<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಅಚ್ಚರಿಯ ಸಾಧನೆ : 10 ತಿಂಗಳ ಮಗುವಿನ ಹೆಸರು ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸೇರ್ಪಡೆ

ಅಚ್ಚರಿಯ ಸಾಧನೆ : 10 ತಿಂಗಳ ಮಗುವಿನ ಹೆಸರು ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸೇರ್ಪಡೆ
Summary: A little boy of just 10 months old has made it to the Nobel Book of World Records with his extraordinary talent. The achievement of this little boy from Vijayapura has become the pride of not only his family but also the district. Read the full news...

Belagavi News:

ಸಾಧನೆ ಮಾಡಲು ವಯಸ್ಸು ಅಡ್ಡಿಯಲ್ಲ ಎಂಬುವುದನ್ನು ವಿಜಯಪುರ ಜಿಲ್ಲೆಯ 10 ತಿಂಗಳ ಪುಟ್ಟ ಬಾಲಕ ರಿಯಾನ್ಸ್ ಪಟ್ಟಣಶೆಟ್ಟಿ ಸಾಬೀತುಪಡಿಸಿದ್ದಾನೆ. ಕೇವಲ 36 ಸೆಕೆಂಡುಗಳಲ್ಲಿ 21 ಮೆಟ್ಟಿಲುಗಳನ್ನು ಹತ್ತುವ ಮೂಲಕ ರಿಯಾನ್ಸ್ "ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ " ನಲ್ಲಿ ಪಡೆದು ಅಪರೂಪದ ಸಾಧನೆ ಮಾಡಿದ್ದಾನೆ.

ವಿಜಯಪುರ ನಗರದ ನಿವಾಸಿಗಳಾದ ಸಚಿನ್ ಪಟ್ಟಣಶೆಟ್ಟಿ ಹಾಗೂ ಸಿಂಚನ ದಂಪತಿಯ ಪುತ್ರನಾದ ರಿಯಾನ್ಸ್, ಅಂಬೆಗಾಲಿಡುವ ಪ್ರಾಯದಲ್ಲಿ ಈ ಸಾಧನೆ ಮಾಡಿ ಜಿಲ್ಲೆಯ ಹೆಮ್ಮೆಯಾಗಿದ್ದಾನೆ. ಬಾಲಕನ ಚುರುಕುತನ ಮತ್ತು ಅಸಾಧಾರಣ ಸಾಮರ್ಥ್ಯವನ್ನು ಗುರುತಿಸಿ, ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಿಂದ ಮಾನ್ಯತೆ ನೀಡಲಾಗಿದೆ.

ರಿಯಾನ್ಸ್ ನ ಈ ಸಾಧನೆಗೆ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಬಾಲಕನ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ವಿಶ್ವ ದಾಖಲೆ ನಿರ್ಮಿಸಿರುವುದು ಕುಟುಂಬದಷ್ಟೇ ಅಲ್ಲ, ವಿಜಯಪುರ ಜಿಲ್ಲೆಯ ಜನರಿಗೂ ಹೆಮ್ಮೆಯ ವಿಷಯವಾಗಿದೆ.

ರಿಯಾನ್ಸ್ ನ ಸಾಧನೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಪ್ರತಿಭೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಜಿಲ್ಲೆಯ ವಿವಿಧ ಗಣ್ಯರು ಹಾಗೂ ಸಾರ್ವಜನಿಕರು ಪುಟ್ಟ ಬಾಲಕನಿಗೆ ಅಭಿನಂದನೆ ಸಲ್ಲಿಸಿ ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವಂತೆ ಶುಭ ಹಾರೈಸಿದ್ದಾರೆ.

