belagavi news :
ಅಮೇರಿಕಾದ ಫೆಡರಲ್ ರಿಸರ್ವ್ ನಮ್ಮ ಮುಂದಿನ ಅಧ್ಯಕ್ಷರಾಗಿ ಕೆವಿಎನ್ ವಾರ್ಸ್ ಅವರನ್ನು ನಾಮನಿರ್ದೇಶನ ಮಾಡುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ದೃಢಪಡಿಸಿದ್ದಾರೆ. ಈ ಘೋಷಣೆ ಈಗಿನ ಫೆಡ್ ಅಧ್ಯಕ್ಷ ಜೆರೋಮ್ ಪಾವೆಲ್ ಅವರೊಂದಿಗೆ ಟ್ರಂಪ್ಗೆ ಉಂಟಾಗಿರುವ ನಿರಂತರ ತಿಕ್ಕಾಟದ ಹಿನ್ನೆಲೆಯಲ್ಲಿ ಅತ್ಯಂತ ಸೂಕ್ಷ್ಮವಾಗಿ ಗಮನಿಸಲ್ಪಡುತ್ತಿದೆ.ಟ್ರಂಪ್ ಅವರ ಘೋಷಣೆ ಹೊರಬಿದ್ದ ತಕ್ಷಣವೇ ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಸ್ಪಷ್ಟ ಅಲುಗಾಟ ಕಂಡುಬಂದಿದೆ. ವಿಶೇಷವಾಗಿ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಗಮನಾರ್ಹ ಕುಸಿತ ದಾಖಲೆಯಾಗಿದೆ. ಇತ್ತೀಚಿಗೆ ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದ ಚಿನ್ನದ ಬೆಲೆ ಸುಮಾರು ಶೇ.9ರಷ್ಟು ಕುಸಿದಿದೆ.
ಬೆಳ್ಳಿಯ ಬೆಲೆ ಇನ್ನು ತೀವ್ರವಾಗಿ ಶೇ.28ರಷ್ಟು ಇಳಿಕೆ ಕಂಡಿದೆ. ಹಣದುಬ್ಬರ ನಿಯಂತ್ರಣ ಮತ್ತು ಬಡ್ಡಿದರ ನೀತಿಗಳ ಕುರಿತು ಕೆವಿನ್ ವಾರ್ಷ್ ಅವರ ನಿಲುವು ಮಾರುಕಟ್ಟೆಯಲ್ಲಿ ಉಂಟುಮಾಡಿದೆ ಎನ್ನಲಾಗುತ್ತಿದೆ. ಇದರ ಪರಿಣಾಮವಾಗಿ ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸಲಾಗುತ್ತಿದ್ದ ಚಿನ್ನ- ಬೆಳ್ಳಿ ಮೇಲಿನ ಒತ್ತಡ ಹೆಚ್ಚಾಗಿದೆ.ಇತ್ತ ಅಮೆರಿಕಾದ ಶೇರು ಮಾರುಕಟ್ಟೆಯಲ್ಲಿ ಈ ಬೆಳವಣಿಗೆ ಪ್ರಭಾವ ಕಂಡು ಬಂದಿದ್ದು, ಪ್ರಮುಖ ಸೂಚ್ಯಂಕಗಳು ಸಾಧಾರಣ ನಷ್ಟದೊಂದಿಗೆ ವೈವಾಟು ಮುಗಿಸಿವೆ.
ಹೂಡಿಕೆದಾರರು ಮುಂದಿನ ಫೆಡರಲ್ ರಿಸರ್ವ್ ನೀತಿಗಳ ಕುರಿತು ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿರುವುದು ಮಾರುಕಟ್ಟೆಯ ಚಲನವಲನದಲ್ಲಿ ಸ್ಪಷ್ಟವಾಗಿದೆ. ಆರ್ಥಿಕ ತಜ್ಞರ ಅಭಿಪ್ರಾಯದಂತೆ ,ಫೆಡ್ ನಾಯಕತ್ವದಲ್ಲಿ ಸಂಭವಿಸಬಹುದಾದ ಬದಲಾವಣೆಗಳು ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಗಳ ದಿಕ್ಕನ್ನು ನಿರ್ಧರಿಸಬಹುದಾಗಿದೆ.
