಿಂದ ಯಾವುದೇ ಚಟುವಟಿಕೆಗಳನ್ನು ಪಾರದರ್ಶಕತೆ ಅಗತ್ಯ ಎಂದು ಸ್ಥಳೀಯರು ಹೇಳಿದ್ದಾರೆ.

ಕೆಆರ್ ಎಸ್ ಡ್ಯಾಮ್ ನಲ್ಲಿ ಮಣ್ಣು ಪರೀಕ್ಷೆ ವಿವಾದ - BWSSB ಆರನೇ ಹಂತದ ಯೋಜನೆ ಕಾಮಗಾರಿಗಾಗಿ ಪರೀಕ್ಷೆ ? :

ಕೆ ಆರ್ ಎಸ್ ಜಲಾಶಯದ ಆವರಣದಲ್ಲಿ ನಡೆಯುತ್ತಿರುವ ಮಣ್ಣು ಪರೀಕ್ಷೆ ವಿವಾದಕ್ಕೆ ಹೊಸ ಬೆಳವಣಿಗೆ ಸಿಕ್ಕಿದೆ. ಬೆಂಗಳೂರು ನೀರಿನ ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಯ 6ನೇ ಹಂತದ ಯೋಜನೆ ಕಾಮಗಾರಿಗೆ ಟೆಂಡರ್ ಪಡೆದಿರುವ ಖಾಸಗಿ ಕಂಪನಿಯೇ ಈ ಮಣ್ಣು ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಮಾಹಿತಿ ಪ್ರಕಾರ, ಯೋಜನೆಯ ತಾಂತ್ರಿಕ ಅಗತ್ಯಗಳ ಭಾಗವಾಗಿ ಕಂಪನಿ, ಮಣ್ಣಿನ ಗುಣಮಟ್ಟ ಮತ್ತು ಭೂಮಿಯ ತಿಥಿಯನ್ನು ಪರಿಶೀಲಿಸುತ್ತಿದೆ ಎನ್ನಲಾಗಿದೆ. ಆದರೆ, ಕಾವೇರಿ ನೀರಾವರಿ ನಿಗಮದ ಅನುಮತಿ ಪಡೆದಿದ್ದೆ ಅಥವಾ ಇಲ್ಲವೇ ಎಂಬ ಪ್ರಶ್ನೆ ಇದೀಗ ಚರ್ಚೆಗೆ ಕಾರಣವಾಗಿದೆ.

ಅನುಮತಿ ಪ್ರಕ್ರಿಯೆ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸದೆ ಜಲಾಶಯ ವ್ಯಾಪ್ತಿಯಲ್ಲಿ ಯಾವುದೇ ಪರೀಕ್ಷೆ ನಡೆಸಬಾರದು ಎಂದು ರೈತರು ಮತ್ತು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ಪ್ರಮುಖ ಜಲಾಶಯವಾಗಿರುವ ಕೆಆರ್ ಎಸ್ ಡ್ಯಾಮ್ ಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳು ಪಾರದರ್ಶಕವಾಗಿ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸಂಬಂಧಿತ ಇಲಾಖೆಗಳು ಸ್ಪಷ್ಟನೆ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದು, ಮಣ್ಣು ಪರೀಕ್ಷೆ ನಡೆಸಲು ಅಗತ್ಯ ಅನುಮತಿಗಳನ್ನು ಪಡೆದಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.

KRS ಡ್ಯಾಮ್ ನೀರು ಪೂರೈಕೆ ಯೋಜನೆಗೆ ರೈತರ ವಿರೋಧ - ಅನುಮತಿ ಇಲ್ಲದ ಮಣ್ಣು ಪರೀಕ್ಷೆ ಆರೋಪಕ್ಕೆ ಆಕ್ರೋಶ :

ಕೆಆರ್ ಎಸ್ ಜಲಾಶಯದಿಂದ ನೀರು ಪೂರೈಕೆ ಮಾಡುವ ಪ್ರಸ್ತಾವಿತ ಯೋಜನೆಗೆ ಸಂಬಂಧಿಸಿದೆ ಬೆಳವಣಿಗೆಗಳು ಮಂಡ್ಯ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿವೆ. ಯೋಜನೆಯ ಭಾಗವಾಗಿ ನಡೆಯುತ್ತಿದೆ ಎನ್ನಲಾದ ಮಣ್ಣು ಪರೀಕ್ಷೆಗಳಗೆ ಅಗತ್ಯ ಅನಧಿಕೃತ ಅನುಮತಿ ಇಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ರೈತರು ಮತ್ತು ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಸ್ಥಳೀಯರ ಪ್ರಕಾರ, ಜಲಾಶಯದ ವ್ಯಾಪ್ತಿಯಲ್ಲಿ ಯಾವುದೇ ಇಲಾಖೆಯ ಸ್ಪಷ್ಟ ಅನುಮತಿ ಇಲ್ಲದೆ ಖಾಸಗಿ ಕಂಪನಿಯೊಂದು ಮಣ್ಣು ಪರೀಕ್ಷೆ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದ ಪ್ರಮುಖ ನೀರಿನ ಮೂಲವಾಗಿರುವ ಕೆಆರ್‌ಎಸ್‌ ಡ್ಯಾಮ್ ಗೆ ಸಂಬಂಧಿಸಿದ ಯಾವುದೇ ಕಾಮಗಾರಿ ಅಥವಾ ತಾಂತ್ರಿಕ ಪರಿಶೀಲನೆ ಕಾನೂನು ಬದ್ಧ ಅನುಮತಿ ಹಾಗೂ ಪಾರದರ್ಶಕ ಪ್ರಕ್ರಿಯೆಯ ಮೂಲಕವೇ ನಡಿಯಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಯೋಜನೆಗೆ ಪೂರ್ವಸಿದ್ಧತೆಯ ಭಾಗವಾಗಿ ಮಣ್ಣು ಪರೀಕ್ಷೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಹೊರ ಬಂದಿರುವ ಬೆನ್ನಲ್ಲೇ, ಈ ಕಾಮಗಾರಿಗೆ ಅಗತ್ಯ ಅನುಮತಿಗಳನ್ನು ಪಡೆದಿದ್ದಾರೆಯೇ? ಎಂಬ ಪ್ರಶ್ನೆಯನ್ನು ರೈತರು ಎತ್ತಿದ್ದಾರೆ. ಸಂಬಂಧಿತ ಇಲಾಖೆಗಳು ಈ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು ಮತ್ತು ಅನುಮತಿ ಪ್ರಕ್ರಿಯೆಯ ವಿವರಗಳನ್ನು ಬಹಿರಂಗಪಡಿಸಬೇಕು ಎಂಬ ಒತ್ತಾಯವು ಕೇಳಿಬಂದಿದೆ.

ಕೆ ಆರ್ ಎಸ್ ಡ್ಯಾಮ್ ಸುರಕ್ಷತೆ, ಕಾವೇರಿ ನೀರಿನಲ್ಲಿ ನಿರ್ವಹಣೆ ಹಾಗೂ ರೈತರ ಹಿತಾಸಕ್ತಿಗೆ ಸಂಬಂಧಿಸಿದ ಯಾವುದೇ ಯೋಜನೆಗಳನ್ನು ಪಾರದರ್ಶಕವಾಗಿ ಜಾರಿಗೊಳಿಸಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿದ್ದು, ಈ ವಿವಾದದ ಕುರಿತು ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳ ಪ್ರತಿಕ್ರಿಯೆಯತ್ತ ಎಲ್ಲರ ಗಮನ ನೆಟ್ಟಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online