belagavi news :
ಬೆಂಗಳೂರು: ಬಹುಭಾಷ ನಟ ಪ್ರಕಾಶ್ ರಾಜ್ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ನಾಲ್ಕು ವಿಭಿನ್ನ ಸ್ಥಳಗಳಲ್ಲಿ ವೋಟರ್ ಐಡಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ವಕೀಲ ದಿಲೀಪ್ ಕುಮಾರ್ ಅವರು ದೂರು ದಾಖಲಿಸಿದ್ದಾರೆ.
ಈ ಪ್ರಕರಣವನ್ನು 2019ರಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ಮತದಾರ ನೋಂದಣಿ ನಿಯಮಗಳ ಉಲ್ಲಂಘನೆ ನಡೆದಿದೆ ಎಂಬ ಆರೋಪದಡಿ ಈ ದೂರು ಸಲ್ಲಿಕೆಯಾಗಿದ್ದು, ವಿಷಯವು ಇದೀಗ ಮತ್ತೆ ಗಮನ ಸೆಳೆದಿದೆ.
ಈ ಸಂಬಂಧ ಮುಂದಿನ ಕಾನೂನು ಕ್ರಮಗಳು ಮತ್ತು ತನಿಖಾ ಪ್ರಕ್ರಿಯೆಗಳು ಮುಂದುವರಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಆದರೆ ಈ ಪ್ರಕರಣದಲ್ಲಿ ಆರಂಭದಲ್ಲಿ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂದು ತಿಳಿದುಬಂದಿದೆ. ನಂತರ ವಕೀಲ್ ದಿಲೀಪ್ ಕುಮಾರ್ ಅವರು ಪೊಲೀಸ್ ಆಯುಕ್ತರು ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಿದ್ದರು. ಆದರೂ ಸೂಕ್ತ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿ ನೇರವಾಗಿ ದೂರು ದಾಖಲಿಸಿದ್ದಾರೆ.
ಅದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 48ನೇ ಎಸಿಜೆಎಂ ಕೋರ್ಟ್ ನಿಂದ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದೆ. ಒಂದೇ ವ್ಯಕ್ತಿಗೆ ಒಂದೇ ವೋಟರ್ ಕಾರ್ಡ್ ಇರಬೇಕು ಎಂಬ ನಿಯಮವಿದ್ದರೂ, ನಟ ಪ್ರಕಾಶ್ ರಾಜ್ ಅವರು ನಾಲ್ಕು ವಿಭಿನ್ನ ಸ್ಥಳಗಳಲ್ಲಿ ವೋಟರ್ ಐಡಿ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ವಕೀಲ ದಿಲೀಪ್ ಕುಮಾರ್ ಮಾತನಾಡಿ, "ಒಬ್ಬ ವ್ಯಕ್ತಿಗೆ ಒಂದೇ ವೋಟರ್ ಕಾರ್ಡ್ ಇರಬೇಕು. ಆದರೆ ಪ್ರಕಾಶ್ ರಾಜ್ ಅವರು ಏಕಕಾಲಕ್ಕೆ ನಾಲ್ಕು ಕಡೆಗಳಲ್ಲಿ ವೋಟರ್ ಐಡಿ ಕಾರ್ಡ್ ಹೊಂದಿದ್ದಾರೆ. ಈ ಕಾರಣದಿಂದಲೇ ನಾನು ದೂರು ದಾಖಲಿಸಿದ್ದೆ" ಎಂದು ಹೇಳಿದ್ದಾರೆ.
Also Read:
ಜಾಗತಿಕ ಉದ್ವಿಗ್ನತೆ ನಡುವೆಯೇ ಅಮೆರಿಕ-ಇರಾನ್ ಮಾತುಕತೆ : ಸ್ವಿಟ್ಜರ್ ಲ್ಯಾಂಡ್ ನಲ್ಲಿ ಇಂದು ನಿರ್ಣಾಯಕ ಸಭೆ