<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ರಾಜ್ಯದ ಎರಡನೇ ಅತಿ ದೊಡ್ಡ ಜಾತ್ರೆ ಪ್ರಾರಂಭ

ರಾಜ್ಯದ ಎರಡನೇ ಅತಿ ದೊಡ್ಡ ಜಾತ್ರೆ ಪ್ರಾರಂಭ
Summary: ಇಡೀ ರಾಜ್ಯದಲ್ಲಿ ಅತಿ ದೊಡ್ಡ ಎರಡನೇ ಜಾತ್ರೆ ಎಂದೇ ಪ್ರಸಿದ್ಧಿ ಆಗಿರುವಂತಹ ಸಾಗರದ ಮಾರಿಕಾಂಬೆ ಜಾತ್ರೆ ಮೊನ್ನೆಯಿಂದ ಅಂದರೆ 03/02/2026ದಿಂದ ಆರಂಭವಾಗಿದೆ.
Belagavi news :
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕರ್ನಾಟಕದ ಎರಡನೇ ಅತಿ ದೊಡ್ಡ ಜಾತ್ರೆ ಆಗಿರುವ ಮಾರಿಕಾಂಬಾ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ಪ್ರಾರಂಭಗೊಂಡಿದ್ದು,ಬೇರೆ ಬೇರೆ ಸ್ಥಳದಿಂದ ಜನಸಾಗರ ಹರಿದು ಬರುತ್ತಿದೆ.ತಾಯಿಯ ಶೃಂಗಾರ ಬಂತು ನೋಡಲು ಎರಡು ಕಣ್ಣುಗಳು ಸಾಲವು.

ಶ್ರೀ ಮಾರಿಕಾಂಬ ದೇವಿಯ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದ್ದು,ಸಾಗರದ ಮಾರಿಕಾಂಬಾ ದೇವಾಲಯದ ಮುಂದೆ ನಿರ್ಮಾಣ ಮಾಡಿರುವ ಬೃಹತ್ ಪೆಂಡಾಲ್ ನಲ್ಲಿ ದೇವಿಯ ಪ್ರತಿಷ್ಠಾಪನೆಯನ್ನು ಮಾಡಲಾಗಿದೆ.ರಾಜ್ಯದ ಎರಡನೇ ಅತಿ ದೊಡ್ಡ ಜಾತ್ರೆ ಎಂದೇ ಪ್ರಸಿದ್ಧಿಗೊಂಡಿರುವ ಈ ಸಾಗರದ ಗ್ರಾಮ ದೇವತೆ ಜಾತ್ರೆ,ಅನೇಕ ಜನಗಳ ಮನ ಸೆಳೆದಿದೆ.ಅತ್ಯಂತ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಈ ಜಾತ್ರೆ ಫೆಬ್ರವರಿ 3 ರಿಂದ ಪ್ರಾರಂಭಗೊಂಡಿದ್ದು,ಫೆಬ್ರವರಿ 11ರವರೆಗೆ ಒನಕೆ ಬಿಡುವ ಮೂಲಕ ಜಾತ್ರೆಗೆ ಅಂತ್ಯ ಹೇಳಲಾಗುವುದು.

ಸಾಗರದ ಸುಪ್ರಸಿದ್ಧ ಮಾರಿಕಾಂಬಾ ಜಾತ್ರೆ 2026ರ ಫೆಬ್ರವರಿ ಮೂರರಿಂದ ಅಧಿಕೃತವಾಗಿ ಪ್ರಾರಂಭವಾಗಿದೆ.ಈ ಜಾತ್ರೆ ತಿಂಗಳುಗಳ ಕಾಯುವಿಕೆಯಿಂದ ಮತ್ತು ದೇವ ದರ್ಶನಕ್ಕಾಗಿ ಸಾವಿರಾರು ಭಕ್ತರ ಸಾಗರವೇ ಆಗಮಿಸುತ್ತಿದ್ದಾರೆ. ಜಾತ್ರೆಯ ಆರಂಭದಲ್ಲಿ ಮಾಂಗಲ್ಯ ಪೂಜೆ ಮತ್ತು ವಿವಿಧ ವಿಧಿ ಶಾಸ್ತ್ರ ಕಾರ್ಯಗಳು ನಡೆಯುತ್ತಿದ್ದು,ದೇವಿಯ ದರ್ಶನಕ್ಕೆ ರಾತ್ರಿ ಗಂಟೆಗಳ ಮುಂಚಿತವಾಗಿ ಸಾವಿರಾರು ಭಕ್ತರು ಒಂದು ಶ್ರೇಣಿಯಾಗಿ ಸಾಲಿನಲ್ಲಿ ನಿಂತಿದ್ದಾರೆ.

