belagavi news :
ತಮಿಳ್ ನಾಡು ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಭರ್ಜರಿ ಗೆಲುವು ಸಾಧಿಸಿ 108 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿರುವ ಬೆನ್ನಲ್ಲೇ, ನಟ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ವಿಜಯ್ ಅವರ ವೈಯಕ್ತಿಕ ಜೀವನ ಮತ್ತು ಸಿನಿ ಪಯಣದ ಕುರಿತ ವಿಚಾರಗಳು ಈ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿವೆ.
ವಿಜಯ್ ತಂದೆ ಕನ್ನಡದ ದಿಗ್ಗಜ ನಟರಾದ ಅಂಬರೀಶ್, ವಿಷ್ಣುವರ್ಧನ್, ದ್ವಾರಕೀಶ್ ಮತ್ತು ಶಂಕರ್ ನಾಗ್ ಅಭಿನಯದ ಸಿನಿಮಾಗಳಿಗೂ ಆಕ್ಷನ್ ಕಟ್ ಹೇಳಿ ಗಮನ ಸೆಳೆದಿದ್ದರು. ಆ ಕಾಲದಲ್ಲಿ ಅವರು ಸ್ಟಾರ್ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಅವರ ಮಗ ವಿಜಯ್ ರಾಜಕೀಯದಲ್ಲಿ ಹೊಸ ಇತಿಹಾಸ ಬರೆಯುತ್ತಿರುವ ಈ ಹೊತ್ತಿನಲ್ಲಿ, ಅವರ ತಂದೆ ಮತ್ತು ಕನ್ನಡ ಚಿತ್ರರಂಗದ ನಡುವಿನ ವಿಶೇಷ ನಂಟು ಮತ್ತೆ ಗಮನ ಸೆಳೆಯುತ್ತಿದೆ . ದಳಪತಿ ವಿಜಯ್ ಅವರ ತಂದೆ ಎಸ್ ಎ ಚಂದ್ರಶೇಖರ್ ಕೇವಲ ತಮಿಳು ಸಿನಿಮಾಗಸ್ತೆ ಅಲ್ಲ ಸ್ಯಾಂಡಲ್ ವುಡ್ ನಲ್ಲಿ ತಮ್ಮ ನಿರ್ದೇಶನದ ಚಾಕು ಮೂಡಿಸಿದವರು. ಇಂದು ವಿಜಯ್ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿರುವಾಗ, ಅವರ ತಂದೆಯ ಕನ್ನಡ ಸಿನಿ ಲೋಕದ ಹಳೆಯ ನೆನಪುಗಳು ಮತ್ತೆ ಚರ್ಚೆಯಲ್ಲಿವೆ.
ತಮಿಳುನಾಡು ವಿಧಾನಸಭೆ ಪಲಿತಾಂಶ ನಿನ್ನೆ ಪ್ರಕಟವಾಗಿದ್ದು, ನಟ ವಿಜಯ್ ಸಾರಥ್ಯದ ಟಿವಿಕೆ ವಿಜಯ್ ಪಕ್ಷವು ಅತಿ ದೊಡ್ಡ ಶಕ್ತಿಯಾಗಿ ಹೊರಬಂದಿದೆ. 108 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಅಲೆಯನ್ನು ಎಬ್ಬಿಸಿದೆ. ಐತಿಹಾಸಿಕ ಜಯಕ್ಕೆ ದಕ್ಷಿಣ ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆ ಕೆ ಬಿ ಎಂ ಕೂಡ ಹೃತ್ಪೂರ್ವಕ ವಂದನೆ ಸಲ್ಲಿಸಿದೆ.
ಜನಗಣ ಚಿತ್ರವನ್ನು ನಿರ್ಮಿಸಿರುವ ಕೆವಿಎಂ ಪ್ರೊಡಕ್ಷನ್ ಸಂಸ್ಥೆಯ ವೆಂಕಟ ಕೆ ನಾರಾಯಣ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಸಂದೇಶ ಹಂಚಿಕೊಂಡಿದ್ದಾರೆ. ಅವರ ಹೇಳಿರುವಂತೆ: ಇದಕ್ಕೊಳಪಟ್ಟ, ವಿಜಯ್ ಅವರ ಕೊನೆಯ ಚಿತ್ರ ಜನ ನಾಯ್ಗನ್ ಸೆನ್ಸ್ ಆರ್ ಸಮಸ್ಯೆಗಳಿಂದಾಗಿ ವಿಳಂಬ ಎದುರಿಸುತ್ತಿದ್ದು, ಅದರ ಬಿಡುಗಡೆ ಬಗ್ಗೆ ಇನ್ನೂ ಅನಿಶ್ ಜೊತೆ ಮುಂದುವರೆದಿದೆ. ಆದರೆ ಅಭಿಮಾನಿಗಳು ಅಧಿಕೃತ ರಿಲೀಸ್ ದಿನಾಂಕ ಘೋಷಣೆಗೆ ತೀವ್ರವಾಗಿ ಒತ್ತಾಯಿಸುತ್ತಿದ್ದಾರೆ. ವಿಜಯ್ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸುತ್ತಿರುವಾಗ, ಅವರ ಸಿನಿಮಾ ಪ್ರಾಜೆಕ್ಟ್ ಕೂಡ ದೊಡ್ಡ ಚರ್ಚೆಯ ಕೇಂದ್ರವಾಗಿಯೇ ಉಳಿದಿದೆ.