ಅಮೇರಿಕಾ ಅಧ್ಯಕ್ಷರುಡೊನಾಲ್ಡ್ ಟ್ರಂಪ್ ಅವರ ನಿರಂತರ ಟೀಕೆಗಳಿಗೆ ಪ್ರತಿಯಾಗಿ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಕೂಡ ತೀವ್ರ ಪ್ರತಿ ವಾಗ್ದಾಳಿ ನಡೆಸಿದ್ದಾರೆ. ಅಧ್ಯಕ್ಷರ ರಾಜಕೀಯ ಆದ್ಯತೆಗಳನ್ನು ಅನುಸರಿಸುವ ಮೊದಲು ಸಾರ್ವಜನಿಕ ಹಿತಾಸಕ್ತಿಗೆ ಯಾವುದು ಸೂಕ್ತ ಎಂಬುದರ ಕುರಿತು ನಡೆಸುವ ಸ್ವತಂತ್ರ ಮೌಲ್ಯಮಾಪನದ ಆಧಾರದಲ್ಲೇ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ನಿಗದಿಪಡಿಸುತ್ತದೆ ಎಂದು ಪೊವೆಲ್ ಸ್ಪಷ್ಟಪಡಿಸಿದ್ದಾರೆ. ಫೆಡರಲ್ ರಿಸರ್ವ್ ಮೇಲೆ ರಾಜಕೀಯ ಒತ್ತಡ ಮತ್ತು ಹಸ್ತಕ್ಷೇಪ ಹೆಚ್ಚಾದರೆ, ಆರ್ಥಿಕ ಸ್ಥಿರತೆಗೆ ಗಂಭೀರ ಬೆದರಿಕೆ ಎದುರಾಗುವ ಸಾಧ್ಯತೆ ಇದೆ ಎಂಬುದನ್ನು ಅವರು ಎಚ್ಚರಿಸಿದ್ದಾರೆ,
ಜಾಗತಿಕ ಅನುಭವಗಳ ಪ್ರಕಾರ ಕೇಂದ್ರ ಬ್ಯಾಂಕ್ ಸ್ವತಂತ್ರಕ್ಕೆ ಧಕ್ಕೆ ಆಗುವ ರಾಷ್ಟ್ರಗಳು ಗಮನಾರ್ಹ ಆರ್ಥಿಕ ಬಿಕ್ಕಟ್ಟುಗಳು ಅನುಭವಿಸಿರುವ ಉದಾಹರಣೆಗಳು ಸಾಕಷ್ಟಿವೆ ಎಂದು ಪೊವೆಲ್ ಉಲ್ಲೇಖಿಸಿದ್ದಾರೆ. ಫೆಡ್ ನಾಯಕತ್ವದಲ್ಲಿ ಸಂಭವಿಸಬಹುದಾದ ಈ ಬದಲಾವಣೆಗಳು,ಮುಂದಿನ ದಿನಗಳಲ್ಲಿ ಬಡ್ಡಿದರ ನೀತಿ, ಡಾಲರ್ ಮೌಲ್ಯ, ಷೇರು ಮಾರುಕಟ್ಟೆ ಮತ್ತು ಚಿನ್ನ-ಬೆಳ್ಳಿ ಬೆಲೆಗಳ ಮೇಲೆ ಮಹತ್ವದ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.
ಈ ಬೆಳವಣಿಗೆ ನಡುವೆ, ಟ್ರಂಪ ಅವರು ಫೆಡರಲ್ ರಿಸರ್ವ್ ಮುಂದಿನ ಅಧ್ಯಕ್ಷರಾಗಿ ಘೋಷಿಸಿರುವ ಕೆವಿನ್ ವಾರ್ಷ್ ಅವರ ಹಿನ್ನೆಲೆಯು ಚರ್ಚೆಗೆ ಗ್ರಾಸವಾಗಿದೆ. ಕೆವಿನ್ ವಾರ್ಷ್ ಅವರು ಮಾಜಿ ಬ್ಯಾಂಕರ್ ಹಾಗೂ ಫೆಡರಲ್ ರಿಸರ್ವ್ ಗವರ್ನರ್ ಆಗಿದ್ದು, ಈ ಹಿಂದೆ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಹಾಗೂ ಡೊನಾಲ್ಡ್ ಟ್ರಂಪ್ ಆಡಳಿತಗಳ ಕಾಲದಲ್ಲಿ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.
