Belagavi News:
ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳು ಮತ್ತು ಪೊಲೀಸ್ ಯಾರ್ಡ್ ಗಳಲ್ಲಿ ಜಪ್ತಿ ಮಾಡಿರುವ ಸಾವಿರಾರು ವಾಹನಗಳು ವರ್ಷಗಳಿಂದ ಬಯಲಿನಲ್ಲಿ ನಿಂತು ತುಕ್ಕು ಹಿಡಿಯುತ್ತಿದೆ. ಅಪರಾಧ ಪ್ರಕರಣಗಳು, ರಸ್ತೆ ಅಪಘಾತಗಳು ಹಾಗೂ ಸಂಚಾರ ನಿಯಮ ಉಲ್ಲಂಘನೆ ಸಿರಿದಂತೆ ವಿವಿಧ ಕಾರಣಗಳಿಗೆ ವಶಪಡಿಸಿಕೊಂಡ ಕಾರುಗಳು, ಬೈಕ್ ಗಳು ಮತ್ತು ಆಟೋಗಳು ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಹರಾಜಾಗದೆ ಹಾಗೆಯೇ ಉಳಿದಿವೆ.
ಕಾನೂನು ಪ್ರಕ್ರಿಯೆಯ ವಿಳಂಬ ಮತ್ತು ಹರಾಜು ವ್ಯವಸ್ಥೆಯ ಕೊರತೆಯಿಂದ ಪೊಲೀಸ್ ಠಾಣೆಗಳ ಆವರಣ ಮಾತ್ರವಲ್ಲದೆ ರಸ್ತೆ ಬದಿ ಹಾಗೂ ಫುಡ್ ಪಾತ್ ಗಳ ಮೇಲು ಜಪ್ತಿ ವಾಹನಗಳ ರಾಶಿ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ತುರ್ತು ಸಂದರ್ಭಗಳಲ್ಲಿ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ.
ಬಯಲಿನಲ್ಲಿ ವರ್ಷಗಳ ಕಾಲ ನಿಂತಿರುವ ಈ ವಾಹನಗಳು ಧೂಳು, ಮಳೆ ಮತ್ತು ಬಿಸಿಲಿನ ಪರಿಣಾಮದಿಂದ ಸಂಪೂರ್ಣ ಹಾಳಾಗುತ್ತಿವೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳು ನಿರ್ವಹಣೆಯ ಕೊರತೆಯಿಂದ ತುಕ್ಕು ಹಿಡಿಯುತ್ತಿದ್ದು, ಸರ್ಕಾರಕ್ಕೂ ದೊಡ್ಡ ಆರ್ಥಿಕ ನಷ್ಟ ಉಂಟಾಗುತ್ತಿದೆ.
ಇದರ ಜೊತೆಗೆ ಹಳೆಯ ವಾಹನಗಳಲ್ಲಿ ಇಂಧನದ ಅವಶೇಷ, ಬ್ಯಾಟರಿ ಹಾಗೂ ಇತರ ಸುಲಭವಾಗಿ ಹೊತ್ತಿ ಉರಿಯುವ ವಸ್ತುಗಳು ಇರುವುದರಿಂದ ಅಗ್ನಿ ಅವಘಡ ಸಂಭವಿಸುವ ಆದ್ಯತೆಯು ಹೆಚ್ಚಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಪರಿಸರ ಮಾಲಿನ್ಯ ಮತ್ತು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದಲೂ ಈ ಸಮಸ್ಯೆ ಗಂಭೀರವಾಗಿದೆ.
ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳು ಮತ್ತು ಯಾರ್ಡ್ ಗಳಲ್ಲಿ ಜಪ್ತಿ ವಾಹನಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು, ಪ್ರಕರಣಗಳ ತ್ವರಿತ ಇತ್ಯರ್ಥ ಮತ್ತು ನಿಯಮಿತ ಹರಾಜು ಪ್ರಕ್ರಿಯೆ ನಡೆಸುವಂತೆ ಸಾರ್ವಜನಿಕರು ಹಾಗೂ ತಜ್ಞರು ಆಗ್ರಹಿಸಿದ್ದಾರೆ.
ಬೆಂಗಳೂರು ಪೊಲೀಸ್ ಯಾರ್ಡ್ ಗಳು ಕಸದ ರಾಶಿ - ಹರಾಜು ವಿಳಂಬದಿಂದ ತುಕ್ಕು ಹಿಡಿಯುತ್ತಿರುವ ಕೋಟ್ಯಂತರ ರೂ. ಮೌಲ್ಯದ ಜಪ್ತಿ ವಾಹನಗಳು :
ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳು ಹಾಗೂ ಪೊಲೀಸ್ ಯಾರ್ಡ್ ಗಳು ಜಪ್ತಿ ಮಾಡಿದ ವಾಹನಗಳಿಂದ ತುಂಬಿ ತುಳುಕುತ್ತಿವೆ. ಪ್ರಾಣಿಗಳ ಒಳಗೆ ಸ್ಥಳಾವಕಾಶದ ಕೊರತೆಯಿಂದ ಕಾರುಗಳು, ಬೈಕ್ ಗಳು ಮತ್ತು ಆಟೋಗಳನ್ನು ರಸ್ತೆ ಬದಿ ಹಾಗೂ ಮೇಲೆಯೇ ಸಾಲಾಗಿ ನಿಲ್ಲಿಸಲಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.
