belagavi news :
ಲಡಾಖ್ ನ ಎಂಜಿನಿಯರ್ ಹಾಗೂ ಶಿಕ್ಷಣ ಸುಧಾರಣಾ ಹೋರಾಟಗಾರ ಸೋನಂ ವಾಂಗ್ಚುಕ್ ಅವರು ವಂದೇ ಭಾರತ್ ಎಕ್ಸ್ ಪ್ರೆಸ್ ನಲ್ಲಿ ನವದೆಹಲಿಯಿಂದ ಲಡಾಖ್ ಗೆ ಪ್ರಯಾಣಿಸಿ, ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಭಾರತೀಯ ರೈಲ್ವೆಯ ವೇಗವಾದ ಅಭಿವೃದ್ಧಿ, ಆಧುನಿಕ ಸೌಲಭ್ಯಗಳು ಹಾಗೂ ಮೂಲಸೌಕರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಪ್ರಯಾಣದ ವೀಡಿಯೊದಲ್ಲಿ ಮಾತನಾಡಿದ ವಾಕ್ಚುಂಕ್, "ಈ ಪ್ರಯಾಣ ಅತ್ಯಂತ ಸುಂದರವಾಗಿತ್ತು. ಭಾರತೀಯ ರೈಲ್ವೆಯ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ. ಸರ್ಕಾರ ನೀಡಿದ ಭರವಸೆಗಳು ಸಾಕಾರವಾಗುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ" ಎಂದು ಹೇಳಿದ್ದಾರೆ.
ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಗಮನ ಸೆಳೆದಿದ್ದು, ಅನೇಕರು ಭಾರತೀಯ ರೈಲ್ವೆಯ ಆಧುನೀಕರಣ ಮತ್ತು ವಂದೇ ಭಾರತ್ ರೈಲುಗಳ ಕಾರ್ಯ ಕ್ಷಮತೆಯನ್ನು ಮೆಚ್ಚಿದ್ದಾರೆ. ಮತ್ತೊಂದೆಡೆ, ಕೆಲವರು ವಾಂಗ್ಚುಕ್ ಅವರ ಹೇಳಿಕೆಯನ್ನು ವಿವಿಧ ದೃಷ್ಟಿಕೋನಗಳಿಂದ ಚರ್ಚಿಸುತ್ತಿದ್ದಾರೆ.
ವಂದೇ ಭಾರತ್ ಎಕ್ಸ್ ಪ್ರೆಸ್ ದೇಶದ ಪ್ರಮುಖ ನಗರಗಳನ್ನು ವೇಗವಾಗಿ ಸಂಪರ್ಕಿಸುವ ಅತ್ಯಾಧುನಿಕ ರೈಲು ಸೇವೆಯಾಗಿದ್ದು, ಆರಾಮದಾಯಕ ಪ್ರಯಾಣ, ಸುಧಾರಿತ ಸೌಲಭ್ಯಗಳು ಮತ್ತು ಸಮಯ ಪಾಲನೆಯಿಂದ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸೋನಂ ವಾಂಗ್ಚುಕ್ ಅವರ ಈ ಪ್ರಶಂಸೆ ಭಾರತೀಯ ರೈಲ್ವೆಯ ಅಭಿವೃದ್ಧಿಗೆ ಮತ್ತಷ್ಟು ಗಮನ ಸೆಳೆಯುವಂತಾಗಿದೆ.
ಒಂದೇ ಭಾರತ್ ಎಕ್ಸ್ಪ್ರೆಸ್ ನಲ್ಲಿ ದೆಹಲಿಯಿಂದ ಶ್ರೀನಗರ ಮಾರ್ಗವಾಗಿ ಪ್ರಯಾಣಿಸಿದ ಶಿಕ್ಷಣ ಸುಧಾರಣಾ ಹೋರಾಟಗಾರ ಸೋನಂ ವಾಂಗ್ಚುಕ್, ಭಾರತೀಯ ರೈಲ್ವೆಯ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ತಮ್ಮ ಪ್ರಯಾಣದ ಅನುಭವವನ್ನು ವಿಡಿಯೋ ಮೂಲಕ ಹಂಚಿಕೊಂಡಿರುವ ಅವರು, ರೈಲು ಪ್ರಯಾಣವೇ ತಮ್ಮ ಅತ್ಯಂತ ನೆಚ್ಚಿನ ಹಾಗೂ ಆದ್ಯತೆಯ ಸಾರಿಗೆ ವಿಧಾನ ಎಂದು ಹೇಳಿದ್ದಾರೆ.
ದೆಹಲಿ ಶ್ರೀನಗರ ನಡುವಿನ ಒಂದೇ ಭಾರತ್ ಎಕ್ಸ್ಪ್ರೆಸ್ ಸೇವೆ ಅತ್ಯಂತ ಸುಂದರವಾಗಿದೆ. ಈ ಪ್ರಯಾಣ ನಿಜಕ್ಕೂ ಆಹ್ಲಾದಕರ ಅನುಭವ ನೀಡಿದೆ. ಭಾರತೀಯ ರೈಲ್ವೆ ಅಭಿವೃದ್ಧಿ ಮತ್ತು ಮೂಲ ಸೌಕರ್ಯವನ್ನು ಕಂಡು ಹೆಮ್ಮೆ ಅನಿಸುತ್ತದೆ. ಸರ್ಕಾರದ ಭರವಸೆಗಳು ಕಾರ್ಯರೂಪಕ್ಕೆ ಬರುತ್ತಿರುವುದನ್ನು ನೋಡಲು ಸಂತೋಷವಾಗುತ್ತಿದೆ" ಎಂದು ವಾಂಗ್ಚುಕ್ ವಿಡಿಯೋದಲ್ಲಿ ಹೇಳಿದ್ದಾರೆ.
