<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಇರಾನ್ ಜೊತೆ ಮಾತುಕತೆಗೆ ಅಮೆರಿಕಾ ಸಿದ್ದ: ಇದು ಯಾವುದೇ ರಿಯಾಯಿತಿ ಅಲ್ಲ: ರುಬಿಯೋ

ಇರಾನ್ ಜೊತೆ ಮಾತುಕತೆಗೆ ಅಮೆರಿಕಾ ಸಿದ್ದ: ಇದು ಯಾವುದೇ ರಿಯಾಯಿತಿ ಅಲ್ಲ: ರುಬಿಯೋ
Summary: ಅಂತರಾಷ್ಟ್ರೀಯ ರಾಜಕಾರಣದಲ್ಲಿ ಉದ್ಭವಿಸುವ ಯಾವುದೇ ಸಂಘರ್ಷ ಅಥವಾ ಸವಾಲಿಗಿಂತಲೂ ಶಾಂತಿಯುತ ಫಲಿತಾಂಶಕ್ಕೆ ನಮ್ಮ ಅಧ್ಯಕ್ಷರು ಯಾವಾಗಲೂ ಆದ್ಯತೆ ನೀಡುತ್ತಾರೆ ಎಂದು ಹಿರಿಯ ನಾಯಕ ರುಬಿಯೋ ಸ್ಪಷ್ಟಪಡಿಸಿದ್ದಾರೆ.ರುಬಿಯೋ ಯವರ ಪ್ರಕಾರ ಯುದ್ಧ ಅಥವಾ ಸಂಘರ್ಷದಿಂದ ಸಂಸ್ಥೆಗಳಿಗೆ ಶಾಸ್ತ್ರದ ಪರಿಹಾರ ಸಿಗುವುದಿಲ್ಲ.
BELAGAVI NEWS :
ಬುದುವಾರ ಮಾತನಾಡಿದ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಅವರು ಈಗ ಹೆಚ್ಚುತ್ತಿರುವ ಇರಾನ್- ಅಮೆರಿಕ ನಡುವೆ ಉದ್ವಿಗ್ನತೆಯ ನಡುವೆ ತಾನು ಮಾತುಕತೆಗೆ ಸಿದ್ದ ಎಂದು ಅಮೆರಿಕ ಘೋಷಿಸಿದೆ ಎಂದು ಅವರು ತಿಳಿಸಿದರು. ಆದರೆ ಇದನ್ನು ಇರಾನ್ ರಿಯಾಯಿತಿ ಎಂದು ಭಾವಿಸುವಂತಿಲ್ಲ ಎಂದು ಎಚ್ಚರಿಕೆಯ ಅವರು ನೀಡಿದರು.

ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಕ್ರಿಟಿಕಲ್ ಮಿನರಲ್ಸ್ ಮಂತ್ರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾರ್ಕೊ ರುಬಿಯೋಯವರು ಅಮೆರಿಕ ಅಧ್ಯಕ್ಷರು ಡೊನಾಲ್ಡ್ ಟ್ರಂಪ್ ತಮ್ಮ ಆಡಳಿತ ಅವಧಿಯಲ್ಲಿ ಇದೇ ರೀತಿಯ ವಿಧಾನವನ್ನು ಅವಲಂಬಿಸುತ್ತಿದ್ದರು. ಜಗತ್ತಿನ ಯಾರನ್ನಾದರೂ ಭೇಟಿ ಮಾಡಲು ವಿರೋಧಿಗಳು ಸೇರಿದಂತೆ ಮತ್ತು ತೊಡಗಿಸಿಕೊಳ್ಳಲು ಅವರು ಸದಾ ಮುಕ್ತರಾಗಿರುತ್ತಾರೆ ಎಂದು ಅವರು ತಿಳಿಸಿದರು.

ಅಮೆರಿಕ ಯಾರೊಂದಿಗಾದರೂ, ಯಾವುದೇ ಎದುರಾಳಿಯೊಂದಿಗೂ ಮಾತುಕತೆಗೆ ಸಿದ್ಧ ಅದು ಮಿತ್ರರೇ ಆಗಿರಲಿ, ಶತ್ರುವೇ ಆಗಿರಲಿ ಅದಕ್ಕೆ ಅಧ್ಯಕ್ಷರು ಯಾವಾಗಲೂ ಮುಕ್ತರಾಗಿರುತ್ತಾರೆ ಎಂದು ಮಾರ್ಕೊ ರುಬಿಯೋ ತಿಳಿಸಿದರು. ಜಗತ್ತಿನ ಯಾರೊಂದಿಗೂ ಮಾತನಾಡಲು ,ಭೇಟಿಯಾಗಲು ಮತ್ತು ಅವರೊಂದಿಗೆ ಮಾತನಾಡಲು ಸಿದ್ದರಿದ್ದಾರೆ. ನಾವು ಸಭೆಯನ್ನು ಪರಿಗಣಿಸುವುದಿಲ್ಲ.