ನಗರದ ಪ್ರಮುಖ ಪೊಲೀಸ್ ಠಾಣೆಗಳು ಮತ್ತು ಹೊರವಲಯದ ಪೊಲೀಸ್ ಡಂಪಿಂಗ್ ಯಾರ್ಡ್ ಗಳನ್ನು ನೋಡಿದರೆ ಅವು ವಾಹನ ನಿಲ್ದಾಣಗಳಿಗಿಂತ ಗುಜರಿ ಕೇಂದ್ರಗಳಂತೆ ಕಾಣಿಸುತ್ತವೆ. ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ನಿಂತಿರುವ ವಾಹನಗಳ ಸುತ್ತ ಗಿಡಗಂಟಿಗಳು ಬೆಳೆದಿದ್ದು, ವಿಶ್ವ ಜಂತುಗಳ ಆಶ್ರಯ ತಾಣಗಳಾಗಿ ಮಾರ್ಪಟ್ಟಿವೆ. ಇದರಿಂದ ಸ್ಥಳೀಯ ನಿವಾಸಿಗಳು ಆತಂಕದಲ್ಲಿ ಬದುಕುವಂತಾಗಿದ್ದು, ಮಳೆ ಮತ್ತು ಬಿಸಿಲಿನ ಪರಿಣಾಮ ಕೋಟ್ಯಂತರ ರೂಪಾಯಿ ಮೌಲ್ಯದ ವಾಹನಗಳು ತುಕ್ಕು ಹಿಡಿದು ಕಬ್ಬಿಣದ ಚೂರುಗಳಾಗುತ್ತಿವೆ.
ರಾಜು ಪ್ರಕ್ರಿಯೆ ವಿಳಂಬವೇ ಪ್ರಮುಖ ಕಾರಣ :
ಅಪಘಾತ, ಕಳ್ಳತನ ಹಾಗೂ ಇತರ ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ವಾಹನಗಳು ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಬಿಡುಗಡೆಯಾಗುವುದಿಲ್ಲ. ಅನೇಕ ಪ್ರಕರಣಗಳು ಐದರಿಂದ ಹತ್ತು ವರ್ಷಗಳವರೆಗೆ ಬಾಕಿ ಉಳಿದಿರುವುದರಿಂದ ವಾಹನಗಳು ಪೊಲೀಸ್ ಯಾರ್ಡ್ ಗಳಲ್ಲಿ ನಿಂತು ಹಾಳಾಗುತ್ತಿವೆ.
ಇದರ ಜೊತೆಗೆ, ದಂಡದ ಮೊತ್ತವು ವಾಹನದ ಪ್ರಸ್ತುತ ಮೌಲ್ಯಕ್ಕಿಂತ ಹೆಚ್ಚಿರುವುದು ಅಥವಾ ವಾಹನದ ದಾಖಲೆಗಳು ಅಪೂರ್ಣವಾಗಿರುವ ಕಾರಣ ಅನೇಕ ಮಾಲೀಕರು ತಮ್ಮ ವಾಹನಗಳನ್ನು ವಾಪಸ್ ಪಡೆಯಲು ಮುಂದೆ ಬರುತ್ತಿಲ್ಲ. ನಿಯಮಗಳ ಪ್ರಕಾರ ಹಕ್ಕು ಕೂಡದ ವಾಹನಗಳನ್ನು ನಿಗದಿತ ಅವಧಿ ಒಳಗೆ ಹರಾಜು ಮಾಡಬೇಕಾದರೂ, ಹರಾಜು ಪ್ರಕ್ರಿಯೆ ಸಕಾಲದಲ್ಲಿ ನಡೆಯದ ಕಾರಣ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ.