ಇದೇ ವೇಳೆ, ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ತಾವು ನಡೆಸಿದ ಉಪವಾಸ ಸತ್ಯಾಗ್ರಹವನ್ನು ನೆನಪಿಸಿಕೊಂಡ ಅವರು, ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ಅಗತ್ಯವಿದೆ ಎಂದು ಒತ್ತಾಯಿಸಿದರು.
"ಪರೀಕ್ಷಾ ಸುಧಾರಣೆಗೆ ಸಂಬಂಧಿಸಿದ ಹೊಸ ಸಂಸತ್ ಮಸೂದೆಯಿಂದ ನೈಜ ಬದಲಾವಣೆಗಳು ಆಗಬೇಕು. ವಿದ್ಯಾರ್ಥಿಗಳೊಂದಿಗೆ ಕೇಂದ್ರ ಸರ್ಕಾರ ನೀಡಿರುವ ಬದ್ಧತೆಯನ್ನು ಗೌರವಿಸಬೇಕು. ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ fir ಗಳನ್ನು ಹಿಂತೆಗೆದುಕೊಳ್ಳಬೇಕು. ಯುವಕರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ವಿದ್ಯಾರ್ಥಿಗಳು ಮತ್ತು ಬಿಜೆಪಿಗೆ ನೀಡಿದ್ದ ಲಿಖಿತ ಭರವಸೆಗಳನ್ನು ಕೇಂದ್ರ ಸರ್ಕಾರ ಶೀಘ್ರವೇ ಈಡೇರಿಸಬೇಕು" ಎಂದು ಅವರು ಆಗ್ರಹಿಸಿದರು.
ವಾಂಗ್ಚುಕ್ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಒಂದೆಡೆ ಭಾರತೀಯ ರೈಲ್ವೆಯ ಅಭಿವೃದ್ಧಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಪರೀಕ್ಷಾ ಸುಧಾರಣೆ ಮತ್ತು ವಿದ್ಯಾರ್ಥಿಗಳ ಬೇಡಿಕೆಗಳ ಕುರಿತು ಅವರ ಅಭಿಪ್ರಾಯಗಳು ಗಮನ ಸೆಳೆಯುತ್ತಿವೆ.
ಸಿಜೆಪಿ ಪ್ರತಿಭಟನೆಗೆ ತೆರೆ; ಉಪವಾಸದ ಹೋರಾಟ ನೆನಪಿಸಿದ ವಾಂಗ್ಚುಕ್
ಧರ್ಮೇಂದ್ರಪ್ರಧಾನ ಅವರ ರಾಜೀನಾಮೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ ಸುಧಾರಣೆಗಳನ್ನು ಶಿಫಾರಸ್ಸು ಮಾಡಲು ತಜ್ಞರ ಸಮಿತಿ ರಚನೆ, ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದು ಹಾಗೂ ಚಳುವಳಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳ ಇರುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡ ನಂತರ, ಕಾಕ್ರೋಚ್ ಜನತಾ ಪಕ್ಷ ನೇತೃತ್ವದಲ್ಲಿ ನಡೆದ 36 ದಿನಗಳ ಪ್ರತಿಭಟನೆ ಶನಿವಾರ ಅಂತ್ಯಗೊಂಡಿತು.
ಜೂನ್ 28ರಂದು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸೋನಂ ವಾಂಗ್ಚುಕ್, ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಅದಕ್ಕೂ ಮೊದಲು ಅವರು 26 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿ, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ವಿದ್ಯಾರ್ಥಿಗಳ ಬೇಡಿಕೆಗಳ ಪರವಾಗಿ ಧ್ವನಿಯೆತ್ತಿದ್ದರು.
ಕೇಂದ್ರ ಸರ್ಕಾರವು ತಮ್ಮ ಪ್ರಮುಖ ಬೇಡಿಕೆಗಳನ್ನು ಪರಿಗಣಿಸಿ ಅಗತ್ಯ ಕ್ರಮಕೈಗಳುದಾಗಿ ಭರವಸೆ ನೀಡಿದ ಬಳಿಕ, ವಾಂಗ್ಚುಕ್ ಅಧಿಕೃತವಾಗಿ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದರು. ಇದೀಗ ಒಂದೇ ಭಾರತ್ ಎಕ್ಸ್ಪ್ರೆಸ್ ನಲ್ಲಿ ಪ್ರಯಾಣಿಸಿದ ವೇಳೆ ಭಾರತೀಯ ರೈಲ್ವೆಯ ಅಭಿವೃದ್ಧಿಯನ್ನು ಶ್ಲಾಘಿಸಿದ ಅವರು, ಸರ್ಕಾರ ವಿದ್ಯಾರ್ಥಿಗಳಿಗೆ ನೀಡಿರುವ ಭರವಸೆಗಳನ್ನು ಇದೇ ರೀತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಈಡೇರಿಸಬೇಕು ಎಂದು ಮತ್ತೊಮ್ಮೆ ಒತ್ತಾಯಿಸಿದ್ದಾರೆ.