<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಪಾಕಿಸ್ತಾನದ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆ ಎತ್ತಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ DESCRITPION : ಪಾಕಿಸ್ತಾನದಲ್ಲಿ ಮಾಧ್ಯಮ ಸ್ವತಂತ್ರದ ಸ್ಥಿತಿ ಕುರಿತು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸ್ವತಂತ್ರ ಪತ್ರಿಕೋದ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ

ಪಾಕಿಸ್ತಾನದ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆ ಎತ್ತಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್  DESCRITPION : ಪಾಕಿಸ್ತಾನದಲ್ಲಿ ಮಾಧ್ಯಮ ಸ್ವತಂತ್ರದ ಸ್ಥಿತಿ ಕುರಿತು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸ್ವತಂತ್ರ ಪತ್ರಿಕೋದ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ
Summary: US Vice President JD Vance has expressed deep concern about the state of media freedom in Pakistan. He criticized that independent journalism and freedom of expression are important elements of democracy, and these rights are not adequately created in Pakistan.

BELAGAVI NEWS :

ಪಾಕಿಸ್ತಾನದಲ್ಲಿ ಮಾಧ್ಯಮ ಸ್ವಾತಂತ್ರ್ಯವೇ ಇಲ್ಲ; ಜೆಡಿ ವ್ಯಾನ್ಸ್ ಟೀಕೆ, ಒಪ್ಪಂದ ವಿವರ ಬಹಿರಂಗಕ್ಕೆ ವಿಳಂಬದ ಕಾರಣ ಬಿಚ್ಚಿಟ್ಟ ಅಮೆರಿಕ ಉಪಾಧ್ಯಕ್ಷ

ವಾಷಿಂಗ್ಟನ್, ಜೂನ್ 20 : ಅಮೆರಿಕ ಮತ್ತು ಇಸ್ರೇಲ್ ನಡುವೆ ಇತ್ತೀಚಿಗೆ ನಡೆದ ರಾಜತಾಂತ್ರಿಕ ಮಾತುಕತೆಗಳು ಹಾಗೂ ತಾತ್ಕಾಲಿಕ ಒಪ್ಪಂದದ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲು ವಿಳಂಬವಾದ ಹಿನ್ನೆಲೆ ಕುರಿತು ಅಮೆರಿಕಾದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ಅವರು ಪಾಕಿಸ್ತಾನದಲ್ಲಿನ ಮಾಧ್ಯಮ ಸ್ವಾತಂತ್ರ್ಯದ ಸ್ಥಿತಿಯನ್ನು ಟೀಕಿಸಿದ್ದು, ಅಲ್ಲಿನ ಮಾಧ್ಯಮಗಳು ಸಂಪೂರ್ಣ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಅವಕಾಶವಿಲ್ಲ ಎಂದು ಆರೋಪಿಸಿದ್ದಾರೆ.

ಜೆಡಿ ವ್ಯಾನ್ಸ್ ಅವರ ಪ್ರಕಾರ, ಸೂಕ್ಷ್ಮ ರಾಜತಾಂತ್ರಿಕ ಮಾತುಕತೆಗಳ ಮಾಹಿತಿ ಸಮಯಕ್ಕಿಂತ ಹೆಚ್ಚಿಗೆ ಬಹಿರಂಗವಾದರೆ ಒಪ್ಪಂದದ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇದೇ ಕಾರಣದಿಂದ ಅಮೆರಿಕ ಮತ್ತು ಇರಾನ್ ನಡುವೆ ನಡೆದ ಮಾತುಕತೆಗಳ ಕೆಲವು ಪ್ರಮುಖ ಅಂಶಗಳನ್ನು ಆರಂಭಿಕ ಹಂತದಲ್ಲಿ ರಹಸ್ಯವಾಗಿ ಇರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

Sponsored

ಪಾಕಿಸ್ತಾನದಂತ ಕೆಲವು ದೇಶಗಳಲ್ಲಿ ಮಾಧ್ಯಮಗಳ ಮೇಲೆ ಸರಕಾರದ ಪ್ರಭಾವ ಹೆಚ್ಚಿದೆ ಎಂದು ಆರೋಪಿಸಿದ ವ್ಯಾನ್ಸ್, ಅಂತಹ ಪರಿಸ್ಥಿತಿಯಲ್ಲಿ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗುವ ಅಪಾಯವಿರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮಾಹಿತಿ ಸೋರಿಕೆಯಿಂದ ಮಾತುಕತೆಗಳು ಹಿನ್ನಡೆಯಾಗುವ ಅಥವಾ ಒಪ್ಪಂದವೇ ವಿಫಲವಾಗುವ ಸಾಧ್ಯತೆಯನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮವಾಗಿ ವಿವರಗಳನ್ನು ಬಹಿರಂಗಪಡಿಸುವುದು ವಿಳಂಬಗೊಳಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಜೆಡಿ ವ್ಯಾನ್ಸ್ ಅವರ ಈ ಹೇಳಿಕೆ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿಶೇಷವಾಗಿ ಪಾಕಿಸ್ತಾನದಲ್ಲಿನ ಮಾಧ್ಯಮ ಸ್ವಾತಂತ್ರ್ಯ, ಪತ್ರಕರ್ತರ ಹಕ್ಕುಗಳು ಮತ್ತು ಸರ್ಕಾರ ಮಾಧ್ಯಮ ಸಂಬಂಧಗಳ ಕುರಿತು ಹೊಸ ಚರ್ಚೆಗೆ ಇದು ಕಾರಣವಾಗಿದೆ. ಮತ್ತೊಂದೆಡೆ,ರಾಜತಾಂತ್ರಿಕ ಒಪ್ಪಂದಗಳ ಗೌಪ್ಯತೆ ಮತ್ತು ರಾಷ್ಟ್ರೀಯ ಭದ್ರತೆಯ ನಡುವಿನ ಸಮತೋಲನದ ಪ್ರಶ್ನೆಯು ಮತ್ತೆ ಮುನ್ನೆಲೆಗೆ ಬಂದಿದೆ.

ವ್ಯಾನ್ಸ್ ಅವರ ಹೇಳಿಕೆ ಪಾಕಿಸ್ತಾನದ ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಹುಟ್ಟುಹಾಕಲಿದೆ ಎಂಬುದರ ಮೇಲೆ ಇದೀಗ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ಸೂಕ್ಷ್ಮ ರಾಜತಾಂತ್ರಿಕ ಮಾತುಕತೆಗಳ ಕಾರಣ ಒಪ್ಪಂದದ ವಿವರ ರಹಸ್ಯ; ಜೆಡಿ ವ್ಯಾನ್ಸ್ ಸ್ಪಷ್ಟನೆ

Sponsored

ಅಮೇರಿಕಾ ಮತ್ತು ಇರಾನ್ ನಡುವಿನ ಇತ್ತೀಚಿನ ರಾಜತಾಂತ್ರಿಕ ಒಪ್ಪಂದದ ವಿವರಗಳನ್ನು ಆರಂಭಿಕ ಹಂತದಲ್ಲಿ ಬಹಿರಂಗಪಡಿಸುವುದಕ್ಕೆ ಅಮೆರಿಕಾದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚಿಗೆ ನೀಡಿದ ಸಂದರ್ಶನ ಒಂದರಲ್ಲಿ ಈ ಕುರಿತು ಮಾತನಾಡಿದ ಅವರು, ಅಂತರಾಷ್ಟ್ರೀಯ ರಾಜತಾಂತ್ರಿಕ ಮಾತುಕತೆಗಳಲ್ಲಿ ಗೌಪ್ಯತೆ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ವಿವರಿಸಿದ್ದಾರೆ.

"ನಾವು ಇರಾನ್ ಜೊತೆ ಅತ್ಯಂತ ಸೂಕ್ಷ್ಮ ಹಾಗೂ ಮಹತ್ವದ ಮಾತುಕತೆ ನಡೆಸುತ್ತಿದ್ದೆವು. ಇಂತಹ ಸಂದರ್ಭಗಳಲ್ಲಿ ಒಪ್ಪಂದದ ಅಂಶಗಳು ಸಮಯಕ್ಕೂ ಮುನ್ನ ಮಾಧ್ಯಮಗಳಿಗೆ ಸೋರಿಕೆಯಾಗಿದ್ದರೆ, ಮಾತುಕತೆಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇತ್ತು. ಕೆಲವೊಮ್ಮೆ ಸಣ್ಣ ಮಾಹಿತಿ ಸೋರಿಕೆ ಸಂಪೂರ್ಣ ರಾಜತಾಂತ್ರಿಕ ಪ್ರಕ್ರಿಯೆಯನ್ನು ಹಳಿ ತಪ್ಪಿಸಬಹುದು. ಇದಕ್ಕಾಗಿಯೇ ಎಲ್ಲವೂ ಅಂತಿಮ ಹಂತಕ್ಕೆ ತಲುಪುವವರೆಗೂ ಒಪ್ಪಂದದ ವಿವರಗಳನ್ನು ಅತ್ಯಂತ ಗೌಪ್ಯವಾಗಿ ಇಡಲಾಗಿತ್ತು" ಎಂದು ವ್ಯಾನ್ಸ್ ಹೇಳಿದ್ದಾರೆ.

ಅವರು ಮುಂದುವರೆದು ,ಜಾಗತಿಕ ಮಟ್ಟದ ಒಪ್ಪಂದಗಳಲ್ಲಿ ಭಾಗಿಯಾಗಿರುವ ರಾಷ್ಟ್ರಗಳ ನಡುವೆ ವಿಶ್ವಾಸ ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ತಿಳಿಸಿದ್ದಾರೆ. ಮಾತುಕಥೆಗಳು ನಡೆಯುತ್ತಿರುವ ವೇಳೆ ಅನಧಿಕೃತ ಮಾಹಿತಿ ಬಹಿರಂಗವಾದರೆ, ಸಂಬಂಧಿತ ದೇಶಗಳ ನಿಲುವು ಬದಲಾಗುವ ಅಥವಾ ಒಪ್ಪಂದವೇ ವಿಫಲಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾಧ್ಯಮ ಸ್ವತಂತ್ರ ಮತ್ತು ಮಾಹಿತಿ ನಿರ್ವಹಣೆಯ ವಿಚಾರವೂ ಚರ್ಚೆಗೆ ಬಂದಿದೆ. ಸೂಕ್ಷ್ಮ ಭದ್ರತಾ ಹಾಗೂ ವಿದೇಶಾಂಗ ವಿಷಯಗಳಲ್ಲಿ ಸರ್ಕಾರಗಳು ಕೆಲವೊಮ್ಮೆ ಗೌಪತ್ಯೆಯನ್ನು ಕಾಪಾಡುವುದು ಅನಿವಾರ್ಯವಾಗುತ್ತದೆ ಎಂದು ವ್ಯಾನ್ಸ್ ಹೇಳಿದ್ದಾರೆ. ಅವರ ಈ ಹೇಳಿಕೆ ಇದೀಗ ಅಂತರಾಷ್ಟ್ರೀಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ರಾಜತಾಂತ್ರಿಕ ಮಾತುಕತೆಗಳಲ್ಲಿ ಪಾರದರ್ಶಕತೆ ಮತ್ತು ಗೌಪ್ಯತೆಯ ನಡುವಿನ ಸಮತೋಲನದ ಬಗ್ಗೆ ಹೊಸ ಚರ್ಚೆಗಳು ಹುಟ್ಟು ಹಾಕಿದೆ.

Sponsored

ಪಾಕಿಸ್ತಾನ ಸೇರಿದಂತೆ ಕೆಲವು ರಾಷ್ಟ್ರಗಳ ಮಾಧ್ಯಮ ಸ್ವತಂತ್ರ್ಯ ಪ್ರಶ್ನಿಸಿದ ಜೆಡಿ ವ್ಯಾನ್ಸ್; ರಾಜತಾಂತ್ರಿಕ ಗೌಪತ್ಯೆಯ ಅಗತ್ಯತೆ ಒತ್ತಿ ಹೇಳಿದ ಅಮೆರಿಕಾದ ಉಪಾಧ್ಯಕ್ಷ

ತಮ್ಮ ವಾದವನ್ನು ಸಮರ್ಥಿಸಿಕೊಂಡ ವ್ಯಾನ್ಸ್, "ಪಾಕಿಸ್ತಾನದಂತ ಕೆಲವು ದೇಶಗಳಲ್ಲಿ ಅಮೆರಿಕ ಅಥವಾ ಇತರ ಪಾಶ್ಚಿಮಾತ್ಯ ರಾಷ್ಟ್ರಗಳ ಮಾದರಿಯ ಮಾಧ್ಯಮ ಸ್ವತಂತ್ರ ಕಾಣುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಮಾಧ್ಯಮಗಳು ಸಂಪೂರ್ಣ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಸರ್ಕಾರದ ಪ್ರಭಾವ ಅಥವಾ ವ್ಯವಸ್ಥೆಯ ನಿಯಂತ್ರಣ ಹೆಚ್ಚು ಇರುವ ಪರಿಸರದಲ್ಲಿ ಮುಕ್ತ ಚರ್ಚೆಗಳಿಗಿಂತ ಅಧಿಕೃತ ನಿರೂಪಣೆಗಳೇ ಹೆಚ್ಚು ಪ್ರಚಾರ ಪಡೆಯುತ್ತವೆ. ಇಂಥ ಸಂದರ್ಭದಲ್ಲಿ ರಾಜತಾಂತ್ರಿಕ ಮಾತುಕತೆಗಳ ಮಾಹಿತಿಯನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ" ಎಂದು ಹೇಳುತ್ತಾರೆ.

ಅವರ ಪ್ರಕಾರ, ಅಂತರಾಷ್ಟ್ರೀಯ ,ಮಟ್ಟದ ಸೂಕ್ಷ್ಮ ಮಾತುಕತೆಗಳಲ್ಲಿ ಮಾಹಿತಿ ಸೋರಿಕೆಯಾಗುವುದು ಒಪ್ಪಂದದ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಎಲ್ಲಾ ಪಕ್ಷಗಳು ಅಂತಿಮ ನಿರ್ಧಾರಕ್ಕೆ ಬರುವವರೆಗೆ ಗೌಪ್ಯತೆ ಕಾಪಾಡಿಕೊಳ್ಳುವುದು ಅಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.

ಈ ನಡುವೆ ಅಮೆರಿಕಾದ ಅಧ್ಯಕ್ಷ ಡ್ರೋನಾಲ್ಡ್ ಟ್ರಂಪ್ ನೇತೃತ್ವದ ಆಡಳಿತ ಮತ್ತು ಇರಾನ್ ನಡುವಿನ ಇತ್ತೀಚಿನ ಮಾತುಕಥೆಗಳು ಜಾಗತಿಕ ಗಮನ ಸೆಳೆದಿದೆ. ಕದನ ವಿರಾಮ, ಪ್ರಾದೇಶಿಕ ಸ್ಥಿರತೆ ಹಾಗೂ ಯುರೇನಿಯಂ ಪುಷ್ಟಿಕರಣಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಉಭಯ ಪಕ್ಷಗಳ ನಡುವೆ ಪ್ರಾರ್ಥಮಿಕ ಮಟ್ಟದ ಸಮನ್ವಯ ಸಾಧಿಸಲು ಪ್ರಯತ್ನಗಳು ನಡೆ ಸಂಬಂಧಿಸಿದ ವಿಚಾರಗಳ ಬಗ್ಗೆ ಉಭಯ ಪಕ್ಷಗಳ ನಡುವೆ ಪ್ರಾರ್ಥಮಿಕ ಮಟ್ಟದ ಸಮನ್ವಯ ಸಾಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂಬ ವರದಿಗಳು ಹರಿದಾಡುತ್ತಿವೆ. ಅಲ್ಲದೆ,ಆರ್ಥಿಕ ಒತ್ತಡ ಮತ್ತು ನಿರ್ಬಂಧಗಳಿಂದ ಸಂಕಷ್ಟ ಅನುಭವಿಸುತ್ತಿರುವ ಇರಾನ್ ಗೆ ರಾಜತಾಂತ್ರಿಕ ಪರಿಹಾರ ಮಾರ್ಗಗಳು ಮಹತ್ವ ಪಡೆದುಕೊಳ್ಳುತ್ತವೆ.

Sponsored

ಜೆಡಿ ವ್ಯಾನ್ಸ್ ಅವರ ಹೇಳಿಕೆಗಳು ಇದೀಗ ಮಾಧ್ಯಮ ಸ್ವತಂತ್ರ, ಮಾಹಿತಿ ನಿರ್ವಹಣೆ ಹಾಗೂ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯ ನಡುವಿನ ಸಂಬಂಧದ ಕುರಿತು ಹೊಸ ಚರ್ಚೆಗೆ ಕಾರಣವಾಗಿವೆ. ವಿಶೇಷವಾಗಿ ಸೂಕ್ಷ್ಮ ಭದ್ರತಾ ಮತ್ತು ವಿದೇಶಾಂಗ ನೀತಿ ವಿಷಯಗಳಲ್ಲಿ ಪಾರದರ್ಶಕತೆ ಹಾಗೂ ಗೌಪ್ಯತೆಯ ನಡುವಿನ ಸಮತೋಲನ ಹೇಗಿರಬೇಕು ಎಂಬ ಪ್ರಶ್ನೆ ಮತ್ತೊಮ್ಮೆ ಮುನ್ನಡೆಗೆ ಬಂದಿದೆ.

ಇರಾನ್ ಪರಮಾಣು ಕಾರ್ಯಕ್ರಮ ಕಡಿತಕ್ಕೆ ಒಪ್ಪಿಗೆ; ಟ್ರಂಪ್ ಆಡಳಿತದಿಂದ ಒಪ್ಪಂದಕ್ಕೆ "ಇತಿಹಾಸದ ಯಶಸ್ವಿ ರಾಜತಾಂತ್ರಿಕ ನಡೆ" ಎಂದು ಬಿಂಬನೆ.

ಅಮೆರಿಕ ಮತ್ತು ಇರಾನ್ ನಡುವಿನ ಇತ್ತೀಚಿನ ರಾಜತಾಂತ್ರಿಕ ಒಪ್ಪಂದವು ಜಾಗತಿಕ ಮಟ್ಟದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ವರದಿಗಳ ಪ್ರಕಾರ, ಈ ಒಪ್ಪಂದದಡಿ ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ನಿಯಂತ್ರಿಸಲು ಹಾಗೂ ಹಂತ ಹಂತವಾಗಿ ಕಡಿತಗೊಳಿಸಲು ಒಪ್ಪಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.

ಇದರ ಜೊತೆಗೆ, ಹಿಜ್ಬೊಲ್ಲಾ ಸೇರಿದಂತೆ ತನ್ನ ಬೆಂಬಲಿತ ಕೆಲವು ಸಂಘಟನೆಗಳಿಗೆ ನೀಡುತ್ತಿದ್ದ ಹಣಕಾಸು ಹಾಗೂ ಲಾಜಿಸ್ಟಿಕ್ ನೆರವನ್ನು ಕಡಿಮೆ ಮಾಡಲು ಅಥವಾ ನಿಲ್ಲಿಸಲು ಇರಾನ್ ಸಮ್ಮತಿಸಿದೆ ಎಂದು ಮಾಹಿತಿ ಹೊರಬಿದ್ದಿದೆ. ಈ ಕ್ರಮವನ್ನು ಪ್ರಾದೇಶಿಕ ಭದ್ರತೆ ಮತ್ತು ಮಧ್ಯಪ್ರಾಚ್ಯದ ಸ್ಥಿರತೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.

Sponsored

ಒಪ್ಪಂದವನ್ನು ಅಮೆರಿಕಾದ ಅಧ್ಯಕ್ಷ Donald Trump ನೇತೃತ್ವದ ಆಡಳಿತವು ತನ್ನ ವಿದೇಶಾಂಗ ನೀತಿಯ ದೊಡ್ಡ ಸಾಧನೆ ಎಂದು ಬಿಂಬಿಸುತ್ತಿದೆ. ಆಡಳಿತ ಪ್ರಕಾರ, ಇದು ಅಮೆರಿಕಾದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ರಾಜತಾಂತ್ರಿಕ ಹೆಜ್ಜೆಗಳಲ್ಲೊಂದು ಎಂದು ಹೇಳಲಾಗುತ್ತದೆ.

ಆದರೆ ಈ ಒಪ್ಪಂದದ ಅನುಷ್ಠಾನ, ಪಾರದರ್ಶಕತೆ ಹಾಗೂ ದೀರ್ಘಕಾಲಿಕ ಪರಿಣಾಮಗಳ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹಲವು ಚರ್ಚೆಗಳು ಮತ್ತು ಚರ್ಚೆಗಳು ಮುಂದುವರೆದಿವೆ.ವಿಶೇಷವಾಗಿ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಶಾಂತಿ ಸ್ಥಾಪನೆ ಮತ್ತು ಭದ್ರತೆ ಸಮತೋಲನ ಹೇಗೆ ರೂಪುಗೊಳ್ಳುತ್ತದೆ ಎಂಬುದರ ಮೇಲೆ ಈಗ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online