ಅಮೇರಿಕಾ ಅಧ್ಯಕ್ಷ ಮತ್ತು ಫೆಡರಲ್ ರಿಸರ್ವ್ ನಡುವಿನ ನಿರಂತರ ಸಂಘರ್ಷದ ನಡುವೆ ಫೆಡ್ ಮೇಲೆ ಅಧ್ಯಕ್ಷರ ಹಸ್ತಕ್ಷೇತ್ರದ ಬಗ್ಗೆ ಗಂಭೀರ ಕಳವಳಗಳು ವ್ಯಕ್ತವಾಗುತ್ತಿವೆ. ಇತ್ತೀಚಿಗೆ ಪೆಡ್ ಮುಂದಿನ ಅಧ್ಯಕ್ಷರಾಗಿ ಕೆವಿನ್ ವಾರ್ಡ್ ಅವರನ್ನು ನಾಮ ನಿರ್ದೇಶನ ಮಾಡುವುದಾಗಿ ಟ್ರಂಪ್ ಚರ್ಚೆಗೆ ಗ್ರಾಸರವಾಗಿದೆ. ಆರ್ಥಿಕ ವಲಯದಲ್ಲಿ, ವಾರ್ಷ್ ಅವರ ಸ್ವಾತಂತ್ರ್ಯ ಮತ್ತು ಸುಸ್ಥಿರತೆಯ ಪಾತ್ರದ ದೃಷ್ಟಿಕೋನದಿಂದಲೇ ನೋಡಲಾಗುತ್ತಿದೆ.
ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿ ಕೇಂದ್ರ ಬ್ಯಾಂಕ್ ಸ್ವತಂತ್ರ ಅತ್ಯಂತ ಅಗತ್ಯ ಎಂದು ಅಭಿಪ್ರಾಯಗಳು ತಜ್ಞ ವಲಯದಿಂದ ಕೇಳಿ ಬರುತ್ತಿದೆ. ರಾಜಕೀಯದಿಂದ ದೂರವಿದ್ದು ಸ್ವತಂತ್ರವಾಗಿ ಬಡ್ಡಿದರ ನೀತಿ ರೂಪಿಸುವುದೆ ಆರ್ಥಿಕ ಸ್ಥಿತಿಗೆ ಪ್ರಮುಖ ಅಂಶ ಎನ್ನಲಾಗಿದೆ. ಟ್ರಂಪ್ ಅವರು ಹಲವು ಬಾರಿ ಕೋವೆಲ್ ವಿರುದ್ಧ ಕಠಿಣ ಟೀಕೆಗಳನ್ನು ನಡೆಸಿದ್ದು, ಅವರನ್ನು ವಿದುಷಕ ಎಂದು ಕರೆದು ಕೆಲವೊಮ್ಮೆ ಮಾನಸಿಕ ಸ್ಥಿರತೆಯ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ಇದರಿಂದ ಫೆಡರಲ್ ರಿಸರ್ವ್ ಸ್ವತಂತ್ರ ಮತ್ತು ಅದರ ವಿಶ್ವಾಸಾರ್ಹತೆ ಕುರಿತು ಚರ್ಚೆ ಮತ್ತಷ್ಟು ತೀವ್ರಗೊಂಡಿದೆ.ಪ್ರಸ್ತುತ ಪರಿಸ್ಥಿತಿಯಲ್ಲಿ, ಫೆಡ್ ನಾಯಕತ್ವದಲ್ಲಿ ನಡೆಯಬಹುದಾದ ಬದಲಾವಣೆಗಳು ಅಮೆರಿಕಾದ ಬಡ್ಡಿದರ ನೀತಿ, ಜಾಗತಿಕ ಹಣಕಾಸು ಮಾರುಕಟ್ಟೆ ಮತ್ತು ಹೂಡಿಕೆದಾರರ ವಿಶ್ವಾಸದ ಮೇಲೆ ದೂರಗಾಮಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಗಮನಾರ್ಹವಾಗಿ, 2017ರಲ್ಲಿ ಡೊನಾಲ್ಡ್ ಟ್ರಂಪ್ ಅವರೇ ಜೆರೋಮ್ ಪೊವೆಲ್ ಅವರನ್ನು ಪೆಡರಲ್ ರಿಸರ್ವ್ ಅಧ್ಯಕ್ಷರಾಗಿ ನೇಮಕ ಮಾಡಿದರು. ಆದರೆ ಟ್ರಂಪ್ ನಿರೀಕ್ಷಿಸಿದಂತೆ ಪೊವೆಲ್ ಬಡ್ಡಿದರಗಳನ್ನು ತ್ವರಿತವಾಗಿ ಕಡಿತಗೊಳಿಸದ ಕಾರಣ ಇಬ್ಬರ ನಡುವಿನ ಸಂಬಂಧ ಬೇಗನೆ ಹದಗೆಟ್ಟಿತು.