<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ಆರ್. ಎಸ್. ಎಸ್ ಮುಖ್ಯಸ್ಥ ಮೋಹನ್ ಭಾಗವತ್ ರೈಲು ಪ್ರಯಣದ ವೇಳೆ ಕಲ್ಲುತೂರಾಟ; ಭದ್ರತಾ ವ್ಯವಸ್ಥೆ ಹೆಚ್ಚಳ

ಆರ್. ಎಸ್. ಎಸ್ ಮುಖ್ಯಸ್ಥ ಮೋಹನ್ ಭಾಗವತ್ ರೈಲು ಪ್ರಯಣದ ವೇಳೆ ಕಲ್ಲುತೂರಾಟ; ಭದ್ರತಾ ವ್ಯವಸ್ಥೆ ಹೆಚ್ಚಳ
Summary: The incident of stone pelting on the train in which RSS chief Mohan Bhagwat was travelling has created a stir. The windows of the train were damaged during the incident, and the security personnel immediately took control of the situation.

belagavi news :

ಉತ್ತರ ಪ್ರದೇಶದಲ್ಲಿ ಆರ್. ಎಸ್. ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಕಲ್ಲುತೂರಾದ ನಡೆದಿರುವ ಘಟನೆ ಆತಂಕ ಮೂಡಿಸಿದೆ. ಕಾನ್ಪುರದಿಂದ ದೆಹಲಿಗೆ ತೆರಳುತ್ತಿದ್ದ ಸ್ವರ್ಣ ಶತಾಬ್ದಿ ಎಕ್ಸ್ಪ್ರೆಸ್ ರೈಲಿನ ಮೇಲೆ ಫಿರೋಜಾಬಾದ್ ಸಮೀಪ ಗುರುವಾರ ಸಂಜೆ ಕಲ್ಲು ತೂರಾಟ ನಡೆದಿದ್ದು,ರೈಲ್ವೆ ಹಾಗೂ ಸ್ಥಳೀಯ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿದ್ದಾರೆ.

ಘಟನೆಯ ವೇಳೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮೋಹನ್ ಭಾಗವತ್ ಸೇರಿದಂತೆ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಯ್ಯೂ, ಭದ್ರತಾ ದೃಷ್ಟಿಯಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಕಲ್ಲು ತೂರಾಟ ನಡೆದ ತಕ್ಷಣ ರೈಲ್ವೆ ಭದ್ರತಾ ಪಡೆ ಮತ್ತು ಸ್ಥಳೀಯ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು,ಕೆಲವೇ ಗಂಟೆಗಳಲ್ಲಿ ಓರ್ವ ಶಂಕಿತನನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದ್ದು,ಇದು ಉದ್ದೇಶಪೂರ್ವಕ ಕೃತ್ಯವೇ ಅಥವಾ ಇತರೆ ಕಾರಣಗಳಿವೆಯೇ ಎಂಬ ಬಗ್ಗೆ ತನಿಖೆ ಮುಂದುವರೆದಿದೆ.

Sponsored

ದೇಶದ ಪ್ರಮುಖ ಸಂಘಟನೆಯ ಮುಖ್ಯಸ್ಥರಾಗಿರುವ ಮೋಹನ್ ಭಗವತ್ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಕಲ್ಲುತೂರಾಟ ನಡೆದಿರುವುದು ಭದ್ರತಾ ವ್ಯವಸ್ಥೆಗಳ ಕುರಿತು ಚರ್ಚೆಗೆ ಕಾರಣವಾಗಿದೆ. ಪ್ರಕರಣದ ಸಂಪೂರ್ಣ ಸತ್ಯಾಂಶ ತನಿಖೆಯ ಬಳಿಕವೇ ಹೊರಬರಬೇಕಿದ್ದು, ಭದ್ರತಾ ಸಂಸ್ಥೆಗಳು ಎಲ್ಲ ಆಯಾಮಗಳಲ್ಲಿಯೂ ಪರಿಶೀಲನೆ ನಡೆಸುತ್ತಿವೆ.

