belaavi news :
Tesla Model YL Deliveries Begin: ಟೆಸ್ಲಾ ತನ್ನ ಮೂರು - ಸಾಲು ( Three -row) Model YL 6 - ಸೀಟರ್ SUV ಅನ್ನು ಗ್ರಾಹಕರಿಗೆ ತಲುಪಿಸಲು ಆರಂಭಿಸಿರಿ. ಎಸ್ ಯುವಿ ತನ್ನ ಪ್ರೀಮಿಯಂ ವಿನ್ಯಾಸ ಮತ್ತು ವಿಸ್ತೃತ ಆಸನ ವ್ಯವಸ್ಥೆಯಿಂದ ಗಮನ ಸೆಳೆಯುತ್ತಿದೆ.
ಈ ಮಾದರಿಯನ್ನು ಚೀನಾದಲ್ಲಿ ತಯಾರಿಸಲಾಗಿದ್ದು, CBU ( Completely Built Unit) ರೂಪದಲ್ಲಿ ದೇಶಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಇದರಿಂದ ನೇರವಾಗಿ ಫ್ಯಾಕ್ಟರಿಯಿಂದ ಸಂಪೂರ್ಣವಾಗಿ ತಯಾರಾದ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.
ಟೆಸ್ಲಾ ಮಾಡೆಲ್ YL ತನ್ನ ಆಧುನಿಕ ತಂತ್ರಜ್ಞಾನ ದೀರ್ಘ ರೇಂಜ್ ಸಾಮರ್ಥ್ಯ ಮತ್ತು ಕುಟುಂಬ ಸ್ನೇಹಿ 6 ಸೀಟರ್ ವಿನ್ಯಾಸದಿಂದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಹೊಸ ಆಸಕ್ತಿಯನ್ನು ಹುಟ್ಟು ಹಾಕಿದೆ.
ಟೆಸ್ಲಾ ಮಾಡೆಲ್ YL ಡೆಲಿವರಿ ಆರಂಭ: ಅಮೇರಿಕನ್ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಟೆಸ್ಲಾ ದೇಶದಲ್ಲಿ ಇನ್ನೂ ಉತ್ಪಾದನಾ ಸೌಲಭ್ಯವನ್ನು ಹೊಂದಿಲ್ಲದ ಕಾರಣ ಪ್ರಸ್ತುತ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಸಂಪೂರ್ಣವಾಗಿ ಆಮದು imports ಮೂಲಕವೇ ಮಾರಾಟ ಮಾಡುತ್ತಿದೆ. ಭಾರತದಲ್ಲಿ ಮಾರಾಟವಾಗುವ ಎಲ್ಲಾ ಟೆಸ್ಲಾ ವಾಹನಗಳು ನೇರವಾಗಿ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿವೆ. ಬಳಿಕ ನವದೆಹಲಿ, ಮುಂಬೈ, ಗುರುಗ್ರಾಮ್ ಮತ್ತು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇರುವ ಕೇಂದ್ರಗಳ ಮೂಲಕ ಗ್ರಾಹಕರಿಗೆ ವಿತರಣೆ ಪ್ರಕ್ರಿಯೆ ನಡೆಯುತ್ತದೆ.
ಪ್ರಸ್ತುತ ಟೆಸ್ಲಾ ಭಾರತೀಯ ಮಾರುಕಟ್ಟೆಯಲ್ಲಿ model Y ಅನ್ನು ಮಾತ್ರ ನೀಡುತ್ತಿದೆ. ಇದರ ರಿಯಲ್ - ವ್ಹೀಲ್ - ಡ್ರೈವ್ ರೂಪಾಂತರದ ಬೆಲೆ ರೂ. 50.89 ಲಕ್ಷ (ಎಕ್ಸ್- ಶೋರೂಂ) ಆಗಿದೆ. ಜೊತೆಗೆ ಕಂಪನಿಯು AWD ಸಾಮರ್ಥ್ಯದ ಹೊಸ Model YL ಅನ್ನು ಸಹ ಡೆಲಿವರಿ ಪ್ರಾರಂಭಿಸಿದ್ದು, ಇದರ ಬೆಲೆ ರೂ. 61.99 ಲಕ್ಷ (ಎಕ್ಸ್ - ಶೋರೂಂ) ಎಂದು ತಿಳಿದು ಬಂದಿದೆ.
ಸ್ಟ್ಯಾಂಡರ್ಡ್ Model Y ಒಂದು ಚಾರ್ಜ್ ನಲ್ಲಿ ಸುಮಾರು 500 ಕಿಲೋಮೀಟರ್ ವರೆಗೆ ರೇಂಜ್ ನೀಡುತ್ತದೆ. ಆದರೆ ಹೊಸ Model Y L 681 ಕಿಮೀ ವರೆಗೆ ವಿಸ್ತೃತ ರೇಂಜ್ ನೀಡುತ್ತದೆ. ಈ ಹೊಸ ಆವೃತ್ತಿಯು ಮೂರು - ಸಾಲು, 6- ಆಸನಗಳ ವಿನ್ಯಾಸವನ್ನು ಹೊಂದಿದ್ದು, ಕುಟುಂಬ ಖರೀದಿದಾರರಿಗೆ ಹೆಚ್ಚು ಪ್ರಾಯೋಗಿಕ ಆಯ್ಕೆಯಾಗಿ ಕಾಣುತ್ತಿದೆ.
