<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

The India story trailer : ರೈತರ ಸಂಕಷ್ಟ ಮತ್ತು ಕೀಟನಾಶಕ ದಂದೆಯ ವಿರುದ್ಧ ಹೋರಾಟದ ಕಥೆ

The India story trailer : ರೈತರ ಸಂಕಷ್ಟ ಮತ್ತು ಕೀಟನಾಶಕ ದಂದೆಯ ವಿರುದ್ಧ ಹೋರಾಟದ ಕಥೆ
Summary: The trailer of the movie 'The India Story' has been released. The movie is revealing the story of the pesticide farming racket, the problems of farmers and the fight against it.

Belagavi News :

ಬಹು ನಿರೀಕ್ಷಿತ ಸಾಮಾಜಿಕ ಕಳಕಳಿಯ ಸಿನಿಮಾ 'ದಿ ಇಂಡಿಯಾ ಸ್ಟೋರಿ : ಸ್ಲೋ ಪಾಯಿಸನ್ ಇನ್ ಪ್ರೋಗ್ರೆಸ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸಾರ್ವಜನಿಕ ಆರೋಗ್ಯ ಮತ್ತು ಕೃಷಿ ಬಿಕ್ಕಟ್ಟಿನಂತಹ ಗಂಭೀರ ವಿಷಯಗಳನ್ನು ಆದರಿಸುವ ಈ ಚಿತ್ರವು ಜುಲೈ 24ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮವು ಕೃಷಿಯಲ್ಲಿ ಹೆಚ್ಚುತ್ತಿರುವ ರಾಸಾಯನಿಕ ಕೀಟನಾಶಕಗಳ ಬಳಕೆ ಮತ್ತು ಅದರ ಪರಿಣಾಮಗಳ ಕುರಿತು ಬೆಳಕು ಚೆಲ್ಲುತ್ತದೆ.

ಟ್ರೈಲರ್ ನಲ್ಲಿ ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿರುವ ಸಮಸ್ಯೆಗಳು, ರೈತರ ಸಂಕಷ್ಟಗಳು ಹಾಗೂ ಮಾನವ ಆರೋಗ್ಯದ ಮೇಲೆ ರಾಸಾಯನಿಕಗಳ ದುಷ್ಪರಿಣಾಮಗಳ ಕುರಿತಾದ ಕಥೆಯ ಸುಳಿವು ಸಿಗುತ್ತದೆ. ಸಮಾಜದ ಮೇಲೆ ಪರಿಣಾಮ ಬೀರುವ ಪ್ರಮುಖ ವಿಚಾರವನ್ನು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡಲಾಗಿದೆ.

'ದಿ ಇಂಡಿಯಾ ಸ್ಟೋರಿ' ಕೇವಲ ಮನರಂಜನೆಯ ಸಿನಿಮಾ ಮಾತ್ರವಲ್ಲದೆ, ಕೃಷಿ, ಆರೋಗ್ಯ ಮತ್ತು ಪರಿಸರದಂತಹ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಹುಟ್ಟು ಹಾಕುವ ಪ್ರಯತ್ನವಾಗಿದೆ.

'ದಿ ಇಂಡಿಯಾ ಸ್ಟೋರಿ' ಟ್ರೈಲರ್ ಗೆ ಭರ್ಜರಿ ಪ್ರತಿಕ್ರಿಯೆ - ಕೀಟನಾಶಕ ಮುಕ್ತ ಕೃಷಿಗಾಗಿ ಹೋರಾಟದ ಕಥೆ :

' ಇಂಡಿಯಾ ಸ್ಟೋರಿ - ಸ್ಲೋ ಪಾಯ್ಸನ್ ಇನ್ ಪ್ರೋಗ್ರೆಸ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಸಮಾಜಿಕ ಕಳಕಳಿಯ ವಿಷಯದಿಂದಾಗಿ ಭಾರಿ ಕುತೂಹಲ ಮೂಡಿಸಿದೆ. ಕೀಟನಾಶಕ ಮುಕ್ತ ಕೃಷಿಗಾಗಿ ಸಾಮಾನ್ಯ ವ್ಯಕ್ತಿ ಒಬ್ಬ ನಡೆಸುವ ಹೋರಾಟ, ಕಾರ್ಪೊರೇಟ್ ದಂಧೆ ಮತ್ತು ನ್ಯಾಯಾಲಯದ ವಾದ- ಪ್ರತಿವಾದಗಳ ಸುತ್ತ ಚಿತ್ರದ ಕಥೆ ಸಾಗುತ್ತದೆ.

