Belagavi News :
ಮಧ್ಯ ಪ್ರಾಚ್ಯದಲ್ಲಿ ಮುಂದುವರೆದಿರುವ ಇರಾನ್ ಸಂಬಂಧಿತ ಸಂಘರ್ಷದ ನಡುವೆ ಅಮೆರಿಕಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಕಳೆದ ಶನಿವಾರ ಇರಾಕ್ ನಲ್ಲಿ ನಡೆದ ಡ್ರೋನ್ ನ ನಿಯಂತ್ರಿತ ಸ್ಪೋಟದಲ್ಲಿ ಅಮೆರಿಕದ ಒಬ್ಬ ಸೈನಿಕ ಮೃತಪಟ್ಟಿದ್ದು ಇದರೊಂದಿಗೆ ಸಂಘರ್ಷದಲ್ಲಿ ಬುದ್ಧ ಪಟ್ಟ ಅಮೆರಿಕಾದ ಸೈನಿಕರ ಸಂಖ್ಯೆ 17ಕ್ಕೆ ಏರಿಕೆ ಎಂದು ಯು ಎಸ್ ಮಿಲಿಟರಿ ಭಾನುವಾರ ಅಧಿಕೃತವಾಗಿ ತಿಳಿಸಿದೆ.
ಅಮೆರಿಕದ ಮಿಲಿಟರಿ ಪ್ರಕಾರ, ಡ್ರೋನ್ ದಾಳಿ, ಕ್ಷಿಪಣಿ ದಾಳಿ ಮತ್ತು ವೈಮಾನಿಕ ದಾಳಿಗಳ ನಡುವೆ ನೆಲದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸೈನಿಕರು ನಿರಂತರ ಅಪಾಯವನ್ನು ಎದುರಿಸುತ್ತಿದ್ದಾರೆ. ಇತ್ತೀಚಿನ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ಭದ್ರತಾ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರ ಗೊಳಿಸಿವೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶಾಂತಿ ಮಾತುಕತೆಗಳು ವಿಫಲವಾದ ಬಳಿಕ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ ಎಂದು ಹೇಳಿದ್ದಾರೆ. ಮಧ್ಯ ಪ್ರಾಚ್ಯ ದ ವಿವಿಧ ಭಾಗಗಳಲ್ಲಿ ಅಮೆರಿಕದ ಪಡೆಗಳು ನಿಯೋಜನೆಯಾಗಿದ್ದು, ಈ ಸಂಘರ್ಷದ ಪರಿಣಾಮ ಇತರೆ ರಾಷ್ಟ್ರಗಳ ಮೇಲು ಬೀಳುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, "ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದನ್ನು ತಡೆಯಲು ಈ ಯುದ್ಧ ಅನಿವಾರ್ಯವಾಗಿದೆ" ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ. ಈ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
ಇರಾನ್ - ಅಮೆರಿಕ ಸಂಘರ್ಷ ತೀವ್ರ - 17 ಅಮೆರಿಕ ಸೈನಿಕರು ಸಾವು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಳ :
ಇರಾನ್ - ಅಮೆರಿಕ ಸಂಘರ್ಷ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ವಿವಿಧ ದಾಳಿ ಮತ್ತು ಅಪಘಾತಗಳಲ್ಲಿ ಮೃತಪಟ್ಟ ಅಮೇರಿಕಾದ ಸೈನಿಕರ ಸಂಖ್ಯೆ 17ಕ್ಕೆ ಏರಿದೆ ಎಂದು ಯು ಎಸ್ ಸೆಂಟ್ರಲ್ ಕಮಾಂಡ್ ಮಾಹಿತಿ ನೀಡಿದೆ.
ಫೆಬ್ರುವರಿ 28ರಂದು ಸಂಘರ್ಷ ಆರಂಭವಾದ ಕೆಲವೇ ಸಮಯದಲ್ಲಿ ಕುವೈತ್ ನ ನಾಗರಿಕ ಬಂದರಿನ ಮೇಲೆ ನಡೆದ ಇರಾನಿನ ಡ್ರೋನ್ ದಾಳಿಯಲ್ಲಿ ಆರು ಅಮೆರಿಕ ಸೈನಿಕರು ಮೃತಪಟ್ಟಿದ್ದರು. ಬಳಿಕ ಮಾರ್ಚ್ ಒಂದರಂದು ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯು ಸೇನೆಯ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಸೈನಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಇದಾದ ಬಳಿಕ ಇರಾಕ್ ನಲ್ಲಿ ಕಾರ್ಯಾಚರಣೆಗೆ ಬೆಂಬಲ ನೀಡುತ್ತಿದ್ದ ಕೆಸಿ - 135 ಇಂಧನ ತುಂಬುವ ವಿಮಾನ ಪಥನಗೊಂಡು 6 ಸೇವಾ ಸದಸ್ಯರು ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ತನಿಕೆ ಮುಂದುವರೆದಿದೆ ಎಂದು ಯು ಎಸ್ ಮಿಲಿಟರಿ ತಿಳಿಸಿದೆ.
ಇತ್ತೀಚೆಗೆ ಅರೇಬಿಯನ್ ಸಮುದ್ರದಲ್ಲಿ ನೌಕಾಪಡೆಯ ಹೆಲಿಕ್ಯಾಪ್ಟರ್ ಅಪಘಾತದಲ್ಲಿ ಒಬ್ಬ ಪೈಲೆಟ್ ಮೃತಪಟ್ಟಿದ್ದು, ಉಳಿದ ಮೂವರು ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಇದೇ ವೇಳೆ ಜೋರ್ಡಾನ್ ನಲ್ಲಿ ಇರಾನಿನ ಬ್ಯಾಲೆಸ್ಟಿಕ್ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದ ರಕ್ಷಣೆ ನೀಡುವ ವೇಳೆ ಇಬ್ಬರು ಅಮೆರಿಕ ಸೇವಾ ಸದಸ್ಯರು ಮೃತಪಟ್ಟಿದ್ದು ಮತ್ತು ಸಿಬ್ಬಂದಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಕಳೆದ ಶನಿವಾರ ಉತ್ತರ ಇರಾಕ್ ನಲ್ಲಿ ಇರಾನಿನ ಡ್ರೋನ್ ಗೆ ಸಂಬಂಧಿಸಿದ ನಿಯಂತ್ರಿತ ಸ್ಪೋಟದ ವೇಳೆ ಮತ್ತೊಬ್ಬ ಅಮೆರಿಕ ಸೈನಿಕ ಸಾವನ್ನಪ್ಪಿದ್ದು, ಮತ್ತೊಬ್ಬ ಸೈನಿಕ ಗಾಯಗೊಂಡಿದ್ದಾರೆ. ಈ ಘಟನೆಯೊಂದಿಗೆ ಸಂಘರ್ಷದಲ್ಲಿ ವ್ರತ ಪಟ್ಟ ಅಮೆರಿಕಾದ ಸೈನಿಕರ ಸಂಖ್ಯೆ 17ಕ್ಕೆ ತಲುಪಿದೆ.
ಇದೆ ವೇಳೆ, ಕಳೆದ ಮೂರು ವಾರಗಳಲ್ಲಿ ಅಮೆರಿಕಾದ ದಾಳಿಗಳಿಂದ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಘರ್ಷದ ಪರಿಣಾಮ ರಾಷ್ಟ್ರಗಳು, ಇಸ್ರೇಲ್, ಲೆಬನಾನ್ ಸೇರಿದಂತೆ ಮಧ್ಯಪ್ರಾಚ್ಯದ ಹಲವು ಪ್ರದೇಶಗಳಲ್ಲಿ ಭದ್ರತಾ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.