belagavi news :
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. " ಮೋದಿ ನನ್ನ ಅತ್ಯುತ್ತಮ ಸ್ನೇಹಿತ" ಎಂದು ಹೇಳಿದರು ಟ್ರಂಪ್, ಭಾರತ ಮತ್ತು ಅಮೆರಿಕ ಶೀಘ್ರದಲ್ಲೇ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಬರಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಾಷಿಂಗ್ಟನ್ ನ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, " ನಿಮ್ಮ ಪ್ರಧಾನಿಯನ್ನು ನಾನು ತುಂಬಾ ಇಷ್ಟಪಡುತ್ತೇನೆ. ಅವರು ನನ್ನ ಉತ್ತಮ ಸ್ನೇಹಿತ. ನಾವು ಚೆನ್ನಾಗಿ ಹೊಂದಿಕೊಳ್ಳುತ್ತೇವೆ ಮತ್ತು ಖಂಡಿತವಾಗಿಯೂ ಒಪ್ಪಂದ ಮಾಡಿಕೊಳ್ಳಲಿದ್ದೇವೆ" ಎಂದು ಹೇಳಿದ್ದಾರೆ.
ಆದರೆ ಇದೇ ವೇಳೆ ಭಾರತ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ ಟ್ರಂಪ್, "ಭಾರತ ಹಲವು ವರ್ಷಗಳಿಂದ ಅಮೆರಿಕದ ನೀತಿಗಳ ಲಾಭ ಪಡೆದಿದೆ. ನಮ್ಮ ಕಂಪನಿಗಳ ಮೇಲೆ ಭಾರಿ ಪ್ರಮಾಣದ ಸುಂಕಗಳನ್ನು ವಿಧಿಸಿದೆ. ಆದರೆ ಅದಕ್ಕೆ ಪ್ರತಿಯಾಗಿ ನಾವು ಏನೇನ್ನೂ ವಿಧಿಸಲಿಲ್ಲ" ಎಂದು ಆರೋಪಿಸಿದ್ದಾರೆ.
ಇದರ ನಡುವೆಯೇ, ಭಾರತ - ಅಮೆರಿಕ ವ್ಯಾಪಾರ ಒಪ್ಪಂದದ ಮಾತುಕತೆಗಳು ವೇಗ ಪಡೆದುಕೊಂಡಿದ್ದು, ಅಮೆರಿಕದ ನಿಯೋಗ ಈ ವಾರ ಭಾರತಕ್ಕೆ ಭೇಟಿ ನೀಡಿ ನಾಲ್ಕು ದಿನಗಳ ಮಧ್ಯಂತರ ದ್ವಿಪಕ್ಷೀಯ ಒಪ್ಪಂದದ ಕುರಿತು ಚರ್ಚೆ ನಡೆಸಿದೆ.
ಟ್ರಂಪ್ ರ ಈ ಹೇಳಿಕೆ ಭಾರತ - ಅಮೆರಿಕ ಸಂಬಂಧ ಹಾಗೂ ವ್ಯಾಪಾರ ಒಪ್ಪಂದದ ಭವಿಷ್ಯದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.
ಭಾರತ ಅಮೆರಿಕ ವ್ಯಾಪಾರ ಒಪ್ಪಂದದ ಮಾತುಕತೆಗಳು ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿವೆ ಎಂದು ಭಾರತದ ವಾಣಿಜ್ಯ ಸಚಿವಾಲಯ ತಿಳಿಸಿದೆ. ಉಭಯ ದೇಶಗಳ ಪ್ರತಿನಿಧಿಗಳ ನಡುವೆ ನಡೆದ ಚರ್ಚೆಗಳು ಸಹಕಾರ ಮತ್ತು ವಾಸ್ತವಿಕತೆಯ ಮನೋಭಾವರೊಂದಿಗೆ ನಡೆದಿದ್ದು, ದ್ವಿಪಕ್ಷಿಯ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಪರಸ್ಪರ ಪ್ರಯೋಜನಕಾರಿ ಒಪ್ಪಂದದತ್ತ ಬದ್ಧತೆ ವ್ಯಕ್ತವಾಗಿದೆ ಎಂದು ಸಚಿವಾಲಯ ಹೇಳಿದೆ.
ಇದರ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಲ್ಲಿ ಹಾರ್ಲೆ- ಡೇವಿಡ್ಸನ್ ಮೋಟಾರ್ ಸೈಕಲ್ ಗಳ ಮಾರಾಟಕ್ಕೆ ಎದುರಾದ ಸವಾಲುಗಳನ್ನು ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ. ಭಾರತ ಹೆಚ್ಚಿನ ಆಮದು ಸುಂಕಗಳು ಅಮೇರಿಕಾದ ಐಕಾನಿಕ್ ಬೈಕ್ ಬ್ರಾಂಡ್ ಗೆ ದೊಡ್ಡ ಅಡ್ಡಿಯಾಗಿದ್ದವು ಎಂದು ಅವರು ಹೇಳಿದ್ದಾರೆ.