ರಿಯಾನ್ಸ್ ಸಾಧನೆ ಏನು ? 36 ಸೆಕೆಂಡುಗಳಲ್ಲಿ 21 ಮೆಟ್ಟಿಲು ವಿಶ್ವ ದಾಖಲೆ:

ಕೇವಲ ಹತ್ತು ತಿಂಗಳ ವಯಸ್ಸಿನಲ್ಲಿ ರಿಯಾನ್ಸ್ ಪಟ್ಟಣಶೆಟ್ಟಿಸಿ 36 ಸೆಕೆಂಡುಗಳಲ್ಲಿ ಮೆಟ್ಟಿಲುಗಳನ್ನು ಹತ್ತುವ ಮೂಲಕ "ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್" ನಲ್ಲಿ ಸ್ಥಾನ ಪಡೆದಿದ್ದಾನೆ. ಇಷ್ಟು ಚಿಕ್ಕ ವಯಸ್ಸಿನ ಮಗು ಒಂದು ಇಷ್ಟು ವೇಗವಾಗಿ ಮೆಟ್ಟಿಲು ಹತ್ತಿರುವುದು ಎಲ್ಲರ ಗಮನ ಸೆಳೆದಿದ್ದು, ಈ ಸಾಧನೆಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ದೊರೆತಿದೆ.

ಮಗುವಿನ ಪ್ರತಿಭೆಯನ್ನು ಗುರುತಿಸಿದ ಪೋಷಕರು :

ರಿಯಾನ್ಸ್ ಮನೆ ಒಳಗಿನ ಮೆಟ್ಟಿಲುಗಳನ್ನು ಅತ್ಯಂತ ವೇಗವಾಗಿ ಹತ್ತಿ ಎಳೆಯುವುದನ್ನು ಗಮನಿಸಿದ ತಾಯಿ ಸಿಂಚನಾ, ಮಗುವಿನಲ್ಲಿರುವ ವಿಶಿಷ್ಟ ಸಾಮರ್ಥ್ಯವನ್ನು ಗುರುತಿಸಿದರು. ನಂತರ ಒಂದು ಅಡಿ ಎತ್ತರದ ಮೆಟ್ಟಿಲುಗಳನ್ನು ಕತ್ತಲು ಪ್ರೋತ್ಸಾಹಿಸಿದಾಗ, ರಿಯಾನ್ಸ್ ಯಾವುದೇ ಅಡೆತಡೆ ಇಲ್ಲದೆ ಅವುಗಳನ್ನು ಸುಲಭವಾಗಿ ಹತ್ತಿ ತನ್ನ ಚುರುಕುತನವನ್ನು ಪ್ರದರ್ಶಿಸಿದ.

ಮಗನ ಅಪರೂಪದ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಬೇಕೆಂದು ನಿರ್ಧರಿಸಿದ ಪೋಷಕರು, ರಿಯಾನ್ಸ್ ಮೆಟ್ಟಿಲು ಹತ್ತುವ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋದಲ್ಲಿ ದಾಖಲಿಸಿ, ಅಗತ್ಯ ದಾಖಲೆಗಳೊಂದಿಗೆ ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಗೆ ಕಳುಹಿಸಿದರು.

ಸಂಸ್ಥೆಯ ಅಧಿಕಾರಿಗಳು ವಿಡಿಯೋ ಮತ್ತು ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ, ರಿಯಾನ್ಸ್ ಸಾಧನೆಯನ್ನು ಅಧಿಕೃತವಾಗಿ ವಿಶ್ವ ದಾಖಲೆ ಎಂದು ಮಾನ್ಯತೆ ನೀಡಿ ಪ್ರಮಾಣ ಪತ್ರ ನೀಡಿದರು. ಕೇವಲ ಹತ್ತು ತಿಂಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವ ರಿಯಾನ್ಸ್ ಇದೀಗ ವಿಜಯಪುರ ಜಿಲ್ಲೆಯಷ್ಟೇ ಅಲ್ಲ, ರಾಜ್ಯದ ಹೆಮ್ಮೆಯಾಗಿ ಹೊರಹಮ್ಮಿದ್ದಾನೆ.