ಕ್ಯಾಬಿನ್ ನಲ್ಲಿ ಸುಧಾರಿತ ಹೆಡ್ ರೂಮ್ ಮತ್ತು ಲೆಗ್ ರೂಮ್ ಜೊತೆಗೆ ಹೆಚ್ಚುವರಿ ಕಂಫರ್ಟ್ ನೀಡಲಾಗಿದೆ. ವಿಶೇಷವಾಗಿ ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ ಗಳು, ಪವರ್ಡ್ ಆರ್ಮ್ ರೆಸ್ಟಗಳು, ಒನ್ - ಟಚ್ ಪೋಲ್ಡಿಂಗ್ ಸೀಟ್ ವೆಂಟಿಲೇಷನ್ ಮತ್ತು ಹೀಟಿಂಗ್ ಕಾರ್ಯಗಳನ್ನು ಒಳಗೊಂಡಿದೆ. ಮೂರನೇ ಸಾಲಿನಲ್ಲಿ ಪವರ್ ರಿಕ್ಲೈನ್, ಒನ್ -ಟಚ್ ಫೋಲ್ಡಿಂಗ್ ಮತ್ತು ಮಿಸ್ಸಲ್ಲಾದ ಕ್ಲೈಮೇಟ್ ಕಂಟ್ರೋಲ್ ವ್ಯವಸ್ಥೆಯು ನೀಡಲಾಗಿದೆ.
ಕಂಫರ್ಟ್ ವೈಶಿಷ್ಟ್ಯ ಗಳ ಜೊತೆಗೆ ಟೆಸ್ಲಾ ಮಾಡೆಲ್ Y L ಫುಲ್ ಸೆಲ್ಫ್ ಡ್ರೈವಿಂಗ್ (FSD) ಸಾಮರ್ಥ್ಯದೊಂದಿಗೆ ಬರುತ್ತದೆ. ಇದರಲ್ಲಿ ಮುಂಭಾಗ ಕ್ಯಾಮರಾಗಳು, ಅಟಾನಾಮಸ್ ಬ್ರೇಕಿಂಗ್, ಫಾರ್ವರ್ಡ್ ಕೊಲಿಷನ್ ವಾರ್ನಿಂಗ್, ಆಕ್ಟಿವ್ ಎಮರ್ಜೆನ್ಸಿ ಬ್ರೇಕಿಂಗ್ ಅಸಿಸ್ಟ್ ಮತ್ತು ಲೆನ್ ಡಿಪಾರ್ಚರ್ ಅವಾಯ್ಡೆನ್ಸ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ ಗಳನ್ನು ಪ್ರಮಾಣಿತವಾಗಿ ಒಳಗೊಂಡಿದೆ.
ಟೆಸ್ಲಾ ಈ SUV ಅನ್ನು ಡ್ಯುಯಲ್ - ಸ್ಕ್ರೀನ್ ಸೆಟಪ್ ನೊಂದಿಗೆ ಸಜ್ಜುಗೊಳಿಸಿದೆ. ಮುಂಭಾಗದಲ್ಲಿ 16 -ಇಂಚಿನ ಸೆಂಟ್ರಲ್ ಟಚ್ ಸ್ಕ್ರೀನ್ ಮತ್ತು ಎರಡನೇ ಸಾಲಿನಲ್ಲಿ 8 ಇಂಚಿನ ಟಚ್ ಸ್ಕ್ರೀನ್ ನೀಡಲಾಗಿದೆ. ಜೊತೆಗೆ ಇದು ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಸಹ ಬೆಂಬಲಿಸುತ್ತದೆ. ಕೇವಲ 15 ನಿಮಿಷ ಚಾರ್ಜಿನಲ್ಲಿ ಸುಮಾರು 288 ಕಿಮೀ ರೇಂಜ್ ಪಡೆಯಬಹುದು ಎಂದು ಕಂಪನಿ ಹೇಳಿದೆ.
Model Y L ಪ್ರಮಾಣಿತವಾಗಿ 4 ವರ್ಷ 80,000 km ವಾರ್ನಿಂಗ್ ಯೊಂದಿಗೆ ಬರುತ್ತದೆ. ಬ್ಯಾಟರಿ ಮತ್ತು ಡ್ರೈವ ಯೂನಿಟ್ ಗೆ 8 ವರ್ಷ / 1,92,000 ಕಿಲೋಮೀಟರ್ ವರೆಗೆ ವಾರಂಟಿ ನೀಡಲಾಗುತ್ತದೆ.
ಭಾರತೀಯರ ಮಾರುಕಟ್ಟೆಯಲ್ಲಿ ಈ ಎಲೆಕ್ಟ್ರಿಕ್ SUV, BYD Sealion 7, Hyundai loniq 5 ಹಾಗೂ Kia EV6 ಮುಂತಾದ ಮಾದರಿಗಳಿಗೆ ನೇರ ಸ್ಪರ್ದಿಯಾಗಿ ಪರಿಗಣಿಸಲಾಗಿದೆ.
Also Read:
ಹುಬ್ಬಳ್ಳಿಯಲ್ಲಿ ಬಿರುಗಾಳಿಗೆ ಶಾಲಾ ಛಾವಣಿ ಹಾರಿತು; ಭಾರಿ ಅನಾಹುತದಿಂದ ಪಾರಾದ ಮಕ್ಕಳು