ಮಾರ್ಕೋ ರುಬಿಯವರು ಅರ್ಥಪೂರ್ಣ ಮಾತುಗಳಿಗೆ ಏನು ಅಗತ್ಯ ಎಂಬುದನ್ನು ವಿವರಿಸಿದರು ,ಯಾವುದೇ ಚರ್ಚೆಗಳನ್ನು ಮಾಡಬೇಕೆಂದರೆ ಟೆಹ್ರಾನ್ನ ಕ್ಷಿಪಣಿ ಕಾರ್ಯಕ್ರಮ, ಭಯೋತ್ಪಾದಕ ಸಂಘಟನೆಗಳ ಪ್ರಾಯೋಜಕತ್ವ ಪರಮಾಣು ಕಾರ್ಯಕ್ರಮಗಳು ಮತ್ತು ತನ್ನದೇ ಆದ ಜನರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಅವರು ಬಗೆಹರಿಸಿಕೊಳ್ಳಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಮುಖ್ಯಸ್ಥರೊಂದಿಗೆ ನೇರವಾಗಿ ಮಾತನಾಡಲು ಅವಕಾಶವಿದ್ದರೂ, ಅಮೆರಿಕ ಕೂಡ ಅದಕ್ಕು ಮುಕ್ತವಾಗಿದೆ ಎಂದು ಭಾವಿಸುತ್ತಾರೆ ಇದೆ ವೇಳೆ ಅವರು ಸ್ಪಷ್ಟಪಡಿಸಿದರು. ಇರಾನ್ ಈಗ ಸಮಸ್ಯೆಗಳನ್ನು ಎದುರಿಸುತ್ತಿದೆ.ಜನರು ಬೀದಿಗಿಳಿದು ದೂರು ನೀಡುತ್ತಿದ್ದಾರೆ. ಇರಾನ್ ಆಡಳಿತವು ಜನರಿಗೆ ಅವರ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಆದಕಾರಣ ಅವರು ತಮ್ಮ ಎಲ್ಲಾ ಹಣಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಆರ್ಥಿಕ ಸಮಸ್ಯೆಗಳಿಂದ ಇರಾನ್ ನಲ್ಲಿ ಪ್ರತಿಭಟನೆಗಳು ಕಾರ್ಯದಿಂದ ಜನರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಇರಾನ್ ನಾಯಕತ್ವವು ತನ್ನ ನಾಗರಿಕ ಜೀವನ ಮಟ್ಟವನ್ನು ಸುಧಾರಿಸುವ ಬದಲು ಭಯೋತ್ಪಾದನೆ ಮತ್ತು ಪ್ರಾಕ್ಸಿ ಗುಂಪುಗಳನ್ನು ಪ್ರಾಯೋಗಿಸಲು ದೇಶದ ಸಂಪನ್ಮೂಲಗಳನ್ನು ಖರ್ಚು ಮಾಡುತ್ತಿವೆ ಎಂದು ಆರೋಪಿಸಿದರು.

ನಾವು ಒಂದು ಒಳ್ಳೆ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಏನಾದರೂ ಮಾಡಬಹುದೇ ಎಂಬ ಲೆಕ್ಕಾಚಾರ ಹಾಕುವುದರಲ್ಲಿ ಯಾವುದೇ ಹಾನಿ ಇಲ್ಲ ಎಂದು ನಾವು ಭಾವಿಸುತ್ತೇವೆ ಎಂದು ಮಾರ್ಕೊ ರುಬಿಯೋ ಹೇಳಿದರು. ಅಧ್ಯಕ್ಷರ ಆದ್ಯತೆಯು ಯಾವುದೇ ಸಂಘರ್ಷ ಅಥವಾ ಸವಾಲಿಗಿಂತ ಶಾಂತಿಯುತ ಪಲಿತಾಂಶವೂ ಅಗತ್ಯ ಎಂದು ಅವರು ತಿಳಿಸಿದರು . ಇರಾನಿಯನ್ನರು ಭೇಟಿಯಾಗಲು ಬಯಸಿದರೆ ನಾನು ಸಿದ್ದನಿದ್ದೇವೆ. ಅವರು ತಮ್ಮ ಮನಸ್ಸು ಬದಲಾಯಿಸಿದರೆ ನಾವು ಕೂಡ ಅದಕ್ಕೆ ಒಪ್ಪುತ್ತೇವೆ ಎಂದು ಮಾರ್ಕೊ ರುಬಿಯೋ ಹೇಳಿದರು.

ನಾವು ಈ ವ್ಯಕ್ತಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯವೇ ಎಂದು ನಮಗೆ ಖಚಿತವಿಲ್ಲ ಅವರು ಭೇಟಿಯಾಗಿ ಮಾತನಾಡಲು ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಮಾರ್ಕೊ ರುಬಿಯೋಯವರು ಸ್ಪಷ್ಟವಾಗಿ ಹೇಳಿದರೆ. ಅವರ ಮಾತಿನಂತೆ ಅಮೆರಿಕ -ಇರಾನ್ ನಡುವಿನ ಸಂಘರ್ಷದ ಮಧ್ಯೆ ಇರಾನ್ ಜೊತೆ ಮಾತುಕತೆ ಮಾಡಲು ನಾವು ಸಿದ್ಧರಿದ್ದೇವೆ ಎಂದು ಮಾರ್ಕೊ ರುಬಿಯೋಯವರು ತಿಳಿಸಿದರು ಈ ಮಾತುಕತೆಯಿಂದ ಇರಾನ್ ರಿಯಾಯಿತಿ ಎಂದು ಭಾವಿಸುವಂತಿಲ್ಲ ಎಂದು ಎಚ್ಚರಿಕೆಯನ್ನು ಅವರು ನೀಡಿದರು.


ಇನ್ನಷ್ಟು ಓದಿರಿ:
UPSC ನಿಯಮಗಳಲ್ಲಿ ದೊಡ್ಡ ಬದಲಾವಣೆ : ಪಾಸಾದರೆ ಮರು ಪರೀಕ್ಷೆಗೆ ಅವಕಾಶವಿಲ್ಲ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online