<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

Tumakuru Drought : ಬರಗಾಲದ ಹೊಡೆತಕ್ಕೆ ತುಮಕೂರು ತತ್ತರ - ಸಂಪೂರ್ಣ ಬತ್ತಿದ್ದ ನೂರಾರು ಕೆರೆಗಳು

Tumakuru Drought : ಬರಗಾಲದ ಹೊಡೆತಕ್ಕೆ ತುಮಕೂರು ತತ್ತರ - ಸಂಪೂರ್ಣ ಬತ್ತಿದ್ದ ನೂರಾರು ಕೆರೆಗಳು
Summary: Due to lack of rain, the water crisis in Tumkur district has intensified, with more than 300 lakes completely dried up. People and farmers are worried due to water scarcity, and the drought situation is becoming more serious. Here is complete information about the Tumakuru water crisis.

Belagavi News:

ಮಳೆಯ ಅಭಾವದಿಂದ ತುಮಕೂರು ಜಿಲ್ಲೆಯಲ್ಲಿ ಜಲ ಸಂಕಷ್ಟ ತೀವ್ರಗೊಂಡಿದೆ. ಜಿಲ್ಲೆಯ ಒಟ್ಟು 2,047 ಕೆರೆಗಳ ಪೈಕಿ 400 ದೊಡ್ಡ ಕೆರೆಗಳಲ್ಲಿ 300ಕ್ಕೂ ಹೆಚ್ಚು ಕೆರೆಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ.

ಉಳಿದ ಕೆರೆಗಳಲ್ಲಿಯೂ ನೀರಿನ ಪ್ರಮಾಣ ತೀವ್ರವಾಗಿ ಕುಸಿದಿದ್ದು, ಸುಮಾರು 100 ಕೆರೆಗಳು ಡೆಡ್ ಸ್ಟೋರೇಜ್ ಅಂತಕ್ಕೆ ತಲುಪಿದೆ. ಇದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಹಾಗೂ ಕೃಷಿಗೆ ನೀರಿನ ಸಮಸ್ಯೆ ಮತ್ತಷ್ಟು ಗುಲ್ಬಣಿಸುವ ಆತಂಕ ಎದುರಾಗಿದೆ.

ಮಳೆ ಕೊರತೆ ಮತ್ತು ಬರದ ಪರಿಣಾಮದಿಂದ ರೈತರು ಹಾಗೂ ಗ್ರಾಮೀಣ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಜಲ ಮೂಲಗಳ ಸಂರಕ್ಷಣೆ ಮತ್ತು ಪರ್ಯಾಯ ನೀರಿನ ವ್ಯವಸ್ಥೆ ಗಾಗಿ ತುರ್ತು ಕ್ರಮ ಕೈಗೊಳ್ಳುವ ಅಗತ್ಯ ಹೆಚ್ಚಾಗಿದೆ.

ತುಮಕೂರಿನಲ್ಲಿ ನೀರಿನ ಸಂಕಷ್ಟ ತೀವ್ರ - ಜನ ಜಾನುವಾರುಗಳ ಪರದಾಟ, ತೋಟಗಾರಿಕೆ ಬೆಳೆ ಉಳಿಸಲು ರೈತರ ಹೋರಾಟ :

ಮಳೆ ಕೊರತೆಯಿಂದ ತುಮಕೂರು ಜಿಲ್ಲೆಯಲ್ಲಿ ಜಲ ಸಂಕಷ್ಟ ಮತ್ತಷ್ಟು ಗಂಭೀರವಾಗಿದ್ದು, ಜನರು, ಜಾನು ಹಾಡುಗಳು ಹಾಗೂ ಪ್ರಾಣಿ ಪಕ್ಷಿಗಳ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆರೆಗಳು ಬತ್ತಿಹೋಗಿರುವ ಪರಿಣಾಮ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ರೈತರು ತಮ್ಮ ತೆಂಗು ಮತ್ತು ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಹೊರ ಸಾಹಸ ಪಡುತ್ತಿದ್ದಾರೆ. ನೀರಿನ ಕೊರತೆಯಿಂದ ಬೆಳೆಗಳ ಮೇಲೆ ಪರಿಣಾಮ ಬೀರುವ ಆತಂಕ ರೈತರನ್ನು ಕಾಡುತ್ತಿದೆ.

ಬರದ ಪರಿಸ್ಥಿತಿ ಮುಂದುವರೆದರೆ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣಿಸುವ ಸಾಧ್ಯತೆ ಇದ್ದು, ತುರ್ತು ನೀರಿನ ನಿರ್ವಹಣಾ ಕ್ರಮಗಳ ಅಗತ್ಯ ಹೆಚ್ಚಾಗಿದೆ.

ಮಳೆ ಕೊರತೆಗೆ ಊರಿನ ಪ್ರಮುಖ ಕೆರೆಗಳು ಬತ್ತಿದವು - ಜಲ ಸಂಕಷ್ಟ ಮತ್ತಷ್ಟು ಗಂಭೀರ :

ಮಳೆ ಅಭಾವದ ಪರಿಣಾಮ ತುಮಕೂರು ಜಿಲ್ಲೆಯ ಪ್ರಮುಖ ಜಲಮೂಲಗಳ ಮೇಲು ತೀವ್ರ ಪರಿಣಾಮ ಬೀರಿದೆ. ನಗರದ ಮಳ್ಳೂರು ಕೆರೆ, ಮರಳೂರು ದಿಣ್ಣೆ ಕೆರೆಯಂತಹ ಪ್ರಮುಖ ಕರೆಗಳು ಸಂಪೂರ್ಣವಾಗಿ ಬತ್ತಿ ಹೋಗಿದ್ದು, ನೀರಿನ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.

ಕೆರೆಗಳಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ ಜನರು, ಜಾನುವಾರುಗಳು ಹಾಗೂ ಕೃಷಿ ಚಟುವಟಿಕೆಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ. ಜಲ ಮೂಲಗಳು ಒಣಗುತ್ತಿರುವುದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುವ ಆತಂಕವನ್ನು ಮೂಡಿಸಿದ.

ಬರ ಪರಿಸ್ಥಿತಿಯಿಂದ ತುಮಕೂರು ಜಿಲ್ಲೆಯಲ್ಲಿ ನೀರಿನ ನಿರ್ವಹಣೆ ಹಾಗೂ ಪರ್ಯಾಯ ಜಲ ವ್ಯವಸ್ಥೆಗಳ ಅಗತ್ಯ ಹೆಚ್ಚಾಗಿದ್ದು, ಜನರು ತುರ್ತು ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

Also Read :

ಸಂಸತ್ತಿನಲ್ಲಿ ಇಂದು ಕೋಲಾಹಲ: ವಿಪಕ್ಷಗಳ ಗದ್ದಲದಿಂದ ಮಧ್ಯಾಹ್ನ 2ಕ್ಕೆ ಸದನ ಮುಂದೂಡಿಕೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online