<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ರಾಜ್ಯ ಸರ್ಕಾರ ಪಾಪರ್ ಆಗಿದೆ, ಅದಕ್ಕೇ ಬರಗಾಲ ಘೋಷಣೆ ಇಲ್ಲ: ಆರ್. ಅಶೋಕ್

ರಾಜ್ಯ ಸರ್ಕಾರ ಪಾಪರ್ ಆಗಿದೆ, ಅದಕ್ಕೇ ಬರಗಾಲ ಘೋಷಣೆ ಇಲ್ಲ: ಆರ್. ಅಶೋಕ್
Summary: The Leader of Opposition in the Legislative Assembly, R. Ashok, alleged that the state government is financially bankrupt and is not moving forward to declare a drought despite the hardships of the farmers. Criticizing the government's administrative failure and neglect of the problems of the farmers, he demanded that the drought-affected areas be identified immediately and necessary relief measures be taken.

Belagavi News:

ಚಾಮರಾಜನಗರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರ ಆರ್ ಎಸ್ ಎಸ್ ಕುರಿತ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಸಚಿವರಿಗೆ ಬೇರೆ ಕೆಲಸವಿಲ್ಲದ ಕಾರಣ ಆರ್ ಎಸ್ ಎಸ್ ಬಗ್ಗೆ ಮಾತನಾಡಿ ಸುದ್ದಿಯಲ್ಲಿರುವ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿದರೆ ಸರ್ಕಾರಕ್ಕೆ ಟೀಕೆ ಎದುರಾಗುತ್ತದೆ ಎಂಬ ಕಾರಣಕ್ಕೆ ಆರ್ ಎಸ್ ಎಸ್ ವಿಚಾರವನ್ನು ಮುಂದಿಟ್ಟು ಕೊಳ್ಳುತ್ತಿದ್ದಾರೆ ಎಂದು ಅಶೋಕ್ ಹೇಳಿದರು. ಸರ್ಕಾರದ ಅವಧಿ ಇನ್ನೂ ಒಂದೂವರೆ ವರ್ಷ ಮಾತ್ರ ಇದೆ, ಎಷ್ಟು ಟೀಕೆ ಮಾಡುತ್ತಾರೋ ಮಾಡಲಿ ಎಂದು ಅವರು ಹೇಳಿದರು.

ಹಿಂದೆ ಆರ್ ಡಿಪಿಆರ್ ಇಲಾಖೆಯಲ್ಲಿ ಸಚಿವರಾಗಿದ್ದ ವೇಳೆ ಅನುದಾನದ ಬಳಕೆ ಕುರಿತು ಪ್ರಶ್ನಿಸಿದ ಅಶೋಕ್, 100 ರೂಪಾಯಿ ಅನುದಾನದಲ್ಲಿ ಕೇವಲ 34 ರೂಪಾಯಿ ಮಾತ್ರ ಖರ್ಚು ಮಾಡಲಾಗಿದೆ ಎಂದು ಆರೋಪಿಸಿದರು ಇಂತಹವರು ಈಗ ಇತರರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದೇ ವೇಳೆ ಕಾಂಗ್ರೆಸ್ ನಾಯಕರು ರಾಮನ ಕುರಿತು ಮಾತನಾಡುತ್ತಿರುವುದನ್ನು ಉಲ್ಲೇಖಿಸಿದ ಅವರು, ಈ ಹಿಂದೆ ರಾಮ ಮಂದಿರದ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿದ್ದವರು ಈಗ ರಾಮನ ಹೆಸರನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದು, ಸರ್ಕಾರ ಆರ್ಥಿಕವಾಗಿ ದುರ್ಬಲವಾಗಿದೆ ಎಂದು ಆರೋಪಿಸಿದರು. ಬರಗಾಲ ಘೋಷಣೆ ಮಾಡಲಾಗದ ಸರ್ಕಾರ ಜನರಿಗೆ ಹೊಸ ಯೋಜನೆಗಳನ್ನು ಹೇಗೆ ನೀಡುತ್ತದೆ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಪ್ರಚಾರ ಮತ್ತು ಫೋಟೋಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಟೀಕಿಸಿದರು.

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಸರ್ಕಾರ ಜನರಿಗೆ ಭರವಸೆ ನೀಡಿ ಮೋಸ ಮಾಡುತ್ತಿದೆ ಎಂದು ಆರೋಪಿಸಿದ ಅಶೋಕ್, ಪೈಲ್ವಾನರಿಗೆ ನೀಡಬೇಕಾದ ಗೌರವಧನ ಬಾಕಿ ಇದೆ ಹಾಗೂ ಗೃಹಲಕ್ಷ್ಮಿ ಹಣ ಪಾವತಿಯನ್ನು ವಿಳಂಬವಾಗಿದೆ ಎಂದು ಹೇಳಿದರು.

ಇದೇ ವೇಳೆ ಎಸ್ಐಆರ್ ಪ್ರಕ್ರಿಯೆ ಕುರಿತು ಮಾತನಾಡಿದ ಅವರು, 20 ವರ್ಷಗಳಿಗೊಮ್ಮೆ ನಡೆಯುವ ಈ ಪ್ರಕ್ರಿಯೆ ರಾಜ್ಯದಲ್ಲಿ ಪಾರದರ್ಶಕವಾಗಿ ನಡೆಯಬೇಕು. ಆದರೆ ಸರ್ಕಾರ ಎಸ್ಐಆರ್ ಪ್ರಕ್ರಿಯೆಯನ್ನೇ ಹೈಜಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತರ ಬೆಳೆಗಳು ಹಾನಿಯಾಗಿದ್ದು, ಬರಗಾಲ ಘೋಷಣೆ ಮಾಡುವಂತೆ ಸರ್ಕಾರ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರು ಆರ್. ಅಶೋಕ್ ಅವರಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಅಧಿವೇಶನದಲ್ಲಿ ರೈತರ ಪರವಾಗಿ ಧ್ವನಿ ಎತ್ತುವುದಾಗಿ ಅಶೋಕ್ ಭರವಸೆ ನೀಡಿದರು.

ಕೇಂದ್ರ ಸರ್ಕಾರದಿಂದ ಪರಿಹಾರ ಪಡೆಯಲು ರಾಜ್ಯ ಸರ್ಕಾರ ಮೊದಲು ಅಗತ್ಯ ವರದಿ ಸಲ್ಲಿಸಯನ್ನು ಎಂದು ಅವರು ಒತ್ತಾಯಿಸಿದರು.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online