ದೇಶದ ಕೋಟ್ಯಾಂತರ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ರಾಸಾಯನಿಕ ಕ್ರೀಟನಾಶಕಗಳ ಸಮಸ್ಯೆಯನ್ನು ಚಿತ್ರದಲ್ಲಿ ಧೈರ್ಯವಾಗಿ ಪ್ರಸ್ತುತಪಡಿಸಲಾಗಿದೆ. ಭಾವನಾತ್ಮಕ ಸನ್ನಿವೇಶಗಳು ಮತ್ತು ಗಂಭೀರ ಸಾಮಾಜಿಕ ಸಂದೇಶದೊಂದಿಗೆ ಮೂಡಿ ಬಂದಿರುವ ಟ್ರೈಲರ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಇದು ಕೇವಲ ಸಿನಿಮಾ ಅಲ್ಲ , ಚರ್ಚಿಸಬೇಕಾದ ವಿಷಯ - ನಿರ್ದೇಶಕ ಚೇತನ್ ಡಿ.ಕೆ :

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಚೇತನ್ ಡಿ .ಕೆ , "ದಿ ಇಂಡಿಯಾ ಸ್ಟೋರಿ ಕೇವಲ ಒಂದು ಸಿನಿಮಾ ಅಲ್ಲ, ಸಮಾಜದಲ್ಲಿ ಚರ್ಚೆಯಾಗಬೇಕಾದ ಗಂಭೀರ ವಿಚಾರ. ಕೀಟನಾಶಕಗಳ ಪರಿಣಾಮ ಪ್ರತಿಯೊಂದು ಮನೆಯ ಮೇಲು ಬೀರುತ್ತಿದೆ. ಸತ್ಯ ಮತ್ತು ಧೈರ್ಯದ ಹೋರಾಟವನ್ನು ಸಿನಿಮಾದಲ್ಲಿ ತೋರಿಸಿದ್ದೇವೆ" ಎಂದು ಹೇಳಿದ್ದಾರೆ.

ಪ್ರಸ್ತುತ ಪರಿಸ್ಥಿತಿಯನ್ನು ಪ್ರಶ್ನಿಸಲು ಮತ್ತು ಅರ್ಥ ಮಾಡಿಕೊಳ್ಳಲು ಈ ಸಿನಿಮಾ ಪ್ರೇಕ್ಷಕರಿಗೆ ಪ್ರೇರಣೆಯಾಗಲಿದೆ ಎಂಬ ವಿಶ್ವಾಸವನ್ನು ನಿರ್ದೇಶಕರು ವ್ಯಕ್ತಪಡಿಸಿದ್ದಾರೆ.

ಕಾಜಲ್ ಅಗರ್ವಾಲ್ ಗೆ ವಿಶೇಷ ಅನುಭವದ ಸಿನಿಮಾ :

ಚಿತ್ರದ ನಾಯಕಿ ಕಾಜಲ್ ಅಗರ್ವಾಲ್, ಈ ಸಿನಿಮಾ ತಮ್ಮ ಪಾಲಿಗೆ ಅರ್ಥಪೂರ್ಣ ಅನುಭವ ನೀಡಿದೆ ಎಂದು ಹೇಳಿದ್ದಾರೆ. ಸವಾಲುಗಳ ನಡುವೆಯೂ ಸತ್ಯದ ಪರವಾಗಿ ನಿಲ್ಲುವ ಧೀಮಂತ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು, ಚಿತ್ರದ ಕಥೆ ಮತ್ತು ಸಂದೇಶ ಪ್ರೇಕ್ಷಕರ ಮನ ಮುಟ್ಟಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಜುಲೈ 24ರಂದು ವಿಶ್ವದ್ಯಂತ ಬಿಡುಗಡೆಯಾಗಲಿರುವ 'ಡಿ ಇಂಡಿಯಾ ಸ್ಟೋರಿ' ಸಿನಿಮಾ ಕೃಷಿ ಆರೋಗ್ಯ ಮತ್ತು ಪರಿಸರದಂತಹ ಪ್ರಮುಖ ವಿಷಯಗಳ ಕುರಿತು ಹೊಸ ಚರ್ಚೆಗೆ ಕಾರಣವಾಗುವ ನಿರೀಕ್ಷೆ ಇದೆ.