ಈ ಬಾರಿ ಸಾಗರ ಜಾತ್ರೆಗೆ ವಿಶೇಷವಾಗಿ ದೇವಿಯ ಪ್ರತಿಷ್ಠಾಪನೆ ಬೃಹತ್ ಪೆಂಡಾಲ್ ನಲ್ಲಿ ನಿರ್ಮಾಣಗೊಂಡು ಅದ್ದೂರಿಯಾಗಿ ನೆರವೇರಿಸಲಾಗಿದೆ. ದೂರ ದೂರನೆಲ್ಲ ಭಾಗಗಳಿಂದ ಜನರು ಸಾಗರ ಹಬ್ಬದ ವೇಳೆ ದೇವಿಯ ದರ್ಶನಕ್ಕೆ ಬರುತ್ತಿದ್ದು,ನಗರವು ಭಕ್ತ ಚೈತನ್ಯದಿಂದ ತುಂಬಿ ಹೋಗಿದೆ.

ಸಾಗರದ ಮಾರಿಕಾಂಬಾ ಇದು ಇತಿಹಾಸದಲ್ಲೇ ಅತಿ ಬಾರದ ಭಕ್ತಿಮಯ ಆಚರಣೆ,ಪ್ರಜ್ವಲಿ ತದರ್ಶನ,ಸಂಸ್ಕೃತಿ ಮತ್ತು ಸಂಭ್ರಮ ಈ ಬಾರಿ ಸಹ ರಜತ ಮನೆಯಲ್ಲಿ ನಡೆಯುತ್ತಿದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಸಾಗರಕ್ಕೆ ಆಗಮಿಸುತ್ತಿದ್ದಾರೆ.ಮತ್ತು ಸ್ಥಳೀಯ ಆಡಳಿತ ಹಾಗೂ ಪೊಲೀಸರು ಭಕ್ತರ ಭದ್ರತೆ ಮತ್ತು ಸರಳ ಪ್ರವಾಸಕ್ಕೆ ಸೂಕ್ತ ವ್ಯವಸ್ಥೆಗಳನ್ನು ನಡೆಸಿದ್ದಾರೆ.

ಜಾತ್ರೆಯ ಇತಿಹಾಸ:
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಬಹು ಭಾಗವನ್ನು ಕಳದಿಯ ಅರಸರು ಆಳುತ್ತಿದ್ದರು.ಕೆಳದಿ ಅರಸರು ಯುದ್ಧವನ್ನು ನಡೆಸುವ ಸಂದರ್ಭದಲ್ಲಿ ಈ ದೇವಿಯ ಮುಂದೆ ತಮ್ಮ ಆಯುಧಗಳನ್ನು ಇಟ್ಟು ಪೂಜಿ ಸಲ್ಲಿಸಿ ತೆರಳಿದರೆ ವಿಜಯ ಖಂಡಿತ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಲಾಗುತ್ತಿತ್ತು.ಅಲ್ಲದೆ ಇದು ಮೈಸೂರು ಸಂಸ್ಥಾನದ ಆಳ್ವಿಕೆಯ ಕೊನೆಯ ಗಡಿಭಾಗವಾಗಿತ್ತು.