ನ್ಯಾಯ ಎಲ್ಲಿದೆ?, ಗೆದ್ದ ಮಗ, ಸಿಂಹ ಘರ್ಜನೆ, ಗೆಲುವು ನನ್ನದೇ ಮತ್ತು ಹಸಿದ ಹೆಬ್ಬುಲಿ ಸಿನಿಮಾಗಳನ್ನು ನಿರ್ದೇಶನ ಮಾಡುವ ಮೂಲಕ ಎಸ್ ಎ ಚಂದ್ರಶೇಖರ್ ಅವರು ಸ್ಯಾಂಡಲ್ವುಡ್ ನಲ್ಲಿ ತನ್ನದೇ ಯಶಸ್ಸಿನ ಆದಾಯ ಬರೆದಿದ್ದರು. ಆದರೆ ಈ ವಿಷಯ ಬಹುತೇಕ ಜನರಿಗೆ ಇದು ತಿಳಿದಿರಲಿಲ್ಲ.
ಇಂದು ಜಗತ್ತೇ ಮೆಚ್ಚುವ ಸೂಪರ್ ಸ್ಟಾರ್ ಆಗಿರುವ ವಿಜಯ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದವರು ಅವರ ತಂದೆ ಎಸ್ ಎನ್ ಚಂದ್ರಶೇಖರ್.' ನಾಲೈಯ ತೀರ್ಪು ಚಿತ್ರದ ಮೂಲಕ ವಿಜಯ್ ಅವರನ್ನು ನಾಯಕನಾಗಿ ಲಾಂಚ್ ಮಾಡಿದವರು ಅವರೇ. ಇದಕ್ಕಿಂತ ಮುಂಚೆ ಬಾಲು ನಟನಾಗಿ ವಿಜಯ್ ಮಿಂಚಿದ ಹಲವಾರು ಸಿನಿಮಾಗಳ ಹಿಂದೆ ಕೂಡ ಇದೆ ನಿರ್ದೇಶಕನ ಕೈಚಳಕವಿತ್ತು.
ಕುಟುಂಬ ಜೀವನದ ಒಂದು ಸ್ಪರ್ಶಕ ಭಾಗವಾಗಿ, ವಿಜಯ್ ಅವರಿಗೆ ವಿದ್ಯಾಯಂಬ ತಂಗಿ ಇದ್ದರು. ದುಃಖಕರವಾಗಿ ಅವರು ಬಾಲ್ಯದಲ್ಲಿಯೇ ನಿಧನರಾದರು. ಆ ನೆನಪಿಗಾಗಿ ಚಂದ್ರಶೇಖರ್ ಅವರು ತಮ್ಮ ನಿರ್ಮಾಣ ಸಂಸ್ಥೆಗೆ ವಿದ್ಯಾ ಫಿಗರ್ಸ್ ಎಂಬ ಹೆಸರಿಟ್ಟು ಮಹಿಳೆ ಮಕ್ಕಳಿಗೆ ಗೌರವ ಸಲ್ಲಿಸುತ್ತಾ ಬಂದಿದ್ದಾರೆ. ವಿಜಯ್ ಅವರು ಇಂದಿನ ಯಶಸ್ವಿನ ಹಿಂದೆ ತಂದೆಯ ಗಟ್ಟಿಯಾದ ನಿರ್ಧಾರ ಮಾರ್ಗದರ್ಶನ ಮತ್ತು ಸಿಹಿ ಪಯಣದ ಅನುಭವವೇ ದೊಡ್ಡ ಶಕ್ತಿ ಎನ್ನುವುದು ಸಿನಿ ವಲಯದ ಅಭಿಪ್ರಾಯ. ತಂದೆ ಸಮಾಜದ ಅವ್ಯವಸ್ಥೆ ವಿರುದ್ಧ ಕ್ರಾಂತಿಕಾರಿ ಕಥೆಗಳನ್ನು ಕನ್ನಡ ಮತ್ತು ತಮಿಳಿನಲ್ಲಿ ಕಟ್ಟಿಕೊಟ್ಟರೆ, ಮಗ ವಿಜಯ್ ಈಗ ರಾಜಕೀಯ ರಂಗದಲ್ಲೂ ಹೊಸ ಕ್ರಾಂತಿ ಸೃಷ್ಟಿಸಲು ಸಜ್ಜಾಗಿದ್ದಾರೆ.
Also Read:
ಡಾಕ್ಟರ್ ರಾಜಕುಮಾರ್ ಜೀವನಗಾಥೆ ಹೇಳುವ "ನಾದಯೋಗಿ" ಪುಸ್ತಕ ನಾಳೆ ಬಿಡುಗಡೆ