'ದಿ ಇಂಡಿಯಾ ಸ್ಟೋರಿ' ಸಿನಿಮಾ - ಸಾಮಾನ್ಯ ಮನುಷ್ಯನ ಅಸಾಮಾನ್ಯ ಹೋರಾಟದ ಕಥೆ ಎಂದ ಶ್ರೇಯಸ್ ತಲ್ಪಾಡೆ :

ಬಹುನಿರೀಕ್ಷಿತ ಸಾಮಾಜಿಕ ಕಳಕಳಿಯ ಸಿನಿಮಾ 'ದಿ ಇಂಡಿಯಾ ಸ್ಟೋರಿ : ಸ್ಲೋ ಪಾಯ್ಸನ್ ಇನ್ ಪ್ರೋಗ್ರೆಸ್' ಚಿತ್ರದ ಬಗ್ಗೆ ನಟ ಕ್ಷಯ ತಲ್ಪಡೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೀಟನಾಶಕ ಕೃಷಿ ದಂಧೆ ಮತ್ತು ಅದರ ಪರಿಣಾಮಗಳ ಕುರಿತಾದ ಈ ಸಿನಿಮಾ ಸಾಮಾನ್ಯ ಮನುಷ್ಯನ ಹೋರಾಟವನ್ನು ಕೇಂದ್ರವಾಗಿಟ್ಟುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಶ್ರೇಯಸ್ ತಲ್ಪಾಡೆ ಮಾತನಾಡಿ, ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಮುಂದೆ ಎದುರಾಗುವ ದೊಡ್ಡ ಸವಾಲುಗಳ ವಿರುದ್ಧ ಭರವಸೆ ಮತ್ತು ದೃಢಸಂಕಲ್ಪದಿಂದ ಹೇಗೆ ಹೋರಾಡುತ್ತಾನೆ ಎಂಬುದೇ ಚಿತ್ರದ ಪ್ರಮುಖ ಅಂಶ ಎಂದು ತಿಳಿಸಿದ್ದಾರೆ.

ಚಿತ್ರದ ಟ್ರೈಲರ್ ಸಿನಿಮಾದ ನೈಜ ಭಾವನೆ ಮತ್ತು ಸಂದೇಶವನ್ನು ಪರಿಣಾಮಕಾರಿಯಾಗಿ ತೋರಿಸಿದ ಪ್ರತಿಯೊಬ್ಬ ಪ್ರೇಕ್ಷಕರು ಚಿತ್ರದ ಕಥೆ ಮತ್ತು ಸಾಮಾಜಿಕ ಸಂದೇಶದೊಂದಿಗೆ ಸಂಪರ್ಕ ಹೊಂದುತ್ತಾರೆ ಎಂಬ ವಿಶ್ವಾಸವನ್ನು ನಟ ವ್ಯಕ್ತಪಡಿಸಿದ್ದಾರೆ.

ಕಾಜಲ್ ಅಗರ್ವಾಲ್ ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ದಿ ಇಂಡಿಯಾ ಸ್ಟೋರಿ ಜುಲೈ 24ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕೃಷಿ, ಆರೋಗ್ಯ ಮತ್ತು ಪರಿಸರದಂತಹ ಗಂಭೀರ ವಿಷಯಗಳನ್ನು ಒಳಗೊಂಡಿರುವ ಈ ಸಿನಿಮಾ ಬಿಡುಗಡೆಯ ಮುನ್ನವೇ ಕುತೂಹಲ ಮೂಡಿಸಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online