ದೇವಿಗೆ ಜನರು ಯಾವುದೇ ರೋಗ ಭುಜನುಗಳು ಬರಬಾರದೆಂದು ಪೂಜೆಗಳನ್ನು ಸಲ್ಲಿಸುತ್ತಿದ್ದರು.ಆ ರಾಜರ ಕಾಲದಿಂದಲೂ ಇಲ್ಲಿಯವರೆಗೆ ಈ ಸಾಗರ ದೇವಿಯ ಅಂದರೆ ಸಾಗರದ ಮಾರಿಕಾಂಬಾ ದೇವಿಯ ಜಾತ್ರೆಯು ಅತ್ಯಂತ ವಿಜ್ರಂಬಣೆಯಿಂದ ಮೂರು ವರ್ಷಕ್ಕೆ ಒಂದು ಸಲ ನಡೆಯುತ್ತದೆ.ಇದು ಈ ಸಾಗರದ ಮಾರಿಕಾಂಬಾ ದೇವಿ ಜಾತ್ರೆಯ ಹಿನ್ನೆಲೆಯಾಗಿದೆ.

ಇದು ಇಷ್ಟಾರ್ಥಗಳು ಪ್ರಾಪ್ತಿಯಾಗುವಂತಹ ಸ್ಥಳ:
ಹೌದು ನಿಜ ಸಾಗರದ ಗ್ರಾಮದೇವತೆ ಆಗಿರುವ ಶ್ರೀ ಮಾರಿಕಾಂಬಾ ದೇವಿಯ ಶಕ್ತಿಯು ಅಷ್ಟೊಂದು ಬಲಿಷ್ಠವಾದದ್ದು.ಅಂದು ರಾಜರು ಆರಾಧಿಸುತ್ತಿದ್ದ ದೇವಿಯಾದ ಮಾರಿಕಾಂಬಾ ಇಂದು ಸಾಗರದ ಗ್ರಾಮ ದೇವತೆಯಾಗಿದ್ದಾಳೆ. ಭಕ್ತರು ತಮ್ಮ ಇಷ್ಟಾರ್ಥಗಳನ್ನು ಮತ್ತು ತಮ್ಮ ಕಷ್ಟಗಳನ್ನು ನಿವಾರಿಸುವಂತಹ ಶಕ್ತಿಶಾಲಿ ಈ ಮಾರಿಕಾಂಬಾ ದೇವಿಯೇ ಎಂದು ಜನರ ನಂಬಿಕೆ.

ಈ ದೇವಿ ಹತ್ತಿರ ಭಕ್ತರು ತಮ್ಮ ಕಷ್ಟಗಳನ್ನು ನಿವಾರಿಸು ಎಂದು ದೇವಿಯಲ್ಲಿ ಬೇಡಿಕೊಂಡರೆ ಖಂಡಿತ ಅದು ಬಗೆಹರಿಯುತ್ತದೆ ಎಂಬ ನಂಬಿಕೆಯಲ್ಲಿ ಭಕ್ತರಿದ್ದಾರೆ.ಸಾಗರದ ಮಾರಿಕಾಂಬೆಯ ಮರದ ಮೂರ್ತಿಯು ರಾಜ್ಯದ ಅತಿ ದೊಡ್ಡ ಮೂರ್ತಿಯಾಗಿದೆ.ಅಲ್ಲದೆ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಬಿಸಿಲಿನ ತಾಪ ಬಾರದಂತೆ ಕಿಲೋಮೀಟರ್ ದೂರತನಕ ಜರ್ಮನ್ ಟೆಂಟ್ ಹಾಕಲಾಗಿದೆ.ಜಾತ್ರೆ ನಡೆಯುವ ಅಷ್ಟು ದಿನ ಭಕ್ತರಿಗೆ ಸುಲಭವಾಗಿ ದೇವಿಯ ದರ್ಶನವನ್ನು ಮಾರಿಕಾಂಬಾ ದೇವಾಲಯ ಸಮಿತಿ ಕಲ್ಪಿಸಿದೆ.

ಇಲ್ಲಿ ಎಲ್ಲಾ ಭಕ್ತರನ್ನು ಒಂದೇ ಸಮನ ರೀತಿಯಲ್ಲಿ ನೋಡುವುದು ವಿಶೇಷವಾಗಿದೆ.ಸಾಗರದ ವೀರಶೈವ ಮಂದಿರದಲ್ಲಿ ಪ್ರತಿದಿನ ಅನ್ನದಾಸೋಹವನ್ನು ನಡೆಸಲಾಗುತ್ತದೆ.ಒಟ್ಟಾರೆಯಾಗಿ ಹೇಳುವುದಾದರೆ ಆ ದೇವಿಯ ಹತ್ತಿರ ಭಕ್ತಿಯಿಂದ ಏನಾದರೂ ಪ್ರಾರ್ಥಿಸಿದರೆ ಅಥವಾ ಕೇಳಿಕೊಂಡರೆ ಖಂಡಿತವಾಗಿಯೂ ನೆರವೇರುತ್ತದೆ. ಇದು ಜನರ ಅತ್ಯಂತ ಬಲಿಷ್ಠ ನಂಬಿಕೆ.

ಈ ಸಾಗರ ಜಾತ್ರೆಗೆ ರಾಜಕುಮಾರ್ ಫ್ಯಾಮಿಲಿಯ ನಟ ಶಿವರಾಜ್ ಕುಮಾರ್ ಅವರು ಸಹ ತಮ್ಮ ಪತ್ನಿಯೊಂದಿಗೆ ಆಗಮಿಸಿದ್ದರು.ಇಲ್ಲಿಎಲ್ಲರಿಗೂ ಒಂದೇ ರೀತಿಯ ದರ್ಶನ ಮಾಡಲಾಗಿಸುತ್ತದೆ. ರಾತ್ರಿ ವ್ಯಾಪಾರವು ಭರ್ಜರಿಯಾಗಿ ನಡೆಯುತ್ತದೆ.ದೇವಿಯ ಜಾತ್ರೆಗೆ ಭಕ್ತರು ರಾತ್ರಿ ವೇಳೆಯೇ ಹೆಚ್ಚಾಗಿ ಆಗಮಿಸುತ್ತಿರುವುದರಿಂದ ಇಲ್ಲಿ ರಾತ್ರಿಪೂರ್ತಿ ಜಾತ್ರೆ ನಡೆಯುತ್ತದೆ.ಅಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದ ಅಮ್ಯೂಸ್ಮೆಂಟ್ ಪಾರ್ಕ್ ಹಾಕಲಾಗಿತ್ತು.ಜಾತ್ರೆಗೆ ನಟ ಶಿವರಾಜ್ ಕುಮಾರ್ ದಂಪತಿ ಸಮೇತ ದರ್ಶನ ಪಡೆದರು ಅದೇ ರೀತಿ ವಿನಯ್ ಗುರೂಜಿ ಕೂಡ ಆಗಮಿಸಿದ್ದರು.

ಈ ಜಾತ್ರೆಗೆ ದೇಶ ವಿದೇಶಗಳಿಂದ ಕೂಡ ಜನರು ಆಗಮಿಸುತ್ತಾರೆ:
ರಾಜ್ಯದ ಎರಡನೇ ಅತಿ ದೊಡ್ಡ ಜಾತ್ರೆ ಆಗಿರುವ ಸಾಗರದ ಶ್ರೀ ಮಾರಿಕಾಂಬೆ ಜಾತ್ರೆ ಅತ್ಯಂತ ದೊಡ್ಡದು,ಈ ಜಾತ್ರೆಯಲ್ಲಿ ದೇವಿಯನ್ನು ರಾಜರ ಕಾಲದಿಂದಲೂ ಸಹ ಆರಾಧಿಸಿಕೊಂಡು ಬರಲಾಗುತ್ತಿದೆ.ದೇವಿಯು ಸಹಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಬರುತ್ತಿದ್ದಾಳೆ.ಜಾತ್ರೆಯು ಅತಿ ವಿಜ್ರಂಬಣೆಯಿಂದ ನಡೆಯುತ್ತಿದೆ ಹೀಗಾಗಿ ಭಕ್ತರು ದೇಶ ವಿದೇಶಗಳಿಂದ ಇಲ್ಲಿಗೆ ಆಗಮಿಸುತ್ತಿದ್ದಾರೆ.ಬಂದಿರುವ ಭಕ್ತರಿಗೆ ಉಳಿಯುವ ವ್ಯವಸ್ಥೆ ಮತ್ತು ಟೆಂಟ್ ಗಳನ್ನು ನಿರ್ಮಿಸಿದ್ದಾರೆ.