ಸ್ವರ್ಣ ಶತಾಬ್ದಿ ಎಕ್ಸ್ಪ್ರೆಸ್ ಸಂಜೆ 7:15 ರ ಸುಮಾರಿಗೆ ಫಿರೋಜಾಬಾದ್ ಜಿಲ್ಲೆಯ ಮುಖನ್ ಪುರ ನಿಲ್ದಾಣದ ಬಳಿ ಹಾದು ಹೋಗುವಾಗ ಈ ಕಲ್ಲುತೂರಾದ ನಡೆದಿದೆ. ಕಲ್ಲು ಎಸಿ ಕೋಚ್ ನ ಕಿಟಕಿಗೆ ತಗುಲಿ ಹೊರಗಿನ ಗಾಜು ಮಾತ್ರ ಬಿರುಕು ಬಿಟ್ಟಿದೆ. ಅದೇ ಕೋಚ್ ನಲ್ಲಿದ್ದ ಮೋಹನ್ ಭಾಗವತ್ ಅವರು ಎದುರು ಭಾಗದ ಸೀಟಿನಲ್ಲಿ ಕುಳಿತಿದ್ದರಿಂದ ಅವರಿಗೆ ಹಾಗೂ ರೈಲಿನಲ್ಲಿದ್ದ ಇತರ ಯಾವುದೇ ಪ್ರಯಾಣಿಕರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ.

ಘಟನೆ ನಡೆದ ತಕ್ಷಣವೇ ಆಗ್ರ ವಲಯದ ಎಡಿಜಿ ಎಸ್.ಕೆ ಭಗತ್, ಡಿಐಜಿ ಶೈಲೇಶ್ ಪಾಂಡೆ ಹಾಗೂ ಫಿರೋಜಾಬಾದ್ ಎಸ್ಎಸ್ ಪಿ ಆದಿತ್ಯ ಲಾಂಘೆ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತು. ಭದ್ರತಾ ಪಡೆಗಳು ತಕ್ಷಣವೇ ಕಾರ್ಯಾಚರಣೆ ಆರಂಭಿಸಿ ಹಳಿಗಳ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕೆಲವೇ ಗಂಟೆಗಳಲ್ಲಿ ಒಬ್ಬ ಸಂಗೀತ ಆರೋಪಿಯನ್ನು ವರ್ಷಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ಬಳಿಕ ರೈಲನ್ನು ತುಂಡ್ಲಾ ಜಂಕ್ಷನ್ ನ ಹೊರ ಸಿಗ್ನಲ್ ನಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಿ, ಇಡೀ ಕೋಚ್ ನ ಸುರಕ್ಷತೆಯನ್ನು ಅಧಿಕಾರಿಗಳು ಕುಲಂಕುಶವಾಗಿ ಪರಿಶೀಲಿಸಿದರು.ಎಲ್ಲಾ ವ್ಯವಸ್ಥೆಗಳು ಸುರಕ್ಷಿತವಾಗಿವೆ ಎಂದು ಖಚಿತಪಡಿಸಿಕೊಂಡ ನಂತರ, ಸಂಜೆ 7 41ಕ್ಕೆ ರೈಲು ದೆಹಲಿಯತ್ತ ತನ್ನ ಪ್ರಯಾಣವನ್ನು ಮುಂದುವರಿಸಿದೆ.

Sponsored

ಘಟನೆಯು ಭದ್ರತಾ ವ್ಯವಸ್ಥೆಗಳ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ಮುಂದುವರಿಸಿದ್ದಾರೆ.

Also Read:

ಚಿನ್ನಯ್ಯ ಆರೋಪಕ್ಕೆ ತೀವ್ರ ಟ್ವಿಸ್ಟ್ : ಪ್ರಿಯಾಂಕ್ ಖರ್ಗೆ ನೀಡಿದ ಸ್ಪಷ್ಟನೆ ಏನು ?

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online