ಅದಕ್ಕೆ ಅಸಮಾಧಾನವೇ ನಂತರ ರಾಜಕೀಯ ಮತ್ತು ಸಾರ್ವಜನಿಕಗಳಿಗೆ ಕಾರಣವಾಗಿದೆ.
ಅಮೆರಿಕದ ಫೆಡರಲ್ ರಿಸರ್ವ್ ಮುಂದಿನ ಅಧ್ಯಕ್ಷರಾಗಿ ಕೆವಿನ್ ವಾರ್ಡ್ ಅವರನ್ನು ನಾಮ ನಿರ್ದೇಶನ ಮಾಡುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ನಂತರ, ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ಸ್ಪಷ್ಟ ಕುಸಿತ ಕಂಡು ಬಂದಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಬಾರಿ ಹೇಳಿಕೆ ಕಂಡುಬಂದಿರುವಂತೆಯೇ, ಮಾರುಕಟ್ಟೆಗಳನ್ನು ನಷ್ಟ ದಾಖಲಾಗಿದೆ. ಹೂಡಿಕೆದಾರರ ಅಭಿಪ್ರಾಯದಂತೆ ಪರ್ಯಾಯ ಅಭ್ಯರ್ಥಿಗಳಿಗಿಂತ ವಾರ್ಷ್ ಅವರ ನೇತೃತ್ವದಲ್ಲಿ ಬಡ್ಡಿದರ ಕಡಿತದ ಸಾಧ್ಯತೆ ಕಡಿಮೆ ಎಂಬ ಅಂದಾಜು ಮಾರುಕಟ್ಟೆ ಮನೋಭಾವನೆಯ ಮೇಲೆ ಪ್ರಭಾವ ಬೀರಿದೆ.
ಇದರಿಂದ ಹಣದುಬ್ಬರ ನಿಯಂತ್ರಣದ ಅನಿಶ್ಚಿತತೆ ಹೆಚ್ಚಾಗಿದ್ದು, ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ತೀವ್ರ ಏರಿಳಿತಕ್ಕೆ ಕಾರಣವಾಗಿದೆ. ಹಣದುಬ್ಬರದ ಅಸ್ಥಿರತೆ ಹಾಗೂ ಭಯದ ವಾತಾವರಣ ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸಲಾಗುತ್ತಿದ್ದ ಅಮೂಲ್ಯ ಲೋಹಗಳ ಮೇಲು ಒತ್ತಡ ತಂದಿದೆ. ವಾರ್ಷ್ ಅವರ ನೇಮಕಾತಿಯ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಸಾಕಷ್ಟು ಒತ್ತಡ ಉಂಟು ಮಾಡಿದೆ ಎಂದು ವಿಶ್ಲೇಷಕರು ಆರ್ಥಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಇನ್ನಷ್ಟು ಓದಿರಿ: