<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Business

ಷೇರು ಮಾರುಕಟ್ಟೆಯಲ್ಲಿ ಮಹಾ ಸ್ಫೋಟ : ಗಗನಕ್ಕೇರಿದ ಸೆನ್ಸೆಕ್ಸ್ ನಿಫ್ಟಿ

ಷೇರು ಮಾರುಕಟ್ಟೆಯಲ್ಲಿ ಮಹಾ ಸ್ಫೋಟ : ಗಗನಕ್ಕೇರಿದ ಸೆನ್ಸೆಕ್ಸ್ ನಿಫ್ಟಿ
Summary: ಮೋದಿ - ಟ್ರಂಪ್ ನಡುವಿನ ಮಹತ್ವದ ಮಾತುಕತೆ, ಭಾರತೀಯ ಶೇರು ಮಾರುಕಟ್ಟೆಗೆ ಭರ್ಜರಿ ಬೂಸ್ಟ್ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸೆನ್ಸೆಕ್ಸ್ 3656 ಪಾಯಿಂಟ್ ಹಾಗೂ ನಿಫ್ಟಿ 1,219 ಪಾಯಿಂಟ್ ಏರಿಕೆ ಕಂಡು, ಹೂಡಿಕೆದಾರರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

belagavi news:

ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕ ಭವಿಷ್ಯ ಕುರಿತು ವಿಶ್ವಾಸ ಹೆಚ್ಚಾಗಿದ್ದು, ಬ್ಯಾಂಕ್, ಐಟಿ ಹಾಗೂ ಮೆಟಲ್ ಷೇರುಗಳಲ್ಲಿ ಬಾರಿ ಖರೀದಿ ನಡೆಯುತ್ತಿದೆ. ಇಂದು ಭಾರತೀಯ ಶೇರು ಮಾರುಕಟ್ಟೆ ಗಗನಕ್ಕೇರಿದ ಹಿನ್ನೆಲೆ ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ದಿಕ್ಕು ಹೇಗಿರಲಿದೆ? ಹೂಡಿಕೆದಾರರು ಗಮನಿಸಬೇಕಾದ ಪ್ರಮುಖ ಅಂಶಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Indian Stock Market: ಎಲ್ಲರೂ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಅಮೆರಿಕ ನಡುವಿನ ಬಹು ನಿರೀಕ್ಷಿತ ವ್ಯಾಪಾರ ಒಪ್ಪಂದವನ್ನು ಅಧಿಕೃತವಾಗಿ ಘೋಷಿಸಿದ್ದು, ಇದರ ಪರಿಣಾಮ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ರ್ಯಾಲಿ ಕಂಡು ಬಂದಿದೆ. ಈ ಮಹತ್ವದ ಬೆಳವಣಿಗೆಯ ನಂತರ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 3,656.74 ಪಾಯಿಂಟ್ ಗಳ ಏರಿಕೆಯೊಂದಿಗೆ 85,323.20 ಮಟ್ಟಕ್ಕೆ ಜಿಗಿದರೆ, ನಿಫ್ಟಿ 1,219.65 ಪಾಯಿಂಟ್ಗಳ ಏರಿಕೆಯಾಗಿ 26,308.05 ಕ್ಕೆ ತಲುಪಿತು. ಮಾರುಕಟ್ಟೆ ಸಂಪೂರ್ಣವಾಗಿ ಚುರುಕಾಗಿ ವಹಿವಾಟು ನಡೆಸುತ್ತಿದೆ.

ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರು ಸೂಚ್ಯಂಕಗಳು ತಮ್ಮ ತೀವ್ರ ಲಾಭವನ್ನು ಮತ್ತಷ್ಟು ವಿಸ್ತರಿಸಿಕೊಂಡವು. ಭಾರತ ಅಮೆರಿಕ ವ್ಯಾಪಾರ ಒಪ್ಪಂದದ ಸುತ್ತಲಿನ ಬಲವಾದ ಆಶಾವಾದ ಹೂಡಿಕೆದಾರರ ಭರವಸೆಯನ್ನು ಹೆಚ್ಚಿಸಿ ಮಾರುಕಟ್ಟೆಗೆ ಪ್ರಬಲ ಓಪನಿಂಗ್ ನೀಡಿತು. ಬೆಳಿಗ್ಗೆ 9:33 ಕ್ಕೆ ಸೆನ್ಸೆಕ್ಸ್ 2,257 ಪಾಯಿಂಟ್ ಗಳ ಅಥವಾ ಶೇಕಡಾ 2.76 ರಷ್ಟು ಏರಿಕೆಯಾಗಿದೆ 83,924 ಮಟ್ಟ ತಲುಪಿದರೆ, ನಿಫ್ಟಿ 691 ಪಾಯಿಂಟ್ ಗಳ ಏರಿಕೆಯೊಂದಿಗೆ 25,780ಕ್ಕೆ ಮುಟ್ಟಿತು.

