<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ರೈಲು ಅಪಘಾತ: ರಾಜಧಾನಿ ಎಕ್ಸ್ ಪ್ರೆಸ್ ಎಸಿ ಬೋಗಿ ಹೊತ್ತಿ ಉರಿದ ಘಟನೆ

ರೈಲು ಅಪಘಾತ: ರಾಜಧಾನಿ ಎಕ್ಸ್ ಪ್ರೆಸ್ ಎಸಿ ಬೋಗಿ ಹೊತ್ತಿ ಉರಿದ ಘಟನೆ
Summary: A major fire accident has occurred in the Rajdhani Express train, in which an AC coach caught fire and caught fire. Timely action has been taken, and 68 passengers on the train have been safely rescued. The incident has created an atmosphere of panic for some time and an investigation is underway into the cause of the fire.

Belagavi news:

ಕೋಟಾ: ದೆಹಲಿಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ಎಸಿ ಬೋಗಿಯನ್ನು ಭಾರಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಅದೃಷ್ಟವಶಾತ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ತಿರುವನಂತಪುರಂ- ದೆಹಲಿ ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಇಂದು ನಸುಕಿನ ಜಾವ ಸುಮಾರು 5 ಗಂಟೆಯ ವೇಳೆಗೆ ಅಪಘಾತ ಸಂಭವಿಸಿದೆ. ಗೌರವ ಭಾನುವಾರ ಬೆಳಗ್ಗೆ ರಾಜಸ್ಥಾನದ ಕೋಟಾದ ವಿಕ್ರಮ್ ಗಢ ಅಲೋಟ್ ರೈಲು ನಿಲ್ದಾಣದ ಬಳಿ ಎಸಿ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ಕಾಣಿಸಿಕೊಂಡ ಬಿ1 ಎಸಿ ಬೋಗಿಯಲ್ಲಿ ಒಟ್ಟು 68 ಪ್ರಯಾಣಿಕರು ಇದ್ದರು. ತಕ್ಷಣವೇ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಘಟನೆಯ ಕಾರಣ ಕುರಿತು ತನಿಖೆ ಮುಂದುವರಿದಿದೆ.

Sponsored

ಭೋಗಿಯಲ್ಲಿ ಬೆಂಕಿ ಹತ್ತಿಕೊಂಡಿರುವುದನ್ನು ಮೊದಲು ಗಾರ್ಡ್ ಗಮನಿಸಿ ತಕ್ಷಣವೇ ಎಚ್ಚರಿಸಿದ್ದಾರೆ. ಬಳಿಕ ತುರ್ತು ಬ್ರೇಕ್ ಗಳನ್ನು ಬಳಸಿ ರೈಲನ್ನು ನಿಲ್ಲಿಸಲಾಗಿತ್ತು.

ತಕ್ಷಣವೇ ರೈಲ್ವೆ ರಕ್ಷಣಾ ಪಡೆ (ರೈಲ್ವೆ ರಕ್ಷಣಾ ಪಡೆ) ಹಾಗೂ ರೈಲಿನ ಸಿಬ್ಬಂದಿ ಮತ್ತು ಇತರ ಅಧಿಕಾರಿಗಳು ಭೋಗಿಯಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಆರಂಭಿಸಿದರು. ಸುಮಾರು 15 ನಿಮಿಷಗಳಲ್ಲಿ ಸಂಪೂರ್ಣ ಭೋಗಿಯನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದೆ. ಅದೃಷ್ಟವಶಾತ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಕೋಟಾ ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸೌರಭ ಜೈನ್ ಮಾಹಿತಿ ನೀಡಿದ್ದಾರೆ.

ಘಟನೆ ವರದಿಯಾದ ತಕ್ಷಣ ಕೋಟಾ ರೈಲ್ವೆ ವಿಭಾಗದ ಪರಿಹಾರ ಹಾಗೂ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾನಿಗೊಳಗಾದ ಭೋಗಿಯನ್ನು ತಕ್ಷಣವೇ ರೈಲಿನ ರೇಕ್ ನಿಂದ ಬೇರ್ಪಡಿಸಲಾಗಿದೆ.

Sponsored

ಮುನ್ನೆಚ್ಚರಿಕೆ ಕ್ರಮವಾಗಿ ಬೆಂಕಿ ಕಾಣಿಸಿಕೊಂಡ ಹತ್ತಿರದ ಹೋಗಿ ಗಳನ್ನು ಸಹ ತೆರವುಗೊಳಿಸಲಾಗಿದ್ದು ನಂತರ ಕೋಟಾದಿಂದ ಹೆಚ್ಚುವರಿ ಭೋಗಿಯನ್ನು ಅಳವಡಿಸಿ ಅವರಿಗೆ ಮುಂದಿನ ಪ್ರಯಾಣಿಕೆ ಅನುಕೂಲ ಮಾಡಿಕೊಡಲಾಗಿದೆ. ಇದರ ನಂತರ ಎಕ್ಸ್ಪ್ರೆಸ್ ರೈಲು ದೆಹಲಿಯತ್ತ ತನ್ನ ಪ್ರಯಾಣ ಮುಂದುವರಿಸಿದೆ.

ಬೆಂಕಿ ಅಪಘಾತಕ್ಕೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ . ಈ ಕುರಿತು ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಧಾನಿ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 12431) ಶುಕ್ರವಾರ ಕೇರಳದ ತಿರುವನಂತಪುರದಿಂದ ಹೊರಟು ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣಕ್ಕೆ ಇಂದು ಮಧ್ಯಾಹ್ನ ತಲುಪಲಿದೆ. ಮಾರ್ಗ ಮಧ್ಯೆ ಅಗ್ನಿ ಅಪಘಾತ ಸಂಭವಿಸಿದೆ.

ಇನ್ನು ಎರಡು ದಿನಗಳ ಹಿಂದೆಯಷ್ಟೇ ಮೇ 15ರಂದು ನಾಂಪಲ್ಲಿ ರೈಲ್ವೆ ನಿಲ್ದಾಣದಲ್ಲಿ ಹೈದರಾಬಾದ್ ಜೈಪುರ್ ವಿಶೇಷ ಎಕ್ಸ್ಪ್ರೆಸ್ ನ ಎರಡು ಎಸಿ ಭೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿತ್ತು.

Sponsored

Also Read:

ದೈವ ಭಕ್ತಿಯಲ್ಲಿ ರಚಿತಾ ರಾಮ್ : ಕೊರಗಜ್ಜನಿಗೆ ಕೋಲ ಸೆವೆ ಸಲ್ಲಿಸಿದ ನಟಿ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online