Belagavi news:
ಸಚಿವ ಸಂಪುಟ ರಚನೆ ಕಸರತ್ತು : ದೆಹಲಿಯಲ್ಲಿ ಸಿದ್ದರಾಮಯ್ಯ ಬಿಡುವಿಲ್ಲದ ಸಭೆಗಳು
ನವದೆಹಲಿಯಲ್ಲಿ ಜೂನ್ 2: ರಾಜ್ಯದಲ್ಲಿ ನೂತನ ಸಚಿವ ಸಂಪುಟ ರಚನೆ ಹಾಗೂ ಮಂತ್ರಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಮಹತ್ವದ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈ ಕಮಾಂಡ್ ಜೊತೆ ಮಾತುಕತೆಯಾಗಿ ದೆಹಲಿಗೆ ಆಗಮಿಸಿರುವ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಂತರ ಸಭೆಗಳಲ್ಲಿ ನಿರತರಾಗಿದ್ದಾರೆ.
ಡಿಕೆ ಶಿವಕುಮಾರ್ ನೇತೃತ್ವದ ಸಂಪುಟ ರಚನೆ ಸಂಬಂಧ ಪಕ್ಷದ ವರಿಷ್ಠರೊಂದಿಗೆ ಸಮಾಲೋಚನೆಗಳು ನಡೆಯುತ್ತಿದ್ದು, ಸಚಿವರ ಆಯ್ಕೆ ಹಾಗೂ ಪಟ್ಟಿಯ ಅಂತಿಮ ರೂಪರೇಖೆ ಬಗ್ಗೆ ಮಹತ್ವದ ಚಾರ್ಜೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಈ ರಾಜಕೀಯ ಚಟುವಟಿಕೆಗಳು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿವೆ.
ದೆಹಲಿ: ಸಿದ್ದರಾಮಯ್ಯ- ಎಸ್ ಜೈಶಂಕರ್ ಆಕಸ್ಮಿಕ ಭೇಟಿ: ಉಭಯ ಕುಶಲೋಪರಿ ವಿನಿಮಯ
ರಾಜಕೀಯ ಬೆಳವಣಿಗೆಗಳ ನಡುವೆ ದೆಹಲಿಯ ಐಟಿಸಿ ಮೌರ್ಯ ಹೋಟೆಲ್ ನಿಂದ ಹೊರಬರುತ್ತಿದ್ದ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈ ಶಂಕರ್ ಅವರು ಎದುರಾದ ಘಟನೆ ನಡೆದಿದೆ.
ಈ ವೇಳೆ ಇಬ್ಬರು ನಾಯಕರು ಪರಸ್ಪರ ಸೌಜನ್ಯದಿಂದ ಹಸ್ತಲಾಘವ ಮಾಡಿಕೊಂಡು, ನಗುಮುಖದಿಂದ ಉಭಯ ಕುಶಲೋಪರಿ ವಿಚಾರಿಸಿಕೊಂಡರು. "ಹೇಗಿದ್ದೀರಾ?" ಎಂದು ಜೈ ಶಂಕರ್ ಅವರು ಕ್ಷೇಮ ಸಮಾಚಾರ ಕೇಳಿದರೆ, ಸಿದ್ದರಾಮಯ್ಯ ಅವರು ಕೂಡ ಆತ್ಮೀಯವಾಗಿ ಪ್ರತಿಕ್ರಿಯಿಸಿದ್ದಾರೆ.
ಕೆಲ ಕ್ಷಣಗಳ ಈ ಅನೌಪಚಾರಿಕ ಮಾತುಕತೆ ರಾಜಕೀಯ ವಲಯದಲ್ಲಿ ಗಮನ ಸೆಳೆದಿದ್ದು, ದೆಹಲಿಯ ರಾಜಕೀಯ ಚಟುವಟಿಕೆಗಳ ನಡುವೆ ಈ ಆಕಸ್ಮಿಕ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
Also Read: