<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಫುಟ್ಬಾಲ್ ನ ಇಬ್ಬರು ದಿಗ್ಗಜರು: ಫಿಫಾ ವಿಶ್ವ ಕಪ್ ನಲ್ಲಿ ಮೆಸ್ಸಿ ಮತ್ತು ರೊನಾಲ್ಡೊ ಯಾರು ಬೆಸ್ಟ್?

ಫುಟ್ಬಾಲ್ ನ ಇಬ್ಬರು ದಿಗ್ಗಜರು: ಫಿಫಾ ವಿಶ್ವ ಕಪ್ ನಲ್ಲಿ ಮೆಸ್ಸಿ ಮತ್ತು ರೊನಾಲ್ಡೊ ಯಾರು ಬೆಸ್ಟ್?
Summary: Two football legends, Cristiano Ronaldo and Lionel Messi, have left their own amazing mark in the history of the FIFA World Cup. Who has scored more goals in the World Cup? Whose record is more impressive? Find out here a complete comparison of matches, goals, assists and other key statistics.

belagavi news :

ಫುಟ್ಬಾಲ್ ಜಗತ್ತಿನ ಎರಡು ಮಹಾನ್ ಹೆಸರುಗಳಾದಲಿ ಲಿಯೋನೆಲ್ ಮೆಸ್ಸಿ ಮತ್ತು ರೋನಾಡೋ ನಡುವಿನ ಹೋಲಿಕೆ ಯಾವಾಗಲೂ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತದೆ. ವಿಶೇಷವಾಗಿ ಫಿಫಾ ವಿಶ್ವಕಪ್ ನಂತಹ ಅತಿ ದೊಡ್ಡ ವೇದಿಕೆಯಲ್ಲಿ ಇವರ ಪ್ರದರ್ಶನ ಹೇಗಿದೆ ಎಂಬ ಪ್ರಶ್ನೆ ಹಲವರಲ್ಲಿದೆ.

ವಿಶ್ವ ಕಪ್ ಅಂಕಿ ಅಂಶಗಳನ್ನು ಗಮನಿಸಿದರೆ, ಮೆಸ್ಸಿ ಸ್ಪಷ್ಟ ಮೈಲುಗೈ ಸಾಧಿಸಿದ್ದಾರೆ. ಅರ್ಜೆಂಟೀನಾ ನಾಯಕ ಇದುವರೆಗೆ 26 ಪಂದ್ಯಗಳಲ್ಲಿ 13 ಗೋಲುಗಳನ್ನು ಬಾರಿಸಿ, ಎಂಟು ಅಸಿಸ್ಟ್ ಗಳನ್ನು ನೀಡಿದ್ದಾರೆ. ಆರು ವಿಶ್ವ ಕಪ್ಗಳಲ್ಲಿ ಆಡಿರುವ ಮೆಸ್ಸಿ, 2022ರಲ್ಲಿ ಅರ್ಜೆಂಟೀನವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ಮೂಲಕ ತಮ್ಮ ವೃತ್ತಿ ಜೀವನದ ಅತ್ಯಂತ ದೊಡ್ಡ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಇನ್ನೊಂದಡೆ, ಪೋರ್ಚುಗಲ್ ನಾಯಕರು ಐದು ವಿಶ್ವ ಕಪ್ ಗಳಲ್ಲಿ 22 ಪಂದ್ಯಗಳನ್ನು ಆಡಿದ್ದು, ಎಂಟು ಗೋಳುಗಳನ್ನು ಗಳಿಸಿದ್ದಾರೆ. ವಿಶ್ವ ಕಪ್ ಇತಿಹಾಸದಲ್ಲಿ ಐದು ವಿಭಿನ್ನ ಆವೃತ್ತಿಗಳಲ್ಲಿ ಗೋಲು ದಾಖಲಿಸಿದ ಮೊದಲ ಆಟಗಾರ ಎಂಬ ಅಪರೂಪದ ದಾಖಲೆಯು ಅವರ ಹೆಸರಿನಲ್ಲಿದೆ. ಆದರೆ ವಿಶ್ವಕಪ್ ಟ್ರೋಫಿ ಗೆಲ್ಲುವ ಕನಸು ಮಾತ್ರ ಇನ್ನು ನನಸಾಗಲಿಲ್ಲ.

Sponsored

ಗೋಲುಗಳು, ಅಸಿಸ್ಟ್ ಗಳು, ಆಡಿದ ಪಂದ್ಯಗಳು ಮತ್ತು ತಂಡದ ಯಶಸ್ಸು ಸೇರಿದಂತೆ ಪ್ರಮುಖ ಅಂಶಗಳಲ್ಲಿ, ರೊನಾಲ್ಡೋಗಿಂತ ಮುಂದೆ ಕಾಣಿಸುತ್ತಾರೆ. ವಿಶೇಷವಾಗಿ ವಿಶ್ವಕಪ್ ಟ್ರೋಫಿ ಗೆದ್ದಿರುವುದು ಮತ್ತು ನಕೌಟ್ ಹಂತಗಳಲ್ಲಿ ನಿರ್ಣಾಯಕ ಪ್ರದರ್ಶನ ನೀಡಿರುವುದು ಮೆಸ್ಸಿಯ ದಾಖಲೆಗೆ ಇನ್ನಷ್ಟು ಮೆರವು ತಂದಿದೆ.

ಹೀಗಾಗಿ, ಫಿಫಾ ವಿಶ್ವಕಪ್ ಇತಿಹಾಸದ ಅಂಕಿ ಅಂಶಗಳ ಆಧಾರದ ಮೇಲೆ ನೋಡಿದರೆ, ಮೆಸ್ಸಿ - ರೊನಾಲ್ಡೋ ಗಿಂತ ಹೆಚ್ಚು ಪ್ರಭಾವ ಬೀರಿರುವ ಆಟಗಾರ ಎಂದು ಹೇಳಬಹುದು. ಆದರೂ, ಇಬ್ಬರು ಪುಟ್ಬಾಲ್ ಇತಿಹಾಸದ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಸದಾ ವಿಶೇಷ ಸ್ಥಾನವನ್ನು ಹೊಂದಿದ್ದಾರೆ.

ಮೆಸ್ಸಿ ವಿಶ್ವ ದಾಖಲೆ: ಕತಾರ್ ನಲ್ಲಿ ನಡೆದ 2022ರ ಫಿಫಾ ವಿಶ್ವಕಪ್ ನಲ್ಲಿ ಮೆಸ್ಸಿ ವಿಶಿಷ್ಟ ದಾಖಲೆಯನ್ನು ಸ್ಥಾಪಿಸಿದರು. ಗುಂಪು ಹಂತದ ಪಂದ್ಯಗಳು, 16ನೇ ಸುತ್ತಿನ ಪಂದ್ಯಗಳು, ಕ್ವಾಟರ್ ಫೈನಲ್, ಸೆಮಿ ಫೈನಲ್, ಮತ್ತು ಫೈನಲ್ ನಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಇದರ ಜೊತೆಗೆ, 2014 ಮತ್ತು 2022ರಲ್ಲಿಯೂ ಟೂರ್ನಮೆಂಟ್ನ ಅತ್ಯುತ್ತಮ ಆಟಗಾರನಾಗಿ ಮೆಸ್ಸಿ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಆದರೆ ರೊನಾಲ್ಡೋಗೆ ಇದನ್ನು ಸಾಧಿಸಲು ಇದುವರೆಗೆ ಸಾಧ್ಯವಾಗಲಿಲ್ಲ.

ರೊನಾಲ್ಡೋ ವಿಶ್ವ ಕಪ್ ಇತಿಹಾಸದಲ್ಲಿ 22 ಪಂದ್ಯಗಳನ್ನು ಆಡಿದ್ದು, ಎಂಟು ಗೋಲು ಹಾಗೂ ಎರಡು ಅಸಿಸ್ಟ್ ಗಳನ್ನು ದಾಖಲಿಸಿದ್ದಾರೆ. ಆದರೆ ಆಶ್ಚರ್ಯಕರ ಸಂಗತಿ ಎಂದರೆ, ನಾಕೌಟ್ ಹಂತಗಳಲ್ಲಿ ಅವರು ಇನ್ನೂ ಗೋಲ್ ಅಥವಾ ಅಸಿಸ್ಟ್ ದಾಖಲಿಸಿಲ್ಲ. ದಾಖಲಿಸಿಲ್ಲ ದಾಖಲಿಸಿಲ್ಲ ದಾಖಲಿಸಿಲ್ಲ. 2006ರ ವಿಶ್ವಕಪ್ ನಲ್ಲಿ ಪೋರ್ಚುಗಲ್ ನಾಲ್ಕನೇ ಸ್ಥಾನ ಪಡೆದಿದ್ದು, ಅದೇ ಅವರ ಅತ್ಯುತ್ತಮ ವಿಶ್ವಕಪ್ ಸಾಧನೆಯಾಗಿದೆ. ಅದಾಗಿಯೂ, ರೊನಾಲ್ಡೋ ತಮ್ಮ ದೇಶಕ್ಕೆ ವಿಶ್ವಕಪ್ ಟ್ರೋಫಿ ತಂದು ಕೊಡುವಲ್ಲಿ ಯಶಸ್ವಿಯಾಗಿಲ್ಲ.

Sponsored

ಇದರ ನಡುವೆಯೂ, ಪುಟ್ಬಾಲ್ ಇತಿಹಾಸದಲ್ಲಿ ಯಾರು ಸಾಧಿಸದ ಅಪರೂಪದ ವಿಶ್ವ ದಾಖಲೆ ರೊನಾಲ್ಡೋ ಹೆಸರಿನಲ್ಲಿದೆ. 2006, 2010, 2014 2018 ಮತ್ತು 2022ರಂತೆ ಸತತ ಐದು ವಿಭಿನ್ನ ಫಿಫಾ ವಿಶ್ವಕಪ್ ಆವೃತ್ತಿಗಳಲ್ಲಿ ಗೋಳು ಗಳಿಸಿದ ವಿಶ್ವದ ಏಕೈಕ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಮತ್ತೊಂದೆಡೆ, ಮೆಸ್ಸಿ ದೊಡ್ಡ ಪಂದ್ಯಗಳಲ್ಲಿ ತಮ್ಮ ಪ್ರಭಾವವನ್ನು ಮತ್ತಷ್ಟು ಗಟ್ಟಿಯಾಗಿ ಸಾಬೀತುಪಡಿಸಿದ್ದಾರೆ. ವಿಶ್ವ ಕಪ್ ನಲ್ಲಿ ಇದುವರೆಗೆ 11 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿರುವ ಮೆಸ್ಸಿ, ಈ ವಿಭಾಗದಲ್ಲೂ ರೊನಾಲ್ಡೋಗಿಂತ ಮುನ್ನಡೆಯಲ್ಲಿದ್ದಾರೆ. ರೊನಾಲ್ಡೋ 7 ಬಾರಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಫುಟ್ಬಾಲ್ ಲೋಕದ ಇಬ್ಬರು ದಿಗ್ಗಜರಾದ ಮೆಸ್ಸಿ ಮತ್ತು ರೊನಾಲ್ಡೋ ಮತ್ತೊಮ್ಮೆ ವಿಶ್ವಕಪ್ ವೇದಿಕೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. 2026 ರ ಫಿಫಾ ವಿಶ್ವಕಪ್ ಇಬ್ಬರ ವೃತ್ತಿ ಜೀವನದಲ್ಲಿ ಅತ್ಯಂತ ವಿಶೇಷ ಕ್ಷಣವಾಗುವ ಸಾಧ್ಯತೆ ಇದೆ.

38 ವರ್ಷದ ಮೆಸ್ಸಿಗೆ ಇದು ದಾಖಲೆ 7ನೇ ವಿಶ್ವಕಪ್ ಆಗಲಿದ್ದು, ವಿಶ್ವ ಫುಟ್ಬಾಲ್ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸೇರ್ಪಡೆಯಾಗಲಿದೆ. ಇದೇ ವೇಳೆ, 41 ವರ್ಷದ ರೊನಾಲ್ಡೋ ಕೂಡ ತನ್ನ 7ನೇ ವಿಶ್ವಕಪ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಪರೂಪದ ಇತಿಹಾಸ ನಿರ್ಮಿಸುವ ಅವಕಾಶ ಹೊಂದಿದ್ದಾರೆ.

Sponsored

ಫುಟ್ಬಾಲ್ ಅಭಿಮಾನಿಗಳ ದೃಷ್ಟಿಯಲ್ಲಿ 2026ರ ವಿಶ್ವಕಪ್ ಕೇವಲ ಮತ್ತೊಂದು ಟೂರ್ನಿ ಅಲ್ಲ; ಇದು ಒಂದು ಯುಗದ ಅಂತ್ಯವನ್ನು ಸೂಚಿಸುವ ವೇದಿಕೆ ಆಗಬಹುದು. ಎರಡು ದಶಕಗಳ ಕಾಲ ವಿಶ್ವ ಫುಟ್ಬಾಲ್ ನ್ನು ಆಳಿದ ಮೆಸ್ಸಿ ಮತ್ತು ರೋನಾಲ್ಡೋ ತಮ್ಮ ಅಂತಿಮ ವಿಶ್ವಕಪ್ ಪ್ರಯಾಣದಲ್ಲಿ ಯಾವ ರೀತಿಯ ಮ್ಯಾಜಿಕ್ ಸೃಷ್ಟಿಸುತ್ತಾರೆ ಎಂಬುದನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ವಿಶ್ವ ಕಪ್ ಇತಿಹಾಸದಲ್ಲಿ ಅಸಂಖ್ಯಾತ ದಾಖಲೆಗಳನ್ನು ನಿರ್ಮಿಸಿರುವ ಈ ಇಬ್ಬರು ಸೂಪರ್ ಸ್ಟಾರಗಳಿಗೆ ಇದು ಕೊನೆಯ ಫಿಫಾ ವಿಶ್ವಕಪ್ ಆಗುವ ಸಾಧ್ಯತೆ ಇರುವುದರಿಂದ, 2026ರ ಟೂರ್ನಿ ಫುಟ್ಬಾಲ್ ಪ್ರಿಯರ ಪಾಲಿಗೆ ಭಾವನಾತ್ಮಕ ಹಾಗೂ ಐತಿಹಾಸಿಕ ಕ್ಷಣಗಳ ಮಹಾ ಪರ್ವವಾಗಲಿದೆ.

Also Read:

ಸರ್ಕಾರಿ ಭೂ ಕಬಳಿಕೆ ಪ್ರಕರಣವೇ? ₹80 ಕೋಟಿ ಹಗರನ್ನ ದಾಖಲೆ ನೋಡಿ ಚೇರ್ ಬಿಟ್ಟ ತಹಶೀಲ್ದಾರ್

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online