ಜಟ್ಟಿ ವಾಹನಗಳ ರಾಶಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ರಸ್ತೆ ಮತ್ತು ಫುಟ್ಪಾತ್ಗಳು ಒತ್ತುವರಿಯಾಗುತ್ತಿವೆ. ಸಾರ್ವಜನಿಕರ ಸುರಕ್ಷತೆ, ಸುಗಮ ಸಂಚಾರ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಜಪ್ತಿ ವಾಹನಗಳ ತ್ವರಿತ ವಿಲೇವಾರಿ ಮತ್ತು ಹರಾಜು ಪ್ರಕ್ರಿಯೆಗೆ ವೇಗ ನೀಡುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಜಪ್ಲಿ ವಾಹನಗಳಿಂದ ಅಗ್ನಿ ಅವಘಡದ ಭೀತಿ - ಬೆಂಗಳೂರಿನ ಪೊಲೀಸ್ ಠಾಣೆಗಳಲ್ಲಿ ಹೆಚ್ಚಿದ ಆತಂಕ, ಹೈಕೋರ್ಟ್ ಸೂಚನೆ ಏನು ? :
ನಗರದ ವಿವಿಧ ಪೊಲೀಸ್ ಠಾಣೆಗಳು ಮತ್ತು ಪೊಲೀಸ್ ಯಾರ್ಡ್ ಗಳಲ್ಲಿ ವರ್ಷಗಳಿಂದ ನಿಂತಿರುವ ಜಪ್ತಿ ವಾಹನಗಳು ಈಗ ಸಾರ್ವಜನಿಕ ಸುರಕ್ಷತೆಗೆ ದೊಡ್ಡ ಸವಾಲ್ ಆಗಿ ಪರಿಣಮಿಸಿವೆ. ಇತ್ತೀಚೆಗೆ ಬೆಂಗಳೂರಿನ ಕೆಲವು ಪೊಲೀಸ್ ಠಾಣೆಗಳ ಆವರಣದಲ್ಲಿ ಜಪ್ತಿ ಮಾಡಲಾಗಿದ್ದ ವಾಹನಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ನೂರಾರು ವಾಹನಗಳು ಸುಟ್ಟು ಭಸ್ಮವಾಗಿದ್ದ ಘಟನೆ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ತಜ್ಞರ ಪ್ರಕಾರ, ಅನೇಕ ಜಪ್ತಿ ವಾಹನಗಳಲ್ಲಿ ಇನ್ನೂ ಪೆಟ್ರೋಲ್ ಅಥವಾ ಡೀಸೆಲ್ ಅವಶೇಷಗಳು ಉಳಿದಿರುವ ಸಾಧ್ಯತೆ ಇದೆ. ಇಂತಹ ವಾಹನಗಳಿಗೆ ಸಣ್ಣಕಿಡಿ ಬಿದ್ದರೂ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿ ಪೊಲೀಸ್ ಠಾಣೆ, ಯಾರ್ಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭಾರಿ ಹಾನಿ ಉಂಟು ಮಾಡುವ ಅಪಾಯವಿದೆ. ಇದರಿಂದ ಸಾರ್ವಜನಿಕರು ಮತ್ತು ಪೊಲೀಸ್ ಸಿಬ್ಬಂದಿಯ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳು ಮೂಡಿವೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ರಸ್ತೆ ಮತ್ತು ಫುಟ್ಪಾತ್ಗಳ ಮೇಲೆ ನಿಲ್ಲಿಸಲಾಗಿರುವ ಜಪ್ತಿ ವಾಹನಗಳನ್ನು ತ್ವರಿತವಾಗಿ ತೆರವುಗೊಳಿಸುವಂತೆ ಹೈಕೋರ್ಟ್ ಈ ಹಿಂದೆ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಜಪ್ತಿ ವಾಹನಗಳ ಸಮರ್ಪಕ ನಿರ್ವಹಣೆ ಮತ್ತು ನಿಯಮಿತಹ ರಾಜು ಪ್ರಕ್ರಿಯೆ ನಡೆಸುವ ಅಗತ್ಯವನ್ನು ನ್ಯಾಯಾಲಯ ಒತ್ತಿ ಹೇಳಿತ್ತು.
ಸದ್ಯ ಸರ್ಕಾರವು ನಗರದ ಹೊರವಲಯದಲ್ಲಿ ಜಪ್ತಿ ವಾಹನಗಳನ್ನು ಸ್ಥಳಾಂತರಿಸಲು ಬದಲಿ ಜಾಗಗಳನ್ನು ಗುರುತಿಸುವ ಕಾರ್ಯ ಆರಂಭಿಸಿದೆ. ಆದರೆ ಕಾನೂನು ಪ್ರಕ್ರಿಯೆ ವೇಗಗೊಳ್ಳುವುದು ಹಾಗೂ ಹಕ್ಕು ಕೂಡದ ವಾಹನಗಳ ಹರಾಜು ಸಮಯಕ್ಕೆ ಸರಿಯಾಗಿ ನಡೆಯದಿದ್ದರೆ, ರಸ್ತೆ ಫುಟ್ಪಾತ್ ಮತ್ತು ಪೊಲೀಸ್ ಯಾರ್ಡ್ ಗಳಲ್ಲಿ ವಾಹನಗಳ ರಾಶಿ ಕಡಿಮೆಯಾಗುವುದು ಕಷ್ಟ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಸಾರ್ವಜನಿಕರ ಸುರಕ್ಷತೆ, ಸಂಚಾರ ಸುಗಮತೆ ಹಾಗೂ ಕೋಟ್ಯಾಂತರ ರೂಪಾಯಿ ಮೌಲ್ಯದ ವಾಹನಗಳ ಸಂರಕ್ಷಣೆಗಾಗಿ ಜಪ್ತಿ ವಾಹನಗಳ ವಿಲೇವಾರಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು ಅತ್ಯಗತ್ಯವಾಗಿದೆ.