belagavi news :
ಮುಂಬರುವ ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕೆ ನಡೆಸಿದ್ದಾರೆ. ಕೇಂದ್ರ ಸರ್ಕಾರ ತನ್ನದೇ ಆದ ಆಡಳಿತ ಪರಂಪರೆಯ ಮೂಲಕ ದೇಶದ ಆರ್ಥಿಕತೆಯನ್ನು ಅಭೂತಪೂರ್ವ ಗೊಂದಲದ ಸ್ಥಿತಿಗೆ ತಳ್ಳಿದೆ ಎಂದು ಖರ್ಗೆ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು,ದೇಶ ಎದುರಿಸುತ್ತಿರುವ ಪ್ರಸ್ತುತ ಆರ್ಥಿಕ ಸವಾಲುಗಳಿಗೆ ಹಿಂದಿನ ಆಡಳಿತಗಳಿಗೆ ಕಾರಣ ಎಂದು ಹೇಳುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವೇ ಈ ಪರಿಸ್ಥಿತಿಗೆ ನೇರ ಹೊಣೆಗಾರ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು, ದೇಶದ ಸಾಮಾನ್ಯ ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಆದರೆ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹಿಂದಿನ ಆಡಳಿತಗಳ ಮೇಲೆ ಆರೋಪ ಹೊರೆಸುವ ಪ್ರಯತ್ನ ಮಾಡುತ್ತಿದೆ ಎಂದು ಖರ್ಗೆ ಟೀಕಿಸಿದ್ದಾರೆ.
"ಮುಂಬರುವ ಬಜೆಟ್ ದೇಶದ ಆರ್ಥಿಕ ಗೊಂದಲಗಳಿಗೆ ಬಲವಾದ ಹಾಗೂ ನಂಬಿಕೆ ಮೂಡಿಸುವ ಪರಿಹಾರಗಳನ್ನು ನೀಡುತ್ತಿವೆ ಎಂದು ಪ್ರಶ್ನಿಸುವ ಅವರು ಉದ್ಯೋಗ ಸೃಷ್ಟಿ, ಬೆಲೆ ಏರಿಗೆ ನಿಯಂತ್ರಣ, ಬಡವರ ಹಾಗೂ ಮಾಧ್ಯಮ ವರ್ಗದ ಸಮಸ್ಯೆಗಳ ಬಗ್ಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕಾಗಿದೆ"? ಎಂದು ಒತ್ತಾಯಿಸಿದ್ದಾರೆ. ಮುಂಬರುವ ಬಜೆಟ್ ನಲ್ಲಿ ಜನಪರ ಕ್ರಮಗಳಿರುತ್ತವೆಯೇ ಅಥವಾ ಕಾರ್ಪೊರೇಟ್ ಪರ ನೀತಿಗಳೇ ಮುಂದುವರೆಯುತ್ತವೆ ಎಂಬುದನ್ನು ದೇಶದ ಜನರು ಕಾದು ನೋಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಬಾರಿ ಕೇಂದ್ರ ಬಜೆಟ್ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಟೀಕೆ ನಡೆಸಿದ್ದಾರೆ. ಈ ಬಾರಿ ಸರ್ಕಾರದ ಹಿಂದಿನ ಆದಾಯದ ಪರಂಪರೆಯನ್ನು ನೆಪವಾಗಿಟ್ಟುಕೊಂಡು ತನ್ನ ವೈಫಲ್ಯಗಳನ್ನು ಮರೆಮಾಚಿಕೊಳ್ಳಲು ಸಾಧ್ಯವಿಲ್ಲ ಎಂದು ಖರ್ಗೆ ಹೇಳಿದ್ದಾರೆ. ಮೋದಿ ಸರ್ಕಾರದ ಸ್ವಂತ ಆಡಳಿತ ಪರಂಪರೆ ದೇಶದ ಆರ್ಥಿಕತೆಯನ್ನು ಅದ್ಭುತ ಪೂರ್ವ ಅವ್ಯವಸ್ಥೆ ತಳ್ಳಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರಸ್ತುತ ದೇಶ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳು, ಪ್ರಮುಖ ಆಡಳಿತ ಸೂಚಕಗಳು ಮತ್ತು ಜನಸಾಮಾನ್ಯರ ಮೇಲಿನ ಬೆಲೆ ಏರಿಕೆಯ ಒತ್ತಡಗಳಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಖರ್ಗೆ ಹೇಳಿದ್ದಾರೆ." ಈ ಬಾರಿಯ ಬಜೆಟ್ ಈಗಾಗಲೇ ಕುಸಿತಗೊಳ್ಳುತ್ತಿರುವ ಬಹು ಆರ್ಥಿಕ ಚಟುವಟಿಕೆಗಳಿಗೆ ನಿಜವಾದ ಹಾಗೂ ಪರಿಣಾಮಕಾರಿ ಪರಿಹಾರಗಳನ್ನು ನೀಡುತ್ತದೆಯೇ?” ಎಂದು ಪ್ರಶ್ನಿಸಿರುವ ಅವರು, ಕೇವಲ ಘೋಷಣೆಗಳ ಬದಲು ಜನಪರ ಹಾಗೂ ಆರ್ಥಿಕ ಸ್ಥಿರತೆಗೆ ನೆರವಾಗುವ ಕ್ರಮಗಳು ಅಗತ್ಯವೆಂದು ಒತ್ತಾಯಿಸಿದ್ದಾರೆ.
ಕೇಂದ್ರ ಬಜೆಟ್ ಬಗ್ಗೆ ದೇಶದ ಜನರು ಬಾರಿ ನಿರೀಕ್ಷೆ ಇಟ್ಟುಕೊಂಡಿದ್ದು, ಮೋದಿ ಸರ್ಕಾರ ಈ ಬಾರಿ ಜವಾಬ್ದಾರಿಯುತ ತೆಗೆದುಕೊಳ್ಳಬೇಕಿದೆ ಎಂದು ಖರ್ಗೆ ತಿಳಿಸಿದ್ದಾರೆ.
ಬಜೆಟ್ ಮಂಡನೆಯ ಮುನ್ನ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಛತ್ತಿಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು ಈ ಬಾರಿ ಕೇಂದ್ರ ಬಜೆಟ್ ಭಾನುವಾರ ಮಂಡನೆ ಆಗುತ್ತಿರುವುದು ಗಮನಾರ ಎಂದು ಹೇಳಿದರು. ಭಾನುವಾರ ರಜಾ ದಿನವಾಗಿರುವುದರ ಜೊತೆಗೆ ಸಂತ ರವೀದಾಸ ಜಯಂತಿ ಕೂಡ ಆಗಿದೆ ಎಂದು ಉಲ್ಲೇಖಿಸಿದರು. ಭೂಪೇಶ್ ಬಾಘೇಲ್ ಇಂಥ ದಿನಗಳಲ್ಲಿ ಬಜೆಟ್ ಮಂಡಿಸುವುದರಿಂದ ಸರ್ಕಾರ ಏನು ಸಂದೇಶ ನೀಡಲು ಹೊರಟಿದೆ ?.ಜನರು ಇದರಿಂದ ಏನು ನಿರೀಕ್ಷಿಸಬಹುದು? ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ಬಜೆಟ್ ಪ್ರಕ್ರಿಯೆ ಪಾರದರ್ಶಕತೆ ಹಾಗೂ ಜನಸಾಮಾನ್ಯರ ಹಿತಾಸಕ್ತಿಯನ್ನು ಮರೆತಂತಾಗಿದೆ ಎಂದು ಅವರು ಟೀಕಿಸಿದರು. ಬಡವರು, ದಲಿತರು ಕಾರ್ಮಿಕರು ಹಾಗೂ ಮಾಧ್ಯಮ ವರ್ಗದ ಸಮಸ್ಯೆಗಳಿಗೆ ಬಜೆಟ್ ನಲ್ಲಿ ಸ್ಪಷ್ಟ ಪರಿಹಾರಗಳಿರಬೇಕೆಂದು ಒತ್ತಾಯಿಸಿದರು. ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದಲೇ ರಜಾ ದಿನ ಹಾಗೂ ಮಹತ್ವದ ಜಯಂತಿ ಎಂದು ಬಜೆಟ್ ಮಂಡಿಸಲಾಗುತ್ತದೆ ಎಂದು ಅಪಮಾನಗಳು ಮೂಡುತ್ತಿವೆ ಎಂದು ಭೂಪೇಶ್ ಬಾಘೇಲ್ ಹೇಳಿದರು. ಸರಕಾರವು ಸಂಕೇತಾತ್ಮಕ ಕ್ರಮಗಳ ಬದಲು ಜನಪರ ನೀತಿಗಳನ್ನು ಅಳವಡಿಸಬೇಕೆಂದು ಅವರು ಆಗ್ರಹಿಸಿದರು.