ಇದು ಮೂರು ವರ್ಷಕ್ಕೊಮ್ಮೆ ಅತ್ಯಂತ ವಿಜ್ರಂಭಣೆಯಿಂದ ನಡೆಯುವ ಜಾತ್ರೆಯಾಗಿದೆ:
ರಾಜ್ಯದ ಎರಡನೇ ಅತಿ ದೊಡ್ಡ ಜಾತಿಯಾಗಿರುವ ಸಾಗರದ ಮಾರಿಕಾಂಬ ಜಾತ್ರೆಯು ಪ್ರತಿ ಮೂರು ವರ್ಷಕ್ಕೊಮ್ಮೆ ಒಂಬತ್ತು ದಿನಗಳ ಕಾಲ ನಡೆಯುವಂತಹ ಜಾತ್ರೆಯಾಗಿದೆ.ರಾಜ್ಯ ಮಹೋತ್ಸವಕ್ಕೆ ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿನಿತ್ಯ ಸಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ .ದೇವಿಗೆ ಹರಕೆಯ ರೂಪದಲ್ಲಿ ಬಂಗಾರ ಬೆಳ್ಳಿಗಳನ್ನು ಭಕ್ತರು ನೀಡುತ್ತಿದ್ದಾರೆ. ಪ್ರತಿದಿನ ಭಕ್ತರಿಗಾಗಿದ್ದ ಸಹ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಇನ್ನೂ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ.

ದೇವಿಗೆ ಉಡಿ ತುಂಬಾ ಕಾರ್ಯಕ್ರಮವಂತು ಅತ್ಯಂತ ಶ್ರೇಷ್ಠಮಯವಾದದ್ದು.ನೋಡುಗರ ಮನಸೆಳೆಯುವುದು. ಇನ್ನೊಂದು ಈ ಜಾತ್ರೆಯ ವಿಶೇಷವೆಂದರೆ ಈ ಜಾತ್ರೆಗೆ ಆಗಮಿಸಿದ ಭಕ್ತರು 9 ದಿನಗಳವರೆಗೂ ಅಲ್ಲಿಯೇ ಇರಬೇಕು.ಮತ್ತು ಆ ಸಾಗರ ಊರಿನಲ್ಲಿ ಇರುವಂತಹ ಜನರು ಯಾರೂ ಕೂಡ ಜಾತ್ರೆಯ ಮುಗಿಯುವವರೆಗೂ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವುದು ನಿಷೇಧವಾಗಿದೆ.9 ದಿನಗಳವರೆಗೆ ಅದೇ ಊರಿನಲ್ಲಿದ್ದು ಜಾತ್ರೆಯನ್ನು ಅತ್ಯಂತ ವಿಜ್ರಂಬಣೆಯಿಂದ ಮಾಡುವುದು ನಿಯಮವಾಗಿದೆ.


ಇನ್ನಷ್ಟು ಓದಿರಿ:
ಭೀಕರ ಘಟನೆ: ಬೆಂಗಳೂರು - ಕಲಬುರಗಿ ಮಾರ್ಗದ ಖಾಸಗಿ ಬಸ್ ಗೆ ಬೆಂಕಿ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online