Sponsored

ಆರಂಭಿಕ ವಹಿವಾಟಿನಲ್ಲಿ ಹೆವಿವೇಯ್ಟ್ ಷೇರುಗಳು ಈ ರ್ಯಾಲಿಗೆ ಬಲವಾದ ಬೆಂಬಲ ನೀಡಿದವು. ರಿಲಯನ್ಸ್ ಇಂಡಸ್ಟ್ರೀಸ್, ಇನ್ಪೋಸಿಸ್ ಹಾಗೂ ಎಚ್ ಸಿಎಲ್ ಟೆಕ್ನಾಲಜೀಸ್ ಸೆನ್ಸೆಕ್ಸ್ ನ ಬಾರಿ ಲಾಭಕ್ಕೆ ಪ್ರಮುಖ ಕೊಡುಗೆ ನೀಡಿದರೆ. ಎಂ & ಎಂ ಸನ್ ಪಾರ್ಮಾ ಹೇಳಿದ್ದೇವೆ. ಮಾರುತಿ ಸುಜುಕಿ ಮತ್ತು ಕೋಟಕ ಮಹೀಂದ್ರಾ ಬ್ಯಾಂಕ್ ಷೇರುಗಳಲ್ಲಿ ಕಂಡು ಬಂದ ಬಲವಾದ ಖರೀದಿ ಮಾರುಕಟ್ಟೆಯ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ. ದೊಡ್ಡ ಕ್ಯಾಪ್ ಷೇರುಗಳ ಮುನ್ನಡೆ ಈ ರ್ಯಾಲಿ ಸೂಚ್ಯಂಕ ಹೆವಿವೇಯ್ಟ್ ಚಾಲಿತ ವಾಗಿರುವುದನ್ನು ಸ್ಪಷ್ಟಪಡಿಸಿದೆ.

ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಯ ವಿಸ್ತಾರ ಅತ್ಯಂತ ಬಲವಾಗಿ ಮುಂದುವರಿದಿತು. ನಿಫ್ಟಿ 50 ಸೂಚ್ಯಂಕದಲ್ಲಿನ 50 ಶೇರುಗಳ ಪೈಕಿ 48 ಶೇರುಗಳು ಹಸಿರು ಬಣ್ಣದಲ್ಲಿ ವಹಿವಾಟು ನಡೆಸಿದರೆ ಕೇವಲ ಎರಡು ಶೇರುಗಳು ಮಾತ್ರ ಕುಸಿತ ಕಂಡವು. ಈ ವ್ಯಾಪಕ ಖರೀದಿಯ ಬೆಂಬಲದಿಂದ ನಿಫ್ಟಿ 683 ಪಾಯಿಂಟ್ ಗಳು ಅಥವಾ ಶೇಕಡಾ 2.72 ರಷ್ಟು ಏರಿಕೆಯಾಗಿ 25,771.65 ಮಟ್ಟದಲ್ಲಿ ವಹಿವಾಟು ನಡೆಸಿತು.

ಮಾರುಕಟ್ಟೆ ತೆರೆಯುವ ಮೊದಲು ಗಿಫ್ಟ್ ನಿಫ್ಟಿ ಸುಮಾರು ಶೇಕಡಾ 3ರಷ್ಟು ಜಿಗಿತವನ್ನು ದಾಖಲಿಸಿದ್ದು ಬಲವಾದ ಓಪನಿಂಗ್ ಗೆ ಸ್ಪಷ್ಟ ಸೂಚನೆ ನೀಡಿತು. ಭಾರತ - ಅಮೆರಿಕ ವ್ಯಾಪಾರ ಒಪ್ಪಂದದ ಪರಿಣಾಮ ರಫ್ತು ಪ್ರಕ್ರಿಯೆ ಸುಲಭ ವಾಗಿರುದರಿಂದ ಐಟಿ, ಜವಳಿ, ಔಷಧಿಯ ಹಾಗೂ ಆಟೋ ವಲಯಗಳ ಶೇರುಗಳಲ್ಲಿ ಇಂದು ಗಮನಾರ್ಹ ಏರಿಕೆ ಕಾಣುವ ನಿರೀಕ್ಷೆಯಿದೆ. ಹೂಡಿಕೆದಾರರ ಭಾವನೆಗಳಲಿ ಸ್ಪಷ್ಟ ಸುಧಾರಣೆ ಕಂಡು ಬಂದಿದ್ದು, ಕಳೆದ ತಿಂಗಳು ಮಾರುಕಟ್ಟೆಯಲ್ಲಿ ಕಂಡ ಕುಸಿತ ಹಿಮ್ಮುಖವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಈ ವ್ಯಾಪಾರ ಒಪ್ಪಂದವು ಭಾರತ ಯುಎಸ್ ಆರ್ಥಿಕ ಹಾಗೂ ವ್ಯಾಪಾರ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವುದಾಗಿ ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಆತ್ಮೀಯ ಸ್ನೇಹಿತರಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು, ನಾವಿಬ್ಬರು ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಭಾರತವು ಇಂಧನ ತಂತ್ರಜ್ಞಾನ ಹಾಗೂ ಕೃಷಿ ವಲಯಗಳಲ್ಲಿ ಅಮೆರಿಕದಿಂದ ಹೆಚ್ಚಿನ ಖರೀದಿಗಳನ್ನು ಮಾಡುವ ಭರವಸೆ ನೀಡಿದೆ. ಈ ಬೆಳವಣಿಗೆಗಳು ಭಾರತ ಯು ಎಸ್ ವ್ಯಾಪಾರ ಸಂಬಂಧಗಳಿಗೆ ಹೊಸ ಬಲ ನೀಡಿದು ಮಾರುಕಟ್ಟೆಯಲ್ಲಿದ್ದ ಅನಿಶ್ಚಿತತೆಗಳನ್ನು ಬಹುತೇಕ ದೂರ ಮಾಡಿವೆ.

