<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಕಪ್ಪು ಸಮುದ್ರದಲ್ಲಿ ಉದ್ವಿಗ್ನತೆ: ಹಡಗಿನಲ್ಲಿ ಸಿಲುಕಿರುವ 13 ಭಾರತೀಯ ನಾವಿಕರಿಗೆ ಜೀವಭಯ

ಕಪ್ಪು ಸಮುದ್ರದಲ್ಲಿ ಉದ್ವಿಗ್ನತೆ: ಹಡಗಿನಲ್ಲಿ ಸಿಲುಕಿರುವ 13 ಭಾರತೀಯ ನಾವಿಕರಿಗೆ ಜೀವಭಯ
Summary: There are serious concerns about the safety of the 13 Indian captains stranded on a ship after an attack in the Black Sea. Efforts are underway to rescue the sailors and the Indian Ministry of External Affairs is monitoring the situation. Get the full details on the Black Sea attack, the condition of the Indian sailors and the latest developments here.

belagavi news :

ನವದೆಹಲಿ: ಕಪ್ಪು ಸಮುದ್ರದ ಉಕ್ರೇನ್ ನ "ಚೋರ್ನೊಮೊರ್ಸ್ಕ್ (Chornomorsk) ಬಂದರಿನಲ್ಲಿ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳು ತೀವ್ರಗೊಂಡಿರುವ ನಡುವೆ 13 ಭಾರತೀಯರ ನಾವಿಕರು ಹಡಗಿನಲ್ಲಿ ಸಿಲುಕಿದ್ದು, ಅವರ ಸುರಕ್ಷತೆ ಕುರಿತು ಆತಂಕ ಹೆಚ್ಚಾಗಿದೆ. ಈ ಬಗ್ಗೆ ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ (FSUI) ತೀವ್ರ ಕಳವಳ ವ್ಯಕ್ತಪಡಿಸಿದೆ

ಸಂಘಟನೆಯ ಪ್ರಕಾರ, ಎಂ ವಿ ಅಮಿರ್-1 (MV Amir-1) ಹಡಗಿನಲ್ಲಿರುವ ಸಿಬ್ಬಂದಿ ಜೀವಕ್ಕೆ ಅಪಾಯಕಾರಿಯಾದ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಮಂಗಳವಾರ ರಾತ್ರಿ ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಹಡಗಿನ ಸುತ್ತಮುತ್ತ ನಿರಂತರವಾಗಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ನಡೆಯುತ್ತಿದ್ದು, ಯಾವುದೇ ಕ್ಷಣದಲ್ಲಿ ಹಡಗಿನ ಮೇಲೆ ನೇರ ದಾರಿ ನಡೆಯುವ ಭೀತಿ ಇರುವುದಾಗಿ ತಿಳಿಸಿದೆ.

FSUI, ಹಡಗಿನ ಮಾಲೀಕರು, ಧ್ವಜ ಹೊಂದಿರುವ ದೇಶದ ಅಧಿಕಾರಿಗಳು ಹಾಗೂ ಭಾರತ ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಸಿಬ್ಬಂದಿಯ ಸುರಕ್ಷತೆಯನ್ನು ಖಚಿತ ಪಡಿಸಬೇಕು ಅಲ್ಲದೇ ಭಾರತೀಯರ ನಾವಿಕರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ಇತ್ತೀಚೆಗಷ್ಟೇ ಕಪ್ಪು ಸಮುದ್ರದಲ್ಲಿ "ಪಲಾವ್ ಧ್ವಜ ಹೊಂದಿರುವ ಸರಕು ಸಾಗಣೆ ಹಡಗು' ಎಂವಿ ಎಜಿಎನ್ ರಾಗ್ನರ್" ಮೇಲೆ ಡ್ರೋನ್ ದಾಳಿ ನಡೆದಿದ್ದು, ಅದರಲ್ಲಿ ಕಾಣೆಯಾದ ಇಬ್ಬರು ಭಾರತೀಯರ ನಾಯಕರನ್ನು ಪತ್ತೆಹಚ್ಚಲು ಭಾರತ ಸರ್ಕಾರ ಉಕ್ರೇನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ. ಈ ಬೆಳವಣಿಗೆಯ ನಡುವೆ ಮತ್ತೊಂದು ಹಡಗಿನಲ್ಲಿ 13 ಭಾರತೀಯರ ನಾವಿಕರು ಸಂಕಷ್ಟದಲ್ಲಿರುವ ಮಾಹಿತಿ ಹೊರಬಿದ್ದಿದೆ.

ಉಕ್ರೇನ್ -ರಷ್ಯಾ ಯುದ್ಧದ ಪರಿಣಾಮ ಇದೀಗ ಸಮುದ್ರ ಮಾರ್ಗಗಳ ಮೇಲು ತೀವ್ರವಾಗಿ ಬಿದ್ದಿದ್ದು, ಕಪ್ಪು ಸಮುದ್ರದಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳ ಸುರಕ್ಷತೆ ಬಗ್ಗೆ ಆತಂಕ ಹೆಚ್ಚಾಗಿದೆ. ಇದರ ಪರಿಣಾಮ ಭಾರತೀಯರ ನಾವಿಕರು ಅಪಾಯದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

BIMCO - ICS Seafarer Workforce Report 2026 ಪ್ರಕಾರ, ಫಿಲಿಪ್ಪೀನ್ಸ್ ನಂತರ ಭಾರತವು ವಾಣಿಜ್ಯ ಹಡಗುಗಳಿಗೆ ನಾವಿಕರನ್ನು ಪೂರೈಸುವ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿದ್ದು, ಜಾಗತಿಕ ಸಮುದ್ರಯಾನ ಸಿಬ್ಬಂದಿಯಲ್ಲಿ ಶೇ.12.2 ರಷ್ಟು ಕಾಲು ಹೊಂದಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾರತೀಯ ನಾಯಕರ ಸಮಗ್ರ ಡೇಟಾಬೇಸ್ ನಿರ್ಮಿಸಲು ಯೋಜನೆ ರೂಪಿಸಿದ್ದು, ವಿಶೇಷವಾಗಿ ಕಪ್ಪು ಸಮುದ್ರದಂತಹ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಉದ್ಯೋಗ ಸ್ವೀಕರಿಸುವ ವೇಳೆ ಎಚ್ಚರಿಕೆ ವಹಿಸುವಂತೆ ನಾವಿಕರಿಗೆ ಸಲಹೆ ನೀಡಿದೆ.

ಸರಕು ಸಾಗಣೆ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಯುದ್ಧದಲ್ಲಿ ತೊಡಗಿರುವ ಉಕ್ರೇನ್ ಮತ್ತು ರಷ್ಯಾ ಎರಡು ರಾಷ್ಟ್ರಗಳ ಎದುರು ತನ್ನ ಅಧಿಕೃತ ಪ್ರತಿಭಟನೆಯನ್ನು ದಾಖಲಿಸಿದೆ. ಅಲ್ಲದೆ, ಸಮುದ್ರ ಮಾರ್ಗಗಳ ಸುರಕ್ಷತೆ ಹಾಗೂ ಭಾರತೀಯರ ನಾವಿಕರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online