"ಈ ಹಿಂದೆ ಭಾರತ ಹಾರ್ವೆ -ಡೇವಿಡ್ಸನ್ ಬೈಕಗಳ ಮೇಲೆ ಸುಮಾರು 200% ಸುಂಕ ವಿಧಿಸಿತ್ತು . ಪರಿಣಾಮವಾಗಿ ಆ ಬೈಕ್ ಗಳನ್ನು ಖರೀದಿಸಲು ಯಾರು ಮುಂದೆ ಬರಲಿಲ್ಲ. ಕೊನೆಗೆ ಕಂಪನಿಯೇ ಭಾರತದಲ್ಲಿ ಉತ್ಪಾದನ ಘಟನೆ ಸ್ಥಾಪಿಸಬೇಕಾಯಿತು" ಎಂದು ಟ್ರಂಪ್ ನೆನಪಿಸಿಕೊಂಡಿದ್ದಾರೆ.
ಅದೇ ವೇಳೆ, ಭಾರತೀಯ ಮೋಟಾರ್ ಸೈಕಲ್ ಬ್ರಾಂಡ್ ಗಳಿಗೆ ಅಮೆರಿಕ ಮಾರುಕಟ್ಟೆಯಲ್ಲಿ ಇಂತಹ ಅಡೆತಡೆಗಳು ಇರಲಿಲ್ಲ ಎಂದು ಹೇಳಿದ ಟ್ರಂಪ್, ವ್ಯಾಪಾರದಲ್ಲಿ ಸಮಾನ ಅವಕಾಶ ಅಗತ್ಯವನ್ನು ಒತ್ತಿಹೇಳಿದ್ದಾರೆ.
ಭಾರತ - ಅಮೆರಿಕ ವ್ಯಾಪಾರ ಸಂಬಂಧಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಮಾತುಕತೆಗಳು ಹೊಸ ನಿರೀಕ್ಷೆ ಮೂಡಿಸಿವೆ.
ಫೆಬ್ರುವರಿ 7 ರಂದು ನಡೆದ ದೂರವಾಣಿ ಸಂಭಾಷಣೆಯ ಬಳಿಕ, ಉಭಯ ರಾಷ್ಟ್ರಗಳು ದ್ವಿಪಕ್ಷಿಯ ವ್ಯಾಪಾರ ಒಪ್ಪಂದದ (BTA) ಮೊದಲ ಹಂತದ ಚೌಕಟ್ಟಿನ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದವು. ಈ ಚೌಕಟ್ಟಿನಡಿ ಭಾರತದ ಮೇಲಿನ ಕೆಲವು ಸುಂಕಗಳನ್ನು ಗಣನೀಯವಾಗಿ ಕಡಿಮೆ ಮಾಡುವ ಕುರಿತು ಒಪ್ಪಂದ ಮೂಡಿದ್ದರೆ, ರಷ್ಯಾದ ತೈಲ ಖರೀದಿ ಸಂಬಂಧ ಭಾರತೀಯ ಸರಕುಗಳ ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ ಸುಂಕವನ್ನು ಅಮೆರಿಕ ಹಿಂಪಡೆದಿತ್ತು.
ಇದರ ಬೆನ್ನಲ್ಲೇ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಟ್ರಂಪ್ ಆಡಳಿತ ಜಾರಿಗೊಳಿಸಿದ 'ರೆಸಿಪ್ರೋಕಲ್ ಟ್ರಾರಿಫ್ (ಪರಸ್ಪರ ಸುಂಕ ) ಕ್ರಮದ ವಿರುದ್ಧ ಅಮೇರಿಕದ ನ್ಯಾಯಾಂಗ ವ್ಯವಸ್ಥೆ ತೀರ್ಪು ನೀಡಿದ್ದು, ಈ ಕ್ರಮ ಕಾನೂನುಬಾಹಿರ ಎಂದು ಘೋಷಿಸ ಸುಂಕಗಳನ್ನು ರದ್ದುಗೊಳಿಸಿದೆ. ಈ ಬೆಳವಣಿಗೆ ಜಾಗತಿಕ ವ್ಯಾಪಾರ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
Also Read:
ಸರ್ಕಾರದ ವಿರುದ್ಧ ಆಕ್ರೋಶ? ರಾಮಲಿಂಗಾ ರೆಡ್ಡಿ ಬೆಂಬಲಿಗರಿಂದ ಬೆಂಗಳೂರಿನಲ್ಲಿ ಪ್ರತಿಭಟನೆ