Belagavi News:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 19 ಸಾವಿರ ಮರಗಳನ್ನು ಕಡೆದು ಹಾಕಲಾಗಿದೆ ಎಂಬ ಮಾಹಿತಿ ಆತಂಕ ಮೂಡಿಸಿದೆ. ವೇಗವಾಗಿ ನಡೆಯುತ್ತಿರುವ ರಸ್ತೆ ವಿಸ್ತರಣೆ, ಮೆಟ್ರೋ ಕಾಮಗಾರಿಗಳು, ಕಟ್ಟಡ ನಿರ್ಮಾಣ ಹಾಗೂ ವಿವಿಧ ಮೂಲಸೌಕರ್ಯ ಯೋಜನೆಗಳಿಗಾಗಿ ಸಾವಿರಾರು ಮರಗಳನ್ನು ತೆರವುಗೊಳಿಸಲಾಗಿದೆ.
ಒಮ್ಮೆ "ಗಾರ್ಡನ್ ಸಿಟಿ" ಎಂದು ಗುರುತಿಸಿಕೊಂಡಿದ್ದ ಬೆಂಗಳೂರು, ಕಳೆದ ಕೆಲವು ವರ್ಷಗಳಿಂದ ಹಸಿರು ಹೊದಿಕೆಯನ್ನು ವೇಗವಾಗಿ ಕಳೆದುಕೊಳ್ಳುತ್ತಿದೆ. ಪರಿಸರ ತಜ್ಞರು ಮತ್ತು ನಾಗರಿಕರು ಮರಗಳ ಕಡಿತದಿಂದ ನಗರದ ತಾಪಮಾನ ಏರಿಕೆ, ವಾಯು ಮಾಲಿನ್ಯ ಹೆಚ್ಚಳ ಹಾಗೂ ಜೀವ ವೈವಿಧ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮರಗಳ ತೆರುವುಗೆ ಅನುಮತಿ ನೀಡುವ ಪ್ರಕ್ರಿಯೆ, ಪರ್ಯಾಯವಾಗಿ ಹೊಸ ಸಸಿಗಳ ನೆಡುವಿಕೆ ಮತ್ತು ಅವುಗಳ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಪ್ರಶ್ನೆಗಳು ಕೇಳಿ ಬರುತ್ತಿವೆ. ಅಭಿವೃದ್ಧಿ ಯೋಜನೆಗಳ ಜೊತೆಗೆ ಪರಿಸರ ಸಂರಕ್ಷಣೆಯ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಹಸಿರು ಪ್ರದೇಶಗಳನ್ನು ಉಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು, ಮರಗಳ ಕಡಿತವನ್ನು ಸಾಧ್ಯವಾದಷ್ಟು ನಿಯಂತ್ರಿಸಬೇಕು ಹಾಗೂ ಕಡಿದ ಮರಗಳ ಬದಲಿಗೆ ಪರಿಣಾಮಕಾರಿಯಾಗಿ ಹೊಸ ಗಿಡಗಳನ್ನು ನೆಟ್ಟು ಅವುಗಳ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂಬ ಒತ್ತಾಯವು ಕೇಳಿ ಬರುತ್ತದೆ.
Trees cut down at Bengaluru - ಬೆಂಗಳೂರಿನಲ್ಲಿ ಮೂರು ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ ! ಹಸಿರು ಹೊದಿಕೆಗೆ ಭಾರಿ ಹೊಡೆತ :
ಒಂದು ಕಾಲದಲ್ಲಿ ಗಾರ್ಡನ್ ಸಿಟಿ ಎಂದು ವಿಶ್ವದಾದ್ಯಂತ ಖ್ಯಾತಿ ಪಡೆದಿದ್ದ ಬೆಂಗಳೂರು, ಇಂದು ವೇಗದ ನಗರ ಅಭಿವೃದ್ಧಿಯ ನಡುವೆ ತನ್ನ ಹಸಿರು ಹೊದಿಕೆಯನ್ನು ಕಳೆದುಕೊಳ್ಳುತ್ತಿದೆ. ರಸ್ತೆ ವಿಸ್ತರಣೆ, ಮೆಟ್ರೋ ಕಾಮಗಾರಿಗಳು, ಫ್ಲೈ ಓವರ್ ನಿರ್ಮಾಣ ಹಾಗೂ ಇತರ ಮೌಲ ಸೌಕರ್ಯ ಯೋಜನೆಗಳ ಪರಿಣಾಮವಾಗಿ ನಗರದ ಸಾವಿರಾರು ಮರಗಳು ನೆಲಸಮವಾಗುತ್ತಿವೆ.
ಇತ್ತೀಚಿನ ವರದಿಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಅಂದಾಜು 19 ಸಾವಿರ ಮರಗಳನ್ನು ಕಡಿದು ಹಾಕಲಾಗಿದೆ. ಈ ಅಂಕಿ ಅಂಶ ಪರಿಸರ ಪ್ರೇಮಿಗಳು, ನಾಗರಿಕರು ಮತ್ತು ತಜ್ಞರಲ್ಲಿ ತೀವ್ರ ಆತಂಕ ಮೂಡಿಸಿದೆ.
ಮರಗಳ ಕಡಿತದಿಂದ ನಗರದ ಹಸಿರು ಹೊದಿಕೆ ಕುಗ್ಗುತ್ತಿದ್ದು, ತಾಪಮಾನ ಏರಿಕೆ, ವಾಯು ಮಾಲಿನ್ಯ ಹೆಚ್ಚಳ ಹಾಗೂ ಜೀವ ವೈವಿಧ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ. ಅಭಿವೃದ್ಧಿ ಯೋಜನೆಗಳು ಅಗತ್ಯವಾದರೂ, ಪರಿಸರ ಸಂರಕ್ಷಣೆಗೆ ಸಮಾನ ಆದ್ಯತೆ ನೀಡಬೇಕು ಎಂಬ ಒತ್ತಾಯವು ಕೇಳಿ ಬರುತ್ತಿದೆ.
ನಗರದಲ್ಲಿ ಕಡೆದ ಮರಗಳಿಗೆ ಬದಲಾಗಿ ಹೊಸ ಸಸಿಗಳನ್ನು ನೆಡುವುದು ಮಾತ್ರವಲ್ಲದೆ, ಅವುಗಳ ಸಮರ್ಪಕ ನಿರ್ವಹಣೆ ಮತ್ತು ಸಂರಕ್ಷಣೆಯು ಅತ್ಯಗತ್ಯ ಎಂದು ಪರಿಸರ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಹಸಿರು ಪರಂಪರೆಯನ್ನು ಉಳಿಸಲು ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ದೀರ್ಘಕಾಲಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮೂರು ವರ್ಷಗಳಲ್ಲಿ 19 ಸಾವಿರ ಮರಗಳ ಕಡಿತ - ಮೆಟ್ರೋ, ರಸ್ತೆ ವಿಸ್ತರಣೆ ಕಾಮಗಾರಿಗಳಿಗೆ ಹಸಿರು ಹೊದಿಕೆಗೆ ಭಾರಿ ಹೊಡೆತ : ಬೆಂಗಳೂರು ನಗರದಲ್ಲಿ ವೇಗವಾಗಿ ಸಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಣಾಮ ಹಸಿರು ಹೊದಿಕೆ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ಹೊಸ ಮೆಟ್ರೋ ಮಾರ್ಗಗಳು, ರಸ್ತೆ ವಿಸ್ತರಣೆ, ಮೇಲ್ ಸೇತುವೆ ನಿರ್ಮಾಣ ಹಾಗೂ ಇತರ ಸಾರ್ವಜನಿಕ ಮೂಲ ಸೌಕರ್ಯ ಯೋಜನೆಗಳಿಗಾಗಿ ಕಳೆದ ಮೂರು ವರ್ಷಗಳಲ್ಲಿ ಸಾವಿರಾರು ಮರಗಳನ್ನು ತೆರವುಗೊಳಿಸಲಾಗಿದೆ.
ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ಈ ಅವಧಿಯಲ್ಲಿ ಸುಮಾರು 19 ಸಾವಿರ ಮರಗಳನ್ನು ಕಡೆದು ಹಾಕಲಾಗಿದ್ದು, ಅವುಗಳಲ್ಲಿ 7,683 ಮರಗಳು ನೇರವಾಗಿ ಸಾರ್ವಜನಿಕ ಮೂಲ ಸೌಕರ್ಯ ಯೋಜನೆಗಳಿಗೆ ಬಲೆಯಾಗಿವೆ. ಉಳಿದ ಮರಗಳನ್ನು ಖಾಸಗಿ ಅಭಿವೃದ್ಧಿ ಕಾಮಗಾರಿಗಳು, ಅಪಾಯಕಾರಿ ಸ್ಥಿತಿಯಲ್ಲಿದ್ದ ಮರಗಳ ತೆರವು ಹಾಗೂ ಇತರ ಆಡಳಿತಾತ್ಮಕ ಕಾರಣಗಳಿಂದ ಕಡಿಯಲಾಗಿದೆ.
ಪ್ರತಿ ವರ್ಷ ಸಾವಿರಾರು ಮರಗಳು ಕಣ್ಮರೆಯಾಗುತ್ತಿರುವುದು ಬೆಂಗಳೂರಿನ ಪರಿಸರ ಸಮತೋಲನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹಸಿರು ಹೊದಿಕೆ ಕಡಿಮೆಯಾಗುತ್ತಿರುವುದರಿಂದ ನಗರದ ತಾಪಮಾನ ಏರಿಕೆ, ವಾಯು ಮಾಲಿನ್ಯ ಹೆಚ್ಚಳ ಮತ್ತು ಜೀವ ವೈವಿದ್ಯಕ್ಕೆ ಧಕ್ಕೆ ಉಂಟಾಗುವ ಅಪಾಯ ಹೆಚ್ಚುತ್ತಿದೆ ಎಂದು ಪರಿಸರ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ನಗರಾಭಿವೃದ್ಧಿ ಯೋಜನೆಗಳು ಅನಿವಾರ್ಯವಾಗಿದ್ದರು, ಪರಿಸರ ಸಂರಕ್ಷಣೆಗೆ ಸಮಾನ ಆದ್ಯತೆ ನೀಡುವುದು ಅಗತ್ಯವಾಗಿದೆ. ಅವುಗಳ ಸಮರ್ಪಕ ನಿರ್ವಹಣೆ ಹಾಗೂ ಹಸಿರು ಪ್ರದೇಶಗಳನ್ನು ಸಂರಕ್ಷಿಸುವ ದೀರ್ಘಕಾಲಿನ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ಪರಿಸರ ಹೋರಾಟಗಾರರು ಮತ್ತು ತಜ್ಞರು ಆಗ್ರಹಿಸಿದ್ದಾರೆ.