Sponsored

ಇದಕ್ಕೂ ಮೊದಲು ದೇಶಿಯ ಹೂಡಿಕೆದಾರರು (FII ) ನಿರಂತರ ಮಾರಾಟ ಹಾಗೂ ರೂಪಾಯಿ ದುರ್ಬಲತೆಯಿಂದ ಮಾರುಕಟ್ಟೆ ಒತ್ತಡದಲ್ಲಿತ್ತು. ಆದರೆ ಈಗ ಈ ಎಲ್ಲಾ ಕಳವಳಗಳು ಕಡಿಮೆಯಾಗಿದ್ದು ಹೂಡಿಕೆದಾರರ ಭಾವನೆಗಳಲ್ಲಿ ಸ್ಪಷ್ಟ ಸುಧಾರಣೆ ಕಂಡು ಬಂದಿದೆ. ಮಾರುಕಟ್ಟೆಯ ಈ ಸಕಾರಾತ್ಮಕ ವಾತಾವರಣ ಮುಂದಿನ ದಿನಗಳಲ್ಲಿ ಬೆಳವಣಿಗೆಯನ್ನು ಇನ್ನಷ್ಟು ದ್ವಿಗುಣಗೊಳಿಸಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜವಳಿ, ಸಿಗಡಿ ರಫ್ತು, ಐಟಿ ವಲಯ ಮತ್ತು ಭಾರತ ಪೋರ್ಜ್ ನಂತಹ ರಫ್ತು ಆಧಾರಿತ ಕಂಪನಿಗಳು ರೂಪಾಯಿ ದುರ್ಬಲತೆಯಿಂದ ರಫ್ತು ಅಗ್ಗವಾಗಿರುವುದರಿಂದ ವಿಶೇಷವಾಗಿ ಲಾಭ ಪಡೆಯುವ ನಿರೀಕ್ಷೆ ಇದೆ. ಈ ಮಹತ್ವದ ಸುದ್ದಿ ಭಾರತೀಯ ಆರ್ಥಿಕತೆ ಮತ್ತು ಶೇರು ಮಾರುಕಟ್ಟೆಗೆ ಅತ್ಯಂತ ಒಳ್ಳೆಯ ಸೂಚನೆ ನೀಡಿ ನೀಡುತ್ತಿದ್ದು ತ್ವರಿತ ಚೇತರಿಕೆಯ ಸಂಕೇತವಾಗಿ ಪರಿಣಮಿಸಿದೆ.

ಇದೇ ವೇಳೆ ಸರಕು ಮಾರುಕಟ್ಟೆಯಲ್ಲಿಯೂ ಚೇತರಿಕೆ ಕಂಡು ಬಂದಿದೆ. ಮೂರು ದಿನಗಳ ನಿರಂತರ ಕುಸಿತದ ಬಳಿಕ ಚಿನ್ನ ಮತ್ತು ಬೆಳ್ಳಿ ಫ್ಯೂಚರ್ ಗಳು ಬಲವಾದ ರಿಕವರಿಯೊಂದಿಗೆ ವಹಿವಾಟನ್ನೂ ಆರಂಭಿಸಿವೆ. MCX ನಲ್ಲಿ ಕಡಿಮೆ ಮಟ್ಟಗಳಲ್ಲಿ ನಡೆದ ಮೌಲ್ಯ ಕರೆದಿಯಿಂದ ಚಿನ್ನ ಹಾಗೂ ಬೆಳ್ಳಿ ಬೆಲೆ ಗಳಲ್ಲಿ ಲಾಭ ದಾಖಲಾಗಿದೆ.

ಬೆಳ್ಳಿ: ಪ್ರತಿ ಕೆಜಿಗೆ ₹2.5 ಲಕ್ಷಕ್ಕಿಂತ ಹೆಚ್ಚಿನ ಆದಾಯವನ್ನು ಗಳಿಸಲು 6% ಏರಿಕೆಯಾಗಿದೆ.

Sponsored

ಚಿನ್ನ: 3% ರಷ್ಟು ಲಾಭದೊಂದಿಗೆ ಬಲವಾದ ಸ್ಥಾನದಲ್ಲಿ ವಹಿವಾಟು ನಡೆಸಲಾಗುತ್ತಿದೆ.

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online