Belagavi News:
ವಾಷಿಂಗ್ಟನ್ (ಅಮೆರಿಕ): ಯುದ್ದಾನಂತರದ ಪುನರ್ ನಿರ್ಮಾಣಕ್ಕಾಗಿ ಇರಾನ್ ಭಾರಿ ಪ್ರಮಾಣದ ಪರಿಹಾರ ಮೊತ್ತವನ್ನು ಬೇಡಿಕೆ ಇಟ್ಟಿರುವುದಾಗಿ ವರದಿಯಾಗಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ರಕ್ಷಣಾ ಇಲಾಖೆಯು ಸುಮಾರು 80 ಬಿಲಿಯನ್ ಡಾಲರ್ (ಅಂದಾಜು ₹6.7 ಲಕ್ಷ ಕೋಟಿ) ಬಿಡುಗಡೆ ಮಾಡುವ ಕುರಿತು ಸಂಸತ್ತಿನ ಅನುಮತಿ ಕೋರಿದೆ ಎನ್ನಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಅವಧಿಯಲ್ಲಿ ಆರಂಭವಾದ ಸೈನಿಕ ಕ್ರಮಗಳಿಂದ ಈಗಾಗಲೇ ಕೋಟ್ಯಂತರ ಡಾಲರ್ ವೆಚ್ಚವಾಗಿರುವ ಹಿನ್ನೆಲೆ, ಈ ಹೊಸ ಪರಿಹಾರ ಪ್ರಸ್ತಾವನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾನೂನು ತಜ್ಞರು ಹಾಗೂ ಹಲವು ಸಂಸದರು ಇಷ್ಟು ದೊಡ್ಡ ಮೊತ್ತದ ನೆರವಿಗೆ ವಿರೋಧ ವ್ಯಕ್ತಪಡಿಸಿದ್ದು, ತೆರಿಗೆದಾರರ ಹಣವನ್ನು ವಿದೇಶಿ ಪರಿಹಾರಕ್ಕೆ ಬಳಸುವ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ಇನ್ನೊಂದೆಡೆ, ವೈಟ್ ಹೌಸ್ ನ ಮ್ಯಾನೇಜ್ಮೆಂಟ್ ಮತ್ತು ಬಜೆಟ್ ಕಚೇರಿಯು ಈವರೆಗೆ ಕಾಂಗ್ರೆಸ್ ಗೆ ಯಾವುದೇ ಅಧಿಕೃತ ಅನುದಾನ ಪ್ರಸ್ತಾವನೆ ಸಲ್ಲಿಸಿಲ್ಲ. ಆದಾಗ್ಯೂ, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಈ ವಿಷಯವಾಗಿ ಸರಣಿ ಸಭೆಗಳನ್ನು ನಡೆಸುತ್ತಿರುವುದಾಗಿ ತಿಳಿದುಬಂದಿದೆ.
ಕಳೆದ ವಾರವೇ ಉನ್ನತ ಮಟ್ಟದ ಉಪ ರಕ್ಷಣಾ ಕಾರ್ಯದರ್ಶಿಯೊಬ್ಬರ ಸೆನೆಟರ್ ಗಳಿಗೆ ಇರಾನ್ ನ ಪರಿಹಾರ ಬೇಡಿಕೆ ಕುರಿತ ಮಾಹಿತಿ ನೀಡಿರುವುದಾಗಿ ವರದಿಗಳು ಹೇಳಿವೆ. ಈ ಬೆಳವಣಿಗೆಗಳು ಅಮೆರಿಕ- ಇರಾನ್ ಸಂಬಂಧಗಳು ಮತ್ತು ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿಯ ಮೇಲೆ ಮಹತ್ವದ ಪರಿಣಾಮ ಬೀರುವ ಸಾದ್ಯತೆ ಇದೆ.
ಇರಾನ್ ಗೆ ಯುದ್ಧ ಪರಿಹಾರವಾಗಿ 80 ಬಿಲಿಯನ್ ಡಾಲರ್ ( ಅಂದಾಜು ₹6.7 ಲಕ್ಷ ಕೋಟಿ) ನೆರವು ನೀಡುವ ಪ್ರಸ್ತಾವನೆ ಅಮೆರಿಕ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪೆಂಟಗನ್ ಮುಂದಿರಿಸಿರುವ ಈ ಬೇಡಿಕೆಗೆ ಹಲವು ಸಂಸದರು ಮತ್ತು ಕಾನೂನು ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ.
ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದಿಂದ ಇರಾನ್ ನೊಂದಿಗೆ ಡೊನಾಲ್ಡ್ ಟ್ರಂಪ್ ಆಡಳಿತ ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ಕೂಡ ಪ್ರಶ್ನೆಗಳು ಕೇಳಿಬರುತ್ತಿವೆ. ಇಷ್ಟು ದೊಡ್ಡ ಮೊತ್ತದ ಪರಿಹಾರ ಪ್ಯಾಕೇಜ್, ಅಮೆರಿಕದ ಹಣಕಾಸು ಮತ್ತು ವಿದೇಶಾಂಗ ನೀತಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ ಅಮೆರಿಕದ ಉಪರಕ್ಷಣಾ ಕಾರ್ಯದರ್ಶಿ ಸ್ಟೀಫನ್ ಫೀನ್ ಬರ್ಗ್ ಕಳೆದ ವಾರ ಹಲವು ಸೆನೆಟರ್ ಗಳೊಂದಿಗೆ ದೂರುವಾಣಿ ಮೂಲಕ ಚರ್ಚೆ ನಡೆಸಿದ್ದಾರೆ. 80 ಬಿಲಿಯನ್ ಡಾಲರ್ ಮೊತ್ತದ ಪ್ರಸ್ತಾವನೆಯನ್ನು ವೈಟ್ ಹೌಸ್ ನ ಮ್ಯಾನೇಜ್ಮೆಂಟ್ ಮತ್ತು ಬಜೆಟ್ ಕಚೇರಿಗೆ ಕಳುಹಿಸಲಾಗಿದೆ ಎಂದು ಅವರು ಸಂಸತ್ತಿನ ಸಮಿತಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಆದಾಗ್ಯೂ, ಈ ಬೆಳವಣಿಗೆಗಳ ಕುರಿತು ಸ್ಪಷ್ಟನೆ ನೀಡಲು ಪೆಂಟಗನ್ ತಕ್ಷಣ ಪ್ರತಿಕ್ರಿಯಿಸಿಲ್ಲ. ಪ್ರಸ್ತಾವನೆಗೆ ಕಾಂಗ್ರೆಸ್ ನ ಅನುಮೋದನೆ ದೊರೆಯುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಅಮೆರಿಕದ ರಾಜಕೀಯದಲ್ಲಿ ಪ್ರಮುಖ ಚರ್ಚಾ ವಿಷಯವಾಗುವ ಸಾಧ್ಯತೆ ಇದೆ.
ಈ ವರ್ಷ ರಕ್ಷಣಾ ಕೇಂದ್ರಕ್ಕೆ ದಾಖಲೆಯ 1.5 ಟ್ರಿಲಿಯನ್ ಡಾಲರ್ ಕೋರಿದ ಟ್ರಂಪ್: ಇರಾನ್ ಗೆ ಯುದ್ಧ ಪರಿಹಾರದ ಜೊತೆಗೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ 1.5 ಟ್ರಿಲಿಯನ್ ಡಾಲರ್ ಮೊತ್ತವನ್ನು ನೀಡುವಂತೆ ಸಂಸತ್ ಮುಂದೆ ಮನವಿ ಮಾಡಿದ್ದಾರೆ. ಇದರ ಅನುಮೋದನೆಗಾಗಿ ರಿಪಬ್ಲಿಕ್ ಮತ್ತು ಡೆಮಾಕ್ರೆಟಿಕ್ ಪಕ್ಷಗಳ ಬೆಂಬಲದ ಅಗತ್ಯವಿರುತ್ತದೆ. ಶೀಘ್ರದಲ್ಲಿ ಅವರ ಮತದಾನ ಮೂಲಕ ಹೆಚ್ಚುವರಿ $350 ಬಿಲಿಯನ್ ಪಡೆಯಲು ಯೋಜಿಸಿದ್ದಾರೆ.
ರಕ್ಷಣಾ ಇಲಾಖೆಯು ಕೋರುತ್ತಿರುವ ಈ ಮೊತ್ತವು, ಕಾರ್ಯದರ್ಶಿ ಹೆಗ್ಸೆತ್ ಕಳೆದ ತಿಂಗಳು ಸಂಸತ್ತಿಗೆ ನೀಡಿದ ಸಾಕ್ಷ್ಯದ ಅವಧಿಯಲ್ಲಿ ಅಂದಾಜಿಸಿದ್ದ $29 ಬಿಲಿಯನ್ ಯುದ್ಧದ ವೆಚ್ಚಕ್ಕಿಂತ ತೀರಾ ಹೆಚ್ಚಾಗಿದೆ. ಆ ಮೊತ್ತದ ಬಹುಪಾಲು ಮದ್ದು ಗುಂಡುಗಳನ್ನು ಬದಲಾಯಿಸಲು ಮತ್ತು ಉಪಕರಣಗಳನ್ನು ದುರಸ್ತಿ ಮಾಡಲು ಸಂಬಂಧಿಸಿದ್ದಾಗಿತ್ತು. ಆದರೆ ನಿಯೋಜಿತ ಪಡೆಗಳನ್ನು ಉಳಿಸಿಕೊಳ್ಳಲು ಕಾರ್ಯಾಚರಣೆಯ ವೆಚ್ಚವನ್ನು ಸಹ ಅದು ಒಳಗೊಂಡಿತ್ತು. ಆ ಅಂದಾಜಿನಲ್ಲಿ ಈ ವಲಯದಲ್ಲಿ ಹಾನಿಗೊಳಗಾದ ಅಮೆರಿಕದ ಮಿಲಿಟರಿ ನೆಲೆಗಳನ್ನು ದುರಸ್ತಿ ಮಾಡುವ ಅಥವಾ ಮರು ನಿರ್ಮಾಣ ಮಾಡುವ ವೆಚ್ಚ ಸೇರಿರಲಿಲ್ಲ.
ಈ ಬಾರಿ ವೆಚ್ಚದ ಪ್ರಸ್ತಾವನೆ ಅಮೆರಿಕದ ಹಣಕಾಸು ಮತ್ತು ರಕ್ಷಣಾ ನೀತಿಗಳ ಕುರಿತು ಹೊಸ ಚರ್ಚೆಗೆ ಕಾರಣವಾಗಿದ್ದು, ಕಾಂಗ್ರೆಸ್ ನಲ್ಲಿ ಇದರ ಭವಿಷ್ಯ ಏನಾಗಲಿದೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ.
Also Read:
ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ : ಕನಕಪುರ ದೇಗುಲ ಮಠದ ಇತಿಹಾಸದಲ್ಲಿ ಮಹತ್ವದ ಕ್ಷಣ