ವಿಜಯಪುರ ಪುಟ್ಟ ಪೋರ ರಿಯಾನ್ಸ್ ಸಾಧನೆಗೆ ಕುಟುಂಬದಲ್ಲಿ ಸಂಭ್ರಮ - ಡಿಕೆ ಶಿವಕುಮಾರ್ ಅಭಿನಂದನೆಗೆ ಪೋಷಕರ ಹರ್ಷ :

ಕೇವಲ ಹತ್ತು ತಿಂಗಳ ವಯಸ್ಸಿನಲ್ಲಿ ವಿಶ್ವ ದಾಖಲೆ ಬರೆದಿರುವ ರಿಯಾನ್ಸ್ ಪಟ್ಟಣಶಕ್ತಿಯ ಅಪರೂಪದ ಸಾಧನೆ ಇದೀಗ ಪಟ್ಟಣಶೆಟ್ಟಿ ಕುಟುಂಬದಲ್ಲಿ ಹಬ್ಬದ ಸಂಭ್ರಮಕ್ಕೆ ಕಾರಣವಾಗಿದೆ. 36 ಸೆಕೆಂಡುಗಳಲ್ಲಿ 21 ಮೆಟ್ಟಿಲುಗಳನ್ನು ಹತ್ತುವ ಮೂಲಕ "ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿರುವ ಪುಟ್ಟ ಬಾಲಕನ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರಿಯಾನ್ಸ್ ನ ಪೋಷಕರಾದ ಸಚಿನ್ ಪಟ್ಟಣಶೆಟ್ಟಿ ಮತ್ತು ಸಿಂಚನಾ ಅವರು ಮಗನ ಸಾಧನೆ ಕುರಿತು ಸಂತಸ ಹಂಚಿಕೊಂಡಿದ್ದಾರೆ. "ನಮ್ಮ ಮಗು ಚಿಕ್ಕ ವಯಸ್ಸಿನಲ್ಲಿ ಇಂತಹ ದೊಡ್ಡ ಸಾಧನೆ ಮಾಡುತ್ತಾನೆ ಎಂದು ನಿರೀಕ್ಷಿಸಿರಲಿಲ್ಲ. ಮನೆಯಲ್ಲಿ ನಾವು ಮೆಟ್ಟಿಲು ಹತ್ತುವಾಗ ಆತ ಯಾವಾಗಲೂ ಮುಂಚೂಣಿಯಲ್ಲಿ ಓಡುತ್ತಿದ್ದ. ಆತನ ವೇಗವನ್ನು ಕಂಡು ನೆರೆಹೊರೆಯವರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು" ಎಂದು ಹೇಳಿದ್ದಾರೆ.

ಮಗನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಪೋಷಕರು, ರಿಯಾನ್ಸ್ ಮೆಟ್ಟಿಲು ಹತ್ತುವ ವಿಡಿಯೋ ಹಾಗೂ ಅಗತ್ಯ ದಾಖಲೆಗಳನ್ನು ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಗೆ ಕಳುಹಿಸಿದ್ದರು. ಪರಿಶೀಲನೆಯ ಬಳಿಕ ಸಂಸ್ಥೆಯು ಬಾಲಕನ ಸಾಧನೆಗೆ ಅಧಿಕೃತ ಮಾನ್ಯತೆ ನೀಡಿದೆ.

ಇನ್ನು ರಿಯಾನ್ಸ್ ನ ಸಾಧನೆಯನ್ನು ಗುರುತಿಸಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿರುವುದು ತಮ್ಮ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಪೋಷಕರು ತಿಳಿಸಿದ್ದಾರೆ.

'ಬೆಳೆಯುವ ಸಿರಿ ಮೊಳಕೆಯಲ್ಲಿ ' ಎಂಬ ಗಾದೆ ಮಾತಿನಂತೆ, ವಿಶಿಷ್ಟ ಸಾಧನೆ ಮಾಡಿರುವ ರಿಯಾನ್ಸ್ ಭವಿಷ್ಯದಲ್ಲಿ ಇನ್ನಷ್ಟು ದೊಡ್ಡ ಸಾಧನೆಗಳನ್ನು ಮಾಡಲಿ ಎಂದು ವಿಜಯಪುರದ ಜನತೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರು ಶುಭ ಹಾರೈಸುತ್ತಿದ್ದಾರೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online