ದೆಹಲಿಯಲ್ಲಿ ವ್ಯಾಪಕವಾಗಿ ನಿರುದ್ಯೋಗ ಮತ್ತು ಹಣದುಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಉದ್ಯೋಗ ಆಕಾಂಕ್ಷಿಗಳ ಕೊರತೆಯಿಂದ ಯುವ ಜನತೆಗೆ ಕಂಗಾಲಾಗಿದ್ದು, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೀವನ ಕಷ್ಟಕರವಾಗಿದೆ ಎಂ,ದು ದೂರಲಾಗಿದೆ. ರೈತರು ತಮ್ಮ ಬೆಳೆಗಳಿಗೆ ನ್ಯಾಯಯುತ ಕನಿಷ್ಠ ಬೆಲೆಯರಾಗುತ್ತಿದ್ದಾರೆ. ಉತ್ಪಾದನಾ ವೆಚ್ಚ ಹೆಚ್ಚಾಗಿದ್ದರು ಬೆಲೆಗಳು ಕೈಗೆಟುಕದೆ ರೈತ ಸಮುದಾಯ ಆರ್ಥಿಕ ಒತ್ತಡಕ್ಕೆ ಒಳಗಾಗಿದೆ ಎಂದು ಹೇಳಲಾಗಿದೆ.
ಸರ್ಕಾರ ರೈತರ ಆದಾಯ ಗುಣಗಳಿಸುವ ಭರವಸೆ ನೀಡಿದರು. ನೆಲಮಟ್ಟದಲ್ಲಿ ಯಾವುದೇ ಪರಿಣಾಮಕಾರಿ ಬದಲಾವಣೆ ಕಾಣುತ್ತಿಲ್ಲ ಎಂದು ಆರೋಪ ಹೇಳುತ್ತಿದೆ. ಇತ್ತ ಕಾರ್ಮಿಕರ ವರ್ಗದ ಏಕೈಕ ಭರವಸೆಯಾಗಿದ್ದ ಎಂಜಿ ಎನ್ ಆರ್ ಜಿ ಎ ಯೋಜನೆಗಳನ್ನು ಹಂತ ಹಂತವಾಗಿ ದುರ್ಬಲಗೊಳಿಸಲಾಗುತ್ತಿದ್ದು, ಕೆಲಸದ ದಿನಗಳು ಹಾಗೂ ಅನುದಾನ ಕಡಿತಗೊಳಿಸುವುದರಿಂದ ಗ್ರಾಮೀಣ ಜನತೆಗೆ ಬಾರಿ ಹೊಡೆತ ಬಿದ್ದಿದೆ ಎಂದು ಹೇಳಲಾಗಿದೆ. ಗ್ರಾಹಕರಿಗೆ ತೊಂದರೆಗಳನ್ನುಂಟು ಮಾಡಿದೆ ಜನರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ತಂದಿದೆ ಎಂದು ಆರೋಪಿಸಲಾಗಿದೆ.
ಇನ್ನಷ್ಟು ಓದಿರಿ:
ಇಂದು 11 ಗಂಟೆಗೆ ಸೀತಾರಾಮನ್ 9ನೇ ಬಜೆಟ್ ಮಂಡನೆ: ಲೋಕಸಭೆ ಕಲಾಪದಲ್ಲಿ ಏನಿದೆ?